ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲ್ಲೂಕಿನ ಶಿರಗೂರ ಗ್ರಾಮದಲ್ಲಿ ಹೋಳಿ ಹಬ್ಬವನ್ನು ಜೈ ಹನುಮಾನ್ ದೇವಾಲಯ ಆವರಣದಲ್ಲಿ ರಾತ್ರಿ 8:0ಗೆ ವೇಳೆ ಕಾಮ್ ಹೋಳಿ ಹಾಗೂ ಅಂಬೇಡ್ಕರ್ ಓಣಿಯಲ್ಲಿರುವ ಹೋಳಿಗೆ ಗ್ರಾಮದ ಹಿರಿಯಾರದ ಬಂಡುದಾದ ಜಾಗೀರದಾರ್ ರವರು ಭಾರತೀಯ ಸಂಸ್ಕೃತಿಯ ಮೂಲಕ ಪೂಜೆ ಸಲ್ಲಿಸಿ ಬೆಂಕಿ ಹಚ್ಚಿದ್ದರು.
ಗ್ರಾಮಸ್ಥರು ಹೋಳಿ ಸುತ್ತಲೂ ಕಾಮ ಕಲ್ಲಿಗೆ ಸೋತ, ಭೀಮ ಬಿಲ್ಲಿಗೆ ಸೋತ, ಎನ್ನುತ ಹಾಡುಗಳಿಗೆ ಹೆಜ್ಜೆ ಹಾಕುತ್ತ ಕುಣಿದು ಕೊಪ್ಪಳಿಸಿ ಸಂತೋಷ ಹಂಚಿಕೊಂಡರು.
ಹಿರಿಯರು ಸಂಸ್ಕೃತಿಕ ಪದಗಳಾದ ಭಜನೆ, ಗಿಗಿ ಪದಗಳು, ಕಥೆ, ಕೀರ್ತನ, ಪುರಾಣ, ಹೀಗೆ ಹಲವಾರು ಗೀತೆಗಳ ಹಾಡಿ ಹೋಗಳುತ್ತಾ ಒಟ್ಟಾಗಿ ಕುಳಿತು ಸಂಭ್ರಮದಿಂದ ಆಚರಣೆ ಮಾಡಿದರು. ಹಾಗೆ ರೈತ ಭೂಮಿಯಲ್ಲಿ ಬೆಳೆದ ಕಡಲೆ ಬೀಜವನ್ನು ಬೆಂಕಿಯಲ್ಲಿ ಸುಟ್ಟು ಎಲ್ಲ ಜನರಿಗೆ ಹಂಚಿದರು.
ಹೋಳಿ ದಹನದ ಅಗ್ನಿಯಿಂದ ಸುಟ್ಟ ಕೊಂಬೆ ಅಥವಾ ಬೂದಿಯನ್ನು ಶುಭ ಸಂಕೇತವಾಗಿದೆ ಎಂದು ತಿಳಿದು ಹಣೆಗೆ ಹಚ್ಚಿ ಮನೆಗೆ ತೆಗೆದುಕೊಂಡು ಹೋದರು. ನಂತರ ಜನರು ಒಂದೇ ಮೆಚ್ಚಿನ ಭಾವನೆ, ಸ್ನೇಹ ಮತ್ತು ಪ್ರೀತಿಯೊಂದಿಗೆ ಪರಸ್ಪರ ಶುಭಾಶಯ ಕೋರಿಕೊಂಡರು.
ಈ ಸಂದರ್ಭದಲ್ಲಿ ಶರಣಬಸಪ್ಪ ಕಲ್ಲಿಪ್ಪರಗಿ, ಭೀಮಶಂಕರ್ ಕೋಳಿ, ಭೀರಣ್ಣ ಪೂಜಾರಿ, ಸುಬ್ಬುರಾವ್ ನಾಯ್ಕೋಡಿ, ಈರಣ್ಣ ವಾಲಿಕರ್, ಈರಣ್ಣ ಹಿರೇಮಠ್,ಶಿವಾನಂದ್ ಕೋಳಿ, ಹಿರೋಜ ಗೊಡ್ಕೆ, ಪುಂಡಪ್ಪ ಅಪ್ತಗಿರಿ, ಖಾಜಪ್ಪ ನಾವದಗಿ, ಆಕಾಶ ಜಮಖಂಡಿ, ಶಂಕರಲಿಂಗ ನಾಯ್ಕೋಡಿ, ಸಿದ್ದರಾಮ ಹಿರೇಮಠ, ಗ್ರಾಮಸ್ಥರು ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.