ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಜಾತಿ, ಮತ, ಪಂಥ, ಪಂಗಡ ಎನ್ನದೇ ಜಿಲ್ಲೆಯಾದ್ಯಂತ ಸಾರ್ವಜನಿಕರ ಸೇವೆಯಲ್ಲಿ ಅಸ್ಕಿ ಫೌಂಡೇಶನ್ ತೊಡಗಿ ನಿಜವಾದ ಸಮಾಜ ಸೇವೆ ಮಾಡುತ್ತಿದೆ ಎಂದು ಮಾಜಿ ಪುರಸಭೆ ಸದಸ್ಯ ಪಿಂಟು ಸಾಲಿಮನಿ ಹೇಳಿದರು.
ಪಟ್ಟಣದ ನಾಲತವಾಡ ರಸ್ತೆಯಲ್ಲಿರುವ ಮಕ್ಕಾ ಮಸೀದ ಶಾದಿ ಹಾಲ್ ನಲ್ಲಿ ಅಸ್ಕಿ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಇಫ್ತಿಯಾರ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕಳೆದ ಹಲವು ವರ್ಷಗಳಿಂದ ಫೌಂಡೇಶನ್ ವತಿಯಿಂದ ಇಫ್ತಿಯಾರ ಕೂಟವನ್ನು ಏರ್ಪಡಿಸುತ್ತ ಬರುತ್ತಿದ್ದು ಕೋಮು ಸೌಹಾರ್ಧತೆಗೆ ಸಾಕ್ಷಿಯಾಗಿದ್ದಾರೆ. ಬರುವ ದಿನಗಳಲ್ಲಿ ಫೌಂಡೇಶನ್ ವತಿಯಿಂದ ರಾಜ್ಯದಾದ್ಯಂತ ಬಡವರಿಗೆ, ನಿರ್ಗತಿಕರಿಗೆ ಸೇವೆ ಮಾಡುವ ಶಕ್ತಿ ಭಗವಂತ ಕರುಣಿಸಲಿ ಎಂದರು.
ಸನ್ಮಾನ ಸ್ವೀಕರಿಸಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಮಾತನಾಡಿ, ತಿಂಗಳ ಪರ್ಯಂತರ ನೀರನ್ನೂ ಸೇವಿಸದೇ ಉಪವಾಸದ ಮೂಲಕ ದೇವರ ವೃತದಲ್ಲಿ ತೊಡಗುವ ಬಂಧುಗಳ ಭಕ್ತಿಗೆ ನಾನು ಮನಸೋತಿದ್ದೇನೆ. ಇಫ್ತಿಯಾರ್ ಕೂಟವನ್ನು ಹಮ್ಮಿಕೊಳ್ಳುವ ಮೂಲಕ ಕಳೆದ ಹಲವು ವರ್ಷಗಳಿಂದ ಫೌಂಡೇಶನ್ ವತಿಯಿಂದ ಸೇವೆ ಮಾಡುತಿದ್ದೇನೆ. ಮುಂದೆಯೂ ಮಾಡುವೆ ಎಂದರು.
ಎಪಿಎಂಸಿ ನಿರ್ದೇಶಕ ವಾಯ್.ಎಚ್.ವಿಜಯಕರ, ಶಿಕ್ಷಕ ಜೆ.ಡಿ.ಮುಲ್ಲಾ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿದರು.
ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ದಿ.ಕರ್ನಾಟಕ ಕೋ ಅಪ್ ಬ್ಯಾಂಕ್ ಉಪಾಧ್ಯಕ್ಷ ಗುರುಲಿಂಗಪ್ಪಗೌಡ ಪಾಟೀಲ, ನಿರ್ದೇಶಕ ರಾಜು ಕರಡ್ಡಿ, ಪುರಸಭೆ ಮಾಜಿ ಸದಸ್ಯ ಮುತ್ತಣ್ಣ ರಾಯಗೊಂಡ, ಪ್ರಮುಖರಾದ ಸಂಗಣ್ಣ ಮೇಲಿನಮನಿ, ಎಂ.ಎ.ಲಿಂಗಸೂರ ವಕೀಲರು, ಹುಸೇನ ಮುಲ್ಲಾ, ಟಿ.ಭಾಸ್ಕರ, ಸದಾಶಿವ ಮಠ, ಶ್ರೀಶೈಲ ಪೂಜಾರಿ, ಅಬ್ದುಲ್‌ಮಜೀದ ಮಕಾನದಾರ, ದಾವಲ ಗೊಳಸಂಗಿ, ಬಬಲು ಹುಣಚಗಿ, ರವಿ ಅಮರಣ್ಣವರ, ಜಬ್ಬಾರ ಗೋಲಂದಾಜ ಸೇರಿದಂತೆ ಇತರರು ಇದ್ದರು.