Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಸವನಬಾಗೇವಾಡಿ ೨೨೦/೧೦/೧೧ ಕೆವ್ಹಿ ಸ್ವೀ-ಕೇಂದ್ರದಲ್ಲಿ ೧೧೦ ಕೆವ್ಹಿ ಮುದ್ದೇಬಿಹಾಳ ಲೈನ್ ಆಯಸೊಲೇಟರ ಕ್ಲ್ಯಾಂಪ ಬದಲಿಸುವ, ೧೧೦ ಕೆವ್ಹಿ ಬಸ್ ಕಪ್ಲರ್ ಆಯಸೊಲೆಟರ ನಿರ್ವಹಣೆ ಹಾಗೂ ಆಯಿಲ್ ಸೋರಿಕೆ ತಡೆಗಟ್ಟುವ ಕಾರ್ಯ ಕೈಗೊಳ್ಳುತ್ತಿರುವುದರಿಂದ ಮಾ.೧೬ ರಂದು ೧೧೦ ಕೆವ್ಹಿ ಮುಕರ್ತಿಹಾಳ, ೧೧೦ ಕೆವ್ಹಿ ಮುದ್ದೇಬಿಹಾಳ, ೧೧೦ ಕೆವ್ಹಿ ಉಕ್ಕಲಿ ಮಾರ್ಗಗಗಳಲ್ಲಿ ಹಾಗೂ ಸದರಿ ಉಪಕೇಂದ್ರಗಳಿಂದ ಹೊರಹೋಗುವ ೧೧ ಕೆವ್ಹಿ ಮತ್ತು ೩೩ ಕೆವ್ಹಿ ಮಾರ್ಗಗಳಿಗೆ ಮತ್ತು ಉಪ ಕೇಂದ್ರದಿಂದ ಹೊರಹೋಗುವ ಎಲ್ಲ ೧೧ ಕೆವ್ಹಿ ಮಾರ್ಗಗಳಲ್ಲಿನ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಕೃಷಿ ನೀರಾವರಿ ಮಾರ್ಗಗಳಿಗೆ ಬೆಳಿಗ್ಗೆ ೮ ರಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಬಸವನಬಾಗೇವಾಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೃಷ್ಣಾ ಭಾಗ್ಯ ಜಲ ನಿಗಮದ ಆಣೆಕಟ್ಟು ವೃತ್ತದಡಿ ಬರುವ ಆಲಮಟ್ಟಿ ಎಡದಂಡೆ ಕಾಲುವೆ, ಚಿಮ್ಮಲಗಿ ಏತ ನೀರಾವರಿ ಪಶ್ಚಿಮ ಕಾಲುವೆ, ಆಲಮಟ್ಟಿ ಬಲದಂಡೆ ಕಾಲುವೆ, ತಿಮ್ಮಾಪೂರ ಏತ ನೀರಾವರಿ ಯೋಜನೆಯ ಡಿಸಿ-೧ ಮತ್ತು ಡಿಸಿ-೨ರ ಕಾಲುವೆ, ಮರೋಳ ಏತ ನೀರಾವರಿ ಹಂತ-೧ರ ಪೂರ್ವ ಮತ್ತು ಪಶ್ಚಿಮ ಕಾಲುವೆ ಜಾಲಕ್ಕೆ ಹಿಂಗಾರು ಹಂಗಾಮಿಗೆ ಚಾಲು-ಬಂದ ಅನುಸಾರ ನೀರನ್ನು ಹರಿಸುವ ಅವಧಿಯನ್ನು ವಿಸ್ತರಿಸಲಾಗಿದೆ.ದಿನಾಂಕ : ೧೪-೦೩-೨೦೨೫ರಂದು ಜರುಗಿದ ೨೦೨೪-೨೫ನೇ ಸಾಲಿನ ಹಿಂಗಾರು ಹಂಗಾಮಿನ ಮುಂದುವರೆದ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ, ದಿನಾಂಕ : ೧೫-೦೩-೨೦೨೫ ರಿಂದ ೨೨-೦೩-೨೦೨೫ರವರೆಗೆ ೮ ದಿನ ಹಾಗೂ ದಿನಾಂಕ : ೦೧-೦೪-೨೦೨೫ ರಿಂದ ೦೬-೦೪-೨೦೨೫ ರವರೆಗೆ ೦೬ ದಿನಗಳ ಕಾಲ ಚಾಲೂ ಹಾಗೂ ದಿನಾಂಕ : ೨೩-೦೩-೨೦೨೫ ರಿಂದ ೩೧-೦೩-೨೦೨೫ರವರೆಗೆ ೦೯ ದಿನಗಳ ಕಾಲ ಬಂದ ಪದ್ಧತಿಯನುಸಾರವಾಗಿ ಕಾಲುವೆ ಜಾಲಗಳಿಗೆ ನೀರು ಹರಿಸಲಾಗುವುದು.ಜೀವ ಜಲ ಅತಿ ಅಮೂಲ್ಯವಾಗಿದ್ದು, ಪೋಲು ಮಾಡದೇ, ಹಿತವಾಗಿ, ಮಿತವಾಗಿ ಬಳಸುವುದರೊಂದಿಗೆ…
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಡಾ ಎಂ.ಬಿ.ಪಾಟೀಲ ಸ್ಪಷ್ಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅರ್ಜುಣಗಿ, ಕುಮಠೆ, ತೊದಲಬಾಗಿ, ಹೆಬ್ಬಾಳಟ್ಟಿ, ತಿಗಣಿಬಿದರಿ, ನಾಗರಾಳ, ಗದ್ಯಾಳ, ಗೋಠೆ, ಯಕ್ಕುಂಡಿ, ವಕ್ಕುಂಡಿ, ನಿಡೋಣಿ, ಶೇಗುಣಸಿ ಗ್ರಾಮಗಳ ೩೦ ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಒದಗಿಸುವ ೫ಎ-೫ಬಿ ಏತ ನೀರಾವರಿ ಯೋಜನೆ ಹಾಗೂ ಬಬಲೇಶ್ವರ ವಿತರಣಾ ಕಾಲುವೆ ನಂ. ೧೫ರ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಮಂಜೂರಾತಿ ದೊರೆತು ಕಾಮಗಾರಿ ಆರಂಭಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.ಶನಿವಾರ ಬಬಲೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಕೆಆರ್‌ಐಡಿಎಲ್ ವತಿಯಿಂದ ರೂ.೨೫ ಲಕ್ಷ ವೆಚ್ಚದಲ್ಲಿ ಆರ್‌ಐಡಿಎಫ್ ಯೋಜನೆಯಡಿ ರೈತ ಸಂಪರ್ಕ ಕೇಂದ್ರದಲ್ಲಿ ಗೋದಾಮು ಕಟ್ಟಡ ಉದ್ಘಾಟನೆ, ಪಟ್ಟಣ ಪಂಚಾಯತಿ ವತಿಯಿಂದ ೨೬೪ ಲಕ್ಷ ರೂ.ವೆಚ್ಚದಲ್ಲಿ ವಿವಿಧ ೯ ಕಾಮಗಾರಿಗಳ ಭೂಮಿಪೂಜೆ, ಬಬಲೇಶ್ವರ ತಾಲೂಕಾ ಪಂಚಾಯತಿ ವತಿಯಿಂದ ಆಯ್ಕೆಯಾದ ಫಲಾನುಭವಿಗಳಿಗೆ ೪೫ ಹೊಲಿಗೆ…
ನಕಲಿ ಐಡಿ ಕಾರ್ಡ್ ಹಾಗೂ ಹೊರರಾಜ್ಯದಲ್ಲಿ ತರಬೇತಿ ನೀಡುವ ಜಾಲ ಬೇಧಿಸುವಲ್ಲಿ ವಿಜಯಪುರ ಜಿಲ್ಲೆಯ ಪೊಲೀಸರು ಯಶಸ್ವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರೈಲ್ವೇ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಕೋಟ್ಯಂತರ ರೂ. ವಂಚಿಸಿ ಅಷ್ಟೇ ಅಲ್ಲದೇ ನಕಲಿ ಐಡಿ ಕಾರ್ಡ್ ಹಾಗೂ ಹೊರರಾಜ್ಯದಲ್ಲಿ ತರಬೇತಿ ನೀಡುವ ಜಾಲವನ್ನು ಬೇಧಿಸುವಲ್ಲಿ ವಿಜಯಪುರ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು, ಈ ಪ್ರಕರಣದಲ್ಲಿಯ ಪ್ರಮುಖ ಆರೋಪಿ ಸಿಕಂದರ ಮಹಮ್ಮದ ಬಸರಗಿಯನ್ನು ಬಂಧಿಸಲಾಗಿದ್ದು, ೧೩ ಜನರಿಗೆ ವಂಚನೆ ಮಾಡಿದ ಹಣದಲ್ಲಿ ಕಮಿಷನ್ ರೂಪದಲ್ಲಿ ಪಡೆದುಕೊಂಡಿದ್ದ ೪೫ ಲಕ್ಷ ರೂ.ಗಳನ್ನು ಜಪ್ತು ಮಾಡಿಕೊಳ್ಳಾಗಿದ್ದು, ಪ್ರಕರಣದಲ್ಲಿ ಭಾಗಿಯಾದ ನವದೆಹಲಿ ಹಾಗೂ ಜಾರ್ಖಂಡ್ ಮೂಲದ ೦೩ ಆರೋಪಿತರನ್ನು ಪತ್ತೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ.ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಹೊರರಾಜ್ಯದ ಆರೋಪಿಗಳೊಂದಿಗೆ ಸೇರಿ ೧೩ ಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ ಎಂದರು.ಬಂಧಿತನಾಗಿರುವ ಆರೋಪಿ ರೇಲ್ವೆ ಇಲಾಖೆಯಲ್ಲಿ ಸಿ ಮತ್ತು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ, ಶ್ರೀ ರಾಜರಾಜೇಶ್ವರಿ ಮಹಿಳಾ ಕಲಾಸಂಘ ವಿಜಯಪುರ ಇವರು “ಮನದಂಗಳ” ಚಿತ್ರಕಲಾ ಶಿಬಿರ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ನಗರದ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ಮಾ.16 ರಂದು ಆಯೋಜಿಸಿದ್ದಾರೆ.ಬೆಳಿಗ್ಗೆ 11 ಗಂಟೆಗೆ ಉದ್ಘಾಟಕರಾಗಿ ಶ್ರೀಮತಿ ಶಂಕ್ರಮ್ಮ ಹೂಗಾರ್ ಆಗಮಿಸಲಿದ್ದಾರೆ. ಡಾ.ಶಶಿಕಲಾ ಹೂಗಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಲ್ಲಿಕಾರ್ಜುನ್ ಭಜಂತ್ರಿ ಉಪ ನಿರ್ದೇಶಕರು ಪ್ರವಾಸೋದ್ಯಮ ಇಲಾಖೆ ಹಾಗೂ ಸಂತೋಷ್ ಭೋವಿ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಿಕ್ಷಕಿ ನೀಲಮ್ಮ ಹತ್ತಳ್ಳಿ ಸ್ತ್ರೀ ಸಂವೇದನೆ ಕುರಿತು ಉಪನ್ಯಾಸ ನೀಡಲಿದ್ದಾರೆ.ನಗರದ ಕಲಾವಿದರಾದ ಸುಭಾಸಚಂದ್ರ ಕೆಂಭಾವಿ ಮತ್ತು ರಮೇಶ ಚವ್ಹಾಣ ಅವರನ್ನು ಸನ್ಮಾನಿಸಲಾಗುತ್ತಿದೆ.ಅನನ್ಯ ಎಳಮೇಲಿ, ಆರತಿ ಹರಿಜನ್, ಸುಚಿತ್ರ ಲಿಂಗದಳ್ಳಿ, ಧನಲಕ್ಷ್ಮಿ ದೊಡ್ಮನಿ, ದಾಕ್ಷಾಯಿಣಿ ಇಮ್ನಾದ, ಗಿರಿಜಾ ಬಿರಾದಾರ, ಹಾಜಮಾ ಹೂದ್ದಾರ್, ಕಲ್ಪನಾ ಬಾಬಕರ್, ಲಕ್ಷ್ಮಿ ಬಿರಾದರ್, ಮಹದೇವಿ ಪೇಟ್ಲುರ, ರಾಜೇಶ್ವರಿ ಕೌಲಗಿ, ಸುಕನ್ಯಾ ಹೂಗಾರ್, ಯಾಮಿನಿ ಷಹಾ ಶಿಬಿರಾರ್ಥಿಗಳಾಗಿ ಭಾಗವಹಿಸಲಿದ್ದಾರೆ. ಎಂದು…
ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುನಿತಗೌಡ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮೀನುಗಾರಿಕೆ ಮಾರುಕಟ್ಟೆ ವ್ಯವಸ್ಥೆಯಲ್ಲಿ ಬೃಹತ್ತಾಗಿದ್ದು,ವಿದ್ಯಾರ್ಥಿಗಳು ಮೀನುಗಾರಿಕೆ ಉದ್ಯಮಶೀಲತೆಗೆ ಮುಂದಾಗಬೇಕೆಂದು ಅಶೋಕಾ ಹೊಟೆಲ್ ಮಾಲಿಕ ಪುನಿತಗೌಡ ಸಲಹೆ ನೀಡಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಣಿ ಶಾಸ್ತ್ರ ವಿಭಾಗ ಮತ್ತು ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ ಭೂತನಾಳ ಸಂಯೋಜನೆ ಅಡಿಯಲ್ಲಿ ಇಂದು ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಮತ್ತು ಉಪನ್ಯಾಸ, ವೈಜ್ಞಾನಿಕ ಮೀನು ಸಾಕಾಣಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಮಾರುಕಟ್ಟೆಯಲ್ಲಿ ಮೀನುಗಾರಿಕೆ ಮಹತ್ವ ಪಡೆದುಕೊಂಡಿದೆ ಇದರಿಂದ ಅಧಿಕ ಲಾಭ ಗಳಿಸಬಹುದು ಮತ್ತು ವಿದ್ಯಾರ್ಥಿಗಳಿಗೆ ಮೀನುಗಾರಿಕೆ ಬಗ್ಗೆ ಜಾಗೃತಿ ಮೂಡಿಸಿದರು.ಮೀನುಗಾರಿಕೆಯಿಂದ ವ್ಯಾಪಾರ ಉದ್ದಿಮೆಯಲ್ಲಿ ಹಲವಾರು ವಿಫುಲ ಅವಕಾಶಗಳಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮೀನುಗಾರಿಕೆ,ಮತ್ತು ಮೀನುಗಳ ಪೌಷ್ಟಿಕಾಂಶದ ಮೌಲ್ಯಗಳು, ಜಲಚರ ಸಾಕಣೆ, ಅಲಂಕಾರಿಕ ಮೀನುಗಳು, ವಿವಿಧ ಜಾತಿಯ ಮೀನುಗಳನ್ನು ಗುರುತಿಸುವುದು ಹೇಗೆ, ಸಂರಕ್ಷಣೆ ತಂತ್ರಗಳು,…
ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿದ ಎಂಎಲ್ಸಿ ಸುನೀಲಗೌಡ ಪಾಟೀಲ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಂಸ್ಥೆಯನ್ನು ಕಟ್ಟಿ ಬೆಳಸಿದ ಮಹನೀಯರ ಆಶಯದಂತೆ ಬಿ.ಎಲ್.ಡಿ.ಇ ಸಂಸ್ಥೆಯನ್ನು ಉತ್ತರೋತ್ತರವಾಗಿ ಅಭಿವೃದ್ಧಿ ಪಡಿಸಲು ಎಲ್ಲರ ಸಹಕಾರ ಮತ್ತು ವಿಶ್ವಾಸದೊಂದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.ಶನಿವಾರ ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅವರು ಮಾತನಾಡಿದರು.ನಾನು ಬಾಲ್ಯದಿಂದಲೇ ಸಂಸ್ಥೆಯ ಏಳಿಗೆಯನ್ನು ಗಮನಿಸುತ್ತ ಬಂದಿದ್ದೇನೆ. ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರಿಂದ ಪ್ರಾರಂಭವಾದ ಸಂಸ್ಥೆಯನ್ನು ಬಂಥನಾಳ ಶ್ರೀಗಳು ಮತ್ತು ನಂತರ ದಿ. ಶ್ರೀ ಬಿ. ಎಂ. ಪಾಟೀಲರು, ಎಂ. ಬಿ. ಪಾಟೀಲ ಸಮರ್ಥವಾಗಿ ಮುನ್ನಡೆಸಿದ್ದಾರೆ. ಶಿಕ್ಷಣ ಸಂಸ್ಥೆ ನಡೆಸುವುದು ಕಷ್ಟಕರವಾಗಿದ್ದ ಅಂದಿನ ದಿನಗಳಲ್ಲಿ ಬಿ. ಎಂ. ಪಾಟೀಲರು ತಮ್ಮ ಆಸ್ತಿಯನ್ನು ಒತ್ತೆಯಿಟ್ಟು ಸಾಲ ಪಡೆದು ಸಂಸ್ಥೆ ಮತ್ತು ಸಿಬ್ಬಂದಿಯ ಅಭ್ಯುದಯಕ್ಕೆ ಶ್ರಮಿಸಿದ್ದಾರೆ. ಈ ಭಾಗದ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಇಲ್ಲಿಯೇ ದೊರೆಯಲು ಎಂಜಿನಿಯರಿಂಗ್,…
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಶಿಕ್ಷಣ ಮತ್ತು ಧರ್ಮ ಮನುಷ್ಯನ ಬದುಕು ಸುಂದರಗೊಳಿಸುತ್ತಿದೆ. ಹೀಗಾಗಿ ಪ್ರತಿಯೋಬ್ಬರು ಶಿಕ್ಷಣ ಕಲಿತು ಪರಿಪೂರ್ಣ ಬದುಕು ಕಟ್ಟಿಕೊಳ್ಳಬೇಕು ಎಂದು ಅಫಜಲಪುರದ ಸಂಸ್ಥಾನ ಹಿರೇಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು.ತಾಲೂಕಿನ ಆನೂರ ಗ್ರಾಮದ ಸ್ವಾಮಿ ವಿವೇಕಾನಂದ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದ ಅವರು ಮಠಗಳು ಮತ್ತು ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ಸನ್ಮಾರ್ಗದೆಡೆಗೆ ತೆಗೆದುಕೊಂಡು ಒಯ್ಯುತ್ತದೆ ಹೀಗಾಗಿ ಬಡವ ಶ್ರೀಮಂತರೆನ್ನದೆ ಶಿಕ್ಷಣ ಪಡೆದುಕೊಳ್ಳಬೇಕು ಎಂದ ಅವರು ಆನೂರ ಗ್ರಾಮದಲ್ಲಿ ಸರ್ವ ಸಮೂದಾಯದವರ ಮನಸ್ಸು ಒಂದಾಗಿದೆ. ಪ್ರತಿ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿ ಮಾಡುತ್ತಾರೆ. ಗ್ರಾಮದ ಸೌಹರ್ಧತೆ ಸದಾ ಗಟ್ಟಿಯಾಗಿರಲಿ. ಇಲ್ಲಿನ ಶಿಕ್ಷಣ ಸಂಸ್ಥೆಗೆ ತಾವೇಲ್ಲರೂ ಶಕ್ತಿಯಾಗಿ ನಿಲ್ಲಬೇಕು ಎಂದರು.ಸಾನಿಧ್ಯ ಚಂದ್ರಗಿರಿ ದೇವಿ ಪ್ರಧಾನ ಅರ್ಚಕರಾದ ರಾಹುಲ್ ಭಂಡಾರಿ ಸಾನಿಧ್ಯ ವಹಿಸಿದ್ದರು.ಪತ್ರಕರ್ತ ಅರುಣಕುಮಾರ ಹೂಗಾರ ಮಾತನಾಡಿ, ಶಿಕ್ಷಣ ಎಲ್ಲರಿಗೂ ಸಂಸ್ಕಾರ ನೀಡುತ್ತದೆ. ಉತ್ತಮ ಸಂಸ್ಕಾರ ಮೈಗೂಡಿಸಿಕೊಂಡರೆ ಸಮಾಜದಲ್ಲಿ ಮಾದರಿಯಾಗಿ ಬೆಳೆಯುತ್ತಾರೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಶಿಕ್ಷ ಸಂಸ್ಥೆ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಕಲಿ ವೈದ್ಯರು ಅನಧಿಕೃತವಾಗಿ ಕ್ಲಿನಿಕ್ ಗಳನ್ನೂ ತೆರೆದುಕೊಂಡಿರುವುದು ಕಂಡು ಬಂದಿದೆ. ಜನ ಸಾಮಾನ್ಯರು ಇಂತಹ ನಕಲಿ ವೈದ್ಯರಿಂದ ದೂರವಿದ್ದು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವುದು ಸೂಕ್ತ. ತಮ್ಮ ಗ್ರಾಮಗಳಲ್ಲಿ ಇಂತಹ ಯಾವದೇ ತರಹದ ನಕಲಿ ವೈದ್ಯರು ಇದ್ದಲ್ಲಿ ದೂರು ಸಲ್ಲಿಸಲು ಈ ಮೂಲಕ ತಿಳಿಸಿದೆ ಹಾಗೂ ನಕಲಿ ವೈದ್ಯರು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೊಡಲಾಗುತ್ತದೆ ಎಂದು ಆಲಮೇಲ ತಹಶೀಲ್ದಾರ ಕೆ.ವಿಜಯಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೇಖನ:- ಸಂತೋಷ್ ರಾವ್ ಪೆರ್ಮುಡಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ದ್ವಿಚಕ್ರ ವಾಹನವೆಂದರೆ ಕ್ರೇಜ್‌ಗೆ ಬೀಳುವ ಯುವಕ ಯುವತಿಯರು ಸುಪ್ರೀಂ ಕೋರ್ಟ್ ಇತ್ತೀಚೆಗೆ ಜಾರಿಗೆ ತಂದ ದ್ವಿಚಕ್ರ ವಾಹನ ಸವಾರಿಯ ಸಂದರ್ಭದಲ್ಲಿ ಸವಾರರಿಗೆ ‘ಹೆಲ್ಮೆಟ್ ಕಡ್ಡಾಯ’ವಾಗಿ ಧರಿಸಬೇಕೆಂಬ ನಿಯಮ ಜಾರಿಗೆ ತಂದಾಗ ಮುಖ ಸಿಂಡರಿಸಿದ್ದು ಸುಳ್ಳಲ್ಲ. ಹೆಲ್ಮೆಟ್ ಧಾರಣೆಯಿಂದ ಅಪಘಾತಗಳಾದಾಗ ನೇರ ತಲೆಗೆ ಏಟಾಗಿ ಪ್ರಾಣಾಪಾಯ ಆಗದಿರಲಿ ಎಂಬ ಕಾರಣಕ್ಕಾಗಿ ಸಂಪೂರ್ಣ ತಲೆಯನ್ನು ರಕ್ಷಿಸಬಲ್ಲ (ಈuಟಟ ಅoveಡಿeಜ) ಹೆಲ್ಮೆಟ್‌ಗಳನ್ನು ಧರಿಸುವಂತೆ ನ್ಯಾಯಾಲಯ ಶಿಫಾರಸ್ಸು ಮಾಡಿದೆ. ಅದರರರ್ಥ ಸಂಪೂರ್ಣ ಸವಾರರ ತಲೆಯನ್ನು ಮುಚ್ಚುವ, ISI ಗುರುತಿರುವ ಹೆಲ್ಮೆಟ್‌ಗಳನ್ನೇ ಕಾನೂನು ಪ್ರಕಾರ ಪ್ರತಿಯೊಬ್ಬ ಸವಾರ ಹಾಗೂ ಹಿಂಬದಿ ಸವಾರ ಇಬ್ಬರೂ ಧರಿಸಬೇಕು. ಆದರೆ ಇಂದಿನ ದಿನಗಳಲ್ಲಿ ಯುವ ಜನತೆಯ ಮನಃಸ್ಥಿತಿಯನ್ನು ನೋಡಿದರೆ ನಮ್ಮ ತಲೆಯ ಕಾಳಜಿ ನಮಗೆ ಇರುವುದಕ್ಕಿಂತ ಹೆಚ್ಚಾಗಿ ಸಂಚಾರಿ ಪೋಲೀಸರಿಗೇ ಇರುವಂತೆ ಕಾಣುತ್ತಿದೆ. ಏಕೆಂದರೆ ದ್ವಿಚಕ್ರ ವಾಹನ ಸವಾರರಲ್ಲಿ ಕೇವಲ ೫% ರಿಂದ ೮% ಮಂದಿಯಷ್ಟೇ…
