ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಶಿಕ್ಷಣ ಮತ್ತು ಧರ್ಮ ಮನುಷ್ಯನ ಬದುಕು ಸುಂದರಗೊಳಿಸುತ್ತಿದೆ. ಹೀಗಾಗಿ ಪ್ರತಿಯೋಬ್ಬರು ಶಿಕ್ಷಣ ಕಲಿತು ಪರಿಪೂರ್ಣ ಬದುಕು ಕಟ್ಟಿಕೊಳ್ಳಬೇಕು ಎಂದು ಅಫಜಲಪುರದ ಸಂಸ್ಥಾನ ಹಿರೇಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಆನೂರ ಗ್ರಾಮದ ಸ್ವಾಮಿ ವಿವೇಕಾನಂದ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದ ಅವರು ಮಠಗಳು ಮತ್ತು ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ಸನ್ಮಾರ್ಗದೆಡೆಗೆ ತೆಗೆದುಕೊಂಡು ಒಯ್ಯುತ್ತದೆ ಹೀಗಾಗಿ ಬಡವ ಶ್ರೀಮಂತರೆನ್ನದೆ ಶಿಕ್ಷಣ ಪಡೆದುಕೊಳ್ಳಬೇಕು ಎಂದ ಅವರು ಆನೂರ ಗ್ರಾಮದಲ್ಲಿ ಸರ್ವ ಸಮೂದಾಯದವರ ಮನಸ್ಸು ಒಂದಾಗಿದೆ. ಪ್ರತಿ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿ ಮಾಡುತ್ತಾರೆ. ಗ್ರಾಮದ ಸೌಹರ್ಧತೆ ಸದಾ ಗಟ್ಟಿಯಾಗಿರಲಿ. ಇಲ್ಲಿನ ಶಿಕ್ಷಣ ಸಂಸ್ಥೆಗೆ ತಾವೇಲ್ಲರೂ ಶಕ್ತಿಯಾಗಿ ನಿಲ್ಲಬೇಕು ಎಂದರು.
ಸಾನಿಧ್ಯ ಚಂದ್ರಗಿರಿ ದೇವಿ ಪ್ರಧಾನ ಅರ್ಚಕರಾದ ರಾಹುಲ್ ಭಂಡಾರಿ ಸಾನಿಧ್ಯ ವಹಿಸಿದ್ದರು.
ಪತ್ರಕರ್ತ ಅರುಣಕುಮಾರ ಹೂಗಾರ ಮಾತನಾಡಿ, ಶಿಕ್ಷಣ ಎಲ್ಲರಿಗೂ ಸಂಸ್ಕಾರ ನೀಡುತ್ತದೆ. ಉತ್ತಮ ಸಂಸ್ಕಾರ ಮೈಗೂಡಿಸಿಕೊಂಡರೆ ಸಮಾಜದಲ್ಲಿ ಮಾದರಿಯಾಗಿ ಬೆಳೆಯುತ್ತಾರೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಶಿಕ್ಷ ಸಂಸ್ಥೆ ತೆರೆದು ಅಕ್ಷರ ಜ್ಞಾನ ಮೂಡಿಸುತ್ತಿರುವದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಈ ಸಂಧರ್ಭದಲ್ಲಿ ಶ್ರೀಶೈಲ್ ಸ್ವಾಮಿ ಸ್ಥಾವರಮಠ, ಚಂದ್ರಕಾಂತ ಸಿಂಗೆ, ಡಾ.ಸಂಗಣ್ಣ ಸಿಂಗೆ, ಮಾಜಿ ಗ್ರಾಪಂ ಅಧ್ಯಕ್ಷ ದತ್ತು ಘಾಣೂರ, ಪ್ರಥಮ ದರ್ಜೆ ಗುತ್ತಿಗೆದಾರ ವಿಜಯಕುಮಾರ ಭಂಡಾರಿ, ಮಲ್ಲಣ್ಣಗೌಡ ಮಾಲೀ ಪಾಟೀಲ, ಮಹಾಂತೇಶ ತಳವಾರ, ಗುರುಶಾಂತ ಕಲಶೆಟ್ಟಿ, ಮಲ್ಕಣ್ಣ ಕೆರಮಗಿ, ಈರಣ್ಣಗೌಡ ಪಾಟೀಲ, ಚಂದ್ರಶೇಖರ ಪಾಟೀಲ, ಚಂದ್ರಕಾಂತ ಸೀತನೂರ, ಅಂಬರೀಶ ಪಟ್ಟಣ , ಭೀಮರಾವ ಕಲಶೆಟ್ಟಿ, ಪೀರಪ್ಪ ಭಾಸಗಿ, ವಿಶ್ವನಾಥ ಬಳೂಂಡಗಿ, ಶಿವಯೋಗಿ ಸಿಂಗೆ, ಚಂದ್ರಕಾಂತ ದೇವರಮನಿ, ಶ್ರೀಮಂತ ಸಿಂಗೆ, ಚಂದ್ರಕಾಂತ ತೇಲ್ಕರ್, ಸಿದ್ದು ಕನ್ನೊಳ್ಳಿ, ಪಂಡಿತ ತಳವಾರ, ಪೀರಣ್ಣ ದೊಡಮನಿ , ಜಗದೇವ ತಳವಾರ, ಶ್ರೀಶೈಲ ದೇವರಮನಿ, ವಿನೋದ ಸಿಂಗೆ, ಗೌತಮ ಸಕ್ಕರಗಿ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು
ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಸಂಸ್ಥೆಯ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿರುವ ಪತ್ರಕರ್ತ ಶೇಕಿಲ್ ಚೌದರಿ, ಗುರು ಪೂಜಾರಿ, ಜಟ್ಟೆಪ್ಪ ಪೂಜಾರಿ, ಬಲವಂತ ಮಂದೇವಾಲ, ರವಿ ಸಿಂಗೆ, ಸಿದ್ದರಾಮ ಕಟ್ಟಿಮನಿ, ನಾಗೇಶ ದೊಡಮನಿ ಸಾಧಕರನ್ನು ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಹಾಗೂ ಚಂದ್ರಗರಿ ದೇವಿ ಅರ್ಚಕರಾದ ರಾಹುಲ್ ಭಂಡಾರಿ ಮತ್ತು ಗ್ರಾಮಸ್ಥರಿಂದ ಸನ್ಮಾನಿಸಲಾಯಿತು.

