ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುನಿತಗೌಡ ಸಲಹೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮೀನುಗಾರಿಕೆ ಮಾರುಕಟ್ಟೆ ವ್ಯವಸ್ಥೆಯಲ್ಲಿ ಬೃಹತ್ತಾಗಿದ್ದು,ವಿದ್ಯಾರ್ಥಿಗಳು ಮೀನುಗಾರಿಕೆ ಉದ್ಯಮಶೀಲತೆಗೆ ಮುಂದಾಗಬೇಕೆಂದು ಅಶೋಕಾ ಹೊಟೆಲ್ ಮಾಲಿಕ ಪುನಿತಗೌಡ ಸಲಹೆ ನೀಡಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಣಿ ಶಾಸ್ತ್ರ ವಿಭಾಗ ಮತ್ತು ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ ಭೂತನಾಳ ಸಂಯೋಜನೆ ಅಡಿಯಲ್ಲಿ ಇಂದು ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಮತ್ತು ಉಪನ್ಯಾಸ, ವೈಜ್ಞಾನಿಕ ಮೀನು ಸಾಕಾಣಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಮಾರುಕಟ್ಟೆಯಲ್ಲಿ ಮೀನುಗಾರಿಕೆ ಮಹತ್ವ ಪಡೆದುಕೊಂಡಿದೆ ಇದರಿಂದ ಅಧಿಕ ಲಾಭ ಗಳಿಸಬಹುದು ಮತ್ತು ವಿದ್ಯಾರ್ಥಿಗಳಿಗೆ ಮೀನುಗಾರಿಕೆ ಬಗ್ಗೆ ಜಾಗೃತಿ ಮೂಡಿಸಿದರು.
ಮೀನುಗಾರಿಕೆಯಿಂದ ವ್ಯಾಪಾರ ಉದ್ದಿಮೆಯಲ್ಲಿ ಹಲವಾರು ವಿಫುಲ ಅವಕಾಶಗಳಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮೀನುಗಾರಿಕೆ,ಮತ್ತು ಮೀನುಗಳ ಪೌಷ್ಟಿಕಾಂಶದ ಮೌಲ್ಯಗಳು, ಜಲಚರ ಸಾಕಣೆ, ಅಲಂಕಾರಿಕ ಮೀನುಗಳು, ವಿವಿಧ ಜಾತಿಯ ಮೀನುಗಳನ್ನು ಗುರುತಿಸುವುದು ಹೇಗೆ, ಸಂರಕ್ಷಣೆ ತಂತ್ರಗಳು, ಉದ್ಯಮಶೀಲತೆಗೆ ಸಂಬಂಧಿಸಿದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯಪುರದ ಭೂತನಾಳ ಕೆರೆ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ ಮುಖ್ಯಸ್ಥರಾದ ಡಾ. ವಿಜಯಕುಮಾರ್ ಎಸ್ , ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಧರ್ಮಗುರು ಪ್ರಸಾದ್ ಎಂ. ಪಿ, ಪ್ರೊ. ಮಿಲನ್ ಎಸ್ ರಾಠೋಡ್, ಹರಿಶ್ಚಂದ್ರ ಜಾಧವ, ಪ್ರೊ.ಕವಿತಾ ವೈ ಜಿ, ಪ್ರೊ.ಮುಜೀಫಾ ಮುಲ್ಲಾ ಮಹಾವಿದ್ಯಾಲಯ ಬೋಧಕ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

