ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಸವನಬಾಗೇವಾಡಿ ೨೨೦/೧೦/೧೧ ಕೆವ್ಹಿ ಸ್ವೀ-ಕೇಂದ್ರದಲ್ಲಿ ೧೧೦ ಕೆವ್ಹಿ ಮುದ್ದೇಬಿಹಾಳ ಲೈನ್ ಆಯಸೊಲೇಟರ ಕ್ಲ್ಯಾಂಪ ಬದಲಿಸುವ, ೧೧೦ ಕೆವ್ಹಿ ಬಸ್ ಕಪ್ಲರ್ ಆಯಸೊಲೆಟರ ನಿರ್ವಹಣೆ ಹಾಗೂ ಆಯಿಲ್ ಸೋರಿಕೆ ತಡೆಗಟ್ಟುವ ಕಾರ್ಯ ಕೈಗೊಳ್ಳುತ್ತಿರುವುದರಿಂದ ಮಾ.೧೬ ರಂದು ೧೧೦ ಕೆವ್ಹಿ ಮುಕರ್ತಿಹಾಳ, ೧೧೦ ಕೆವ್ಹಿ ಮುದ್ದೇಬಿಹಾಳ, ೧೧೦ ಕೆವ್ಹಿ ಉಕ್ಕಲಿ ಮಾರ್ಗಗಗಳಲ್ಲಿ ಹಾಗೂ ಸದರಿ ಉಪಕೇಂದ್ರಗಳಿಂದ ಹೊರಹೋಗುವ ೧೧ ಕೆವ್ಹಿ ಮತ್ತು ೩೩ ಕೆವ್ಹಿ ಮಾರ್ಗಗಳಿಗೆ ಮತ್ತು ಉಪ ಕೇಂದ್ರದಿಂದ ಹೊರಹೋಗುವ ಎಲ್ಲ ೧೧ ಕೆವ್ಹಿ ಮಾರ್ಗಗಳಲ್ಲಿನ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಕೃಷಿ ನೀರಾವರಿ ಮಾರ್ಗಗಳಿಗೆ ಬೆಳಿಗ್ಗೆ ೮ ರಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಬಸವನಬಾಗೇವಾಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.
