ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ, ಶ್ರೀ ರಾಜರಾಜೇಶ್ವರಿ ಮಹಿಳಾ ಕಲಾಸಂಘ ವಿಜಯಪುರ ಇವರು “ಮನದಂಗಳ” ಚಿತ್ರಕಲಾ ಶಿಬಿರ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ನಗರದ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ಮಾ.16 ರಂದು ಆಯೋಜಿಸಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ಉದ್ಘಾಟಕರಾಗಿ ಶ್ರೀಮತಿ ಶಂಕ್ರಮ್ಮ ಹೂಗಾರ್ ಆಗಮಿಸಲಿದ್ದಾರೆ. ಡಾ.ಶಶಿಕಲಾ ಹೂಗಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಲ್ಲಿಕಾರ್ಜುನ್ ಭಜಂತ್ರಿ ಉಪ ನಿರ್ದೇಶಕರು ಪ್ರವಾಸೋದ್ಯಮ ಇಲಾಖೆ ಹಾಗೂ ಸಂತೋಷ್ ಭೋವಿ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಿಕ್ಷಕಿ ನೀಲಮ್ಮ ಹತ್ತಳ್ಳಿ ಸ್ತ್ರೀ ಸಂವೇದನೆ ಕುರಿತು ಉಪನ್ಯಾಸ ನೀಡಲಿದ್ದಾರೆ.
ನಗರದ ಕಲಾವಿದರಾದ ಸುಭಾಸಚಂದ್ರ ಕೆಂಭಾವಿ ಮತ್ತು ರಮೇಶ ಚವ್ಹಾಣ ಅವರನ್ನು ಸನ್ಮಾನಿಸಲಾಗುತ್ತಿದೆ.
ಅನನ್ಯ ಎಳಮೇಲಿ, ಆರತಿ ಹರಿಜನ್, ಸುಚಿತ್ರ ಲಿಂಗದಳ್ಳಿ, ಧನಲಕ್ಷ್ಮಿ ದೊಡ್ಮನಿ, ದಾಕ್ಷಾಯಿಣಿ ಇಮ್ನಾದ, ಗಿರಿಜಾ ಬಿರಾದಾರ, ಹಾಜಮಾ ಹೂದ್ದಾರ್, ಕಲ್ಪನಾ ಬಾಬಕರ್, ಲಕ್ಷ್ಮಿ ಬಿರಾದರ್, ಮಹದೇವಿ ಪೇಟ್ಲುರ, ರಾಜೇಶ್ವರಿ ಕೌಲಗಿ, ಸುಕನ್ಯಾ ಹೂಗಾರ್, ಯಾಮಿನಿ ಷಹಾ ಶಿಬಿರಾರ್ಥಿಗಳಾಗಿ ಭಾಗವಹಿಸಲಿದ್ದಾರೆ. ಎಂದು ಶ್ರೀ ರಾಜರಾಜೇಶ್ವರಿ ಮಹಿಳಾ ಕಲಾಸಂಘದ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಮೋಪಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

