ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಕಲಿ ವೈದ್ಯರು ಅನಧಿಕೃತವಾಗಿ ಕ್ಲಿನಿಕ್ ಗಳನ್ನೂ ತೆರೆದುಕೊಂಡಿರುವುದು ಕಂಡು ಬಂದಿದೆ. ಜನ ಸಾಮಾನ್ಯರು ಇಂತಹ ನಕಲಿ ವೈದ್ಯರಿಂದ ದೂರವಿದ್ದು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವುದು ಸೂಕ್ತ. ತಮ್ಮ ಗ್ರಾಮಗಳಲ್ಲಿ ಇಂತಹ ಯಾವದೇ ತರಹದ ನಕಲಿ ವೈದ್ಯರು ಇದ್ದಲ್ಲಿ ದೂರು ಸಲ್ಲಿಸಲು ಈ ಮೂಲಕ ತಿಳಿಸಿದೆ ಹಾಗೂ ನಕಲಿ ವೈದ್ಯರು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೊಡಲಾಗುತ್ತದೆ ಎಂದು ಆಲಮೇಲ ತಹಶೀಲ್ದಾರ ಕೆ.ವಿಜಯಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
