Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ನೂರು ಕೋಟಿ ಭಾರತೀಯರು ನೆಮ್ಮದಿಯಾಗಿ ಊಟ ಮಾಡಿ ಮಲಗೋದಕ್ಕೆ ಮುಖ್ಯಕಾರಣ ಅನ್ನದಾತರು. ಹೀಗಾಗಿ ರೈತರ ಬದುಕು ಹಸನಾಗಿಸುವ ಕೆಲಸ ಎಲ್ಲರೂ ಸೇರಿ ಮಾಡೋಣ ಎಂದು ಶಾಸಕ ಎಂ.ವೈ ಪಾಟೀಲ್ ಹೇಳಿದರು.ಅಫಜಲಪುರ ತಾಲೂಕಿನ ಉಡಚಣ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ರೈತರಿಗೆ ಉಚಿತವಾಗಿ ನೀಡಿ ಮಾತನಾಡಿದ ಅವರು, ನಮ್ಮ ತಾಲೂಕಿನ ರೈತರು ಶ್ರಮಜೀವಿಗಳು, ಶ್ರಮಪಟ್ಟು ಕೃಷಿ ಮಾಡಿ ಬೆಳೆ ಬೆಳೆಯುತ್ತಾರೆ. ಹೀಗಾಗಿ ರೈತರ ಕಲ್ಯಾಣಕ್ಕಾಗಿ ನಾವು ಕೂಡ ಸಾಕಷ್ಟು ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಕೆಲಸ ಮಾಡುತ್ತಿದ್ದೇವೆ. ಇನ್ನೂ ಕೆಲವೇ ವರ್ಷಗಳಲ್ಲಿ ಇಡೀ ತಾಲೂಕು ನೀರಾವರಿ ಕ್ಷೇತ್ರವಾಗಿ ರೂಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ನಾವು ಮಾಡುತ್ತೇವೆ ಎಂದರು.ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್ ಗಡಗಿಮನಿ ಮಾತನಾಡಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ರೈತರಿಗೆ ತೊಗರಿ, ಹೆಸರು, ಉದ್ದು ಬೀಜಗಳನ್ನು ವಿತರಿಸಲಾಯಿತು. ಸೂರ್ಯಕಾಂತಿ ಬೀಜಗಳು ಮಾತ್ರ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗಿದೆ ಎಂದ ಅವರು ಮುಂಗಾರು ಬಿತ್ತನೆ ಕಾರ್ಯ ತಾಲೂಕಿನಲ್ಲಿ ಭರದಿಂದ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಡಿ 500 ಕೋಟಿ ಬಾರಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿರುವ ಸಂಭ್ರಮದ ಅಂಗವಾಗಿ ಪಟ್ಟಣದ ಬಸ್ಟ್ಯಾಂಡ್ ಆವರಣದಲ್ಲಿ ಬಸ್ಸಿಗೆ ಪೂಜಾ ಮಾಡಿ ಸಾಂಕೇತಿಕವಾಗಿ ಗ್ಯಾರೆಂಟಿ ಯೋಜನೆಯ ಅಧ್ಯಕ್ಷ ಅಶೋಕಗೌಡ ಕೋಳಾರಿ ಟಿಕೇಟ ವಿತರಿಸಿದರು.ಈ ವೇಳೆ ಮಾತನಾಡಿದ ಅವರು, ನಾಡಿನ ಹೆಣ್ಣುಮಕ್ಕಳು ಉದ್ಯೋಗ, ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಮುಂತಾದ ಉದ್ದೇಶಗಳಿಗೆ ಕುಟುಂಬದ ಯಜಮಾನನ ಮೇಲೆ ಅವಲಂಬಿತರಾಗದೆ ಸ್ವತಂತ್ರ ನಿರ್ಣಯ ಕೈಗೊಂಡು ಸ್ವಾವಲಂಬಿ ಬದುಕಿನೆಡೆಗೆ ಪಯಣಿಸಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿ ಮಾಡಲಾಗಿದ್ದು, ಇದು ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಗ್ಗೆ ನಮಗೆ ಹೆಮ್ಮೆಇದೆ ಎಂದು ಹೇಳಿದರು.ಮುಖಂಡ ರಮೇಶ ಬಂಟನೂರ ಮಾತನಾಡಿ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳು ನಡೆಸಿಕೊಟ್ಟರು ಎಂದು ಹೇಳಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷ ಸಾಧಿಕ್ ಸುಂಬಡ, ಡಾಕ್ಟರ್ ಮಲ್ಲು ಪ್ಯಾಟಿ, ಪ್ರಶಾಂತ ನಾಶಿ, ಅಬ್ದುಲ್ ವಾಬ ಸುಂಬಡ, ಅಪ್ಪುಗೌಡ ಹೊನ್ನಳ್ಳಿ, ಭೀಮು ಬೊಮ್ಮನಹಳ್ಳಿ,…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ನಿವಾಸಿ, ಕೆಪಿಸಿಸಿ ಅಲ್ಪ ಸಂಖ್ಯಾತರ ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ಪಾಕ ಆರ್.ಮುಲ್ಲಾ ಅವರಿಗೆ ಪಿ.ಆರ್.ಕೆ ಸಾಂಸ್ಕೃತಿಕ ವೇದಿಕೆಯವರು ಬೆಂಗಳೂರಿನ ಲಲಿತ ಕಲಾ ಮಹಲನಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರಧಾನ ಮತ್ತು ಸನ್ಮಾನ ಸಮಾರಂಭದಲ್ಲಿ ಕರ್ನಾಟಕ ಭೂಷಣ ಪ್ರಶಸ್ತಿ-2025 ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಾ.ಕೃಷ್ಣ.ಟಿ, ಕಾರ್ಯದರ್ಶಿ ರತ್ನ ವೆಂಕಟೇಶ, ಸಹ-ಕಾರ್ಯದರ್ಶಿ ಪೂರ್ಣಿಮಾ ನಾರಾಯಣ ಸೇರಿದಂತೆ ಸಾಹಿತಿಗಳು, ಹಲವಾರು ಕ್ಷೇತ್ರದ ಸಾಧಕರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಧರ್ಮದ ಆಚರಣೆ, ಆರೋಗ್ಯ ರಕ್ಷಣೆಯ ಅರಿವು ಹಾಗೂ ಅಧ್ಯಾತ್ಮಿಕ ಚಿಂತನೆ ಕುರಿತು ಜಾಗೃತಿ ಮೂಡಿಸಲು ಶ್ರಾವಣ ಮಾಸದ ನಿಮಿತ್ತ ನಗರದ ವಿವಿಧ ಓಣಿಗಳಲ್ಲಿ ಓಲೆಮಠದ ಆಶ್ರಯದಲ್ಲಿ ಜು.25 ರಿಂದ ಆ.20ರವರೆಗೆ ವಚನ ಶ್ರಾವಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಓಲೆಮಠದ ಆನಂದ ದೇವರು ಹೇಳಿದರು.ಶ್ರಾವಣ ಮಾಸದ ನಿಮಿತ್ತ ಓಲೆಮಠದ ಆಶ್ರಯದಲ್ಲಿ ಹಮ್ಮಿಕೊಳ್ಳಲಿರುವ ವಚನ ಶ್ರಾವಣ ಕಾರ್ಯಕ್ರಮದ ಕುರಿತು ಶ್ರೀಮಠದ ಸಭಾಂಗಣದಲ್ಲಿ ಭಾನುವಾರ ನಡೆದ ಸದಕ್ಷರ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಜು.25 ರಿಂದ ಆಗಸ್ಟ್ 20ರವರೆಗೆ ಪ್ರತಿದಿನ ಸಂಜೆ 6.30 ಗಂಟೆಗೆ ಕಾರ್ಯಕ್ರಮಗಳು ದಿನಕ್ಕೊಂದು ಓಣಿಯಲ್ಲಿ ನಡೆಯಲಿವೆ. ಸಂಜೆ 6.30 ರಿಂದ ಸಂಗೀತ ಸೇವೆ, 7ಗಂಟೆಯಿಂದ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಹಾಗೂ 7.30 ರಿಂದ ಶ್ರೀಗಳಿಂದ ಪ್ರವಚನ ನಡೆಯಲಿದೆ.ಆಸ್ತಿ, ಅಂತಸ್ತು, ಹಣ, ಚಿನ್ನ-ಬೆಳ್ಳಿ ಇವು ನಿಜವಾದ ಸಂಪತ್ತು ಅಲ್ಲ. ಕುಡಿಯುವ ನೀರು, ತಿನ್ನುವ ಅನ್ನ ಹಾಗೂ ಒಳ್ಳೆಯ ವಿಚಾರದ ಮಾತುಗಳು ನಿಜವಾದ ಸಂಪತ್ತು. ಆದ್ದರಿಂದ ಬಸವಾದಿ ಶಿವಶರಣರ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಸಮೀಪದ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಸೋಮವಾರ ಪೇಟೆಯ ನಾಮದೇವ ಗಲ್ಲಿಯ ಹನುಮ ದೇವಾಲಯದಲ್ಲಿ ಭಾನುವಾರ ಸಂಜೆ ಅರಳಿ ಮರದ ಕಾಂಡದಲ್ಲಿ ಶ್ರೀರಾಮನ ಬಂಟ ಹನುಮ ದೇವರನ್ನು ಹೋಲುವ ಆಕೃತಿ ಕಂಡುಬಂದಿದ್ದು, ಅದನ್ನು ವೀಕ್ಷಿಸಲು ಸಹಸ್ರಾರು ಜನರು ತಂಡೋಪತಂಡವಾಗಿ ಧಾವಿಸುತ್ತಿದ್ದಾರೆ.ಆಗಿದ್ದೇನು?: ಜೀರ್ಣೋದ್ದಾರ ಸಲುವಾಗಿ ದೇವಾಲಯ ಮುಂಭಾಗ ಇದ್ದ ಅರಳಿಮರ ಕಡಿದು ಕಟ್ಟಡ ನಿರ್ಮಾಣ ಮಾಡಲು ಸಮಿತಿ ಮುಂದಾಗಿತ್ತು. ಅರಳಿಮರದ ಕಾಂಡವನ್ನು ಅರ್ಧ ಕಡಿಯುವಷ್ಟರಲ್ಲಿ ಗರಗಸ ಸೇರಿದಂತೆ ಇತರೆ ಸಾಮಗ್ರಿಗಳು ಮುರಿದು ಹೋಗಿದ್ದು, ಮರಕ್ಕೆ ಯಾವುದೇ ರೀತಿ ಧಕ್ಕೆಯಾಗದೆ ಅರ್ಧಕ್ಕೆ ಕಾಂಡ ಮುರಿದಿದೆ. ಅದರೊಳಗೆ ಹನುಮನ ಚಿತ್ರ ಪ್ರತ್ಯಕ್ಷವಾಗುತ್ತಿದೆ ಎನ್ನಲಾಗಿದ್ದು, ಅಲ್ಲಿದ್ದಭಕ್ತರು ಪೂಜೆ ಸಲ್ಲಿಸಿ ಭಕ್ತಿ-ಭಾವ ಮೆರೆದರು.ವಿಷಯ ತಿಳಿದ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ಮರದಲ್ಲಿದ್ದ ಹನುಮನ ಆಕೃತಿ ನೋಡಿ ಅಚ್ಚರಿ ವ್ಯಕ್ತಪಡಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದಿದೆ. ಬಡವರಿಗಾಗಿ ಕೆಲಸ ಮಾಡು ತ್ತಿದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.ಸೋಮವಾರ ನಗರದ ಬಸ್ ನಿಲ್ದಾಣದಲ್ಲಿ ನೂತನ ಬಸ್‌ಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸ್ತ್ರೀ ಶಕ್ತಿ ಯೋಜನೆಯ ಅಡಿಯಲ್ಲಿ ರಾಜ್ಯದಾದ್ಯಂತ 500 ಕೋಟಿ ಉಚಿತ ಪ್ರಯಾಣ ನಡೆದಿದೆ. ಜಮಖಂಡಿ ತಾಲೂಕಿನಲ್ಲಿ ₹2.40 ಕೋಟಿ ಜನ ಮಹಿಳೆಯರು ಉಚಿತ ಪ್ರಯಾಣ ನಡೆಸಿದ್ದಾರೆ. ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಸರ್ಕಾರ ಕ್ರಮ ಜರುಗಿಸಿದೆ. ಐದು ಗ್ಯಾರಂಟಿಗಳ ಮೂಲಕ ರಾಜ್ಯದ ಬಡವರ ಕನಸು ನನಸು ಮಾಡಿದೆ ಎಂದು ಹೇಳಿದ ಅವರು, ಪ್ರತಿವರ್ಷ ಸರ್ಕಾರ ₹58 ಸಾವಿರ ಕೋಟಿ ಬಡವರಿಗಾಗಿ ಖರ್ಚು ಮಾಡುತ್ತಿದೆ. ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಬಡವರು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು.ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಸಾಕಷ್ಟು ಅನುಕೂಲ ಆಗಿದೆ. ಬಡಮಹಿಳೆಯರು ಉಚಿತ ಪ್ರಯಾಣ ಮಾಡಿ ನಿತ್ಯದ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದಾರೆ.…

Read More

ಲೇಖನ- ಆಶ್ರಿತ ಕಿರಣ್”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ನೋವನ್ನು ಮರೆಯುವುದು ಸುಲಭವೇ..? ನೋವನ್ನು ಯಾಕೆ ಮರೆಯಬೇಕು? ನೋವನ್ನು ಅನುಭವಿಸದೆ ಬದುಕಲು ಸಾಧ್ಯವಿಲ್ಲವೇ.. ಎನ್ನುವ ಪ್ರಶ್ನೆಗಳು ನೋವಿನಲ್ಲಿರುವಾಗ ಉದ್ಭವವಾಗುತ್ತದೆ. ನಲಿವಿನ ಮಹತ್ವ ಅಡಗಿರುವುದು ನೋವಿನಲ್ಲಿ ಎನ್ನುವುದನ್ನು ಮರೆಯುವಂತಿಲ್ಲ ಅಲ್ಲವೇ..ನೋವನ್ನು ಅನುಭವಿಸದೆ ಹೋದರೆ ನಲಿವಿನ ಮಹತ್ವ ಅರ್ಥವಾಗದು‌. ನೋವು ಬದುಕಿನ ಅವಿಭಾಜ್ಯ ಅಂಗವೆಂದರೂ ತಪ್ಪಲ್ಲ. ಮಾನಸಿಕ ಅಥವಾ ದೈಹಿಕ ನೋವುಗಳು ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುವ ಸವಾಲುಗಳಾಗಿರುತ್ತದೆ. ಅವುಗಳ ಜೊತೆಗೆ ಬದುಕನ್ನು ನಡೆಸಿ ಬೆಳೆದಾಗ ಬದುಕಿನ ಸಾರ್ಥಕತೆ ದೊರೆಯುತ್ತದೆ.‌ ನೋವನ್ನು ಯಾಕೆ ಮರೆಯಬೇಕು !ನೋವನ್ನು ಮರೆತರೆ ನೆಮ್ಮದಿಯಾಗಿರಬಹುದು. ನೋವನ್ನು ತಾಳ್ಮೆಯಿಂದ ಗೆದ್ದಾಗ ಮನ ಮನೆ ನಗುತ್ತದೆ. ಪ್ರತಿಯೊಬ್ಬರು ನೋವನ್ನು ಎದುರಿಸಲೇಬೇಕು. ದೇವಾನುದೇವತೆಗಳೂ ಕೂಡ ನೋವು ಅನುಭವಿಸಿದ್ದಾರೆ. ರಾಜ ಮಹಾರಾಜರುಗಳು ನೋವಿನಿಂದ ಪಾರಾಗಿರಲಿಲ್ಲ. ಅಷ್ಟಕ್ಕೂ ನೋವಿಗೆ ಭಯಪಡುವುದೇಕೆ? ನೋವಿಗೆ ಅಳುವುದೇಕೆ ?ಕುರುಕ್ಷೇತ್ರ ರಣಭೂಮಿಯಲ್ಲಿ ಅರ್ಜುನ ಯುದ್ಧ ಮಾಡಲು ಹಿಂಜರಿದು ನನ್ನ ಸಂಬಂಧಿಕರ ಸಾವಿನ ನೋವನ್ನು ಹೇಗೆ ನೋಡಲಿ ಹೇಗೆ ಸಹಿಸಲಿ ಎಂಬ ಪ್ರಶ್ನೆ ಕೇಳಿ…

Read More

ರಚನೆ- ವಿದ್ಯಾಮಣಿ ನರೇಶ್ ರಾವ್ಮಂಗಳೂರು”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ಅಂತರಂಗದ ಆಸೆಯು ನಾಚಿ ಚಿಮ್ಮುತ್ತಿದೆಅಡವಿಯೊಳಗೆ ನೀ ಸಿಗಬಹುದೆಂಬ ಕಾತುರಅನುಮಾನವಿದೆ ಇದು ನಿನ್ನದೆ ಬಿಸಿ ಉಸಿರೆಅಂಜುತ್ತಿರುವ ಅಭಿಲಾಷೆಗೆ ಅನುಮತಿ ನೀಡಲೆ? ಬಳ್ಳಿಯಂತೆ ಸುತ್ತಿದೆ ನಿನ್ನ ತುಂಬಿದ ತೋಳುಗಳುಮುಳ್ಳಿನಂತೆ ತೊಳಲಾಡುತ್ತಿದೆ ಅಸೆಯ ಕಂಗಳುಮರದ ತೊಗಟೆಯೊಳಗು ನಿನ್ನದೆ ಪಿಸುಮಾತುಮರದಷ್ಟೆ ವರಟು ನಿನ್ನ ಮಾತಿನ ಬಿರುಸು! ಆಸೆಯ ಕೊಳದೊಳಗೆ ದಿನವು ಮೀಯುವೆನಿನ್ನದೆ ಗುಂಗಿನಲಿ ಹಂಸವನ್ನು ಕೆಣಕುವೆಮನದೊಳಗಿನ ಆಸೆ ಮುಚ್ಚಿಡಲಾರೆರವಿಯ ಜೊತೆಗೂಡಿ ನಿನ್ನ ಎದೆಗೆ ಜಾರುವೆ.. ಕಪ್ಪನೆಯ ಇರುಳಲ್ಲಿ ಬೆಪ್ಪಗೆ ಕುಳಿತಿರುವೆಕಪ್ಪೆಯ ಶಬ್ದಕೆ ಕಾವೆರುತ್ತಿದೆ ಕಾದ ಮನಸುಗಳು ಅನುಮಾನವಿಲ್ಲದ ಅನುರಾಗಕೆ ಅಭಿಮತವಿದ್ದರೆಅಂತರಂಗದೊಳಗು ನಾನು ನಿನ್ನ ಸೇರಬಹುದು!

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ನಿಮಗೇಕೆ ಕೊಡಬೇಕು ಕಪ್ಪ?.. ನೀವೇನು ನಮ್ಮ ಅಣ್ಣ ತಮ್ಮಂದಿರೇ?ನೆಂಟರೇ! ಇಷ್ಟರೇ!. ನಿಮಗೇಕೆ ಕೊಡಬೇಕು ಕಪ್ಪ ಎಂಬ ಕಿತ್ತೂರು ರಾಣಿ ಚೆನ್ನಮ್ಮ ಚಿತ್ರದ ಈ ಸಂಭಾಷಣೆ ಯಾರಿಗೆ ಗೊತ್ತಿಲ್ಲ? ರಾಣಿ ಚೆನ್ನಮ್ಮನ ಪಾತ್ರಕ್ಕೆ ಅದ್ಭುತ ಅಮೋಘ ಅಭಿನಯದ ಮೂಲಕ ನ್ಯಾಯ ಸಲ್ಲಿಸಿದ ಕರ್ನಾಟಕದ ಮನೆ ಮಾತಾದ ಕಲಾ ಸರಸ್ವತಿ ಬಿ ಸರೋಜಾ ದೇವಿ. ಕಿತ್ತೂರು ಚೆನ್ನಮ್ಮನ ವೇಷ ಭೂಷಣ ಧರಿಸಿ ಮೇಲಿನ ಸಂಭಾಷಣೆ ಹೇಳದ ಯಾವುದಾದರೂ ಒಂದು ಛದ್ಮವೇಶ ಸ್ಪರ್ಧೆ ಅದೂ ಕರ್ನಾಟಕದ ಯಾವ ಮೂಲೆಯಲ್ಲಾದರೂ ನಡೆದಿದೆಯೇ ಎಂದು ಕೇಳಿದರೆಬಹುತೇಕ ಎಲ್ಲರ ಉತ್ತರ ಇಲ್ಲ ಎಂದು ಗೋಣಾ ಡಿಸುವುದೇ ಆಗಿರುತ್ತದೆ.. ಅಷ್ಟೊಂದು ಪ್ರಸಿದ್ಧ ಆ ಸಂಭಾಷಣೆ ಮತ್ತು ಕಿತ್ತೂರು ರಾಣಿ ಚೆನ್ನಮ್ಮನ ಗತ್ತು ಗಾಂಭೀರ್ಯದ ಅಭಿನಯ.ಕಿತ್ತೂರು ಚೆನ್ನಮ್ಮ ಪಾತ್ರದಲ್ಲಿ ಶೌರ್ಯವೇ ಮೈವೆತ್ತ ಅಭಿನಯವಾದರೆ ಭಾಗ್ಯವಂತರು ಚಿತ್ರದಲ್ಲಿ ಗಂಡನನ್ನು ಅತ್ಯಂತ ಗೌರವಿಸುವ, ಪ್ರೀತಿಸುವ ಮತ್ತು ಆತನೆಂದರೆ ಭಯಪಡುವ ಪತ್ನಿಯ ಪಾತ್ರ.. ಹೀಗೆ ಪಾತ್ರ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಲೋಕ್ ಅದಾಲತ್ ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ಎರಡೂ ಪಕ್ಷಗಳಿಗೆ ಶಾಶ್ವತ ಪರಿಹಾರ ದೊರಕುತ್ತದೆ. ಹಾಗಾಗಿ ಪಕ್ಷಗಾರರು ತಮ್ಮ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಮುಂದೆ ಬರಬೇಕು ಎಂದು ೫ನೇ ಹೆಚ್ಚುವರಿ ಮತ್ತು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಅವರು ಹೇಳಿದರು.ಪಟ್ಟಣದ ನ್ಯಾಯಾಲಯದಲ್ಲಿ ಕಾನೂನು ಸೇವಾ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿ ಅವರು ಮಾತನಾಡಿದರು.ವರ್ಷದಲ್ಲಿ ಒಟ್ಟು ನಾಲ್ಕು ಲೋಕ್ ಅದಾಲತ್‌ಗಳನ್ನು ನಡೆಸಲಾಗುತ್ತದೆ. ಇಲ್ಲಿ ಪಕ್ಷಗಾರರ ಸಮಕ್ಷಮ ತಮ್ಮ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾದ ಎಲ್ಲ ಮಾರ್ಗಗಳನ್ನು ತಿಳಿಸಿ ಎರಡೂ ಪಕ್ಷಗಳ ಒಪ್ಪಿಗೆಯಂತೆ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ. ಲೋಕ್ ಅದಾಲತ್ ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ಎರಡೂ ಪಕ್ಷಗಳು ಗೆದ್ದಂತಾಗುತ್ತದೆ. ಹಾಗಾಗಿ ಪಕ್ಷಗಾರರು ತಮ್ಮ ಪ್ರಕರಣಗಳನ್ನು ಲೋಕ್ ಅದಾಲತ್ ಮೂಲಕ ಇತ್ಯರ್ಥಪಡಿಸಿಕೊಂಡು ನೆಮ್ಮದಿಯಾಗಿರಬಹುದು ಎಂದರು.ಸದರಿ ಲೋಕ ಅದಾಲತ್ ನಲ್ಲಿ ಮೂರು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು ೭೫೫೭…

Read More