Author: editor.udayarashmi@gmail.com

ಲೇಖನ- ಶ್ರೀದೇವಿ ಓಂಕಾರ್”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ಈಗಿನ ಕಾಲದಲ್ಲಿ ನಾಗರೀಕತೆ ಅನ್ನೋ ಮಾತು ವಿರಳವಾಗಿ ಹೋಗುತ್ತಾ ಇದೆ. ಐವತ್ತು ಅರವತ್ತು ವರ್ಷಗಳ ಹಿಂದಿನ ಜನರಿಗೂ ಈಗಿನ ಕಾಲದ ಜನರಿಗೂ ತುಂಬಾ ವ್ಯತ್ಯಾಸ ಕಂಡು ಬರುತ್ತದೆ. ಆಧುಕತೆಯು ಹೆಚ್ಚಿದಂತೆ ಅನಾಗರಿಕತೆಯೂ ಹೆಚ್ಚುತ್ತಾ ಇದೆ ಎಂದರೆ ತಪ್ಪಾಗಲಾರದು. ಮನುಷ್ಯನಲ್ಲಿ ಭಯ ಭಕ್ತಿ ಕಡಿಮೆ ಆಗ್ತಾ ಇದೆ. ಯುವ ಪೀಳಿಗೆಗೆ ಯಾವುದೇ ರೀತಿಯ ಭಯವಿಲ್ಲ. ನಾವೆಲ್ಲರೂ ಹಿರಿಯರಿಗೆ ತಗ್ಗಿ ಬಗ್ಗಿ ನಡೆದುಕೊಂಡು ಹೋಗುತ್ತಿದ್ದೆವು. ದೊಡ್ಡವರ ಮಾತು ಚಾಚೂ ತಪ್ಪದೆ ಪಾಲಿಸಿಕೊಂಡು ಹೋಗುತ್ತಿದ್ದೆವು. ಆದರೆ ಮೋಬೈಲ್, ಲ್ಯಾಪ್ಟಾಪ್ ಇದೇ ಇಂದಿನವರ ಜೀವನ ವಾಗಿದೆ. ಹಾಗೆಯೇ ಹಣವು ಎಲ್ಲರನ್ನೂ ತಪ್ಪು ದಾರಿಗೆ ಕೊಂಡು ಹೋಗ್ತಾ ಇರುವುದು ನೋಡ್ತಾ ಇದ್ದೀವಿ. ಹಾಗೆಯೇ ಎಲ್ಲರಿಗೂ ಶೌಕಿ ಜೀವನ ಬೇಕು. ಮನೆ ಹಿರಿಯರು ಅವರಿಗೆ ಬೇಡಾ. ಅದೂ ಅಲ್ಲದೇ ಯಾರನ್ನೂ ಕೇಳಿದರೂ ಗಂಡ ಹೆಂಡತಿ ಹೊಂದಾಣಿಕೆ ಇಲ್ಲದೇ ವಿಚ್ಛೇದನ ಅತಿಯಾಗಿದೆ. ಪ್ರೀತಿ ಪ್ರೇಮ ಎಂಬ ಶಬ್ದಕ್ಕೆ ಬೆಲೆ ಇಲ್ಲದಂತಾಗಿದೆ. ಪ್ರತಿಯೊಬ್ಬರಿಗೂ…

Read More

ರಚನೆ- ಸಿರಿ ಕಿರಣ”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ನೀ ಬರುವ ಗಳಿಗೆಯ ಎದುರು ನೋಡುತಾನಿನ ನೋಡುವ ಕಾತುರತೆಯಿಂದಬೆರಗಾಗಿಸೋ ನಿನ್ನ ಮಾತಿನ ಮೋಡಿಗೆಪುಲಕಗೊಳ್ಳುವುದು ನನ್ನೀ ಹೃದಯ ಸವೆಸಿದ ಪಯಣದ ದಾರಿಯಲಿ..ವಿನಿಮಯಿಸಿದ ಮಾತಿನ ಧಾಟಿಯಲಿಸಾಂತ್ವನ ನೀಡಿದ ನಿನ್ನ ಮೃದು ಸ್ಪರ್ಶದಲ್ಲಿಹಾತೊರೆಯುತ್ತಿದೆ ಮನವು ನಿನ್ನ ಬಳಿ ಸೇರಲು. ನಾವಾಡಿದ ಮಾತಿನ ಮಣಿಗಳ ಪೋಣಿಸುವೆನಾವು ನಡೆದ ದಾರಿಯ ಜಾಡ ಹಿಡಿದುಪ್ರೀತಿಯ ಸ್ಪರ್ಶದ ತಂತಿಯ ಬೆಸುಗೆಯಲಿನಮ್ಮ ಅನುಬಂಧವ ಗಟ್ಟಿ ಮಾಡಲು ನೀಡು ಬಾ ನಿನ್ನ ಪ್ರೇಮ ಪಾರಿಜಾತವಶಿರದಲ್ಲಿ ಧರಿಸಿ ನಾ ನಿನ್ನ ಮೆರೆಸುವೆನೆನಪಲ್ಲೇ ನೆಪವಾಗದೇ ಈ ನಮ್ಮ ಪ್ರೀತಿಯಇಡೀ ಜಗತ್ತಿಗೇ ಸಾರಿ ಹೇಳುವೆ.

Read More

ಲೇಖನ – ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ರಾಕೆಟ್ ಮೇಲಕ್ಕೆ ಹಾರುವಾಗ ಒಂದೊಂದೇ ಭಾಗವನ್ನು ಕೆಳಕ್ಕೆ ಬೀಳಿಸುತ್ತದೆ. ಹಗುರವಾದ ಮೇಲೆ ತನ್ನ ಕಕ್ಷೆಯತ್ತ ಮುನ್ನುಗ್ಗುತ್ತದೆ. ಈ ಸಂಗತಿ ನಮಗೆಲ್ಲ ಗೊತ್ತೆ ಇದೆ. ಗಗನದೆತ್ತರಕ್ಕೆ ಹಾರಲು ಯಾರಿಗೆ ಇಷ್ಟವಿಲ್ಲ ಹೇಳಿ? ನಾವೆಲ್ಲ ಗಗನದೆತ್ತರಕ್ಕೆ ಹಾರಲು ಬಯಸುತ್ತೇವೆ. ಆದರೆ ರಾಕೆಟ್‌ನಂತೆ ಬೇಡವಾದ ವಿಷಯಗಳನ್ನು ಕೆಳಕ್ಕೆ ತಳ್ಳುವುದೇ ಇಲ್ಲ. ಬೇಡವಾದ ಸಂಗತಿಗಳನ್ನು ತಲೆಯಲ್ಲಿ ಇಟ್ಟುಕೊಂಡು ಓಡಾಡುತ್ತೇವೆ. ವಿಮಾನದಲ್ಲಿ ಹಾರಬೇಕೆಂದರೆ ಇಂತಿಷ್ಟೇ ಸಾಮಾನುಗಳನ್ನು ತೆಗೆದುಕೊಂಡು ಹೋಗಬೇಕೆಂಬ ನಿಯಮವಿದೆ. ಹಾಗೆಯೇ ಬದುಕಿನಲ್ಲಿ ಮೇಲೇರಲು ಹಗುರವಾಗಬೇಕು ಅಲ್ಲವೇ? ತಡೆಯುವ ಸಂಗತಿಹಗುರವಾಗಿರುವುದನ್ನು ತಡೆಯುವ ಸಂಗತಿಗಳಲ್ಲಿ ಬಹುಮುಖ್ಯವಾದವು ನಮ್ಮ ಆಲೋಚನೆಗಳೇ ಎಂದರೆ ನಂಬಲೇಬೇಕು. ನಾವು ಇಂದು ಏನಾಗಿದ್ದೇವೆಯೋ ಅದಕ್ಕೆಲ್ಲ ಕಾರಣ ನಮ್ಮ ಆಲೋಚನೆಗಳು. ಆಲೋಚನೆಯು ಎಲ್ಲಿಂದಲೋ ಬಂದಂತೆ ತೋರುತ್ತದೆ. ನಮ್ಮ ಮನಸ್ಸಿನಲ್ಲಿ ಮೂಡುವ ವಿಚಿತ್ರ ಗೊಂದಲಮಯ ಆಲೋಚನೆ ಅಥವಾ ತೊಂದರೆ ಕೊಡುವ ಚಿತ್ರ ಅದು ಹಿಂಸಾತ್ಮಕ ಅಥವಾ ಲೈಂಗಿಕವಾಗಿರಬಹುದು. ಅನುಚಿತ ಅಥವಾ ಮುಜುಗರ ತರುವಂತಹದ್ದು ಏನಾದರೂ ಆಗಿರಬಹುದು. ವಿಷಯ ಏನೇ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕರ್ನಾಟಕ ಕಾರ್ಯನಿರತ ಪರ್ತಕರ್ತರ ಸಂಘ ಜಿಲ್ಲಾ ಘಟಕ ವಿಜಯಪುರ ವತಿಯಿಂದ ೨೦೨೫ನೆಯ ಸಾಲಿನಲ್ಲಿ ಕೊಡಮಾಡುವ ಜಿಲ್ಲಾ ವಾರ್ಷಿಕ ಪ್ರಶಸ್ತಿಗೆ ಸಿಂದಗಿ ತಾಲೂಕು ವರದಿಗಾರ ಮಲ್ಲಿಕಾರ್ಜುನ ಅಲ್ಲಾಪೂರ ಆಯ್ಕೆಯಾಗಿದ್ದಾರೆ ಎಂದು ಕಾನಿಪ ತಾಲೂಕಾಧ್ಯಕ್ಷ ಆನಂದ ಶಾಬಾದಿ ಹೇಳಿದ್ದಾರೆ.ಜು.೧೯ರಂದು ವಿಜಯಪುರದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ಪ್ರಕಾಶ ಬೆಣ್ಣೂರ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದಾಬಾಗಳಲ್ಲಿ ಮತ್ತು ಹಳ್ಳಿಗಳಲ್ಲಿ ತಾಂಡಾದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ತಡೆಗಟ್ಟುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನಯ ಜಿಲ್ಲಾಧ್ಯಕ್ಷ ಕೃಷ್ಣಾ ಭೋಸಲೆ ಮಾತನಾಡಿ, ಸಿಂದಗಿ ರಸ್ತೆ, ಇಂಡಿ ರಸ್ತೆ, ಅಥಣಿ ರಸ್ತೆ, ಬೆಂಗಳೂರು ರಸ್ತೆ ಹಾಗೂ ಕೋಲಾರ ರಸ್ತೆ ಅಕ್ಕ ಪಕ್ಕದಲ್ಲಿ ಇರುವ ದಾಬಾಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದಲೇ ರಸ್ತೆ ಅಪಘಾತ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಲೇ ಇದೆ. ಇದರಿಂದ ಕುಡಿದ ಅಮಲಿನಲ್ಲಿ ಗಲಭೆಗಳು ತುಂಬಾನೆ ನಡೆಯುತ್ತಾ ಇರುತ್ತವೆ. ಸಾಮಾನ್ಯ ಜನರಿಗೆ ತುಂಬಾ ತೊಂದರೆ ಆಗುತ್ತಿದೆ. ಹಾಗೂ ವಿಜಯಪುರ ತಾಲ್ಲೂಕಿನಲ್ಲಿ ಸುತ್ತಲಿನ ಗ್ರಾಮದಲ್ಲಿ ಸರ್ಕಾರಿ ಶಾಲೆಗಳ ಪಕ್ಕ ಹಾಗೂ ದೇವಾಲಯಗಳ ಹತ್ತಿರ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾರುತಿದ್ದಾರೆ. ಸಣ್ಣ ವಯಸ್ಸಿನ ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದರಲ್ಲಿ ಅಬಕಾರಿ ಇಲಾಖೆಯವರೂ ಶಾಮೀಲಾಗಿದ್ದಾರೆ. ಇದನ್ನು ಗಂಭೀರ ಪರಿಗಣಿಸಿ ಕೂಡಲೇ ಇದರ ಕಡಿವಾಣಕ್ಕೆ…

Read More

ಆರೋಪಿತರಿಂದ ಕೃತ್ಯಕ್ಕೆ ಬಳಸಲಾದ 01 ಕಂಟ್ರಿ ಪಿಸ್ತೂಲ್, 04 ಜೀವಂತ ಗುಂಡುಗಳು ಹಾಗೂ 03 ಮೋಟಾರ್ ಸೈಕಲ್‌ಗಳ ಜಪ್ತಿ | ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಳೆದ ಜು.14 ರಂದು ನಗರದ ಎಸ್.ಎಸ್. ಕಾಂಪ್ಲೇಕ್ಸ್‌ ದಲ್ಲಿ ನಡೆದ ಸುಶೀಲಕುಮಾರ ಕಾಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನುಳಿದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.ಈ ಕುರಿತು ಬುಧವಾರ ಪ್ರಕಟಣೆಯಲ್ಲಿ ತಿಳಿಸಿದ ಅವರು, ಸುಶೀಲ ಕಾಳೆ ಕೊಲೆ ಕುರಿತು ಮೃತನ ತಾಯಿ ಸುಚಿತ್ರಾ ಗಂಡ ತುಳಜಾರಾಮ ಕಾಳೆ, ಇವರು ಕೊಟ್ಟ ದೂರಿನ ಮೇರೆಗೆ ಗಾಂಧಿಚೌಕ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತದೆ. ಸದರಿ ಪ್ರಕರಣದ ತನಿಖಾಧಿಕಾರಿ ಪ್ರದೀಪ ತಳಕೇರಿ, ಪಿಐ ಗಾಂಧಿಚೌಕ ಪೊಲೀಸ್ ಠಾಣಿ ಹಾಗೂ ತಂಡದವರು ಕಾರ್ಯಪ್ರವೃತ್ತರಾಗಿ ಆರೋಪಿತರಾದ 1) ಆಕಾಶ ತಂದೆ ವಿಠೋಬಾ ಕಲ್ಲವ್ವಗೋಳ, 29 ವರ್ಷ, ಸಾ: ಹಿಟ್ನಳ್ಳಿ ಹಾ:ವ: ಸಾಯಿ ಪಾರ್ಕ, ವಿಜಯಪುರ. 2) ಸುದೀಪ @ ಸುಭಾಸ ತಂದೆ ರಮೇಶ…

Read More

ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದ ಶಾಸಕ ಕಟಕದೊಂಡ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ಚಡಚಣ: ಜಿಲ್ಲಾಡಳಿತ ವಿಜಯಪುರ ಮತ್ತು ತಾಲೂಕಾಡಳಿತ ಚಡಚಣ ವತಿಯಿಂದ ಹಮ್ಮಿಕೊಳ್ಳಲಾದ ಭೂ ಸುರಕ್ಷಾ ಯೋಜನೆ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಅವರು ಬುಧುವಾರ ತಹಶೀಲ್ದಾರ ಕಾರ್ಯಾಲಯದಲ್ಲಿ ಉಧ್ಘಾಟಿಸಿದರು.ಈ ವೇಳೆ ಮಾತನಾಡಿದ ವಿಠ್ಠಲ ಕಟಕಧೋಂಡ ಅವರು, ಕಂದಾಯ ಇಲಾಖೆಯ ಎಲ್ಲಾ ಸೇವೆಗಳನ್ನು ಡಿಜಿಟಲೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಜನಸಾಮಾನ್ಯರಿಗೆ ಸುಲಭವಾಗಿ ತಲುಪುವಂತಹ ಕಂದಾಯ ಇಲಾಖೆಯ ಎಲ್ಲ ದಾಖಲಾತಿಗಳನ್ನು ಪಡೆಯಬಹುದಾಗಿದೆ. ಅದಕ್ಕಾಗಿ ಯಶಸ್ವಿಯಾದ ಪಂಚ ಗ್ಯಾರಂಟಿ ಯೋಜನೆಯ ಜೊತಗೆ ಆರನೆ ಗ್ಯಾರಂಟಿ ಯೋಜನೆಯನ್ನು ಸಚಿವ ಕೃಷ್ಣ ಭೈರೆಗೌಡರು ಕೊಟ್ಟಿದ್ದಾರೆ ಎಂದರು.ಮೊದಲು ಭೂದಾಖಲೆಗಳನ್ನು ಪಡೆಯುವುದು ಅಷ್ಟು ಸುಲಭದಕೆಲಸ ಆಗಿತ್ತಿರಲಿಲ್ಲ ಸುಮಾರು ದಿನಗಳು ಬೇಕಾಗುತ್ತಿತ್ತು ಈಗ ಸರಕಾರದ ಮಹತ್ವಾಕಾಂಕ್ಷಿ ಭೂ ಸುರಕ್ಷಾ ಯೋಜನೆ ಜಾರಿಗೆ ತಂದಿದೆ ಇದರಿಂದ ರೈತರ ತೊಂದರೆ ಹಾಗೂ ವಿಳಂಬಕ್ಕೆ ತಿಲಾಂಜನಿ ಕೊಟ್ಟಂತಾಗಿದೆ, ನಿಮ್ಮ ಜಮೀನಿನ ದಾಖಲಾತಿಗಳನ್ನು ಇನ್ನುಮುಂದೆ ನೀವು ಮನೆಯಲ್ಲಿ, ಕರ್ನಾಟಕದ, ಜಗತ್ತಿನ ಯಾವ ಮೂಲೆಯಲ್ಲಿ ಕುಳಿತು ತಮ್ಮ ಜಮೀನಿನ…

Read More

ವಿಜಯಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹರೀಶ್ ಎ. ಪ್ರಧಾನ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನ್ಯಾಯವಾದಿಗಳು ನ್ಯಾಯದ ರಕ್ಷಕರಾಗಿರಬೇಕು. ದೀನ- ದುರ್ಬಲರ, ಧ್ವನಿಯಿಲ್ಲದವರ ಧ್ವನಿಯಾಗಿರಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹರೀಶ್ ಎ. ಪ್ರಧಾನ ಹೇಳಿದ್ದಾರೆ.ಬುಧವಾರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಮೊದಲ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಾನೂನು ವೃತ್ತಿಯು ಬಲವಾದ ನೀತಿಶಾಸ್ತ್ರವಾಗಿದ್ದು, ನಿರಂತರ ಕಲಿಕೆ ಮತ್ತು ಆಳವಾದ ಕರ್ತವ್ಯ ಪ್ರಜ್ಞೆಯನ್ನು ಬಯಸುತ್ತದೆ. ಕಾನೂನು ವಿದ್ಯಾರ್ಥಿಗಳು ಕಾನೂನಿನ ನಿಬಂಧನೆಗಳನ್ನು ಕಲಿಯುವುದಲ್ಲದೆ, ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುವ ಮೌಲ್ಯಗಳ ಪ್ರಕಾರ ಬದುಕಲು ಕಲಿಯಬೇಕು ಎಂದು ಅವರು ಹೇಳಿದರು.ಡೀಮ್ಡ್ ವಿವಿ ಕುಲಪತಿ ಡಾ. ಅರುಣ ಚಂ. ಇನಾಮದಾರ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮತ್ತು ಸತತ ಪ್ರಯತ್ನದಿಂದ ಯಶಸ್ಸು ಸಾಧಿಸಬೇಕು. ಪ್ರಯ್ತನಗಳು ಮಾತ್ರ ಫಲಿತಾಂಶಗಳನ್ನು ನೀಡುತ್ತವೆ. ಅಲ್ಲದೇ, ವಿದ್ಯಾರ್ಥಿಗಳು ಹೊಸ ಕಾನೂನುಗಳ ಬಗ್ಗೆ ತಿಳಿದಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಹೇಳಿದರು.ವಿವಿ ಸಮಕುಲಾಧಿಪತಿ ಡಾ. ವೈ.…

Read More

ಉದ್ಯಮಿಗಳಿಗೆ ನಾವು ಕೇವಲ ಭೂಮಿ ಕೊಡುವುದಿಲ್ಲ | ಆಂಧ್ರ ಸಚಿವ ನಾರಾ ಲೋಕೇಶ್ ಗೆ ಸಚಿವ ಎಂಬಿ ಪಾಟೀಲ್ ತಿರುಗೇಟು ಬೆಂಗಳೂರು: ರಾಜ್ಯದಲ್ಲಿ ಉದ್ಯಮಿಗಳಿಗೆ ನಾವು ಕೇವಲ ಭೂಮಿ ನೀಡುವುದಿಲ್ಲ. ಭಾರತದ ನಂ.1 ಏರೋಸ್ಪೇಸ್, ರಕ್ಷಣಾ ಪರಿಸರ ವ್ಯವಸ್ಥೆಯನ್ನು ನೀಡುತ್ತೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ್ ಅವರು ಬುಧವಾರ ಆಂಧ್ರ ಪ್ರದೇಶ ಸಚಿವ ನಾರಾ ಲೋಕೇಶ್ ಅವರಿಗೆ ತಿರುಗೇಟು ನೀಡಿದ್ದಾರೆ.ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಸ್ಥಾಪನೆಗೆ ದೇವನಹಳ್ಳಿಯಲ್ಲಿ ನಡೆಯಬೇಕಾಗಿದ್ದ ಭೂಸ್ವಾಧೀನವನ್ನು ರಾಜ್ಯ ಸರ್ಕಾರ ಕೈಬಿಟ್ಟ ನಂತರ ನಾರಾ ಲೋಕೇಶ್ ಅವರು, “ಡಿಯರ್ ಏರೋಸ್ಪೇಸ್ ಇಂಡಸ್ಟ್ರಿ, ಸುದ್ದಿ ತಿಳಿದು ಬೇಸರವಾಯ್ತು. ನನ್ನ ಬಳಿ ಉತ್ತಮ ಐಡಿಯಾ ಇದೆ. ನೀವು ಯಾಕೆ ಆಂಧ್ರಪ್ರದೇಶದತ್ತ ನೋಡಬಾರದು?” ಎಂದು ಎಕ್ಸ್ ನಲ್ಲಿ ಪೋಸ್ಟ್​ ಮಾಡಿದ್ದಾರೆ.ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ನಾರಾ ಲೋಕೇಶ್ ಪೋಸ್ಟ್ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಎಂಬಿ ಪಾಟೀಲ್ ಅವರು, ರೈತರ ಹಿತದೃಷ್ಟಿಯಿಂದ ಭೂಸ್ವಾಧೀನ ಕೈಬಿಡಬೇಕಾಯಿತು. ಆದರೆ ಈ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಳವಾರ ಸಮಾಜದ ಪ್ರತಿಭಾ ಪುರಸ್ಕಾರ ಸಮೀತಿ ವತಿಯಿಂದ 2024-25 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವೀತಿಯ ಪಿ.ಯು.ಸಿಯಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಆಗಸ್ಟ್ 17ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದ್ದು ಅರ್ಹ ವಿದ್ಯಾರ್ಥಿಗಳು ಜಾತಿ ಪ್ರಮಾಣ ಪತ್ರ, ಅಂಕಪಟ್ಟಿ, ಆಧಾರ್ ಕಾರ್ಡ್ಗಳ ನಕಲು ಪ್ರತಿ ಹಾಗೂ ಇತ್ತೀಚಿನ ಎರಡು ಫೊಟೋಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಅಂಚೆ ಮೂಲಕ ಇಲ್ಲವೆ ಖುದ್ದಾಗಿ ನಗರದ ಬಸ್ ನಿಲ್ಧಾಣ ಹತ್ತಿರ ಲಲಿತ ಮಹಲ್ ಹೊಟೆಲ್ ಆವರಣದಲ್ಲಿರುವ ಜ್ಞಾನಗಂಗಾ ವಿವಿದೊದ್ದೇಶ ಸಹಕಾರ ಸಂಘದಲ್ಲಿರುವ ರವಿ ಮೈಲಿಕರ್ ಮೋ.ಸಂ 9986486452, ಗಾಂಧಿ ಚೌಕ್ ಹತ್ತಿರ ವಿರುವ ಹಳೆಯ ಪುಸ್ತಕ ಅಂಗಡಿಯ ಶಿವಾನಂದ ಅಂಬಿಗೇರ ಮೋ.ಸಂ9448342873 ಹಾಗೂ ಮೀನಾಕ್ಷೀ ಚೌಕ ಆವರಣದಲ್ಲಿರುವ ಮಧುರಾ ಬಟ್ಟೆ ಅಂಗಡಿಯ ಪರಶುರಾಮ ಅಳಗುಂಡಗಿ ಇವರಲ್ಲಿ ಅರ್ಜಿಗಳನ್ನು ದಿನಾಂಕ 31ನೇ ಜುಲೈ2025ರ ರೊಳಗಾಗಿ ಸಲ್ಲಿಸುವಂತೆ ಪ್ರತಿಭಾ ಪುರಸ್ಕಾರ ಸಮೀತಿ…

Read More