ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಗ್ನಿಪಥ ಯೋಜನೆಯಡಿ ೨೦೨೫-೨೬ನೇ ಸಾಲಿನ ಅಗ್ನಿವೀರ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಆಸಕ್ತ್ತ ಯುವಕರ ಸಹಾಯಕ್ಕಾಗಿ ಮಾ.೨೪,೨೫ ರಂದು ಇಬ್ಬರು ಸೇನಾ ಸಿಬ್ಬಂದಿಗಳು ವಿಜಯಪುರ ಜಿಲ್ಲೆಯ ಸೈನಿಕ ಕಲ್ಯಾಣ ಮತ್ತು ಪುನರವಸತಿ ಇಲಾಖೆಗೆ ಭೇಟಿ ನೀಡಲಿದ್ದಾರೆ.
ಆಸಕ್ತರು ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ವಿಜಯಪುರ ದೂ: ೦೮೩೫೨-೨೫೦೯೧೩ ಸಂಖ್ಯೆಗೆ ಸಂಪರ್ಕಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
