Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 30 , 2026

ಪತ್ರಕರ್ತನಿಗೆ ಜೀವಬೆದರಿಕೆ ಹಾಕಿದ ದುಷ್ಕರ್ಮಿಗಳ ನಡೆಗೆ ಖಂಡನೆ

ದೇಶದಲ್ಲಿ ವೃದ್ದಾಶ್ರಮಗಳು ಬೆಳೆಯುತ್ತಿರುವುದು ಆತಂಕಕಾರಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಆಲಮಟ್ಟಿಗೆ ಏ.೫ ರವರೆಗೆ ಕಾಲುವೆಗೆ ನೀರು
(ರಾಜ್ಯ ) ಜಿಲ್ಲೆ

ಆಲಮಟ್ಟಿಗೆ ಏ.೫ ರವರೆಗೆ ಕಾಲುವೆಗೆ ನೀರು

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕಾಲುವೆಗೆ ನೀರು ಹರಿಸುವ ಅವಧಿ ಬದಲಾವಣೆ | ನಾರಾಯಣಪುರಕ್ಕೆ ಮಾ.೨೫ ವರೆಗೆ ನೀರು ಹರಿಸಲು ನಿರ್ಧಾರ

ಉದಯರಶ್ಮಿ ದಿನಪತ್ರಿಕೆ

ಆಲಮಟ್ಟಿ: ವಾರಾಬಂಧಿ, ಬಿಸಿಲಿನ ಪ್ರಖರತೆ ಹೆಚ್ಚಳದ ಕಾರಣ ಕಾಲುವೆಯ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ ಎಂಬ ನಾರಾಯಣಪುರ ಭಾಗದ ರೈತರ ಬೇಡಿಕೆಗೆ ಸ್ಪಂದಿಸಿ ನಾರಾಯಣಪುರ ಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ಮಾ.೨೫ ರವರೆಗೆ ನಿರಂತರ ಕಾಲುವೆ ನೀರು ಹರಿಸಲು ನಿರ್ಧರಿಸಲಾಗಿದೆ.
ಕಾಲುವೆಗೆ ನೀರು ಹರಿಸುವ ಅವಧಿಯನ್ನು ಕಡಿತಗೊಳಿಸಲಾಗಿದೆ. ನಾರಾಯಣಪುರ ಭಾಗದ ಸಚಿವರು, ಶಾಸಕರ ಮನವಿಯ ಮೇರೆಗೆ ಯುಕೆಪಿ ನೀರಾವರಿ ಸಲಹಾ ಸಮಿತಿ (ಐಸಿಸಿ) ಅಧ್ಯಕ್ಷ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ ಜರುಗಿದ ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ, ಕೃಷಿ ಅಧಿಕಾರಿ, ಕೆಬಿಜೆಎನ್ ಎಲ್ ಅಧಿಕಾರಿಗಳ ವಿಡಿಯೋ ಸಂವಾದ ಸಭೆಯಲ್ಲಿ ನಿರ್ಣಯಿಸಲಾಗಿದೆ. ವಿಡಿಯೋ ಸಂವಾದದಲ್ಲಿ ಕೃಷಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಮಾ.೨೨ ರಂದು ಕಾಲುವೆಗೆ ನೀರು ಹರಿಸುವುದು ಬಂದ್ ಮಾಡದೇ ನಿರಂತರ ನೀರು ಹರಿಸಿದರೆ ಸ್ವಲ್ಪ ಪ್ರಮಾಣದ ಬೆಳೆಗಳನ್ನು ಸಂರಕ್ಷಿತಬಹುದು ಎಂದು ಅಭಿಪಾಯ ವ್ಯಕ್ತಪಡಿಸಿದ್ದರು.
ಇದೇ ಮಾ.೧೪ ರಂದು ಹಿಂಗಾರು ಹಂಗಾಮಿನ ಮುಂದುವರೆದ ಐಸಿಸಿ ಸಭೆಯಲ್ಲಿ ಮಾ.೨೨ ರವರೆಗೆ ನೀರು ಹರಿಸಿ ಮಾ.೨೩ ರಿಂದ ಮಾ.೩೧ ರವರೆಗೆ ವಾರಾಬಂಧಿ ಮಾಡಿ ಮುಂದೆ ಏ.೧ ರಿಂದ ಏ.೬ ರ ವರೆಗೆ ನೀರು ಹರಿಸಲು ನಿರ್ಧರಿಸಲಾಗಿತ್ತು.
ಆದರೆ ಈ ತೀರ್ಮಾನಕ್ಕೆ ನಾರಾಯಣಪುರ ಭಾಗದ ರೈತರು ವಿರೋಧ ವ್ಯಕ್ತಪಡಿಸಿದ್ದರು. ವಾರಾಬಂಧಿ ರದ್ದುಗೊಳಿಸಿ ನಮ್ಮ ಭಾಗಕ್ಕೆ ನಿಗದಿಗೊಳಿಸಿದ ನೀರನ್ನು ನಿರಂತರ ಹರಿಸಲು ಆಗ್ರಹಿಸಿದ್ದರು.
ಒಟ್ಟಾರೆ ಆಲಮಟ್ಟಿ, ನಾರಾಯಣಪುರ ಎರಡೂ ಜಲಾಶಯಗಳ ಸಂಗ್ರಹಿತ ನೀರಿನ ಪ್ರಮಾಣ ೨೯.೫೦ ಟಿಎಂಸಿ ಅಡಿಯಿದೆ. ಜೂನ್ ೩೦ ರವರೆಗೆ ಅವಶ್ಯ ಬಳಕೆಗೆ ೨೪.೫ ಟಿಎಂಸಿ ಅಡಿ ನೀರು ಅಗತ್ಯ. ನೀರಾವರಿಗೆ ಲಭ್ಯವಿರುವ ನೀರಿನ ಪ್ರಮಾಣ ೫ ಟಿಎಂಸಿ ಅಡಿ.
ನಾರಾಯಣಪುರ ಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಅಗತ್ಯ ಹೆಚ್ಚಿದ್ದು ಅದಕ್ಕಾಗಿ ಮಾ.೨೫ ರ ಬೆಳಗಿನ ಜಾವದವರೆಗೆ ನಿರಂತರ ನೀರು ಹರಿಸಲು ನಿರ್ಧರಿಸಲಾಗಿದೆ.

ಆಲಮಟ್ಟಿಗೆ ಏ.೫ ರವರೆಗೆ ನೀರು

ಆಲಮಟ್ಟಿ ಅಚ್ಚುಕಟ್ಟು ಪ್ರದೇಶದ ಆಲಮಟ್ಟಿ ಎಡದಂಡೆ, ಬಲದಂಡೆ, ಮುಳವಾಡ, ತಿಮ್ಮಾಪುರ ಏತ ನೀರಾವರಿಗೆ ಮಾ.೨೩ ರಿಂದಕ ಮಾ.೩೧ ರವರೆಗೆ ನೀರು ಸ್ಥಗಿತಗೊಳಿಸಿ, ಏ.೧ ರಿಂದ ಏ.೫ ರವರೆಗೆ ಮಾತ್ರ ನೀರು ಹರಿಸಲು ನಿರ್ಧರಿಸಲಾಗಿದೆ.
ನಾರಾಯಣಪುರ ಅಚ್ಚುಕಟ್ಟು ಪ್ರದೇಶದಲ್ಲಿ ವಿಜಯಪುರ ಜಿಲ್ಲೆಯ ಇಂಡಿ ಶಾಖಾ ಕಾಲುವೆ, ಇಂಡಿ ಏತ ನೀರಾವರಿ ಯೋಜನೆಯೂ ಸೇರಿದ್ದು. ಅಲ್ಲಿ ಮಾ.೨೬ ರವರೆಗೆ ಕಾಲುವೆಗೆ ನೀರು ಹರಿಯಲಿದೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 30 , 2026

ಪತ್ರಕರ್ತನಿಗೆ ಜೀವಬೆದರಿಕೆ ಹಾಕಿದ ದುಷ್ಕರ್ಮಿಗಳ ನಡೆಗೆ ಖಂಡನೆ

ದೇಶದಲ್ಲಿ ವೃದ್ದಾಶ್ರಮಗಳು ಬೆಳೆಯುತ್ತಿರುವುದು ಆತಂಕಕಾರಿ

ಇಂದು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನ ಲೋಕಾರ್ಪಣೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಆಗಸ್ಟ್ 30 , 2026
    In ದಿನಪತ್ರಿಕೆ
  • ಪತ್ರಕರ್ತನಿಗೆ ಜೀವಬೆದರಿಕೆ ಹಾಕಿದ ದುಷ್ಕರ್ಮಿಗಳ ನಡೆಗೆ ಖಂಡನೆ
    In (ರಾಜ್ಯ ) ಜಿಲ್ಲೆ
  • ದೇಶದಲ್ಲಿ ವೃದ್ದಾಶ್ರಮಗಳು ಬೆಳೆಯುತ್ತಿರುವುದು ಆತಂಕಕಾರಿ
    In (ರಾಜ್ಯ ) ಜಿಲ್ಲೆ
  • ಇಂದು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನ ಲೋಕಾರ್ಪಣೆ
    In (ರಾಜ್ಯ ) ಜಿಲ್ಲೆ
  • ಪಿಓಪಿ ಗಣೇಶ ಬದಲು ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸಿ
    In (ರಾಜ್ಯ ) ಜಿಲ್ಲೆ
  • ಪ್ರಧಾನಿ ಮೋದಿ ಸಮ್ಮುಖದಲ್ಲಿ ಶಿಫಾ ಜಮಾದಾರ ವಿಚಾರ ಮಂಡನೆ
    In (ರಾಜ್ಯ ) ಜಿಲ್ಲೆ
  • ಕ್ರೀಡೆ ನಾಯಕತ್ವ, ಆತ್ಮವಿಶ್ವಾಸ ಬೆಳೆಸುವ ಸಾಧನ :ಡಾ.ಕಾಗವಾಡೆ
    In (ರಾಜ್ಯ ) ಜಿಲ್ಲೆ
  • ಬೇಕಾಬಿಟ್ಟಿಯಾಗಿ ಬರಗಾಲ ಪರಿಸ್ಥಿತಿ ನಿಭಾಯಿಸುತ್ತಿರುವ ಸರ್ಕಾರ
    In (ರಾಜ್ಯ ) ಜಿಲ್ಲೆ
  • ತಂತ್ರಜ್ಞಾನ ಮಿತವಾಗಿ ಬಳಸಿ, ನೈಜ ಸಂಬಂಧಗಳಿಗೆ ಒತ್ತು ನೀಡಿ
    In (ರಾಜ್ಯ ) ಜಿಲ್ಲೆ
  • ಕೂಡಲೇ ಬೆಳೆ ನಷ್ಟ ಪರಿಹಾರ ಬಿಡುಗಡೆಗೆ ರೈತರ ಆಗ್ರಹ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.