ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಬೋಧಕ-ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ನಗರದ ಬಸವನಬಾಗೇವಾಡಿ ರಸ್ತೆಯಲ್ಲಿರುವ ಶಾಂತಿನಗರದ ಶ್ರೀ ರಾಮಕೃಷ್ಣ ವಿದ್ಯಾ ಸ್ಕೂಲ್‌ನಲ್ಲಿ ಮಾ.೨೬ ರಂದು ಬೆಳಿಗ್ಗೆ ೧೦ ರಿಂದ ೪ ಗಂಟೆಯವರೆಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ.
ಬೋಧಕ ಹುದ್ದೆಗಳಿಗಾಗಿ ಬಿಎ, ಎಂಎಬಿಇಡಿ, ಬಿಎಸ್ಸಿ, ಎಂಎಸ್ಸಿಬಿಇಡಿ, ಎಂಪಿಇಡಿ ಹಾಗೂ ಯಾವುದೇ ಪದವಿ ವಿದ್ಯಾರ್ಹತೆಯುಳ್ಳ ಹಾಗೂ ಬೋಧಕೇತರ ಹುದ್ದೆಗಳಾದ ವಾರ್ಡನ್, ಸೂಪರ್‌ವೈಸರ್ ಮತ್ತು ಕ್ಲರ್ಕ್ಗೆ ಪದವಿ ವಿದ್ಯಾರ್ಹತೆಯುಳ್ಳ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಮೊ: ೯೪೪೮೧೧೪೩೮೫, ೯೯೪೫೦೦೦೭೯೩ ಸಂಖ್ಯೆಗೆ ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
