ಉದಯರಶ್ಮಿ ದಿನಪತ್ರಿಕೆ
ಇಂಡಿ: ಪಟ್ಟಣದ ಹಂಜಗಿ ರಸ್ತೆಯಲ್ಲಿ ಸರಕಾರದ ಪಡಿತರ ಅನ್ನಭಾಗ್ಯ ಅಕ್ಕಿಯನ್ನು ಅನಧಿಕೃತವಾಗಿ ಸಾಗಿಸುತ್ತಿದ್ದ ಮಾಹಿತಿಯ ಮೇರೆಗೆ ಆಹಾರ ನೀರಿಕ್ಷಕರು ಪರಮಾನಂದ ಹೂಗಾರ ಮತ್ತು ಪಟ್ಟಣದ ಸಿಪಿಐ ಪ್ರದೀಪ ಬಿಸೆ ಇವರು ದಾಳಿ ಮಾಡಿ ೨೨ ಸಾವಿರ ರೂ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಪ್ಲಾಸ್ಟಿಕ ಚೀಲಗಳಲ್ಲಿ ತುಂಬಿಕೊಂಡು ಟಂ ಟಂ ವಾಹನದಲ್ಲಿ ಪಟ್ಟಣದ ಹಂಜಗಿ ರಸ್ತೆಯಲ್ಲಿರುವ ವೇ ಬ್ರೀಜ್ ಗೇ ಹೋಗಿ ತೂಕ ಮಾಡಿಸಲಾಗಿ ೭೮೦ಪಡಿತರ ಅಕ್ಕಿ ಸಾಗಿಸುತ್ತಿದ್ದರನ್ನು ಬಂದಿಸಿದ್ದಾರೆ.
ಆರೋಪಿಗಳಾದ ನಸ್ರುದ್ದೀನ ಅತ್ತಾರ , ವಕಾಶ ಶೇಖ,ಮತ್ತು ವಿನೋದ ಕಲಬುರ್ಗಿ ಇವರ ಮೇಲೆ ಸರಕಾರ ನಿಯಮದ ಪ್ರಕಾರ ಫರ್ಯಾದಿ ದಾಖಲಾಗಿದೆ.
ಪ್ರಕರಣ ಇಂಡಿಯ ಪೋಲಿಸ ಠಾಣೆಯಲ್ಲಿ ದಾಖಲಾಗಿದೆ.

