Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ರೈತರು ಸಹನಾಮೂರ್ತಿಗಳು ಮತ್ತು ಸ್ವಾಭಿಮಾನಿಗಳು ಎಂದು ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಸೀತಪ್ಪ ಗಣಿ ಹೇಳಿದರು.ಸೋಮವಾರ ಆಲಮಟ್ಟಿ ಹಳೆ ರಾಷ್ಟ್ರೀಯ ಹೆದ್ದಾರಿ ಬಳಿ ಲಕ್ಷ್ಮಿದೇವಸ್ಥಾನದ ಮುಂದೆ ರೈತ ಹುತಾತ್ಮರ ದಿನಾಚರಣೆಯ ನೇತೃತ್ವ ವಹಿಸಿ ಮಾತನಾಡಿದರು.ನವಲಗುಂದ-ನರಗುಂದ ರೈತರು ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡುವಾಗ ಸರ್ಕಾರ ಅವರ ಮೇಲೆ ದಾಳಿ ನಡೆಸಿದ್ದರಿಂದ ರೈತರು ಉಗ್ರನಿಲುವು ತಾಳಿ ಬಂಡಾಯ ಏಳುವಂತಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ರವಿಶಂಕರ್ ಕೋತಿನ್, ಬಸಯ್ಯ ಹಿರೇಮಠ, ಸುಭಾಸ ಚೋಪಡೆ, ಲಕ್ಷ್ಮಣ ಬಿರಾದಾರ, ಪೀರಸಾಬ ನದಾಫ, ವೆಂಕಟೇಶ ವಡ್ಡರ, ಸಾಬಣ್ಣ ಅಂಗಡಿ, ರಾಮಣ್ಣ ಸೀತಿಮನಿ, ಸಂಜು ಚನಗೊಂಡ, ರಾಜು ಯಲಗಾರ ಮೊದಲಾದವರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಬಳ್ಳೋಳ್ಳಿ ಗ್ರಾಮದಲ್ಲಿ ಸುಖ, ಸಮೃದ್ಧಿ ನೆಲಸಲಿ ಮತ್ತು ವರುಣನ ಕೃಪಾಕಟಾಕ್ಷದ ಸಲುವಾಗಿ ಥಂಡಿ ಕಾರ್ಯಕ್ರಮ ನಮ್ಮ ಹಿರಿಯರ ವಾಡಿಕೆಯಂತೆ ಸುಮಾರು ವರ್ಷಗಳಿಂದ ಆಚರಣೆ ಮಾಡುತ್ತಾ ಬಂದಿದ್ದೇವೆ ಎಂದು ಜೈ ಭವಾನಿ ಗೋಂದಳಿ ಸೇವಾ ಸಮೀತಿಯ ಗೌರವ ಅಧ್ಯಕ್ಷ ರಾಜು ಬಿಸೆ ಹೇಳಿದರು.ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಜೈ ಭವಾನಿ ಗೋಂದಳಿ ಸೇವಾ ಸಮೀತಿ ಬಳ್ಳೊಳ್ಳಿ ಇವರಿಂದ ಮರಗಮ್ಮ ದೇವಿಯ ಮತ್ತು ದುರ್ಗಾ ದೇವಿಯ ಥಂಡಿ ಕಾರ್ಯಕ್ರಮ ಅತಿ ವಿರ್ಜಂಭಣೆಯಿಂದ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ದೇವೆಂದ್ರ ಬಿಸೆ, ಗೌತಮ ಬಿಸೆ,ಅನೀಲ ಕಾಳೆ ತಮ್ಮ ಅನಿಸಿಕೆಗಳನ್ನು ತಿಳಿಸಿದರು.ಪ್ರತಾಪ ಬಿಸೆ, ಮನೊಹರ ಬಿಸೆ, ಶ್ರೀಶೈಲ ಶಿಂಧೆ, ವಸಂತ ಶಿಂಧೆ, ಭಾಜಿರಾಬ ಶಿಂಧೆ, ಬಸವರಾಜ ಬಿಸೆ, ಲಕ್ಷಣ ಪಾಚಂಗೆ, ಆಕಾಶ ಸಾಳುಂಕೆ, ಅಜಿತ ಸಾಳುಂಕೆ, ದೀಪಕ ಬಿಸೆ ಹಾಗೂ ಗೋಂದಳಿ ಸಮಾಜದ ಎಲ್ಲ ಸದಸ್ಯರು ಗ್ರಾಮಸ್ಥರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಸ್ವಪ್ನಾ ವಾಕ್ ಹಾಗೂ ಶ್ರವಣ ದೋಷವುಳ್ಳ ಮಕ್ಕಳ ಶಾಲೆಯಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರ ಜನ್ಮದಿನವನ್ನು ಅವರ ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸಿದರು. ಶಾಲೆಯಲ್ಲಿರುವ ಮಕ್ಕಳಿಗೆ ಹಣ್ಣು ಹಂಪಲು, ಸಿಹಿ ವಿತರಿಸಿದರು.ಈ ವೇಳೆ ಮಾತನಾಡಿದ ಮಾಜಿ ಉಪಮೇಯರ್ ಗೋಪಾಲ ಘಟಕಾಂಬಳೆ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿರುವ ಛಲವಾದಿ ನಾರಾಯಣಸ್ವಾಮಿ ಅವರು ಒಬ್ಬ ಶ್ರೇಷ್ಠ ಜನನಾಯಕ, ಶೋಷಿತ ಸಮುದಾಯಗಳ ಧ್ವನಿಯಾಗಿರುವ ಛಲವಾದಿ ನಾರಾಯಣಸ್ವಾಮಿ ವಿಧಾನ ಪರಿಷತ್‌ನಲ್ಲಿ ಸದಾ ಜನರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದುಂಟು, ಹೀಗಾಗಿ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಸಮಾಜಸೇವೆಯೊಂದಿಗೆ ಆಚರಿಸಲಾಗುತ್ತಿದೆ, ದೇವರು ಅವರಿಗೆ ಇನ್ನೂ ಹುದ್ದೆಗಳನ್ನು ನೀಡಲಿ ಎಂದು ಹಾರೈಸಿದರು.ವಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ಪ್ರಮುಖರಾದ ಈರಣ್ಣ ಪಟ್ಟಣಶೆಟ್ಟಿ, ವಿನಾಯಕ ದಹಿಂಡೆ, ಸಿದ್ಧು ಮಲ್ಲಿಕಾರ್ಜುನಮಠ, ರಾಜೇಶ ತಾವಸೆ, ರಮೇಶ ದೇವಕರ, ಕಾಂತು ಶಿಂಧೆ ಮೊದಲಾದವರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಹಕಾರ ಭಾರತಿ ಕರ್ನಾಟಕ ನೂತನ ವಿಜಯಪುರ ಜಿಲ್ಲಾಧ್ಯಕ್ಷ ಶ್ರೀಹರ್ಷಗೌಡ ಪಾಟೀಲ್, ಸಂಘಟನಾ ಕಾರ್ಯದರ್ಶಿ ದೀಪಕ್ ಶಿಂತ್ರೆ, ಪ್ರಧಾನ ಕಾರ್ಯದರ್ಶಿ ಪರಶುರಾಮ ಚಿಂಚಲಿ ಆಯ್ಕೆಯಾಗಿದ್ದು, ಜುಲೈ ೨೫ ರಂದು ನಗರದ ಭಾವಸರ್ ಸಾಂಸ್ಕೃತಿಕ ಭವನದಲ್ಲಿ ರಾಜ್ಯಾಧ್ಯಕ್ಷರಿಂದ ಪದಗ್ರಹಣ ಕಾರ್ಯಕ್ರಮ ನೆರವೇರುವುದು.ಅಯ್ಕೆಗೊಂಡ ನೂತನ ಜಿಲ್ಲಾದ್ಯಕ್ಷರಿಂದ ಜಿಲ್ಲಾ ಕಾರ್ಯಕಾರಿ ಸದಸ್ಯರು, ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಮಹಿಳಾ ಮುಖ್ಯಸ್ಥರು ಮತ್ತು ವಿವಿಧ ಪ್ರಕೋಷ್ಟ ಅಧಿಕಾರಿಗಳ ಪದಗ್ರಹಣ ನೆರವೇರುವುದು.ಈ ಸಮಾರಂಭವನ್ನು ಸಂಸದರಾದ ರಮೇಶ್ ಜಿಗಜಿಣಗಿ ಅವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಹಕಾರ ಭಾರತಿಯ ರಾಷ್ಟ್ರೀಯ ಸಂರಕ್ಷಕ ರಮೇಶ್ ವೈದ್ಯಜಿ, ರಾಜ್ಯ ಅಧ್ಯಕ್ಷ ಪ್ರಭುದೇವ್ ಮಾಗನೂರ್, ರಾಜ್ಯ ಮುಖ್ಯ ಕಾರ್ಯದರ್ಶಿ ನರಸಿಂಗ್ ಕಾಮತ್, ಮಾಜಿ ಶಾಸಕ ಅರುಣ್ ಶಹಪುರ್, ನಿವೃತ್ತ ಅಪರ ನಿಬಂಧಕರು ಸಹಕಾರಿ ಇಲಾಖೆ, ಎಂ.ಜಿ. ಪಾಟೀಲ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ವಿಜಯಕುಮಾರ್ ಇಜೇರಿ, ಶಾಂತೇಶ್ವರ ಸಹಕಾರಿ ಸಂಘದ ಸಂಸ್ಥಾಪಕ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ದೇಶ ರಕ್ಷಕರ ಪಡೆ ಕಛೇರಿಯಲ್ಲಿ ಯುವ ಘಟಕದ ಸಭೆ ಹಾಗೂ ನೂತನ ಪದಾಧಿಕಾರಿಗಳ ನೇಮಕ ನಡೆಯಿತು.ಸಭೆಯನ್ನುದ್ದೇಶಿಸಿ ಮಾತನಾಡಿದ ಯುವ ಘಟಕದ ಅಧ್ಯಕ್ಷರಾದ ಆದಿತ್ಯ ಬಡಿಗೇರ, ಕಳೆದ ಐದು ವರ್ಷಗಳಿಂದ ನಾನು ದೇಶ ರಕ್ಷಕರ ಪಡೆಯ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದು, ನನ್ನಲ್ಲಿರುವ ಉತ್ಸಾಹ ನೋಡಿ ನನ್ನನ್ನು ಯುವ ಘಟಕದ ಅಧ್ಯಕ್ಷನನ್ನಾಗಿ ಆಯ್ಕೆಮಾಡಿದರು. ಯುವ ಘಟಕದ ಅಧ್ಯಕ್ಷನಾಗಿ ನಾನು ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ನಮ್ಮ ಸಂಘಟನೆಗೆ ಸೇರಿಸಿ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೇರೇಪಿಸುವ ಆಲೋಚನೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇನೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳುವ ಮೂಲಕ ಸಮಾಜದಲ್ಲಿನ ಲೋಪ – ದೋಷಗಳನ್ನು ತಿದ್ದಬಹುದು. ಶೀಘ್ರದಲ್ಲಿಯೇ ನಾವು ಕಾಲೇಜುಗಳಿಗೆ ಭೇಟಿ ನೀಡಿ ಸದಸ್ಯತ್ವ ಅಭಿಯಾನವನ್ನು ಸಹ ಪ್ರಾರಂಭಿಸುತ್ತೇವೆ. ದೇಶ ಪ್ರೇಮಿ ಕಾರ್ಯಗಳಲ್ಲಿ ಭಾಗವಹಿಸಲು ಇಚ್ಛಿಸುವ ಯುವಕರು ನಮ್ಮ ಸಂಘಟನೆಯ ಕಛೇರಿಗೆ ಸಂಪರ್ಕಿಸಬಹುದು ಎಂದು ಹೇಳಿದರು.ಈ ಸಭೆಯಲ್ಲಿ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಸಿದ್ದು ಅಂಬಿಗೇರ ಅವರನ್ನು ಉಪಾಧ್ಯಕ್ಷರನ್ನಾಗಿ, ಓಂ ಜಾಧವ…

Read More

ಲಿಂಗಾಯತರಿಗೆ ಅಲ್ಪ ಸಂಖ್ಯಾತ ಮಾನ್ಯಕೆಗೆ ಕೇಂದ್ರ ಸರಕಾರಕ್ಕೆ ಮರು ಮೇಲ್ಮನವಿ ಸಲ್ಲಿಸಿ | ಮಹಿಳಾ ವಿವಿದಲ್ಲಿ ಸೀರೆಯುಟ್ಟ ಅಕ್ಕಮಹಾದೇವಿ ಪುತ್ಥಳಿ ಸ್ಥಾಪಿಸಿ | ಡಾ.ಶಶಿಕಾಂತ ಪಟ್ಟಣ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನ್ಯಾಯಮೂರ್ತಿ ನಾಗಮೋಹನದಾಸ ವರದಿಯಾಧಾರಿತ ಹಿಂದಿನ ಸರಕಾರದ ಶಿಫಾರಸ್ಸನ್ನು ಸದೃಢಗೊಳಿಸಿ ಲಿಂಗಾಯತ ಧರ್ಮಿಯರನ್ನು ಅಲ್ಪ ಸಂಖ್ಯಾತ ಎಂದು ಪರಿಗಣಿಸಲು ಮತ್ತೆ ಕೇಂದ್ರ ಸರಕಾರಕ್ಕೆ ಮರು ಮೇಲ್ಮನವಿಯನ್ನು ಸಲ್ಲಿಸಿ ಲಿಂಗಾಯತರಿಗೆ ನ್ಯಾಯ ಒದಗಿಸಬೇಕೆಂದು ಪುಣೆ-ವಿಜಯಪುರದ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಆಗ್ರಹಿಸಿದ್ದಾರೆಮಂಗಳವಾರ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಲಿಂಗಾಯತರನ್ನು 2 D ಅಲ್ಪ ಸಂಖ್ಯಾತ ಸ್ಥಾನಮಾನದ ಮಾನ್ಯತೆ ನೀಡಲು ಕಾನೂನಿನಲ್ಲಿ ಅವಕಾಶವಿದ್ದು ಈ ಕೂಡಲೇ ಲಿಂಗಾಯತ ಧರ್ಮಿಯರನ್ನು ಅಲ್ಪ ಸಂಖ್ಯಾತ ಎಂದು ಪರಿಗಣಿಸಿ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು.ಕರ್ನಾಟಕದ ಏಕಮೇವ ಮಹಿಳಾ ವಿಶ್ವವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಪೂರ್ಣ ಪ್ರಮಾಣದಲ್ಲಿ ಸ್ಥಾಪಿಸಿ ಹೆಚ್ಚಿನ ಆರ್ಥಿಕ ಅನುದಾನ ನೀಡಿ ಶರಣ ಸಾಹಿತ್ಯದ ಸಂಶೋಧನೆ ಪರಿಷ್ಕರಣೆ ಪ್ರಕಟಣೆಗೆ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಾಂಪ್ರದಾಯಿಕ ಸಾವಯವ ಕೃಷಿ ಪದ್ಧತಿಯನ್ನು ವೈಜ್ಞಾನಿಕ ಸಲಕರಣೆಗಳೊಂದಿಗೆ ಅಳವಡಿಸಿಕೊಳ್ಳುವುದು ಇಂದು ಅನಿವಾರ್ಯವಾಗಿದೆ ಎಂದು ಶಾಸಕ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ) ಹೇಳಿದರು.ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಸೋಮವಾರ ಜರುಗಿದ ರೈತ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಇಂದು ಕೃಷಿ ಸಮುದಾಯದಲ್ಲಿ ಎತ್ತುಗಳ ಸಂತತಿ ನಶಿಸುತ್ತಿದೆ. ಹಿಂದೆ ಕುಟುಂಬದ ಬೇಡಿಕೆ ಅನುಗುಣವಾಗಿ ನಮ್ಮ ಕೃಷಿ ನೀತಿ ಇತ್ತು. ಆದರೆ ಇಂದು ಬದಲಾಗುತ್ತಿರುವ ಜನತೆಯ ಮನೋಧೋರಣೆಯ ಫಲವಾಗಿ ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಗುತ್ತಿದೆ. ಮೀತಿಮಿರಿದ ಆಹಾರದ ಬೇಡಿಕೆಯಿಂದ ನಮ್ಮ ಮೂಲ ಕೃಷಿ ಪದ್ಧತಿಯನ್ನು ಕೈಬಿಟ್ಟ ಕಾರಣ ಕ್ಯಾನ್ಸರ್‌ನಂತ ರೋಗಗಳಿಗೆ ನಾವು ಬಲಿಯಾಗುತ್ತಿದ್ದೇವೆ. ಆದ್ದರಿಂದ ನಮ್ಮ ರೈತರು ಮೊದಲಿನಂತೆ ಸಾವಯವ ಕೃಷಿ ಚಟುವಟಿಕೆಗಳ ಕುರಿತು ಒಲವು ಬೆಳೆಸಿಕೊಳ್ಳಬೇಕು ಎಂದರು.ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ನಂದಿ ಕೃಷಿ ಚಿಂತಕ ಬಸವರಾಜ ಬಿರಾದಾರ ಮಾತನಾಡಿ, ಗೋವು ಹಾಗೂ ನಂದಿ ಸಂತತಿಯ ಮೇಲೆ ಕೃಷಿಯ ಭವಿಷ್ಯ ನಿಂತಿದೆ. ನಂದಿ ಸಂಪತ್ತು ಕಸಾಯಿಖಾನೆಗೆ ಹೋಗುವುದು ನಿಲ್ಲಬೇಕು. ಅದಕ್ಕಾಗಿ ಪಕ್ಷಾತೀತ ಹಾಗೂ…

Read More

ಇದು ಆಧಾರರಹಿತ ಆರೋಪಗಳ ಅಸಾಧಾರಣ ಪ್ರಕರಣ | ಮುಂದಿನ ವಿಚಾರಣೆ ಆಗಸ್ಟ್ 5ಕ್ಕೆ | ನ್ಯಾಯಾಲಯ ಹೇಳಿಕೆ ಬೆಂಗಳೂರು: ಧರ್ಮಸ್ಥಳದಲ್ಲಿ ರಹಸ್ಯ ಸಮಾಧಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಡಿ ವಿರುದ್ಧ ಮಾನಹಾನಿಕರ ವಿಷಯವನ್ನು ಪ್ರಕಟಿಸದಂತೆ ಮಾಧ್ಯಮಗಳು ಮತ್ತು ಯೂಟ್ಯೂಬ್ ಚಾನೆಲ್‌ಗಳ ಮೇಲೆ ಬೆಂಗಳೂರು ಕೋರ್ಟ್ ನಿರ್ಬಂಧ ಹೇರಿದೆ. ಶ್ರೀ ಮಂಜುನಾಥಸ್ವಾಮಿ ದೇವಾಲಯದ ಕಾರ್ಯದರ್ಶಿ ಸಲ್ಲಿಸಿದ ಮಾನಹಾನಿ ಮೊಕದ್ದಮೆ ಅರ್ಜಿ ಸಂಬಂಧ ಈ ಆದೇಶ ಹೊರಡಿಸಲಾಗಿದೆ. ಶ್ರೀ ಮಂಜುನಾಥಸ್ವಾಮಿ ದೇವಾಲಯದ ಮಾಜಿ ಸ್ವಚ್ಛತ ಕೆಲಸಗಾರನೊಬ್ಬ ದೇವಾಲಯದ ಮೇಲ್ವಿಚಾರಕರು ಹಲವಾರು ಶವಗಳನ್ನು ಸಮಾಧಿ ಮಾಡಲು ಒತ್ತಾಯಿಸಿದ್ದಾರೆ ಎಂಬ ಆರೋಪಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ಬಂದ ನಂತರ ಈ ಆದೇಶ ಹೊರಬಿದ್ದಿದೆ. ಆದಾಗ್ಯೂ, ಸ್ವಚ್ಛತ ಕೆಲಸಗಾರ ಹರ್ಷೇಂದ್ರ ಕುಮಾರ್ ಅಥವಾ ಅವರ ಕುಟುಂಬದ ಹೆಸರನ್ನು ಎಲ್ಲೂ ಹೇಳಿಲ್ಲ. ಒಂದು ಸಂಸ್ಥೆ ಮತ್ತು ದೇವಾಲಯದ ವಿರುದ್ಧ ಆರೋಪ ಬಂದರೆ ಅದು ವಿವಿಧ ಕಾಲೇಜುಗಳು ಮತ್ತು ಶಾಲೆಗಳಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ನಿವೃತ್ತಿಯಾದ ಸರ್ಕಾರಿ ನೌಕರರಿಗೆ ಪಿಂಚಣಿ ಮತ್ತು ಕುಟುಂಬ ಪಿಂಚಣಿಯನ್ನು ಪರಿಷ್ಕರಿಸಲು ಸಾದ್ಯವಾಗುವದಿಲ್ಲ ಎಂಬ ಕೇಂದ್ರ ಸರ್ಕಾರದ ನಿರ್ಣಯವನ್ನು ಖಂಡಿಸಿ ಆಲಮೇಲ ತಾಲೂಕು ನಿವೃತ ನೌಕರ ಸಂಘ ತಹಶೀಲ್ದಾರ ಮೂಲಕ ಪ್ರದಾನ ಮಂತ್ರಿಗಳಿಗೆ ಮವಿ ಸಲ್ಲಿಸಿದರು.ನಿವೃತ ನೌಕರಾದ ಸಂಘದ ಎನ್.ಎ. ಬಿರಾದಾರ ಮಾತನಾಡಿ ಕೇಂದ್ರ ಸರ್ಕಾರಿ ನೌಕರರ ಹಾಗೂ ಪಿಂಚಣಿದಾರರ ವೇತನವನ್ನು ಪರಿಸ್ಕರಿಸಲು ಈಗಾಗಲೆ ೮ನೇ ವೇತನ ಆಯೋಗ ರಚನೆ ಮಾಡಿದೆ ಸದರಿ ಆಯೋಗವು ಕಾರ್ಯೋನ್ಮಖವಾಗಿರುತ್ತದೆ, ಇತ್ತಿಚೆಗೆ ಕೇಂದ್ರ ಸರ್ಕಾರವು ೨೦೨೫ ಮಾರ್ಚ ೨೫ ರಂದು ಲೋಕಸಭೆಯಲ್ಲಿ ಆರ್ಥಿಕ ಸಚಿವರಾದ ನಿರ್ಮಲಾ ಸೀತಾರಂ ಅವರು ಆರ್ಥಿಕ ಬಿಲ್ಲನ್ನು ಮಂಡಿಸುವಾಗ ೨೦೨೬ ಎಪ್ರೀಲ್ ೧ಕ್ಕೆ ಮೊದಲು ನಿವೃತ್ತಿಯಾದ ಸರ್ಕಾರಿ ನೌಕರರಿಗೆ ಪಿಂಚಣಿ ಮತ್ತು ಕುಟುಂಬ ಪಿಂಚಣಿಯನ್ನು ಪರಿಷ್ಕರಿಸಲು ಸಾದ್ಯವಾಗುವದಿಲ್ಲ ಎಂಬ ನಿರ್ಣಯವನ್ನು ತೆಗೆದುಕೊಳ್ಳಲಾಗುತ್ತಿದೆ ಇದರಿಂದ ೨೦೨೬ ಎಪ್ರೀಲ್ ಮೊದಲು ನಿವೃತ್ತಿಯಾದ ಸರ್ಕಾರಿ ನೌಕರರಿಗೆ ಮತ್ತು ಕುಟುಂಬ ಪಿಂಚಣಿದಾರರಗಿಗೆ ಆರ್ಥಿಕ ಸಂಕಷ್ಟಕೋಳಗಾಗುತ್ತಾರೆ. ಇದನ್ನು ಮನಗಂಟು ಇನ್ನೊಮ್ಮೆ ಮರು ಪರಿಶಿಲಿಸಿ ನ್ಯಾಯ ಒದಗಿಸಿಕುಡಬೇಕು…

Read More

ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಸ್ಪಷ್ಟನೆ B (ಇಂದು (ಜುಲೈ ೨೨, ಮಂಗಳವಾರ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾಗಿ ಇತ್ತೀಚೆಗೆ ೧ವರ್ಷ ಪೂರೈಸಿದ ಸಂಗಮೇಶ ಬಬಲೇಶ್ವರ ಅವರ ೪೫ನೆಯ ಜನುಮದಿನ ಈ ನಿಮಿತ್ತ ಉದಯರಶ್ಮಿ ಪತ್ರಿಕೆ ಸಂಪಾದಕ ಅವರನ್ನು ಸಂದರ್ಶಿಸಿದ ವಿವರ ತಮ್ಮ ಅವಗಾಹನೆಗೆ.. ವಿಶೇಷ ಸಂದರ್ಶನ- ಇಂದುಶೇಖರ ಮಣೂರಸಂಪಾದಕ, ’ಉದಯರಶ್ಮಿ’ ಉದಯರಶ್ಮಿ ದಿನಪತ್ರಿಕೆ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರಾಗಿ ಒಂದೇ ವರ್ಷದ ಅವಧಿಯಲ್ಲಿ ಮಕ್ಕಳಿಗಾಗಿ ಇಂತಹದ್ದೊಂದು ಅಕಾಡೆಮಿ ಅಸ್ತಿತ್ವದಲ್ಲಿದೆ ಎಂದು ನಾಡಿನ ಬಹುತೇಕರಿಗೆ ಗೊತ್ತೇ ಇಲ್ಲದ ಸಂಗತಿಯನ್ನು ಇಂದು ತಮ್ಮ ಕಾರ್ಯದಕ್ಷತೆ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳಿಂದ ನಾಡಿನ ಮನೆ ಮಾತಾದವರು ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು. ಕಾಲಿಗೆ ಚಕ್ರಕಟ್ಟಿಕೊಂಡವರಂತೆ ನಾಡಿನಾದ್ಯಂತ ಸಂಚರಿಸಿ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತ ಹಲವಾರು ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಂಡು ಸಫಲತೆಯ ದೋಣಿಯಲ್ಲಿ ಪಯಣಿಸುತ್ತಿರುವ, ನಾಡಿನ ಮಕ್ಕಳ ಕಣ್ಮಣಿಯಾಗಿ ಹೊರಹೊಮ್ಮುತ್ತಿರುವ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರ ೪೫ನೇ ಜನ್ಮದಿನ (ಜು.೨೨) ನಾಳೆ…

Read More