ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೫-೨೬ ನೇ ಸಾಲಿನ ಜವಾಹರ ನವೋದಯ ಶಾಲೆಗಳಲ್ಲಿ ೬ನೇ ವರ್ಗದ ಪ್ರವೇಶಕ್ಕಾಗಿ ಜನೇವರಿ ೧೮ ರಂದು ಜರುಗಿದ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದ್ದು ವಿಜಯಪುರ ನಗರದ ಪ್ರತಿಷ್ಠಿತ ಎಕ್ಸಲಂಟ್ ಕೋಚಿಂಗ್ ಕ್ಲಾಸ್‌ನ ೩೫ ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ಎಕ್ಸಲಂಟ್ ಕೋಚಿಂಗ್ ಕ್ಲಾಸ್‌ಗೆ ಕೀರ್ತಿ ತಂದಿದ್ದಾರೆ.
ಸ್ವರೂಪ ಶಿವೂರ, ಪಣ್ಯಶ್ರೀ ಪಾಟೀಲ, ರಾಹುಲ್ ಪಾಟೀಲ, ಶ್ರೇಯಸ್ ಡಂಬಳಿ, ಸಂಗಮೇಶ ನಾಗರಾಳ, ಅಜೇಯಕುಮಾರ ಹೊಸಮನಿ, ಅಯಾನ ನಾಗೂರೆ, ಅಭಿಷೇಕ್ ಜಗದಾಳ, ಮನೋಜ ಅಮೆತಪ್ಪನವರ, ಪ್ರತೀಕ ಜಿಡ್ಡಿಮನಿ, ಸುಹಾಸಗೌಡ ಎಸ್, ಸಂಪ್ರೀತ ಪರ್ವತಿಮಠ, ಅರ್ಚಿತ ಶೆಂದಗಿ, ದಿಶಾ ಪಾಟೀಲ, ಪೂಜಾ ಹೂಗಾರ, ರುಕ್ಮಿಣಿ ಹಳೆಗೌಡರ, ಅಭಿಶೇಕ್ ಮಳಗಿ, ಅಭಿಷೇಕ್ ಬಿಡಾರಿ, ನಿತಿನ ಬುರ್ಲಿ, ಶಿವಕುಮಾರ ಬೆಳ್ಮಗಿ, ವಿಹಾನ್‌ಕುಮಾರ ಪಿ, ಕಾರ್ತಿಕ್ ಬಳೂರಗಿ, ಸ್ವರೂಪ್ ಮಹೇಂದ್ರಕರ, ಹೃತಿಕ್ ಕೋಟಿಮನಿ, ಪಿಯುಶ ಎಮ್ಮೆ, ಉದಯಕಿರಣ ಕೆ, ಗಿರೀಶ ರಾಠೋಡ, ಸುಬ್ರಮಣ್ಯ ಗೊಂಡಿ, ಆದೀಶ ರಾಠೋಡ, ಆರ್ಯನ್ ರಾಠೋಡ, ಭುವನ ಆರ್, ಪೃಥ್ವಿರಾಜ್ ಲಮಾಣಿ, ಸಮರ್ಥ ನಾಯ್ಕೋಡಿ, ಶ್ರೇಯಾ ತಳವಾರ, ಚಿನ್ಮಯ್ ಕಣ್ಣಿ ಆಯ್ಕೆಯಾಗಿದ್ದಾರೆ
ಮಕ್ಕಳ ಸಾಧನೆಯ ಕುರಿತು ಹರ್ಷವ್ಯಕ್ತಪಡಿಸಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ; ಗ್ರಾಮೀಣ ಭಾಗದ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ನೆರವಾಗಲಿ ಎನ್ನುವ ಉದ್ಧೇಶದಿಂದ ಪ್ರಾರಂಭವಾದ ಜವಾಹರ್ ನವೋದಯ ಶಾಲೆಗಳಲ್ಲಿ ಪ್ರವೇಶ ಪಡೆಯುವುದು ಸುಲಭದ ಮಾತಲ್ಲ. ಇಲ್ಲಿ ಶ್ರದ್ಧೇ ಹಾಗೂ ಸಮರ್ಪಣಾ ಭಾವ ಇದ್ದರೆ ಮಾತ್ರ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಇಂದು ನಮ್ಮ ಕೋಚಿಂಗ್ ಕ್ಲಾಸ್‌ನಿಂದ ಮೊದಲ ಸುತ್ತಿನ ಆಯ್ಕೆಯಲ್ಲಿ ೩೫ ವಿದ್ಯಾರ್ಥಿಗಳು ನೇರ ಪ್ರವೇಶ ಪಡೆದುಕೊಳ್ಳಲು ಅರ್ಹತೆ ಪಡೆದುಕೊಂಡಿದ್ದು ಸಂತಸದ ವಿಷಯ. ಹಾಗೆಯೇ ಇನ್ನೂ ಎರಡರಿಂದ ಮೂರು ಸುತ್ತಿನ ಆಯ್ಕೆ ನಡೆಯಲಿದ್ದು ಒಟ್ಟು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಆಯ್ಕೆಯಾಗುವ ನಿರೀಕ್ಷೆ ಇದೆ. ಈ ಬಾರಿ ಜನೇವರಿಯಲ್ಲಿ ಪರಿಕ್ಷೆಗಳನ್ನು ನಡೆಸಿ ಮಾರ್ಚನಲ್ಲಿ ಫಲಿತಾಂಶ ನೀಡಿದ್ದು ವಿಶೇಷವಾಗಿದೆ. ಇದು ಮಕ್ಕಳ ಕಾಯುವಿಕೆಯನ್ನು ಕಡಿಮೆ ಮಾಡುವುದರ ಜೊತೆಗೆ ಅವರ ನೀರಿಕ್ಷೆಗೆ ಬೇಗನೇ ಸ್ಪಂದನೆ ಸಿಕ್ಕಂತಾಗುತ್ತದೆ ಎಂದು ಹೇಳುವುದರ ಜೊತೆಗೆ ಆಯ್ಕೆಯಾದ ಮಕ್ಕಳಿಗೂ ಹಾಗೂ ನಿರೀಕ್ಷಿತ ಫಲಿತಾಂಶವನ್ನು ನೀಡಿದ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿಗಳನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.
ಸಂಸ್ಥೆಯ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಮಕ್ಕಳ ಸಾಧನೆಗಳಿ ಹರ್ಷ ವ್ಯಕ್ತಪಡಿಸಿದರು.
