ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರದ ಬಿಜೆಪಿ ನಾಯಕ ವಿಕ್ರಮ ಗಾಯಕವಾಡ ಅವರು ರಾಷ್ಟ್ರೀಯ ಮಾಂಗ ಗಾರುಡಿ ಕ್ರಾಂತಿ ಸೇನಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ.
ಇತ್ತಿಚೆಗೆ ಪೂನಾದಲ್ಲಿ ಜರುಗಿದ ರಾಷ್ಟ್ರೀಯ ಮಾಂಗ ಗಾರುಡಿ ಕ್ರಾಂತಿ ಸೇನಾ ಸಭೆಯಲ್ಲಿ ಸೇನಾದ ರಾಷ್ಟ್ರೀಯ ಸಂಸ್ಥಾಪಕರಾದ ಉತ್ತಮ ಶಂಕರ ಮಾನಕರ ಹಾಗೂ ರಾಷ್ಟ್ರೀಯ ಅಧ್ಯಕ್ಷ ಬಾಳಾಸಾಹೇಬ್ ಕಾಂತಾ ರಾಖಪಸರೆ ಅವರು ವಿಕ್ರಮ ಗಾಯಕವಾಡ ಅವರಿಗೆ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಪ್ರಮಾಣಪತ್ರ ವಿತರಿಸಿದರು ಎಂದು ವಿಕ್ರಮ ಗಾಯಕವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

