ಮೋರಟಗಿಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ | ಶಾಸಕ ಅಶೋಕ ಮನಗೂಳಿ ಮನವಿ
ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ಅಧಿಕಾರ ಶಾಶ್ವವಲ್ಲ ನಮ್ಮ ಅಧಿಕಾರದ ಅವಧಿಯಲ್ಲಿ ಜಾತ್ಯತೀತವಾಗಿ ಮಾಡಿದಂತ ಅಭಿವೃದ್ಧಿ ಕಾರ್ಯಗಳು ಶಾಶ್ವತ, ಅಭಿವೃದ್ಧಿ ಕಾಮಗಾರಿಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಶಾಸಕ ಅಶೋಕ ಮನಗೂಳಿ ಮನವಿ ಮಾಡಿದರು.
ಮಂಗಳವಾರ ಗ್ರಾಮದ ಜನತಾ ಕಾಲೋನಿಯಲ್ಲಿ ೨೦೨೩-೨೪ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಅನುದಾನದ ಅಡಿಯಲ್ಲಿ ಮಂಜೂರಾದ ೪೦ ಲಕ್ಷ ರೂ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಗ್ರಾಮದಲ್ಲಿ ಈಗಾಗಲೇ ಕೆರೆ ಅಭಿವೃದ್ಧಿಗಾಗಿ ೧.೫೦ ಕೋಟಿ, ಶಾದಿ ಮಹಲ್ ನಿರ್ಮಾಣಕ್ಕಾಗಿ ೧ ಕೋಟಿ, ಮಂಜೂರಾಗಿದ್ದು ಕಾರ್ಯ ಪ್ರಗತಿಯಲ್ಲಿವೆ ಸದ್ಯಕ್ಕೆ ಜನತಾ ಕಾಲೋನಿಗೆ ಹೋಗುವ ಸಿಸಿ ರಸ್ತೆಗೆ ೪೦ ಲಕ್ಷ ರೂ, ಸಮುದಾಯ ಅರೋಗ್ಯ ಕೇಂದ್ರಕ್ಕೆ ಹೋಗುವ ಮುಖ್ಯ ರಸ್ತೆಗೆ ೧೫ ಲಕ್ಷ ರೂ ಹಾಗೂ ಶ್ರೀ ಸಿದ್ದರಾಮೇಶ್ವ ಸಮುದಾಯ ಭವನ ನಿರ್ಮಾಣಕ್ಕೆ ೧೫ ಲಕ್ಷ ಮಂಜುರು ಮಾಡಿಸಿದ್ದು ಇನ್ನುಳಿದ ಕಾಮಗಾರಿಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಿ ಮೋರಟಗಿ ಗ್ರಾಮವನ್ನು ಮಾದರಿ ಗ್ರಾಮವನ್ನಗಿಸುತ್ತೇನೆ ಎಂದು ಭರವಸೆ ನೀಡಿದರು.
ಭೂಮಿಪೂಜಾ ಕಾರ್ಯಕ್ರಮದಲ್ಲಿ ಮಾಜಿ ಜಿ. ಪಂ.ಸದಸ್ಯ ಎನ್ ಆರ್ ತಿವಾರಿ, ಎಂ.ಕೆ. ಕಣ್ಣಿ, ಎಂ. ಟಿ. ಸಿಂಗೆ, ವೀರನಗೌಡ ಪಾಟೀಲ್, ಡಾ, ಗಿರೀಶ್ ಪಾಟೀಲ್, ಸಲೀಮ್ ಕಣ್ಣಿ,ರಜಾಕ್ ಭಾಗವಾನ, ಸೇರಿದಂತೆ ಜಿಲ್ಲಾ ಪಂಚಾಯತಿ ಅಧಿಕಾರಿಗಳು ಹಾಗೂ ಲ್ಯಾಂಡ್ ಆರ್ಮಿ ಇಲಾಖೆಯ ಅಧಿಕಾರಿಗಳು ಇದ್ದರು.
“ಮತಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಜಿ ಶಾಸಕರು ಪತ್ರಿಕಾಗೋಷ್ಠಿ ಮೂಲಕ ಪ್ರಶ್ನಿಸುತ್ತಿದ್ದಾರೆ. ಬರೀ ಬಾಯಿಯಿಂದ ಹೇಳಿದರೆ ಸಾಲದು, ಎರಡುವರೆ ವರ್ಷ ಅಧಿಕಾರ ಮುಗಿದ ಮೇಲೆ ಬುಕ್ ಲೇಟ್ ಮಾಡಿಸಿ ಉತ್ತರ ಕೊಡುತ್ತೇನೆ.”
– ಅಶೋಕ ಮನಗೂಳಿ
ಶಾಸಕರು

