ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ದತ್ತಿ ಸ್ಮರಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಚನಗಳಲ್ಲಿ ಆಧ್ಯಾತ್ಮ ಮತ್ತು ತಾತ್ವಿಕ ವಿಚಾರಗಳಿಗೆ ಹೆಚ್ಚಿನ ಮಹತ್ವವಿದೆ ಮತ್ತು ಅವು ಇಂದಿಗೂ ಸರ್ವಕಾಲಿಕ ಎಂದು ವಿಜಯಪುರದ ಜ್ಞಾನ ಯೋಗಾಶ್ರಮದ ಜ್ಞಾನಾನಂದ ಸ್ವಾಮೀಜಿ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆ ಹಾಗೂ ಕನ್ನಡ ವಿಭಾಗದ ಸಯುಕ್ತಾಶ್ರಯದಲ್ಲಿ ಅಲ್ಲಮಪ್ರಭುದೇವರ ಜಯಂತಿಯ ಅಂಗವಾಗಿ ಹಾಗೂ ದಿವಂಗತ ಕೃಷ್ಣಾಭಾಯಿ ಹನುಮಂತ ಬಿದರಿ, ಲಿಂ. ಶಿವಲಿಂಗಮ್ಮ ಪರಪ್ಪ ಸಜ್ಜನ, ಲಿಂ ಶಾಂತಾಬಾಯಿ ಮಲ್ಲೇಶಪ್ಪ ಸಜ್ಜನ, ಕೋರವಾರ ಶಂಕರಗೌಡ ಶರಣಪ್ಪಗೌಡ ಪಾಟೀಲ ಇವರ ದತ್ತಿ ಸ್ಮರಣೆ ಕಾರ್ಯಕ್ರಮ ದತ್ತಿ ದಾಸೋಹಿಗಳಾದ ಪ್ರೊ ಆರ್ ಎಚ್ ಬಿದರಿ ಮತ್ತು ಪ್ರೊ ಜಯಶ್ರೀ ಸಜ್ಜನ ಅವರ ದತ್ತಿ ಕಾರ್ಯಕ್ರಮದಲ್ಲಿ “ಅಲ್ಲಮಪ್ರಭು ಅನುಭಾವ” ವಿಷಯದ ಕುರಿತು ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಕಲಿಕೆಯ ಹಂತದಲ್ಲಿ ದೃಡ ಮನಸ್ಸಿನಿಂದ, ಏಕಾಗ್ರತೆಯಿಂದ,ಕೇವಲ ಜ್ಞಾನದ ಹಂಗಿರಬೇಕು. ಮನ್ನಸ್ಸನ್ನು ವಿಚಲಿತಗೊಳಿಸದೆ ನಿಮ್ಮ ಅಮೂಲ್ಯ ಸಮಯವನ್ನು ಸರಿಯಾಗಿ ಬಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಡಾ.ಉಷಾದೇವಿ ಹಿರೇಮಠ ಆಶಯ ನುಡಿಗಳನ್ನಾಡಿದರು
ಈ ಸಂದರ್ಭದಲ್ಲಿ ಪ್ರಾಚಾರ್ಯೆ ಡಾ.ಆರ್ ಎಂ ಮಿರ್ದೆ ಮಾತನಾಡಿ, ಸಮಾಜದಲ್ಲಿ ನಾವೆಷ್ಟೇ ಎತ್ತರ, ಸ್ಥಾನಕ್ಕೇರಲಿ ನಮ್ಮ ಪೂರ್ವಜರ ಮತ್ತು ನಮ್ಮ ಕುಟುಂಬದ ಹಿರಿಯ ಜೀವಿಗಳನ್ನು ಮರೆಯಬಾರದು ಅವರ ಹಾಕಿಕೊಟ್ಟ ಸನ್ಮಾರ್ಗದಲ್ಲಿ ಮುನ್ನಡೆಯಬೇಕಾಗಿದೆ. ಅದಕ್ಕಾಗಿಯೇ ಇಂತಹ ಶರಣರ ದತ್ತಿ ಕಾರ್ಯಕ್ರಮಗಳನ್ನು ಭಾಗಿಯಾಗಿ ಅವರ ವಿಚಾರಧಾರೆಗಳು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬೂನಾಥ ಕಂಚ್ಯಾಣಿ ಮಾತನಾಡಿದರು.
ಈ ಸಂದರ್ಭದಲ್ಲಿ ವಕೀಲ ಡಿ.ಎಸ್ ಪಾಟೀಲ ಮಾತನಾಡಿದರು.
ನಿವೃತ್ತ ಪ್ರಾದ್ಯಾಪಕ ಆರ್ ಹೆಚ್ ಬಿದರಿ ದಂಪತಿ, ಪ್ರೊ.ಶ್ರೀಧರ ಜೋಷಿ, ಪ್ರೊ.ಅಮೀನ್ ಲೇನ್, ಪ್ರೊ.ರಾಜೇಶ್ವರಿ ಪುರಾಣಿಕ್, ಅಕ್ಷಯ ಜನಾಯ,ಭೀಮಸಿ ಮದರಕಂಡಿ, ಮಲಿಕ್ ಜಮಾದಾರ, ಮಹಾವಿದ್ಯಾಲಯ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡಾ.ಶ್ರೀನಿವಾಸ ದೊಡ್ಡಮನಿ ಸ್ವಾಗತಿಸಿದರು, ಪ್ರೊ.ರೇಣುಕಾ ಕಮತರ ನಿರೂಪಿಸಿದರು. ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಆಯ್ ಡಿ. ತೊಂಡಿಕಟ್ಟಿ ವಂದಿಸಿದರು. ವಿದ್ಯಾರ್ಥಿನಿಯರಾದ ರೂಪ ಹಾಗೂ ದೀಪ ಪ್ರಾರ್ಥಿಸಿದರು.