Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಇಲ್ಲಿನ ಆಲಮಟ್ಟಿ ರಸ್ತೆ ಪಕ್ಕದ ಅರಿಹಂತಗಿರಿಯಲ್ಲಿರುವ ಅರಿಹಂತ ಸಮೂಹ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಜು.೨೬ರಂದು ಬೆಳಿಗ್ಗೆ ೯ ಗಂಟೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲುಜೆ)ದ ಅಂಗಸಂಸ್ಥೆಯಾಗಿರುವ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ, ಉಪನ್ಯಾಸ, ವಾರ್ಷಿಕ ಪ್ರಶಸ್ತಿ ಪ್ರದಾನ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ.ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಈ ಸಮಾರಂಭವನ್ನು ಉದ್ಘಾಟಿಸಲಿದ್ದು, ಅರಿಹಂತ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಹಾವೀರ ಸಗರಿ, ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ.ಬಿ.ವಡವಡಗಿ ಮುಖ್ಯ ಅತಿಥಿಗಳಾಗಿ, ಅರಿಹಂತ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಪುಲ್ ಸಗರಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.ಸಂಘದ ತಾಲೂಕು ಅಧ್ಯಕ್ಷ ಆರ್.ಬಿ.ವಡವಡಗಿ(ಮುತ್ತು) ಅಧ್ಯಕ್ಷತೆ ವಹಿಸಲಿದ್ದು, ಅರಿಹಂತ ಪದವಿ ಕಾಲೇಜಿನ ಉಪನ್ಯಾಸಕ ಪ್ರೊ.ರಾಜನಾರಾಯಣ ನಲವಡೆ ಅವರು ಪತ್ರಿಕೋದ್ಯಮ ಮತ್ತು ಪತ್ರಕರ್ತರ ಕಾರ್ಯಶೈಲಿ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುವರು.ಇದೇ ಸಂದರ್ಭ ತಾಲೂಕು ಮಟ್ಟದ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿರುವ ಪತ್ರಕರ್ತರಾದ ರಿಯಾಜ್‌ಅಹ್ಮದ್…
102 ಕೆಜಿ ಭಾರದ ಮೂಟೆ ಹೊತ್ತು 575 ಮೆಟ್ಟಿಲುಗಳ ಅಂಜನಾದ್ರಿ ಬೆಟ್ಟ ಹತ್ತಿದ ಹುನ್ನೂರು ಗ್ರಾಮದ ರೈತ! ಉದಯರಶ್ಮಿ ದಿನಪತ್ರಿಕೆ ವರದಿ: ಎಸ್ˌ ಎಮ್ˌ ಇಟ್ಟಿಜಮಖಂಡಿ: ಆ ಮೂಟೆ ಬರೋಬ್ಬರಿ ಒಂದು ಕ್ವಿಂಟಾಲ ಅಂದರೆ ಬರೋಬ್ಬರಿ 102 ಕೆಜಿ ಭಾರದ್ದು. ಆ ಬೆಟ್ಟ 575 ಮೆಟ್ಟಿಲುಗಳ ಕಡಿದಾದ, ಸಂಕೀರ್ಣಗಳಿಂದ ಕೂಡಿದ ಮಾರ್ಗ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಆ ರೈತ 102 ಕೆಜಿ ಭಾರದ ಮೂಟೆ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿ ಹರಕೆ ತೀರಿಸುವ ಮೂಲಕ ಗಮನ ಸೆಳೆದರು.ವಯಸ್ಸು 61 ಆದ್ರೂ ದಣಿವರಿಯದ ವೃದ್ಧಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದ 61 ವರ್ಷ ವಯಸ್ಸಿನ ನಿಂಗಪ್ಪ ಸವಣೂರು ಎಂಬ ರೈತ ಮಂಗಳವಾರ ಅಂಜನಾದ್ರಿ ಬೆಟ್ಟವನ್ನು 102 ಕೆಜಿ ಭಾರದ ಮೂಟೆ ಹೊತ್ತು ಏರುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದರು.102 ಕೆಜಿಯ ಭಾರವಿದ್ದ ಮೂಟೆಯನ್ನು ಹೊತ್ತು 575 ಮೆಟ್ಟಿಲುಗಳ ಕಡಿದಾದ ಹಾದಿಯಲ್ಲಿ ಸಾಗುವ ಮೂಲಕ ಅಂಜನಾದ್ರಿ ಬೆಟ್ಟವೇರಿದ ರೈತನೋರ್ವ ಎಲ್ಲರ ಗಮನ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರ ಪ್ರಕಟಿಸಿರುವ ಆದಿಲ್ ಶಾಹಿ ಕಾಲದ ಅನುವಾದ ಸಾಹಿತ್ಯದ ಸಂಪುಟಗಳನ್ನು ಸಚಿವ ಎಂ.ಬಿ.ಪಾಟೀಲರ ಸೂಚನೆ ಹಿನ್ನೆಲೆಯಲ್ಲಿ ಇಂದು ನಗರದ ಹಾಸಿಂ ಪೀರ ದರ್ಗಾದ ಶ್ರೀ ಸೈಯ್ಯದ ಮೊಹಮ್ಮದ ತನ್ವಿರ್ ಹಾಸ್ಮಿ ಅವರಿಗೆ ನೀಡಲಾಯಿತು.ಸಚಿವ ಎಂ ಬಿ ಪಾಟೀಲ ಅವರು ಆದಿಲ್ ಶಾಹಿ ಕಾಲದ ಉರ್ದು, ದಖನಿ, ಪರ್ಶಿಯನ್ ಹಾಗೂ ಅರೆಬಿಕ್ ಸಾಹಿತ್ಯವನ್ನು ಹಳಕಟ್ಟಿ ಸಂಶೋಧನ ಕೇಂದ್ರದ ಮೂಲಕ ಕನ್ನಡ ಭಾಷೆಗೆ ಅನುವಾದಿಸಿದ್ದು, ಈ ಸಂಪುಟಗಳನ್ನು ಸಂಶೋಧನ ಕೇಂದ್ರದ ಸಂಯೋಜಕ ಡಾ. ವಿ. ಡಿ. ಐಹೊಳ್ಳಿ ಅವರು ಸೈಯ್ಯದ ಮೊಹಮ್ಮದ ತನ್ವೀರ್ ಹಾಸ್ಮಿ ಅವರಿಗೆ ಶುಕ್ರವಾರ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸೈಯ್ಯದ ಮೊಹಮ್ಮದ ತನ್ವಿರ್ ಹಾಸ್ಮಿ, ಸಚಿವ ಎಂ. ಬಿ. ಪಾಟೀಲ ಅವರು ಅನುವಾದ ಸಾಹಿತ್ಯ ಪ್ರಕಟಿಸುವ ಮೂಲಕ ಗತಕಾಲದ ಇತಿಹಾಸವನ್ನು ಇಂದಿನ ಯುವ ಜನತೆ ಅಧ್ಯಯನ ಮಾಡಲು ನೆರವಾಗಿದ್ದಾರೆ. ಸಚಿವರ ಈ ಕಾರ್ಯ…
ನೂರಕ್ಕು ಹೆಚ್ಚು ಕಿ.ಮಿ ವ್ಯಾಪಿಸಿದ ನಾಗಠಾಣ ಮತಕ್ಷೇತ್ರ ಯಾವ ಪುಣ್ಯಾತ್ಮನಿಂದ ವಿಂಗಡನೆ ಆಗಿದೆಯೊ ಗೊತ್ತಿಲ್ಲ :ಶಾಸಕ ವಿಠ್ಠಲ ಕಟಕಧೋಂಡ ಉದಯರಶ್ಮಿ ದಿನಪತ್ರಿಕೆ ಚಡಚಣ: ಲೋಕೋಪಯೊಗಿ ಇಲಾಖೆಯಲ್ಲಿ ೨೦೨೪-೨೫ ಸಾಲಿನ ೫೦೫೪ ಜಿಲ್ಲಾ ಮುಖ್ಯ ರಸ್ತೆ ಸುಧಾರಣೆ (ಅಪೆಂಡಿಕ್ಸ್-ಇ) ಯೋಜನೆ ಅಡಿಯಲ್ಲಿ ಇಂಡಿ ರೈಲ್ವೆ ನಿಲ್ದಾಣದಿಂದ ನಾಗಠಾಣ ಮತಕ್ಷೇತ್ರದ ಹಲಸಂಗಿ ಗ್ರಾಮದ ಮೂಲಕ ರಾಷ್ಟ್ರೀಯ ಹೆದ್ದಾರಿವರೆಗೆ ರೂ.೫ ಕೋಟಿ ಮೊತ್ತದ ರಸ್ತೆ ನಿರ್ಮಾಣ ಸೇರಿದಂತೆ ಒಟ್ಟು ರೂ.೧೦.೬೫ ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಭೂಮಿ ಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಶಾಸಕರು, ಮತಕ್ಷೇತ್ರದ ಅನೇಕ ಅಭಿವೃದ್ಧಿ ಕೆಲಸಗಳ ಕುರಿತು ಚುನಾವಣೆ ಪೂರ್ವದಲ್ಲಿ ನಾನು ಕ್ಷೇತ್ರದ ಜನತೆಗೆ ಅಭಿವೃದ್ಧಿಗಾಗಿ ಮಾತುಕೊಟ್ಟಿದ್ದೆ. ಅದರಂತೆ ಕೆಲಸ ಮಾಡುತ್ತಿದ್ದೇನೆ, ಮುಂದಿನ ದಿನಗಳಲ್ಲಿ ಸರ್ಕಾರ ಇನ್ನು ಅನೇಕ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಇತಿಹಾಸ ನಿರ್ಮಿಸಲಿದೆ ಎಂದು ಹೇಳಿದರು.ರೈತರ ಪರವಾಗಿ ನೀರಾವರಿ ಯೋಜನೆಗಳಿಂದ ರೈತರಿಗೆ ಅನುಕೂಲವಾಗಿದೆ. ನಮ್ಮ ಸರ್ಕಾರ ರೈತರಿಗೆ ಜಮೀನಿನ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಚಡಚಣ ತಾಲೂಕು ಘಟಕ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ಇದೇ ರವಿವಾರ ಜು.27 ರಂದು ಬೆಳಿಗ್ಗೆ 10:30 ಕ್ಕೆ ಶ್ರೀ ಸಂಗಮೇಶ್ವರ ಮಂಗಲ ಕಾರ್ಯಲಯದಲ್ಲಿ ನಡೆಯಲಿದೆ.ಕಾರ್ಯಕ್ರಮದ ಸಾನಿಧ್ಯವನ್ನು ಸ್ಥಳೀಯ ವಿರಕ್ತ ಮಠದ ಷಡಕ್ಷರ ಸ್ವಾಮೀಜಿ ವಹಿಸಲಿದ್ದಾರೆ.ಉದ್ಘಾಟಕರಾಗಿ ಮಹಾಸಭೆಯ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಆಗಮಿಸಲಿದ್ದಾರೆ. ಮಹಾಸಭೆಯ ರಾಷ್ಟ್ರೀಯ ಮಹಿಳಾ ಅಧ್ಯಕ್ಷೆ ವೀಣಾ ಕಾಶಪ್ಪನವರು ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಮಹಾಸಭೆ ಜಿಲ್ಲಾಧ್ಯಕ್ಷ ವಿ.ಸಿ ನಾಗಠಾಣ್ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ರಾಜಶೇಖರ್ ಸಿರಿ ಹಾಗೂ ಉಪಸ್ಥಿತರಾಗಿ ಎಸ್ ಆರ್ ಅವಜಿ, ಬಿ.ಎಮ್. ಕೋರೆ ಮತ್ತು ಶ್ರೀ ಬಿ.ಎ ಪಾಟೀಲ್ ಇರಲಿದ್ದಾರೆ.ತಾಲೂಕು ಘಟಕದೊಂದಿಗೆ ಮಹಿಳಾ ಘಟಕ ಹಾಗೂ ಯುವ ಘಟಕ ಕೂಡ ಅಸ್ತಿತ್ವಕ್ಕೆ ಬರಲಿವೆ. ಸಮಸ್ತ ವೀರಶೈವ ಲಿಂಗಾಯತ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅಧ್ಯಕ್ಷ ಎಸ್.ಆರ್ ಅವಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಝಳಕಿಗೆ ಧಿಡೀರನೆ ಭೇಟಿ ನೀಡಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಡಾ.ತಿಪ್ಪೇಸ್ವಾಮಿ ಕೆ.ಟಿ ಸಲಹೆ ಉದಯರಶ್ಮಿ ದಿನಪತ್ರಿಕೆ ಚಡಚಣ: ಝಳಕಿ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಡಿಗ್ರಿ ಕಾಲೇಜಿಗೆ ಗ್ರಾಮ ಪಂಚಾಯತ್, ಪೊಲೀಸ್ ಠಾಣೆಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ. ಟಿ. ಧಿಡೀರನೇ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಗ್ರಾ.ಪಂಚಾಯತಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಡಾ.ತಿಪ್ಪೇಸ್ವಾಮಿ ಕೆ.ಟಿ. ಅವರು, ಪ್ರತಿ ತಿಂಗಳಿಗೆ ಪಂಚಾಯತನಲ್ಲಿ ಮಕ್ಕಳ ಕುರಿತು ನೀತಿ ಕಾನೂನು, ಕ್ರಿಯಾ ಯೋಜನೆ, ಶಿಕ್ಷಣ ಮಾಹಿತಿ ಹಂಚಿಕೆ, ಸಾಹಿತ್ಯ ತರಬೇತಿ ಕಾರ್ಯಾಗಾರ, ಮಕ್ಕಳನ್ನು ಕುರಿತು ಪ್ರಚಾರ ಮತ್ತು ಆಂದೋಲನ, ವಿಕಾಸ ಸಂಬಂಧಿತ ಸಂಶೋಧನೆ, ಹಕ್ಕುಗಳ ಕುರಿತು ಸಾಹಿತ್ಯ ರಚನೆ, ಪ್ರತಿಪಾದನೆ ಮತ್ತು ವಕೀಲಿ ಇಂತಹ ಚಟುವಟಿಕೆಗಳನ್ನು ಮಾಡಿ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರಲ್ಲದೆ, ಆ ಸಂದರ್ಭದಲ್ಲಿ ಸಭೆಗೆ ಸಿ. ಆರ್. ಸಿ. ಮತ್ತು ಗ್ರಾಮಕ್ಕೆ ಸಂಭಂದಿಸಿದ ಪೊಲೀಸ ಸಿಬ್ಬಂದಿ ಎಲ್ಲರು ಹಾಜರಾಗಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಪರಮಗೊಂಡ ಗವರೋಜಿ ರಾಜೀನಾಮೆಯಿಂದ ತೆರವಾದ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯುವ ಸಾಧ್ಯತೆ ಇದೆ.ಸಾಮಾನ್ಯ ವರ್ಗದಿಂದ ಆಯ್ಕೆಯಾಗಿದ್ದ ಪರಮಗೊಂಡ ಗವರೋಜಿ ಅವಧಿ ಪೂರ್ಣವಾಗುವ ಮುಂಚೆ ರಾಜೀನಾಮೆ ನೀಡಿದ್ದರಿಂದ ಉಳಿದ ಅವಧಿಗೆ ಅಧ್ಯಕ್ಷರಾಗಲು ಕಾಂಗ್ರೆಸ್ ಸದಸ್ಯರಲ್ಲಿ ಕಸರತ್ತು ನಡೆದಿತ್ತು. ಮಾಜಿ ಶಾಸಕ ಆನಂದ ನ್ಯಾಮಗೌಡರ ನಿರ್ಧಾರವೇ ಅಂತಿಮವಾಗಿದ್ದು, ಈಗಾಗಲೇ ಅವರು ಒಬ್ಬ ಹಿರಿಯ ಸದಸ್ಯನ ಮೇಲೆ ಒಲವು ತೋರಿದ್ದರಿಂದ ಪೈಪೋಟಿಗೆ ತೆರೆ ಬಿದ್ದಿದೆ.ಒಟ್ಟು 31 ಸದಸ್ಯರಲ್ಲಿ ಕಾಂಗ್ರೆಸ್ 20, ಬಿಜೆಪಿಯ 7, ಪಕ್ಷೇತರ 4 ಸದಸ್ಯರು ಇದ್ದಾರೆ. ಮಾಜಿ ಶಾಸಕ ಆನಂದ ನ್ಯಾಮಗೌಡರು ಈ ಬಾರಿ ಹಾಲುಮತ ಕುರುಬ ಸಮುದಾಯದ ಹಿರಿಯ ಸದಸ್ಯ ಈಶ್ವರ ವಾಳೆನ್ನವರ ಅವರಿಗೆ ಅವಕಾಶ ಕಲ್ಪಿಸಿ ಕೊಡಲು ಮುತುವರ್ಜಿ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.ಅ.1ರಂದು ಅಧ್ಯಕ್ಷರ ಆಯ್ಕೆ: ನಗರಸಭೆ ಸಭಾಭವನದಲ್ಲಿ ಅ.1ರಂದು ಬೆಳಗ್ಗೆ 10 ರಿಂದ11 ಗಂಟೆ ವರೆಗೆ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಬಹುದಾಗಿದೆ. ನಾಮಪತ್ರಗಳನ್ನು ಮಧ್ಯಾಹ್ನ 1 ಗಂಟೆಗೆ ಸಭೆ ಆರಂಭವಾಗುತ್ತಿದ್ದಂತೆಯೇ ಪರಿಶೀಲನೆ ನಡೆಸಲಾಗುವುದು.…
ರಾಜ್ಯ ಸರ್ಕಾರದ ವಿರುದ್ಧ ಜಮಖಂಡಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ | ವಿದ್ಯಾರ್ಥಿಗಳಲ್ಲಿ ಭುಗಿಲೆದ್ದ ಆಕ್ರೋಶ ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ವಿದ್ಯಾರ್ಥಿ ವೇತನ ಹಾಗೂ ಹಾಸ್ಟೆಲ್ ಸಮಸ್ಯೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕ ವಿದ್ಯಾರ್ಥಿಗಳು ನಗರದ ದೇಸಾಯಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.ತಾಲೂಕು ಸಂಚಾಲಕ ಪುಂಡಿಲಕ ಪೂಜಾರಿ ಮಾತ ನಾಡಿ, ದೇಶದ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣ ವ್ಯ ವಸ್ಥೆ ಚನ್ನಾಗಿರಬೇಕು. ಶಿಕ್ಷಣಕ್ಕೆ ಬೇಕಾದ ಮೂಲಸೌಲ ಭ್ಯಗಳನ್ನು ಸರ್ಕಾರಗಳು ಕಲ್ಪಿಸಿಕೊಡಬೇಕು. ಇದು ಸರ್ಕಾರಗಳ ಆದ್ಯ ಕರ್ತವ್ಯವಾಗಿದೆ. ಗ್ರಾಮೀಣ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಆದರೆ ಅವುಗಳ ಸಮರ್ಪಕ ಅನುಷ್ಠಾನವಾಗದೆ ವಿದ್ಯಾರ್ಥಿಗಳು ತೊಂದರೆ ಅನುಭವಿ ಸುವಂತಾಗಿದೆ. ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಸರಿ ಯಾದ ಹಾಸ್ಟೆಲ್ ವ್ಯವಸ್ಥೆ ಹಾಗೂ ವಿದ್ಯಾರ್ಥಿ ವೇತನ ವನ್ನು ನೀಡದೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ…
ಮುತ್ತಿನಕಂತಿ ಹಿರೇಮಠದ ಶಿವಲಿಂಗಪಂಡಿತಾರಾಧ್ಯ ಶಿವಾಚಾರ್ಯರ ನೇತೃತ್ವ ಉದಯರಶ್ಮಿ ದಿನಪತ್ರಿಕೆ ವರದಿ: ಎಸ್ˌಎಮ್ˌಇಟ್ಟಿಜಮಖಂಡಿ: ಕಳೆದ ರವಿವಾರದ ಸ್ವಚ್ಚತಾ ಅಭಿಯಾನದಲ್ಲಿ ಜಮಖಂಡಿ ನಗರದ ಕಿರಾಣಿ ವ್ಯಾಪಾರಸ್ಥರ ಸಂಘದ 50 ಸದಸ್ಯರ ಸಹಿತ 140 ಜನರು ಸ್ವಚ್ಚತಾ ಅಭಿಯಾನ ಶ್ರಮದಾನದಲ್ಲಿ ಪಾಲ್ಗೊಂಡು ಹಿಂದು ರುದ್ರಭೂಮಿ ಸ್ವಚ್ಚತೆಯಲ್ಲಿ ತೊಡಗಿಕೊಂಡಿದ್ದರು.ಜಮಖಂಡಿ ನಗರದ ರಾಜ್ಯ ಹೆದ್ದಾರಿಯಲ್ಲಿ ಬರತಕ್ಕ ಅಂದಾಜು 24 ಎಕರೆ ಪ್ರದೇಶದ ಹಿಂದು ರುದ್ರಭೂಮಿಯಲ್ಲಿ 4ನೇ ರವಿವಾರದ ಸ್ವಚ್ಚತಾ ಅಭಿಯಾನದ ಶ್ರಮದಾನದಲ್ಲಿ ನೂರೆಂಟು ಜನರು ಮತ್ತು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.ಕಳೆದ 4 ವಾರಗಳಿಂದ ಮುತ್ತಿನಕಂತಿ ಹಿರೇಮಠದ ಶಿವಲಿಂಗಪಂಡಿತಾರಾಧ್ಯ ಶಿವಾಚಾರ್ಯರ ನೇತೃತ್ವದಲ್ಲಿ ಆರಂಭ ಆಗಿರುವ ಸ್ವಚ್ಚತಾ ಅಭಿಯಾನ ಶ್ರಮದಾನ ಜಮಖಂಡಿ ಜನತೆ ಸಹಕಾರದಿಂದ ಹಿಂದು ರುದ್ರಭೂಮಿಯಲ್ಲಿ ಸ್ವಚ್ಚತಾ ಅಭಿಯಾನ ಯಶಸ್ವಿಯಾಗಿ ಮುನ್ನಡೆಯುತ್ತಿದೆ. 1ನೇ ರವಿವಾರ ನಡೆದ ಸ್ವಚ್ಚತಾ ಶ್ರಮದಾನದಲ್ಲಿ 25 ಜನರು, 2ನೇ ರವಿವಾರ 60 ಜನರು, 3ನೇ ರವಿವಾರ 85 ಜನರು ಪಾಲ್ಗೊಂಡಿದ್ದರು.ಶ್ರೀಗಳಿಂದ ಮನವಿ ಮುತ್ತಿನಕಂತಿ ಹಿರೇಮಠದ ಶಿವಲಿಂಗಪಂಡಿತಾರಾಧ್ಯ ಶಿವಾಚಾರ್ಯರು ಮತ್ತು ಓಲೇಮಠದ ಪ.ಪೂ.ಆನಂದದೇವರು ನೇತೃತ್ವದಲ್ಲಿ ಅನೈತಿಕ…
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಒಂದಾನೊಂದು ಕಾಲದಲ್ಲಿ ಒಂದು ಹಳ್ಳಿಯಲ್ಲಿ ಒಬ್ಬ ಧೈರ್ಯಶಾಲಿಯಾದ ಪುಟ್ಟ ಹುಡುಗಿ ಇದ್ದಳು. ಸದಾ ತನ್ನ ಕೋಣೆಯ ಮಂಚದ ಮೇಲೆ ಮಲಗಿರುತ್ತಿದ್ದ ಆಕೆಗೆ ಅತ್ಯಂತ ಗಂಭೀರವಾದ ಕಾಯಿಲೆಯು ಆವರಿಸಿತ್ತು ಆಕೆಯ ಶಕ್ತಿಯೆಲ್ಲವೂ ಬಸಿದು ಹೋದಂತೆ ಆಗಿತ್ತು.. ಆದರೆ ಆಕೆಯ ಕನಸು ಕಾಣುವ ಶಕ್ತಿ ಮಾತ್ರ ಕುಂದಿರಲಿಲ್ಲ ಪ್ರತಿದಿನವೂ ಆಕೆ ತನ್ನ ಕೋಣೆಯ ಕಿಡಕಿಯಿಂದ ಹೊರಗೆ ಇರುವ ಮರವೊಂದನ್ನು ತದೇಕಚಿತ್ತದಿಂದ ನೋಡುತ್ತಾ ನಿಲ್ಲುತ್ತಿದ್ದಳು. ಗಿಡದಿಂದ ಒಂದೊಂದಾಗಿ ಎಲೆಗಳು ಉದುರುವುದು ಆಕೆಗೆ ಸೋಜಿಗದ ವಿಷಯವಾಗಿತ್ತು.ಒಂದು ದಿನ ಮಧ್ಯಾಹ್ನದ ಸಮಯದಲ್ಲಿ ಅತ್ಯಂತ ಸೋತ ದನಿಯಲ್ಲಿ ಆಕೆ ತನ್ನ ಅಕ್ಕನಿಗೆ ಹೀಗೆ ಹೇಳಿದಳುಆ ಗಿಡದಲ್ಲಿ ಇನ್ನು ಎಷ್ಟು ಎಲೆಗಳು ಉದುರುವುದು ಬಾಕಿ ಉಳಿದಿವೆ?ಅತಿಯಾದ ನೋವಿನಿಂದ ಆಕೆಯ ಸಹೋದರಿ ಆಕೆಯ ಬಳಿ ಬಂದು ಆಕೆಯ ಹಣೆಯನ್ನು ನೇವರಿಸುತ್ತಾ ಯಾಕೆ ಹೀಗೆ ಕೇಳುತ್ತಿರುವೆ ಎಂದು ಪ್ರೀತಿಯಿಂದ ಕೇಳಿದಳು.ಯಾಕೆಂದರೆ ಆ ಗಿಡದ ಕೊನೆಯ ಎಲೆ ಉದುರಿದ ದಿನವೇ ನನ್ನ ಕೊನೆಯ ದಿನ…
