ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಿಂದಗಿ ಪುರಸಭೆಯ ೨೦೨೫-೨೬ನೇ ಸಾಲಿನ ಬಜೆಟ್ ಅನುಮೋದನೆ ನೀಡುವ ಕುರಿತು ತುರ್ತು ಸಾಮಾನ್ಯ ಸಭೆಯನ್ನು ಮಾ.೨೭ರಂದು ಕರೆಯಲಾಗಿತ್ತು. ಏಕಾಏಕಿ ಸಭೆಯನ್ನು ರದ್ದು ಮಾಡಿರುತ್ತಾರೆ. ಆದರೆ ರದ್ದು ಮಾಡುವ ಅಧಿಕಾರ ಏನಿದ್ದರೂ ಅಧ್ಯಕ್ಷರಿಗಿರುತ್ತದೆ. ಆದರೆ ಇವರೇಕೆ ಮಾಡಿದರು.
ಸುಮಾರು ಒಂದು ತಿಂಗಳಿಂದ ಪುರಸಭೆ ಮುಖ್ಯಾಧಿಕಾರಿ ಎಸ್.ರಾಜಶೇಖರ ನನ್ನ ಗಮನಕ್ಕೆ ಬಾರದೇ ಪುರಸಭೆಯಲ್ಲಿ ಹಾಜರಾತಿಯಿಲ್ಲದೇ ಅನೇಕ ಅಭಿವೃದ್ಧಿ ಕಾರ್ಯಗಳು ಕುಠಿಂತಗೊಂಡಿರುತ್ತವೆ. ಬಳಿಕ ಯಾರಿಗಾದರೂ ಮುಖ್ಯಾಧಿಕಾರಿಯಾಗಿ ವಿನಂತಿಸಿಕೊಂಡಿರುವ ಪ್ರಕಾರ ದತ್ತಾತ್ರೆಯ ಹಳ್ಳಿ ಅವರನ್ನು ತಾತ್ಕಾಲಿಕವಾಗಿ ನೇಮಿಸಲಾಗಿತ್ತು.
ಮಾ.೨೬ರಂದು ನನ್ನ ಅಧ್ಯಕ್ಷತೆಯಲ್ಲಿ ಶಾಸಕರ ಉಪಸ್ಥಿತಿಯಲ್ಲಿ ಬೇಸಿಗೆ ನೀರಿನ ಸಮಸ್ಯೆ ಬಾರದೇ ಹಾಗೆ ಅತಿಮುಖ್ಯವಾದ ಸಭೆ ಕರೆದಿದ್ದು, ಸಭೆಗೆ ಗೈರಾಗಿ ಮಧ್ಯಾಹ್ನದ ಮೇಲೆ ಪುರಸಭೆಗೆ ಬಂದು ನೇರವಾಗಿ ಕರೆದಿರುವ ಬಜೆಟ ಸಭೆ ರದ್ದುಮಾಡಿ ಆದೇಶಿಸಿರುತ್ತಾರೆ. ಆದರೆ ಇದರ ಪರಿಣಾಮವಾಗಿ ಮುಂಬರುವ ವಾರ್ಷಿಕ ಹಣಕಾಸಿನಲ್ಲಿ ಸಾಕಷ್ಟು ಸಮಸ್ಯೆಗಳಾಗಲಿದ್ದು, ಪುರಸಭೆಯ ಯಾವುದೇ ಅಭಿವೃದ್ಧಿ ಮಾಡಲು ಸಾದ್ಯವಾಗಿರುವುದಿಲ್ಲ. ಇದರ ಹಿಂದೆ ಯಾವುದೋ ಕಾಣದ ಕೈಗಳು ಇರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಅದು ಅಲ್ಲದೆ ಬಜೆಟ್ ಸಭೆ ರದ್ದು ಮಾಡುವ ಯಾವುದೇ ಅಧಿಕಾರ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಇರುವುದಿಲ್ಲ. ಆದಾಗ್ಯೂ ಕಾನೂನು ಬಾಹಿರವಾಗಿ ಬಜೆಟ್ ಸಭೆ ರದ್ದು ಮಾಡಿರುವ ಎಸ್.ರಾಜಶೇಖರ ಅವರನ್ನು ಕೂಡಲೇ ಅಮಾನತ್ತುಗೊಳಿಸಬೇಕು. ಇಲ್ಲದೇ ಹೋದಲ್ಲಿ ತಮ್ಮ ಕಛೇರಿಯ ಮುಂದೆ ಅಮಾನತ್ತು ಮಾಡುವವರೆಗೂ ಧರಣಿ ಸತ್ಯಾಗ್ರಹ ಮಾಡುವುದಾಗಿ ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

