ಉದಯರಶ್ಮಿ ದಿನಪತ್ರಿಕೆ
ಇಂಡಿ: ಬಡವರ ಹಿಂದುಪರ ಹೋರಾಟಗಾರರಾದ ಶಾಸಕ ಬಸನಗೌಡ ಪಾಟೀಲ ಯತ್ನಳ ಇವರ ಉಚ್ಚಾಟನೆ ಖಂಡಿಸಿ ಇಂಡಿಯಲ್ಲಿ ಅಭಿಮಾನಿ ಗಳು ಪ್ರತಿಭಟನೆ ನಡೆಸಿ ರಸ್ತೆ ತಡೆ ಮಾಡಿದರು.
ಪ್ರತಿಭಟನೆ ಬಸವೇಶ್ವರ ವೃತ್ತದಲ್ಲಿ ನಡೆದು ಅಲ್ಲಿ ರಸ್ತೆ ತಡೆ ಕೂಡ ಮಾಡಿದರು.
ಅಲ್ಲಿ ಮಾತನಾಡಿದ ಶ್ರೀಧರ ಕ್ಷತ್ರಿ ಬಿಜೆಪಿಯಿಂದ ಬಸನಗೌಡ ಪಾಟೀಲ ಯತ್ನಾಳರನ್ನುಆರು ವರ್ಷ ಉಚ್ಚಾಟನೆ ಮಾಡಿರುವ ಕ್ರಮ ಸರಿಯಲ್ಲ.ವಂಶಾಡಳಿತ, ಭ್ರಷ್ಟಾಚಾರ, ಪಕ್ಷದೊಳಗೆ ಸುಧಾರಣೆ, ಏಕ ವ್ಯಕ್ತಿ ಶ್ರೇಷ್ಠ ಭಾವ, ಹಾಗೂ ಉತ್ತರ ಕರ್ನಾಟಕದ ಬಗ್ಗೆ ಮಾತನಾಡಿದ್ದಕ್ಕೆ ಅವರನ್ನು ಉಚ್ಚಾಟಿಸಲಾಗಿದೆ. ಅವರು ಹಿಂದು ಫೈರ ಬ್ರಾಂಡ ಆಗಿದ್ದಾರೆ ಎಂದರು.
ಅಭಿಮಾನಿ ಬಳಗದ ವಿನೋದ ಹದಗಲ್ಲ, ಅಕ್ಷಯ ಪಾಟೀಲ, ಆನಂದ ದೇವರ, ರತನ ಹಲವಾಯಿ, ಶರಣಗೌಡ ಬಂಡಿ, ನಾಗರಾಜ ದಶವಂತ, ಅಂಬಣ್ಣ ಕವಟಗಿ, ಅಂಬಣ್ಣ ಕೌಟಗಿ, ರವಿಗೌಡ ಪಾಟೀಲ, ಶಿವು ತಾಂಬೆ, ಚಂದ್ರಶೇಖರ ದೇವರ, ಶಾಂತೇಶ ಕ್ಷತ್ರಿ, ಶಾಂತು ಪಾಸೋಡಿ, ಹರೀಶ ಆಳಂದಿಕರ, ಮಹೇಶ ಕುಂಬಾರ ಮತ್ತಿತರಿದ್ದರು.

