ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪ್ರಸಕ್ತ ಸಾಲಿನ ೬ನೆಯ ವರ್ಗದ ಪ್ರವೇಶಕ್ಕಾಗಿ ಜ.೧೮ರಂದು ನಡೆದ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದ್ದು, ಸಿಂದಗಿ ನಗರದ ಪ್ರತಿಷ್ಠಿತ ಆರ್.ಡಿ.ಕುಲಕರ್ಣಿ ಕೋಚಿಂಗ್ ಕ್ಲಾಸ್‌ನ ೨೩ ವಿದ್ಯಾರ್ಥಿಗಳು ಜವಾಹರ ನವೋದಯ ಶಾಲೆಗಳಿಗೆ ಆಯ್ಕೆಯಾಗುವ ಮೂಲಕ ಕೋಚಿಂಗ್ ಕ್ಲಾಸ್‌ಗೆ ಕೀರ್ತಿ ತಂದಿದ್ದಾರೆ ಎಂದು ಆರ್.ಡಿ.ಕುಲಕರ್ಣಿ ಹೇಳಿದರು.
ವಿದ್ಯಾರ್ಥಿಗಳಾದ ಸತೀಶ ಗಡ್ಡಿ, ಪ್ರಮೋದ ತಾಳಕೇರಿ, ಜೀವನ ಯಂಕಂಚಿ, ಆರ್ಯನ ಕಲಶೆಟ್ಟಿ, ಸಾಮ್ರಾಟ ಪೂಜಾರಿ, ಪ್ರೀತಮ ಬೋಸಲೆ, ಸುದನರಾಜ ಪವಾರ, ಆದರ್ಶ ಕಲ್ಮನಿ, ಅಭಯ ಕಲ್ಮನಿ, ಗುರುರಾಜ ಬಡದಾಳ, ರಾಜು ಇಂಗಳೆ, ಶರಣು ಪೂಜಾರಿ, ಶರಣಗೌಡ ಕೊಣಸಿರಸಗಿ, ಹರ್ಷ ಪೋಲಿಸಪಾಟೀಲ, ಸಮರ್ಥ ಚನ್ನಾ, ಮಾಯಾವತಿ ಚವ್ಹಾಣ, ನಮ್ರತಾ ಕತ್ತಿ, ಚೈತನ್ಯ ತೊರವಿ, ವೇದಾ ಕರ್ಕಳ್ಳಿಮಠ, ಅನುಷ್ಕಾ ಸೋಮನಕಟ್ಟಿ, ಸ್ವಾತಿ ಕೊಳಕೂರ, ಶ್ರಾವಣಿ ಹಿರೇಮಠ, ತನುಜಾ ಚವ್ಹಾಣ ಆಯ್ಕೆಯಾಗಿದ್ದಾರೆ.
ಮಕ್ಕಳ ಈ ಸಾಧನೆಗೆ ಕೋಚಿಂಗ ಶಾಲಾ ಸಂಚಾಲಕ ಆರ್.ಡಿ.ಕುಲಕರ್ಣಿ, ಪಿ.ಡಿ.ಕುಲಕರ್ಣಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಮುಖ್ಯಗುರುಮಾತೆ ಎಸ್.ಆಯ್.ಅಸ್ಕಿ ಮತ್ತು ಎಂ.ಪಿ.ಬುಕ್ಕಾ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
