ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವರ ಜಾತ್ರಾ ಮಹೋತ್ಸವವು ಪ್ರತಿ ವರ್ಷ ಯುಗಾದಿ ಅಮವಾಸ್ಯೆ ದಿನದಿಂದ ಜರುಗುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಿಂದ ಲಕ್ಷಾಂತರ ಭಕ್ತರು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವರ ದರ್ಶನಕ್ಕೆ ತೆರಳುತ್ತಾರೆ ಎಂದು ಸಿಂದಗಿ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹೇಳಿದರು.
ಸಿಂದಗಿ ಪಟ್ಟಣದ ಸ್ನೇಹಿತರ ಬಳಗದ ವತಿಯಿಂದ ಆಂದ್ರ ಪ್ರದೇಶದ ಶ್ರೀಶೈಲದಲ್ಲಿ ಅನ್ನಪ್ರಸಾದ ನೆರವೇರಿಸುವುದಕ್ಕಾಗಿ ಸ್ನೇಹಿತರ ಬಳಗದಿಂದ ಭಕ್ತಾಧಿಗಳು ಶ್ರೀಶೈಲಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಮಾತನಾಡಿದರು.
ವಿಶೇಷವಾಗಿ ಉತ್ತರ ಕರ್ನಾಟಕದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಹೋಗುವುದು ವಾಡಿಕೆಯಾಗಿದೆ. ಹೀಗಾಗಿ ಪ್ರತಿ ವರ್ಷ ನಮ್ಮ ಸ್ನೇಹಿತರ ಬಳಗದಿಂದ ಶ್ರೀಶೈಲಕ್ಕೆ ಆಗಮಿಸುವ ಭಕ್ತರಿಗೆ ಅನ್ನ ಪ್ರಸಾದ ಸೇವೆಯನ್ನು ನೆರವೇರಿಸುತ್ತಾ ಬಂದಿದ್ದು, ಈ ನಿಟ್ಟಿನಲ್ಲಿ ಶ್ರೀಶೈಲಕ್ಕೆ ತೆರಳುತ್ತಿರುವುದಾಗಿ ತಿಳಿಸಿದರು.
ಈ ವೇಳೆ ಗುರುಸಂಗಪ್ಪ ಪಟ್ಟಣಶೆಟ್ಟಿ, ನಿಂಗಪ್ಪ ಮುಂಡೇವಾಡಗಿ, ರವಿ ಬಿರಾದಾರ, ದವಲತರಾಯಗೌಡ ಮನ್ನಾಪೂರ, ವಿಜು ಪಟ್ಟಣಶೆಟ್ಟಿ, ಚನ್ನು ಮುಂಡೇವಾಡಗಿ, ಉಮೇಶ ಜೋಗೂರ, ಮಲ್ಲೇಶಪ್ಪ ಕುಂಬಾರ, ರುದ್ರಯ್ಯ ಮಠ, ಗುರುಪ್ಪ ಬಡಿಗೇರ, ಪರಶುರಾಮ ಕುಂಬಾರ, ಮಯೂರಮಠ ಸೇರಿದಂತೆ ಅನೇಕರಿದ್ದರು.

