ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಪುರಸಭೆಯಲ್ಲಿ ದಿನಗೂಲಿ ಮೇಲೆ ನೇಮಕವಾಗಿರುವ ಶಮಶುದ್ಧಿನ್ ಮೂಲಿಮನಿ ಇವರ ನೇಮಕದಲ್ಲಿ ಅವ್ಯವಹಾರವಾಗಿದ್ದು ಇಲಾಖಾ ಅಧಿಕಾರಿಗಳು ಭಾಗಿಯಾಗಿ ಉಚ್ಛ ನ್ಯಾಯಾಲಯದ ಆದೇಶವನ್ನೇ ತಿರುಚಿದ್ದಾರೆ. ಈ ನೇಮಕದ ಕುರಿತು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಇಲ್ಲಿನ ಪುರಸಭೆ ಸದಸ್ಯ ಶಿವು ಶಿವಪೂರ ಅವರು ಜಿಲ್ಲಾಧಿಕಾರಿಗಳಿಗೆ ಸೇರಿದಂತೆ ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯಕ್ಕೆ, ಲೋಕಾಯುಕ್ತರಿಗೆ, ಯೋಜನಾ ನಿರ್ದೇಶಕರಿಗೆ ಮತ್ತು ಪುರಸಭೆ ಮುಖ್ಯಾಧಿಕಾರಿಗಳಿಗೆ ದೂರಿದ್ದಾರೆ.
ದೂರಿನ ಪ್ರತಿಯನ್ನು ಪತ್ರಿಕೆಗೆ ನೀಡಿ ಮಾತನಾಡಿದ ಶಿವಪುರ ಅವರು ಮೂಲಿಮನಿ ಅವರು ಪುರಸಭೆಯಲ್ಲಿ ಬೇ ಕಾಯ್ದೇಶಿರವಾಗಿ ನೇಮಕವಾಗಿದ್ದಾರೆ. ನಿಯಮಗಳ ಪ್ರಕಾರ ಇವರನ್ನು ನೇಮಕ ಮಾಡಿಕೊಳ್ಳಲು ಬರುವದಿಲ್ಲ. ನೇಮಕದ ವೇಳೆ ಇಲಾಖಾ ಅಧಿಕಾರಿಗಳು ಕಾರ್ಮಿಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ. ಹೇಗಾದರೂ ಮಾಡಿ ಸರಕಾರದಿಂದ ಅಕ್ರಮವಾಗಿ ಕೆಲಸ ಪಡೆದುಕೊಳ್ಳುವ ದುರುದ್ದೇಶವನ್ನು ಹೊಂದಿರುವ ಬಗ್ಗೆ ದಾಖಲೆಗಳ ಪರೀಶಿಲಿಸಲಾಗಿ ಕಂಡುಬಂದಿದೆ. ಇವರ ನೇಮಕದಿಂದ ಸರ್ಕಾರದ ಖಜಾನೆಗೆ ಲುಕ್ಸಾನು ಆಗಿದೆ. ಅಲ್ಲದೇ ಇವರು ಸೇವೆಗೆ ಹಾಜರಾದಾಗಿನಿಂದ ನಕಲಿ ಬಿಲ್‌ಗಳನ್ನು ಪಾವತಿ ಮಾವತಿ ಮಾಡುವ ಸೇರಿದಂತೆ ಹಲವಾರು ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಈ ಎಲ್ಲ ಮಾಹಿತಿಗಳನ್ನು ದಾಖಲೆಗಳ ಸಮೇತ ಸಂಬಂಧಿಸಿದ ಅಧಿಕಾರಿಗಳಿಗೆ ದೂರಿದ್ದೇನೆ. ಕ್ರಮವಾಗದಿದ್ದಲ್ಲಿ ಕಾನೂನು ಹೋರಾಟವನ್ನು ಕೈಗೊಳ್ಳುವವನು ಇದ್ದೇನೆ ಎಂದರು.
