ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರತಿಯೊಬ್ಬ ಮಹಿಳೆ ವೈಯಕ್ತಿಕ ಆರೋಗ್ಯವನ್ನು ಕಾಪಾಡಿಕೊಂಡು ಸ್ವಸ್ಥ ಸಮಾಜದ ನಿರ್ಮಾಣ ಮಾಡುವತ್ತ ಯೋಚಿಸಬೇಕು. ಕುಟುಂಬದ ಆಧಾರ ಸ್ತಂಭವೇ ಸ್ತ್ರೀಯಾಗಿದ್ದಾಳೆ ಎಂದು ರಾಷ್ಟ್ರ ಸೇವಿಕಾ ಸಮಿತಿ ವಿಜಯಪುರ ವಿಭಾಗದ ವಿಭಾಗ ಕಾರ್ಯವಾಹಿಕಾ
ಭುವನೇಶ್ವರಿ ಕೋರವಾರ ಹೇಳಿದರು.
ನಗರದ ಶ್ರೀ ಐಶ್ವರ್ಯ ವಿಕಲಚೇತನ ಮಹಿಳಾ ವಸತಿ ನಿಲಯದಲ್ಲಿ ಸೇವಾ ದಿನ ನಿಮಿತ್ತ ಜರುಗಿದ ಮಹಿಳೆಯರ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತ ರೋಗ ಬರುವ ಮುಂಚೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಇರಬೇಕು. ಇಂದು ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿ ಹಾಗೂ ಸ್ವಾಭಿಮಾನಿಯಾಗಿ ಬದುಕು ನಡೆಸಲು ಶಿಕ್ಷಣ, ಜಾಗೃತಿ ಜೊತೆಗೆ ಸಂಘಟಿತವಾಗಿ ಇರುವುದು ತುಂಬಾ ಮುಖ್ಯ ವಾಗಿದೆ ಎಂದರು.
ಡಾ. ಸವಿತಾ ಬಿರಾದಾರ ಅವರು ವಸತಿ ನಿಲಯದ ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ವೈದ್ಯಕೀಯ ತಪಾಸಣೆ ಮಾಡಿ ಸೂಕ್ತ ಸಲಹೆ ನೀಡಿದರು.
ವಸತಿ ನಿಲಯದ ಅಧ್ಯಕ್ಷೆ ಡಾ. ರಶ್ಮಿ ಚಿತ್ತವಾಡಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ನಗರ ಕಾರ್ಯವಾಹಿಕಾ ದಾಕ್ಷಾಯಿಣಿ ಹೀರಾಪೂರ ಸೇವಾ ಗೀತೆ ಹಾಡಿ ವಂದಿಸಿದರು.

