Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ದಕ್ಷಿಣ ಭಾರತದ ಅತ್ಯಂತ ಗಟ್ಟಿ ಹಿಂದೂ ನಾಯಕ, ಪಂಚಮಸಾಲಿ ಸಮಾಜದ ಸಮರ್ಥನೀಯ ನಾಯಕ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿ ಪಕ್ಷದಿಂದ ಉಚ್ಛಾಚಿಸಿದ್ದನ್ನು ಖಂಡಿಸಿ ಮತ್ತು ಮರಳಿ ಬಿಜೆಪಿಗೆ ಸೇರ್ಪಡೆಗೊಳಿಸಿಕೊಳ್ಳಬೇಕು ಎಂದು ಆಗ್ರಹಿಸಿ ಏ.೭ ರಂದು ಪಟ್ಟಣದಲ್ಲಿ ಬ್ರಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಮತಕ್ಷೇತ್ರದ ಎಲ್ಲ ಪಂಚಮಸಾಲಿ ಸಮಾಜ ಬಂಧುಗಳು, ಯತ್ನಾಳರ ಅಭಿಮಾನಿಗಳು ಭಾಗಿಯಾಗಿ ಯತ್ನಾಳರ ಕೈ ಬಲಪಡಿಸಬೇಕು ಎಂದು ಪಕ್ಷಾತೀತವಾಗಿ ಪಟ್ಟಣದ ಪಂಚಮಸಾಲಿ ಸಮಾಜದ ಮುಖಂಡರು ಕರೆ ನೀಡಿದರು.ಪಟ್ಟಣದಲ್ಲಿ ಈ ಕುರಿತು ನಡೆದ ಸುದ್ದಿಗೋಷ್ಟಿಯಲ್ಲಿ ಸಮಾಜದ ಮುಖಂಡ ಅರವಿಂದ ಕೊಪ್ಪ ಮಾತನಾಡಿ, ಯತ್ನಾಳರನ್ನು ಉಚ್ಛಾಟಿಸಿದ ವಿಷಯ ಇವತ್ತು ಇಡೀ ರಾಜ್ಯದ ಜನತೆಗೆ, ಹಿಂದೂ ಪರ ಸಂಘಟನೆಗಳಿಗೆ, ಅಭಿವೃದ್ಧಿ ಪರ ಚಿಂತಕರಿಗೆ ಸಾಕಷ್ಟು ನೋವು ತಂದಿರುವ ವಿಷಯದನ್ವಯ, ಯತ್ನಾಳರಿಗೆ ನೈತಿಕ ಬೆಂಬಲ ನೀಡಲು, ಓಲೈಕೆ ರಾಜಕಾರಣದಿಂದ ಅತೀತರಾಗಿ ನೇರ ನಿಷ್ಟುರ ನುಡಿಗೆ ಹೆಸರಾಗಿರುವ, ಅಭಿವೃದ್ಧಿ ಪರ ಕಾಳಜಿ ಇಟ್ಟುಕೊಂಡ ವ್ಯಕ್ತಿಗೆ ಇಂದು ಸೋಲಾಗಬಾರದು ಎಂದು ಪಟ್ಟಣದ ಸಮಸ್ತ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಕ್ಕಳ ವಿದ್ಯಾಭ್ಯಾಸದಲ್ಲಿ ಶಾಲೆಯ ಶಿಕ್ಷಕರದಷ್ಟೇ ಮಹತ್ವದ ಪಾತ್ರವಲ್ಲ. ಪಾಲಕರ ಪಾತ್ರವು ಹಿರಿದಾದದ್ದು ಎಂದು ನಾಗರತ್ನ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಕಿಡ್ಜಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡ ವಾರ್ಷಿಕ ಸಂಸ್ಕಾರ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಅವರ ಚಲನ ವಲನದ ಮೇಲೆ ಪಾಲಕರು ನಿಗಾವಹಿಸಬೇಕು. ಪ್ರಾಥಮಿಕ ಹಂತ ಮಕ್ಕಳ ಬೆಳವಣಿಗೆಗೆ ಭದ್ರ ಬುನಾದಿ ಇದ್ದಂತೆ. ಮಕ್ಕಳು ಎಳ ವಯಸ್ಸಿನಲ್ಲಿಯೇ ಉತ್ತಮ ಸಂಸ್ಕಾರದ ಅಡಿಪಾಯ ಹಾಕುವಲ್ಲಿ ಪಾಲಕ, ಶಿಕ್ಷಕರು ಒಂದೇ ನಾಣ್ಯದ ಎರಡು ಮುಖಗಳಂತೆ ಕಾರ್ಯನಿರ್ವಹಿಸಬೇಕು. ಮಕ್ಕಳ ದೈಹಿಕ, ಮಾನಸಿಕ ಶ್ರೇಯೋಭಿವೃದ್ಧಿಗೆ ಶಾಲೆ ಆವರಣದ ಪರಿಸರವು ಪರಿಣಾಮ ಬೀರುತ್ತದೆ. ಈ ಶಾಲೆಯಲ್ಲಿ ಮಕ್ಕಳ ಪ್ರಗತಿಗೆ ಪೂರಕ ವಾತರಣವಿರುವುದು ತುಂಬಾ ಹರ್ಷ ತಂದಿದೆ. ಕೇವಲ ಎರಡೇ ವರ್ಷದಲ್ಲಿ ಶಾಲೆ ಇಷ್ಟೋಂದು ಎತ್ತರಕ್ಕೆ ಬೆಳೆಯಬೇಕಾದರೆ ಶಾಲಾ ವ್ಯವಸ್ಥಾಪಕ ಮಂಡಳಿಯ ಜೊತೆಗೆ ಸಿಬ್ಬಂದಿಗಳ ಶ್ರಮವೂ ಪ್ರಮುಖವಾಗಿದೆ ಎಂದರು.ಈ ವೇಳೆ ಅತಿಥಿಯಾಗಿ ಭಾಗವಹಿಸಿದ ಪಿಎಸ್‌ಐ ಆರೀಫ್ ಮುಷಾಪುರಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶಿಕ್ಷಕರಿಗೆ ವಿಷಯ ಬೋಧನೆಯ ಜೊತೆಗೆ ಬೋಧನಾ ಕೌಶಲ್ಯಗಳು ತುಂಬಾ ಮುಖ್ಯವಾಗಿವೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ವಿಷಯವನ್ನು ಪರಿಣಾಮಕಾರಿಯಾಗಿ ತಲುಪಿಸಲು ಅಣುಬೋಧನೆ ಒಂದು ಪ್ರಮುಖ ಸಾಧನವಾಗಿದೆ. ಎಂದು ಆರ್.ಡಿ.ಪಾಟೀಲ ಪಪೂ ಕಾಲೇಜಿನ ಉಪನ್ಯಾಸಕ ಡಾ.ಶರಣಬಸವ ಜೋಗೂರ ಹೇಳಿದರು.ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಹಾಗೂ ವಿದ್ಯಾರ್ಥಿ ಮಾರ್ಗದರ್ಶನದಡಿಯಲ್ಲಿ ಹಮ್ಮಿಕೊಂಡ ಅಣುಬೋಧನಾ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನುಡಿಗಳಲ್ಲಿ ಶಿಕ್ಷಣವು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದು ಕೇವಲ ಜ್ಞಾನವನ್ನು ನೀಡುವುದಲ್ಲದೇ ವ್ಯಕ್ತಿತ್ವವನ್ನು ರೂಪಿಸುತ್ತದೆ. ಸಮಾಜದಲ್ಲಿ ಯಶಸ್ವಿ ಜೀವನ ಸಾಗಿಸಲು ಸಹಾಯ ಮಾಡುತ್ತದೆ. ಇಂದಿನ ದಿನಮಾನದಲ್ಲಿ ಶಿಕ್ಷಕರಾದವರು ತಂತ್ರಜ್ಞಾನದ ಮೂಲಕ ಬೋಧನೆ ಮಾಡುವುದು ಅವಶ್ಯಕ ಎಂದರು.ಕಾರ್ಯಕ್ರಮದ ಅದ್ಯಕ್ಷತೆಯನ್ನು ಪ್ರಾಚಾರ್ಯೆ ಜೆ.ಸಿ.ನಂದಿಕೋಲ ವಹಿಸಿದ್ದರು. ಪ್ರಶಾಂತ ಕುಲಕರ್ಣಿ ಸ್ವಾಗತಿಸಿದರು. ಶೈಲಾ ದೊಡ್ಡಮನಿ ನಿರೂಪಿಸಿದರು. ಪವಿತ್ರಾ ಬಿರಾದಾರ ವಂದಿಸಿದರು. ಕ್ರಾರ್ಯಕ್ರಮದಲ್ಲಿ ಉಪನ್ಯಾಸಕ ಎಸ್.ಬಿ.ಬಿರಾದಾರ, ಆರ್.ಎ.ಹಾಲಕೇರಿ, ಭಾಗ್ಯಜ್ಯೋತಿ ದಸ್ಮಾ, ನಾಜಿಯಾ ಮುಲ್ಲಾ, ಚನ್ನಬಸವರಾಜ ಕತ್ತಿ, ಶಿವಕುಮಾರ ಕತ್ತಿ ಸೇರಿದಂತೆ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ಇದ್ದರು.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿಧಾನ ಪರಿಷತ್ತಿಗೆ ಆಯ್ಕೆಯಾಗಲು ನಾಲ್ಕು ಅಭ್ಯರ್ಥಿಗಳಿಗೆ ಅವಕಾಶವಿದ್ದು, ಅದರಲ್ಲಿ ಒಂದು ಕ್ಷೇತ್ರವನ್ನು ಪರಿಶಿಷ್ಟ ಕ್ಷೇತ್ರವನ್ನಾಗಿಸಿ ವಿಜಯಪುರದ ಪ್ರೋ.ರಾಜು ಆಲಗೂರ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆಮಾಡಬೇಕೆಂದು ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಕಾಂಗ್ರೆಸ್ ಸರಕಾರಕ್ಕೆ ಆಗ್ರಹಿಸಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆ ಅಧಿಕಾರ ವಂಚಿತ ಜಿಲ್ಲೆ. ಇದು ಇಲ್ಲಿಯವರೆಗೆ ಯಾವುದೇ ನಾಮನಿರ್ದೇಶನವಾಗಿಲ್ಲ. ಕಾರಣ ಪರಿಶಿಷ್ಟ ಜಾತಿಗೆ ಸ್ಥಾನ ದೊರಕಿಸಿಕೊಡಬೇಕು. ರಾಜು ಆಲಗೂರ ಅವರು ಕಾಲೇಜಿನ ದಿನಗಳಲ್ಲಿಯೇ ದಲಿತ ಸಂಘಟನೆಯನ್ನು ಹುಟ್ಟು ಹಾಕಿ, ಜಿಲ್ಲಾ ಸಂಚಾಲಕರಾಗಿ ಸ್ವಾಭಿಮಾನ ಕಿಚ್ಚನ್ನು ಹುಟ್ಟು ಹಾಕಿದವರು. ೧೯೯೯ರಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿ ಶಾಸಕರಾಗಿ ಸರಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ. ಇಂತಹವರನ್ನು ರಾಜಕೀಯ ಬೆಳವಣಿಗೆಯಲ್ಲಿ ಹತ್ತಿಕ್ಕುವಂತಹ ಕಾರ್ಯ ತೆರೆ ಮರೆಯಲ್ಲಿ ನಡೆದಿದೆ. ಪ್ರಸ್ತುತ ಎಂಎಲ್‌ಎ ಇದ್ದರೂ ೨೦೧೩, ೨೦೧೮ ಮತ್ತು ೨೦೨೩ರಲ್ಲಿ ಟಿಕೆಟ್ ವಂಚಿತರಾಗಿದ್ದರಿಂದ ಜಿಲ್ಲೆಯಲ್ಲಿ ದಲಿತರಿಗೆ ರಾಜಕೀಯ ನೆಲೆ ಇಲ್ಲದಂತಾಗಿದೆ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಅವಿಮುಕ್ತ ಕ್ಷೇತ್ರ ಯರನಾಳ ಗ್ರಾಮದ ಸಂಸ್ಥಾನ ವಿರಕ್ತಮಠದ ಕರ್ತೃ ಜಗದ್ಗುರು ಲಿಂ.ಪಂಪಾಪತಿ ಶಿವಯೋಗಿಗಳ ಜಾತ್ರಾಮಹೋತ್ಸವದಂಗವಾಗಿ ಗುರುವಾರ ಶ್ರೀಮಠದ ಗುರುಸಂಗನಬಸವ ಸ್ವಾಮೀಜಿಯವರ ಪಾದಪೂಜಾ ನೆರವೇರಿದ ನಂತರ ಸಿಂಹಾಸನಾರೋಹಣ ಕಿರೀಟಧಾರಣೆ ಭಕ್ತರ ಜಯಘೋಷದೊಂದಿಗೆ ಜರುಗಿತು.ಈ ವೇಳೆ ಶ್ರೀಮಠದ ಗುರುಸಂಗನಬಸವ ಸ್ವಾಮೀಜಿ ಮಾತನಾಡಿ, ಯರನಾಳ ವಿರಕ್ತಮಠವು ಸದಾ ಕಾಲ ಭಕ್ತರೊಂದಿಗೆ ಇದ್ದುಕೊಂಡು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯ ಮಾಡುತ್ತಾ ಬಂದಿದೆ. ಶ್ರೀಮಠದ ಪಂಪಾಪತಿ ಶಿವಯೋಗಿಗಳು, ದಯಾನಂದ ಸ್ವಾಮೀಜಿ, ಬಾಲಲೀಲಾ ಮಹಾಂತ ಶಿವಯೋಗಿಗಳು, ಬಂಥನಾಳದ ಸಂಗನಬಸವ ಶಿವಯೋಗಿಗಳ ಸನ್ಮಾರ್ಗದಲ್ಲಿ ನಾವು ನಡೆಯುತ್ತಿದ್ದು. ಶ್ರೀಮಠವು ಸದಾ ಬಡವರ ಸೇವೆ, ಭಕ್ತರೊಂದಿಗೆ ಇದೆ ಎಂದರು.ಜಮಖಂಡಿ ಓಲೇಮಠದ ಆನಂದ ದೇವರು ಮಾತನಾಡಿ, ಪ್ರತಿಯೊಬ್ಬರೂ ಉತ್ತಮ ಜೀವನ ತಮ್ಮದಾಗಿಸಿಕೊಳ್ಳಬೇಕು. ಸಂಸಾರದಲ್ಲಿ ನಡೆಯುವ ಸಣ್ಣಪುಟ್ಟ ಜಗಳ ಎಂದಿಗೂ ಬೀದಿ ಬಾರದಂತೆ ನೋಡಿಕೊಳ್ಳಬೇಕು. ಶ್ರೀಮಠವು ಆದರ್ಶ ದಂಪತಿಗಳನ್ನು ಗುರುತಿಸಿ ಸನ್ಮಾನಿಸುತ್ತಿರುವದು ಶ್ಲಾಘನೀಯ ಎಂದರು.ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಹೂವಿನಹಿಪ್ಪರಗಿಯ ದ್ರಾಕ್ಷಾಯಣಿ ಅಮ್ಮನವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಆಳಂದದ ಸಿದ್ದೇಶ್ವರ…
ಸುಕ್ಷೇತ್ರ ಯರನಾಳದಲ್ಲಿ ಪಂಪಾಪತಿ ಶಿವಯೋಗಿಗಳ ಜಾತ್ರಾಮಹೋತ್ಸವ & ಧರ್ಮಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ವಿಜಯಪುರ ಜಿಲ್ಲೆಯು ಅಜ್ಞಾನದ ಕತ್ತಲೆಯಲ್ಲಿ ಸಿಕ್ಕಿದಾಗ ಬೆಳಕಾಗಿ ಬಂದವರು ಬಂಥನಾಳದ ಸಂಗನಬಸವ ಶಿವಯೋಗಿಗಳು. ಅವರು ಮನಸ್ಸು ಮಾಡಿದರೆ ೧೦೦ ಮಠಗಳನ್ನು ಕಟ್ಟಬಹುದಿತ್ತು. ಆದರೆ ಅವರು ಜಿಲ್ಲೆಯಲ್ಲಿ ಜ್ಞಾನದ ದೇಗುಲಗಳನ್ನು ಕಟ್ಟುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡುವ ಮೂಲಕ ಜಿಲ್ಲೆಗೆ ಬೆಳಕಾಗಿದ್ದಾರೆ ಎಂದು ಕೃಷಿ ಮಾರುಕಟ್ಟೆ, ಸಕ್ಕರೆ, ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿದರು.ತಾಲೂಕಿನ ಅವಿಮುಕ್ತ ಸುಕ್ಷೇತ್ರ ಯರನಾಳ ಗ್ರಾಮದ ವಿರಕ್ತಮಠದ ಪಂಪಾಪತಿ ಶಿವಯೋಗಿಗಳ ಜಾತ್ರಾಮಹೋತ್ಸವ ಹಾಗೂ ಧರ್ಮಸಭೆಯನ್ನು ಬುಧವಾರ ಸಂಜೆ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಂಥನಾಳ ಸಂಗನಬಸವ ಶಿವಯೋಗಿಗಳು ಬಾರದೇ ಹೋಗಿದ್ದರೆ ಜಿಲ್ಲೆಯು ಅಂಧಕಾರದಲ್ಲಿ ಇರುತ್ತಿತ್ತೇನೋ. ಅವರು ಜಿಲ್ಲೆಯಲ್ಲಿ ವಿವಿಧೆಡೆಗಳಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸುವ ಮೂಲಕ ಎಲ್ಲರ ಬದುಕಿಗೆ ದಾರಿ ಕೊಟ್ಟವರು. ಜ್ಞಾನ ದೇಗುಲ ಕಟ್ಟುವದು ಕಷ್ಟದ ಕೆಲಸ. ಇಂತಹ ಮಹತ್ತರ ಕೆಲಸವನ್ನು ದಾನಿಗಳ ನೆರವಿನಿಂದ ಜಿಲ್ಲೆಯಲ್ಲಿ ನೂರಾರು ಶಾಲಾ-ಕಾಲೇಜುಗಳನ್ನು ಕಟ್ಟಿ…
ಪಂಚಾಯತ ಅಭಿವೃದ್ದಿ ಅಧಿಕಾರಿಗಳ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಸಿ ಅನುರಾಧ ಸೂಚನೆ ಉದಯರಶ್ಮಿ ದಿನಪತ್ರಿಕೆ ಇಂಡಿ: ಬೇಸಿಗೆಯಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಒದಗಿಸಲು ಯಾವುದೇ ಅಡೆ ತಡೆ ಉಂಟಾಗದಂತೆ ನೋಡಿಕೊಳ್ಳಬೇಕು. ಅದರಂತೆ ಜನ ಜಾನುವಾರುಗಳಿಗೆ ಯಾವದೇ ರೀತಿಯ ನೀರಿನ ಅಭಾವವಾಗದಂತೆ ಕುಡಿಯುವ ನೀರು ಪೂರೈಸಬೇಕು ಎಂದು ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತ್ರದ ಹೇಳಿದರು.ತಾ.ಪಂ ಕಾರ್ಯಾಲಯದಲ್ಲಿ ನಡೆದ ತಾಲೂಕಿನ ಎಲ್ಲಾ ಪಂಚಾಯತ ಅಭಿವೃದ್ದಿ ಅಧಿಕಾರಿಗಳ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು.ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ನಂದೀಪ ರಾಠೋಡ ಮಾತನಾಡಿ ಕುಡಿಯುವ ನೀರಿನ ಅನುದಾನ ಮಾಹಿತಿ ಪಡೆದು ಹಾಗೂ ಗ್ರಾಮ ಹಾಗೂ ವಸತಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಸೂಕ್ತ ಕ್ರಮ ಕೈಕೊಳ್ಳಲು ಸೂಚನೆ ನೀಡಿದರು.ತಾಲೂಕಿನ ಬಸನಾಳ ಪಿಡಿಒ ಮಲ್ಲಿಕಾರ್ಜುನ ನಿಲಂಗಿ ಮಾತನಾಡಿ ಬಸನಾಳ, ಅಗಸನಾಳ, ಕ್ಯಾತನಕೇರಿ, ಹಾಗೂ ತಾಂಡಾಗಳ ಕುಡಿಯುವ ನೀರಿನ ಸಮಸ್ಯೆ ಕುರಿತು ಮಾತನಾಡಿದರು.ಎಸಿ ವಸ್ತçದ ಅವರು ಮಾತನಾಡಿ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ನೀರಿನ ತೊಂದರೆ ಆಗದಂತೆ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಕಳೆದ ಐದು ವರ್ಷದ ಸರಾಸರಿ ಇಳುವರಿಗಿಂತ ಪ್ರಶಕ್ತ ಸಾಲಿನ ಇಳುವರಿ ಕಡಿಮೆ ಇದ್ದರೆ ಮಾತ್ರ ಬೆಳೆ ವಿಮೆ ನೀಡಲಾಗುವದೆಂದು ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.ಶಿರಶ್ಯಾಡ ಗ್ರಾಮದ ಸರಾಸರಿ ಇಳುವರಿ ೩೪೩ ಕೆಜಿ ಇದೆ ಮತ್ತು ಸಧ್ಯದ ಇಳುವರಿ ೧೧೦ ಕೆಜಿ ಇದೆ. ವ್ಯತ್ಯಾಶ ೬೭.೭೭ ಇದೆ.ಹೀಗಾಗಿ ಶಿರಶ್ಯಾಡ ಗ್ರಾಮದವರಿಗೆ ಬೆಳೆ ವಿಮೆ ಬರುತ್ತದೆ. ಅದರಂತೆ ಹಿಂಗಣಿ, ಲಾಳಸಂಗಿ,ಅರ್ಜುಣಗಿ, ಆಳೂರ, ಮಸಳಿ ಬಿಕೆ, ಅಗರಖೇಡ, ಪಡನೂರ, ಗುಬ್ಬೆವಾಡ,ಕೋಳುರಗಿ, ತಾಂಬಾ, ಹೋರ್ತಿ, ಝಳಕಿ, ತೆನೆಹಳ್ಳಿ, ಕಪನಿಂಬರಗಿ ಗ್ರಾಮದವರಿಗೆ ಬೆಳೆ ವಿಮೆ ಬರುತ್ತದೆ.ಲಚ್ಯಾಣ ಗ್ರಾಮದ ಐದು ವರ್ಷದ ಸರಾಸರಿ ಇಳುವರಿ ೪೨೧ ಕೆಜಿ ಮತ್ತು ಸಧ್ಯದ ಇಳುವರಿ ೪೨೨ ಕೆಜಿ. ಹೀಗಾಗಿ ಲಚ್ಯಾಣ ಗ್ರಾಮದವರಿಗೆ ಇಳುವರಿ ಬರುವದಿಲ್ಲ.ಅದರಂತೆ ಅಹಿರಸಂಗ, ಇಂಗಳಗಿ, ಹಿರೇಬೇವನೂರ, ಸಂಗೋಗಿ, ಬೆನಕನಹಳ್ಳಿ, ಬಬಲಾದ, ಭತಗುಣಕಿ, ಬಳ್ಳೊಳ್ಳಿ, ಹಂಜಗಿ,ಮಿರಗಿ, ಬಸನಾಳ, ಚಿಕ್ಕಬೇವನೂರ, ಸಾಲೋಟಗಿ, ಅಥರ್ಗಾ, ಇಂಡಿ ಗ್ರಾಮೀಣಚವಡಿಹಾಳ, ನಾದ ಕೆಡಿ ಹಡಲಸಂಗ ರೂಗಿ, ನಿಂಬಾಳ ಕೆಡಿ, ಅಂಜುಟಗಿ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ವೈಷ್ಣವಿ ಹಿರೇಮಠ ಇವಳು ಸುವರ್ಣ ಕರ್ನಾಟಕ ನಾಟ್ಯ ಮಯೂರಿ ಪ್ರತಿಭಾ ಪುರಸ್ಕಾರಕ್ಕೆ ಭಾಜನಳಾಗಿದ್ದಾಳೆ.ಬೆಂಗಳೂರಿನ ಸಮಾಜ ಕಲ್ಯಾಣ ಸಂಸ್ಥೆ ಹಾಗೂ ವಿಶ್ವ ಕನ್ನಡ ಜಾನಪದ ಪರಿಷತ್ ಇವುಗಳಡಿಯಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ನ ಅಕ್ಕಮಹಾದೇವಿ ಸಭಾಭವನದಲ್ಲಿ ದಿ: ೬ ರಂದು ಆಯೋಜಿಸಿದ ರಾಷ್ಟೀಯ ಮಹಿಳಾ ಪ್ರತಿಭೋತ್ಸವದಂದು, ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಂಸ್ಥೆಯ ಅಧ್ಯಕ್ಷೆ ವೀಣಾ ಕಿಡದಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ವೀರಗಣಾಚಾರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಸಕ ರಾಜುಗೌಡ ಅಭಿಮತ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ವೀರಶರಣ ಮಡಿವಾಳ ಮಾಚಿದೇವ ಸೇರಿದಂತೆ ಅಸಂಖ್ಯಾತ ಶರಣರು ನೀಡಿದ ಸಮಾನತೆಯ ಸಂದೇಶವನ್ನು ನಾವು ಅರಿಯಬೇಕಾಗಿದೆ ಎಂದು ಶಾಸಕ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ) ಹೇಳಿದರು.ಪಟ್ಟಣದ ಕಲ್ಮೇಶ್ವರ ದೇವಸ್ಥಾನ ಸಭಾಭವನದಲ್ಲಿ ಗುರುವಾರ ಜರುಗಿದ ಶ್ರೀಮಡಿವಾಳ ಮಾಚಿದೇವ ಜನ್ಮಭೂಮಿ ಪ್ರತಿಷ್ಠಾನ ಕಲೆ, ಸಾಹಿತ್ಯ, ಸಾಂಸ್ಕೃತಿಕ ವೇದಿಕೆಯ ಚತುರ್ಥ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ವೀರಗಣಾಚಾರಿ ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶರಣರು ಕಾಯಕದಲ್ಲಿಯೇ ಸತ್ಯ ಹಾಗೂ ಸ್ವರ್ಗ ಕಂಡುಕೊಂಡಿದ್ದಾರೆ. ಅವರು ತಮ್ಮ ವಚನಗಳ ಮೂಲಕ ತಿಳಿಸಿದ ಸಾಮಾಜಿಕ ನ್ಯಾಯವನ್ನು ಇಂದು ನಾವು ಅಳವಡಿಸಿಕೊಳ್ಳಬೇಕಾಗಿದೆ ಎಂದರು.ಸಾನಿಧ್ಯ ವಹಿಸಿ ಮಾತನಾಡಿದ ಸ್ಥಳೀಯ ಗದ್ದಿಗೆಮಠದ ಮಡಿವಾಳೇಶ್ವರ ಸ್ವಾಮೀಜಿ ಪಟ್ಟಣದಲ್ಲಿ ಪ್ರತಿಷ್ಠಾನದ ಮೂಲಕ ಪ್ರತಿವರ್ಷ ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.ಶಿಕ್ಷಕ ಅಶೋಕ ಹಂಚಲಿ ಮಾತನಾಡಿ, ನಮ್ಮ ಬದುಕು ಜನ ಮೆಚ್ಚುವಂತಿರಬೇಕು. ನಮ್ಮ ಉತ್ತಮ ಕಾರ್ಯಗಳ ಮೂಲಕ ಬದುಕಿನಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕು ಎಂದರು.ಬಸವನಬಾಗೇವಾಡಿ…
