ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ದಕ್ಷಿಣ ಭಾರತದ ಅತ್ಯಂತ ಗಟ್ಟಿ ಹಿಂದೂ ನಾಯಕ, ಪಂಚಮಸಾಲಿ ಸಮಾಜದ ಸಮರ್ಥನೀಯ ನಾಯಕ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿ ಪಕ್ಷದಿಂದ ಉಚ್ಛಾಚಿಸಿದ್ದನ್ನು ಖಂಡಿಸಿ ಮತ್ತು ಮರಳಿ ಬಿಜೆಪಿಗೆ ಸೇರ್ಪಡೆಗೊಳಿಸಿಕೊಳ್ಳಬೇಕು ಎಂದು ಆಗ್ರಹಿಸಿ ಏ.೭ ರಂದು ಪಟ್ಟಣದಲ್ಲಿ ಬ್ರಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಮತಕ್ಷೇತ್ರದ ಎಲ್ಲ ಪಂಚಮಸಾಲಿ ಸಮಾಜ ಬಂಧುಗಳು, ಯತ್ನಾಳರ ಅಭಿಮಾನಿಗಳು ಭಾಗಿಯಾಗಿ ಯತ್ನಾಳರ ಕೈ ಬಲಪಡಿಸಬೇಕು ಎಂದು ಪಕ್ಷಾತೀತವಾಗಿ ಪಟ್ಟಣದ ಪಂಚಮಸಾಲಿ ಸಮಾಜದ ಮುಖಂಡರು ಕರೆ ನೀಡಿದರು.
ಪಟ್ಟಣದಲ್ಲಿ ಈ ಕುರಿತು ನಡೆದ ಸುದ್ದಿಗೋಷ್ಟಿಯಲ್ಲಿ ಸಮಾಜದ ಮುಖಂಡ ಅರವಿಂದ ಕೊಪ್ಪ ಮಾತನಾಡಿ, ಯತ್ನಾಳರನ್ನು ಉಚ್ಛಾಟಿಸಿದ ವಿಷಯ ಇವತ್ತು ಇಡೀ ರಾಜ್ಯದ ಜನತೆಗೆ, ಹಿಂದೂ ಪರ ಸಂಘಟನೆಗಳಿಗೆ, ಅಭಿವೃದ್ಧಿ ಪರ ಚಿಂತಕರಿಗೆ ಸಾಕಷ್ಟು ನೋವು ತಂದಿರುವ ವಿಷಯದನ್ವಯ, ಯತ್ನಾಳರಿಗೆ ನೈತಿಕ ಬೆಂಬಲ ನೀಡಲು, ಓಲೈಕೆ ರಾಜಕಾರಣದಿಂದ ಅತೀತರಾಗಿ ನೇರ ನಿಷ್ಟುರ ನುಡಿಗೆ ಹೆಸರಾಗಿರುವ, ಅಭಿವೃದ್ಧಿ ಪರ ಕಾಳಜಿ ಇಟ್ಟುಕೊಂಡ ವ್ಯಕ್ತಿಗೆ ಇಂದು ಸೋಲಾಗಬಾರದು ಎಂದು ಪಟ್ಟಣದ ಸಮಸ್ತ ನಾಗರೀಕರ ಪರವಾಗಿ ಶಕ್ತಿ ತುಂಬಲು, ಪಟ್ಟಣದಲ್ಲಿ ಪಂಚಮಸಾಲಿ ಸಮಾಜ, ಹಿಂದೂಪರ ಸಂಘಟನೆಗಳು ಮತ್ತು ಯತ್ನಾಳರ ಅಭಿಮಾನಿ ಬಳಗದ ನೇತೃತ್ವದಲ್ಲಿ ಬೃಹತ್ ಪ್ರಮಾಣದ ಪ್ರತಿಭಟನೆ ನಡೆಸಿ ಬಿಜೆಪಿಯ ಕೇಂದ್ರ ಮಂಡಳಿಯ ವರಿಷ್ಟರಿಗೆ ಯತ್ನಾಳರ ವ್ಯಕ್ತಿತ್ವ ಮತ್ತು ಅವರ ಅವಶ್ಯಕತೆ ಈ ರಾಜ್ಯಕ್ಕೆ ಏನಿದೆ ಎನ್ನುವ ಬಗ್ಗೆ ಮನವರಿಕೆ ಮಾಡಲು ಈ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಇಡೀ ರಾಜ್ಯದ ರಾಜಕಾರಣದಲ್ಲಿ ವಯಕ್ತಿಕವಾಗಿ ಏನೇ ಹಿನ್ನಡೆಯಾದರೂ ಸತ್ಯವನ್ನು ಹೇಳಲು ನಾನು ಮುಂದೆ ಎಂದು ತೋರಿಸಿಕೊಟ್ಟವರು ಯತ್ನಾಳರು. ಇಂತವರಿಗೆ ಯಾವುದೋ ಒತ್ತಡಕ್ಕೆ ಒಳಗಾಗಿ ಶಿಕ್ಷೆ ನೀಡಿದ್ದು ಬಿಜೆಪಿ ಪಕ್ಷ ಎಸಗಿರುವ ಪ್ರಮಾದ. ಬಸನಗೌಡ ಪಾಟೀಲ ಅಂದ್ರೆ ಬಿಜೆಪಿ, ಬಿಜೆಪಿ ಅಂದ್ರೆ ಬಸನಗೌಡ ಪಾಟೀಲ ಎನ್ನುವ ವಾತಾವರಣ ಕಳೆದ ೧೦ ದಿನಗಳಲ್ಲಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಇದನ್ನು ಈಗಲೂ ಬಿಜೆಪಿ ಕೇಂದ್ರೀಯ ಮಂಡಳಿ ನಿರ್ಲಕ್ಷ ಮಾಡಿದಲ್ಲಿ ಬರುವ ದಿನಗಳಲ್ಲಿ ಈ ರಾಜ್ಯದಲ್ಲಿ ಬಿಜೆಪಿಗೆ ತಕ್ಕ ಶಾಸ್ತಿ ಆಗುತ್ತದೆ. ಅದಕ್ಕೆ ಅವಕಾಶ ಕೊಡದೇ ಯತ್ನಾಳರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಉಚ್ಛಾಟನೆಯ ಪ್ರಕಟಣೆಯನ್ನು ವಾಪಸ್ಸು ಪಡೆದು ಗೌರವಯುತವಾಗಿ ಅವರನ್ನು ಮರಳಿ ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಅವರಲ್ಲಿನ ಶಕ್ತಿಯನ್ನು, ಹಿಂದೂಪರ ಕಾಳಜಿಯನ್ನು, ಅಭಿವೃದ್ಧಿ ಪರ ಚಿಂತನೆಯನ್ನು ಕೇಂದ್ರೀಯ ಬಿಜೆಪಿ ಇಡೀ ರಾಜ್ಯದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದರು.
ಸಮಾಜದ ತಾಲೂಕು ಅಧ್ಯಕ್ಷ ಅಮರೇಶ ಗೂಳಿ, ಪ್ರಮುಖರಾದ, ಶಿವಶಂಕರಗೌಡ ಹಿರೇಗೌಡರ, ವಿರೇಶ ಹಡಲಗೇರಿ, ಕಾಮರಾಜ ಬಿರಾದಾರ ಮಾತನಾಡಿ ಯತ್ನಾಳರ ಉಚ್ಛಾಟನೆ ಕೇವಲ ಬಿಜೆಪಿಗರಿಗೆ ಅಷ್ಟೇ ಅಲ್ಲದೇ ಸಮಾಜ ಬಾಂಧವರಿಗೆ, ಬೇರೆಯ ಪಕ್ಷದಲ್ಲಿರುವವರಿಗೂ ಅತೀವ ನೋವಾಗಿದೆ. ಉಚ್ಛಾಟನೆಯ ಹಿನ್ನೆಲೆ ರಾಜ್ಯದ ಉದ್ದಗಲಕ್ಕೂ ಪ್ರತಿಭಟನೆಗಳು ನಡೆದು ಯತ್ನಾಳರ ಶಕ್ತಿ ತೋರಿಸಿಕೊಟ್ಟಿದೆ. ಇಷ್ಟಾದರೂ ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳದ ಹಿನ್ನೆಲೆ ಎ೭ ರಂದು ಬೆಳಿಗ್ಗೆ ೧೦ಕ್ಕೆ ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರತಿಭಟನಾ ರ್ಯಾಲಿಯನ್ನು ಪ್ರಾರಂಭಿಸಿ ಮುಖ್ಯ ಬಜಾರ, ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದವರೆಗೆ ಕಾಲ್ನಡಿಗೆಯ ಮೂಲಕ ಪ್ರತಿಭಟಿಸಲಾಗುವದು. ಕಾರಣ ಮತಕ್ಷೇತ್ರದಾದ್ಯಂತ ಸಮಾಜದ ಎಲ್ಲ ಬಾಂಧವರು, ಯತ್ನಾಳರ ಅಭಿಮಾನಿಗಳು ಭಾಗಿಯಾಗಬೇಕು ಎಂದರು.
ಈ ವೇಳೆ ತಾಲೂಕು ಪಂಚಮಸಾಲಿ ಸಮಾಜದ ಯುವ ಘಟಕದ ಅಧ್ಯಕ್ಷ ರವಿ ಕಮತ ಪ್ರಮುಖರಾದ ಬಸಲಿಂಗಪ್ಪ ರಕ್ಕಸಗಿ, ಶರಣು ಸಾಲವಾಡಗಿ, ವಿರೇಶ ಬಲದಿನ್ನಿ, ವಿರೇಶ ಢವಳಗಿ, ಶೆಟ್ಟೆಪ್ಪ ರಕ್ಕಸಗಿ, ಸಚಿನ ಚಿನ್ನಾಪೂರ, ವಿನೋದ ವಾಂಗಿ, ಅನೀಲ ಪಾಟೀಲ, ಸಂಗಣ್ಣ ಹಾರಿವಾಳ, ಅಮರೇಶ ಕೊಳೂರ, ರವಿ ಪಾಟೀಲ, ಆದಪ್ಪ ಕೋಳೂರ ಸೇರಿದಂತೆ ಮತ್ತೀತರರು ಮಾತನಾಡಿ,

