ಉದಯರಶ್ಮಿ ದಿನಪತ್ರಿಕೆ
ಇಂಡಿ: ಕಳೆದ ಐದು ವರ್ಷದ ಸರಾಸರಿ ಇಳುವರಿಗಿಂತ ಪ್ರಶಕ್ತ ಸಾಲಿನ ಇಳುವರಿ ಕಡಿಮೆ ಇದ್ದರೆ ಮಾತ್ರ ಬೆಳೆ ವಿಮೆ ನೀಡಲಾಗುವದೆಂದು ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.
ಶಿರಶ್ಯಾಡ ಗ್ರಾಮದ ಸರಾಸರಿ ಇಳುವರಿ ೩೪೩ ಕೆಜಿ ಇದೆ ಮತ್ತು ಸಧ್ಯದ ಇಳುವರಿ ೧೧೦ ಕೆಜಿ ಇದೆ. ವ್ಯತ್ಯಾಶ ೬೭.೭೭ ಇದೆ.
ಹೀಗಾಗಿ ಶಿರಶ್ಯಾಡ ಗ್ರಾಮದವರಿಗೆ ಬೆಳೆ ವಿಮೆ ಬರುತ್ತದೆ. ಅದರಂತೆ ಹಿಂಗಣಿ, ಲಾಳಸಂಗಿ,ಅರ್ಜುಣಗಿ, ಆಳೂರ, ಮಸಳಿ ಬಿಕೆ, ಅಗರಖೇಡ, ಪಡನೂರ, ಗುಬ್ಬೆವಾಡ,ಕೋಳುರಗಿ, ತಾಂಬಾ, ಹೋರ್ತಿ, ಝಳಕಿ, ತೆನೆಹಳ್ಳಿ, ಕಪನಿಂಬರಗಿ ಗ್ರಾಮದವರಿಗೆ ಬೆಳೆ ವಿಮೆ ಬರುತ್ತದೆ.
ಲಚ್ಯಾಣ ಗ್ರಾಮದ ಐದು ವರ್ಷದ ಸರಾಸರಿ ಇಳುವರಿ ೪೨೧ ಕೆಜಿ ಮತ್ತು ಸಧ್ಯದ ಇಳುವರಿ ೪೨೨ ಕೆಜಿ. ಹೀಗಾಗಿ ಲಚ್ಯಾಣ ಗ್ರಾಮದವರಿಗೆ ಇಳುವರಿ ಬರುವದಿಲ್ಲ.
ಅದರಂತೆ ಅಹಿರಸಂಗ, ಇಂಗಳಗಿ, ಹಿರೇಬೇವನೂರ, ಸಂಗೋಗಿ, ಬೆನಕನಹಳ್ಳಿ, ಬಬಲಾದ, ಭತಗುಣಕಿ, ಬಳ್ಳೊಳ್ಳಿ, ಹಂಜಗಿ,ಮಿರಗಿ, ಬಸನಾಳ, ಚಿಕ್ಕಬೇವನೂರ, ಸಾಲೋಟಗಿ, ಅಥರ್ಗಾ, ಇಂಡಿ ಗ್ರಾಮೀಣಚವಡಿಹಾಳ, ನಾದ ಕೆಡಿ ಹಡಲಸಂಗ ರೂಗಿ, ನಿಂಬಾಳ ಕೆಡಿ, ಅಂಜುಟಗಿ, ಖೇಡಗಿ ಗ್ರಾಮದ ರೈತರಿಗೆ ಬೆಳೆ ವಿಮೆ ಬರುವದಿಲ್ಲ.
ಸರಾಸರಿ ಇಳುವರಿಗಿಂತ ಪ್ರಸಕ್ತ ಸಾಲಿನ ಇಳುವರಿ ಎಷ್ಟು ಪ್ರಮಾಣದಲ್ಲಿ ಕಡಿಮೆ ಇರುತ್ತದೆ. ಅದಕ್ಕೆ ಬೆಳೆ ವಿಮೆ ಜಮಾ ವಾಗುವದು ಎಂದು ಏವೂರ ತಿಳಿಸಿದ್ದಾರೆ.