ಪಂಚಾಯತ ಅಭಿವೃದ್ದಿ ಅಧಿಕಾರಿಗಳ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಸಿ ಅನುರಾಧ ಸೂಚನೆ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಬೇಸಿಗೆಯಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಒದಗಿಸಲು ಯಾವುದೇ ಅಡೆ ತಡೆ ಉಂಟಾಗದಂತೆ ನೋಡಿಕೊಳ್ಳಬೇಕು. ಅದರಂತೆ ಜನ ಜಾನುವಾರುಗಳಿಗೆ ಯಾವದೇ ರೀತಿಯ ನೀರಿನ ಅಭಾವವಾಗದಂತೆ ಕುಡಿಯುವ ನೀರು ಪೂರೈಸಬೇಕು ಎಂದು ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತ್ರದ ಹೇಳಿದರು.
ತಾ.ಪಂ ಕಾರ್ಯಾಲಯದಲ್ಲಿ ನಡೆದ ತಾಲೂಕಿನ ಎಲ್ಲಾ ಪಂಚಾಯತ ಅಭಿವೃದ್ದಿ ಅಧಿಕಾರಿಗಳ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು.
ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ನಂದೀಪ ರಾಠೋಡ ಮಾತನಾಡಿ ಕುಡಿಯುವ ನೀರಿನ ಅನುದಾನ ಮಾಹಿತಿ ಪಡೆದು ಹಾಗೂ ಗ್ರಾಮ ಹಾಗೂ ವಸತಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಸೂಕ್ತ ಕ್ರಮ ಕೈಕೊಳ್ಳಲು ಸೂಚನೆ ನೀಡಿದರು.
ತಾಲೂಕಿನ ಬಸನಾಳ ಪಿಡಿಒ ಮಲ್ಲಿಕಾರ್ಜುನ ನಿಲಂಗಿ ಮಾತನಾಡಿ ಬಸನಾಳ, ಅಗಸನಾಳ, ಕ್ಯಾತನಕೇರಿ, ಹಾಗೂ ತಾಂಡಾಗಳ ಕುಡಿಯುವ ನೀರಿನ ಸಮಸ್ಯೆ ಕುರಿತು ಮಾತನಾಡಿದರು.
ಎಸಿ ವಸ್ತçದ ಅವರು ಮಾತನಾಡಿ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ನೀರಿನ ತೊಂದರೆ ಆಗದಂತೆ ಕ್ರಮವಹಿಸಲಾಗುವದು ಎಂದರು.
ಸಭೆಯಲ್ಲಿ ಸಹಾಯಕ ನಿರ್ದೇಶಕ ಪ್ರಕಾಶ ರಾಠೋಡ, ಪಿಡಿಒ ಬಸವರಾಜ ಬಬಲಾದ, ಸಿದರಾಯ ಬಿರಾದಾರ, ಜಬ್ಬಾರಲಿ ಹಳ್ಳಿ, ಮಹೇಶ ನಾಯಕ, ಮಹೇಶ ರಾಠೋಡ, ಶಿವು ಪೂಜಾರಿ, ಶೋಭಾ ಹೊರಪೇಟೆ, ಆಶಾ ನಾಯಕ ಮತ್ತಿತರಿದ್ದರು.