ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶಿಕ್ಷಕರಿಗೆ ವಿಷಯ ಬೋಧನೆಯ ಜೊತೆಗೆ ಬೋಧನಾ ಕೌಶಲ್ಯಗಳು ತುಂಬಾ ಮುಖ್ಯವಾಗಿವೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ವಿಷಯವನ್ನು ಪರಿಣಾಮಕಾರಿಯಾಗಿ ತಲುಪಿಸಲು ಅಣುಬೋಧನೆ ಒಂದು ಪ್ರಮುಖ ಸಾಧನವಾಗಿದೆ. ಎಂದು ಆರ್.ಡಿ.ಪಾಟೀಲ ಪಪೂ ಕಾಲೇಜಿನ ಉಪನ್ಯಾಸಕ ಡಾ.ಶರಣಬಸವ ಜೋಗೂರ ಹೇಳಿದರು.
ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಹಾಗೂ ವಿದ್ಯಾರ್ಥಿ ಮಾರ್ಗದರ್ಶನದಡಿಯಲ್ಲಿ ಹಮ್ಮಿಕೊಂಡ ಅಣುಬೋಧನಾ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನುಡಿಗಳಲ್ಲಿ ಶಿಕ್ಷಣವು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದು ಕೇವಲ ಜ್ಞಾನವನ್ನು ನೀಡುವುದಲ್ಲದೇ ವ್ಯಕ್ತಿತ್ವವನ್ನು ರೂಪಿಸುತ್ತದೆ. ಸಮಾಜದಲ್ಲಿ ಯಶಸ್ವಿ ಜೀವನ ಸಾಗಿಸಲು ಸಹಾಯ ಮಾಡುತ್ತದೆ. ಇಂದಿನ ದಿನಮಾನದಲ್ಲಿ ಶಿಕ್ಷಕರಾದವರು ತಂತ್ರಜ್ಞಾನದ ಮೂಲಕ ಬೋಧನೆ ಮಾಡುವುದು ಅವಶ್ಯಕ ಎಂದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಪ್ರಾಚಾರ್ಯೆ ಜೆ.ಸಿ.ನಂದಿಕೋಲ ವಹಿಸಿದ್ದರು. ಪ್ರಶಾಂತ ಕುಲಕರ್ಣಿ ಸ್ವಾಗತಿಸಿದರು. ಶೈಲಾ ದೊಡ್ಡಮನಿ ನಿರೂಪಿಸಿದರು. ಪವಿತ್ರಾ ಬಿರಾದಾರ ವಂದಿಸಿದರು. ಕ್ರಾರ್ಯಕ್ರಮದಲ್ಲಿ ಉಪನ್ಯಾಸಕ ಎಸ್.ಬಿ.ಬಿರಾದಾರ, ಆರ್.ಎ.ಹಾಲಕೇರಿ, ಭಾಗ್ಯಜ್ಯೋತಿ ದಸ್ಮಾ, ನಾಜಿಯಾ ಮುಲ್ಲಾ, ಚನ್ನಬಸವರಾಜ ಕತ್ತಿ, ಶಿವಕುಮಾರ ಕತ್ತಿ ಸೇರಿದಂತೆ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ಇದ್ದರು.