Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಮಹಾವೀರ ಜಯಂತಿಯನ್ನು ಆಚರಿಸಲಾಯಿತು.ಈ ವೇಳೆ ಕಾಲೇಜಿನ ಪ್ರಾಚಾರ್ಯ ಎ.ಕೆ.ಹುನಗುಂದ, ಪ್ರೌಢ ಶಾಲಾ ಮುಖ್ಯಗುರು ರಾಮಚಂದ್ರ ಹೆಗಡೆ, ಆಂಗ್ಲಮಾಧ್ಯಮ ಮುಖ್ಯ ಗುರುಮಾತೆ ರಂಜಿತಾ ಭಟ್ಟ, ಬೋಧಕರಾದ ಅಂಜನಾ ದೇಶಪಾಂಡೆ, ವಿ.ವಿ.ಪಾಟೀಲ್, ಎಸ್.ಎಸ್.ಹೂಗಾರ, ರಮಾದೇವಿ ಮುತಾಲೀಕ್, ಪ್ರಿಯಾಂಕ ಕುಲಕರ್ಣಿ, ಅನ್ನಪೂರ್ಣ ಹೊಸಮನಿ, ಶೋಭಾ ನಾಗೂರ, ಪ್ರದೀಪ ಜಗ್ಗಲ್, ರೂಪಾ ನಾಟೇಕರ್ ಸೇರಿದಂತೆ ಹಲವರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಅರಿಹಂತ ಚಾರಿಟೇಬಲ್ ಟ್ರಸ್ಟ್ಟಿನ ಪಿ.ಯು.ಸಿ. & ಬಿ.ಎಸ್.ಡಬ್ಲೂö್ಯ ಕಾಲೇಜು ಹಾಗೂ ಎಂ.ಬಿ.ಎಸ್. ಕಲಾ ಪ್ರಥಮ ದರ್ಜೆ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಭಗವಾನ ಗೋಮ್ಮಟೇಶ ಬಾಹುಬಲಿ ಸ್ವಾಮಿಯ ಸನ್ನಿದಾನದ ಅರಿಹಂತಗಿರಿಯಲ್ಲಿ ೨೬೨೩ ನೇ ಮಹಾವೀರ ತೀರ್ಥಂಕರರ ಜನ್ಮಕಲ್ಯಾಣೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.ಈ ವೇಳೆ ಟ್ರಸ್ಟಿನ ಅಧ್ಯಕ್ಷ ಮಹಾವೀರ ಸಗರಿ ಮಾತನಾಡಿ, ಮಹಾವೀರ ಸ್ವಾಮಿಯ ದಿವ್ಯ ಸಂದೇಶಗಳಾದ ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ, ಅನೇಕಾಂತವಾದ, ಶಾಧ್ವಾದ ಮೂಲ ತತ್ವಗಳು ಅಹಿಂಸೆಯಿAದ ಜೀವಿಗಳ ರಕ್ಷಣೆಯಾಗುತ್ತದೆ, “ಅಹಿಂಸಾ ಪರಮೋ ಧರ್ಮ” ಎಂದು ಸಾರಿದ ಭನವಾನ ಮಹಾವೀರರ ತತ್ವಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಪರಿಶುದ್ಧದ ಜೊತೆಗೆ ಸನ್ಮಾರ್ಗದ ಕಡೆಗೆ ನಡೆದಂತಾಗುತ್ತದೆ ಎಂದರು.ಮಹಾವೀರ ಭಗವಾನರು ಆದಿನಾಥ ತೀರ್ಥಂಕರರ ಮೊಮ್ಮಗನಾಗಿದ್ದು ದಿಗಂಬರ ಮುನಿಯಾಗಿ ಅವರು ಮೋಕ್ಷಗಾಮಿಯಾಗಲು ೨೩ ಬವಗಳು ಬೇಕಾಯಿತು. ೨೪ ನೇ ತೀರ್ಥಂಕರಾಗಿ ತಾಯಿ ತ್ರಿಶಲಾದೇವಿ ತಂದೆ ಸಿದ್ದಾರ್ಥ ಪುತ್ರನಾಗಿ ಬಿಹಾರ ರಾಜ್ಯದ ಕುಂಡಲಪುರದಲ್ಲಿ ಜನಿಸಿ ರಾಜ್ಯವೈಭವವಿದ್ದರು ಅದೆಲ್ಲವನ್ನು ತ್ಯಾಗಮಾಡಿ ದೀರ್ಘ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಸರಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಯಿತು.ಮುದ್ದೇಬಿಹಾಳ: ಬುಧವಾರ ನಿಡಗುಂದಿ ಹೈವೇ ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ತಾಲೂಕಿನ ಕಾಳಗಿ ತಾಂಡಾದ ಬಿಎಸ್‌ಎಫ್ ಯೋಧ ಮೌನೇಶ ರಾಠೋಡ ಅಂತ್ಯಕ್ರಿಯೆ ಗುರುವಾರ ಬೆಳಗ್ಗೆ ಸಕಲ ಸರಕಾರಿ ಗೌರವದೊಂದಿಗೆ ನಡೆಯಿತು.ಮಹಾರಾಷ್ಟ್ರದ ಲಾತೂರ ಬಟಾಲಿಯನ್ ಇನ್ಸಪೆಕ್ಟರ್ ಜಿತೇಂದ್ರ ಸಿಂಗ ಹಾಗೂ ಕಾನ್ಸ್ಟೇಬಲ್ ವೇಣುಗೋಪಾಲ ನೇತೃತ್ವದ ೧೧ ಜನ ಯೋಧರ ತಂಡ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಸಿಪಿಆಯ್ ಮಹಮ್ಮದ ಫಸಿಯುದ್ಧಿನ್, ಪಿಎಸ್‌ಐ ಸಂಜಯ ತಿಪರೆಡ್ಡಿ, ನಿವೃತ್ತ ಸೈನಿಕರು ಪುಷ್ಪಗುಚ್ಚ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು.ಯೋಧನ ಪತ್ನಿ ನಿರ್ಮಲಾ, ಮಕ್ಕಳಾದ ಆರುಷಿ, ಆದರ್ಶ ಸೇರಿದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಯೋಧನ ಪಾರ್ಥೀವ ಶರೀರದ ಮೇಲಿದ್ದ ರಾಷ್ಟ್ರಧ್ವಜವನ್ನು ಸೇನೆಯ ಅಧಿಕಾರಿಗಳು ಕುಟುಂಬಕ್ಕೆ ಹಸ್ತಾಂತರಿಸಿದರು. ಪಿ.ಎಲ್.ಡಿ ಬ್ಯಾಂಕ ಅಧ್ಯಕ್ಷ ಬಿ.ಕೆ.ಬಿರಾದಾರ, ಮುಖಂಡ ಸಂತೋಷ ಚವ್ಹಾಣ, ಗ್ರಾ.ಪಂ ಸದಸ್ಯ ಶಿವಾನಂದ ಲಮಾಣಿ, ಸತೀಶ ರಾಠೋಡ,…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದ ದಿಗಂಬರೇಶ್ವರ ಸಂಸ್ಥಾನ ಮಠದ ಆರಾಧ್ಯ ದೇವ ದಿಗಂಬರೇಶ್ವರ ಜಾತ್ರಾ ಮಹೋತ್ಸವವು ದವನದ ಹುಣ್ಣಿಮೆಯ ದಿನವಾದ ಏ. ೧೨ ಶನಿವಾರದಿಂದ ೧೬ ಬುಧವಾರದವರೆಗೆ ಐದು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ಜರಗುವದು.ದಿನಾಂಕ ೧೨ ಶನಿವಾರ ಬೆಳಿಗ್ಗೆ ೬ ಘಂಟೆಗೆ ಜಗದ್ಗುರು ದಿಗಂಬರೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ನೂರಾರು ಭಕ್ತರು ದೀರ್ಘದಂಡ ನಮಸ್ಕಾರ ಹಾಕುವರು, ಮದ್ಯಾಹ್ನ ಸಕಲವಾದ್ಯ ವೈಭವದೊಂದಿಗೆÀ ಬಿರುದಾವಳಿಗಳೊಂದಿಗೆ ಪಲ್ಲಕ್ಕಿ ಉತ್ಸವ ಬೀಳಗಿ ತಾಲೂಕಿನ ಢವಳೇಶ್ವರ ಗ್ರಾಮದ ಭಕ್ತರು ತರುವ ರಥೋತ್ಸವದ ಹಗ್ಗದ ಮೆರವಣಿಗೆ ಮಠಕ್ಕೆ ಆಗಮಿಸಿದಾಗ ಸಾಯಂಕಾಲ ೫.೩೦ಕ್ಕೆ ರಥೋತ್ಸವ ಜರುಗುವದು. ಗೀಗಿ ಪದಗಳು ಪ್ರತಿ ದಿನ ಸಾಯಂಕಾಲ ೭ ರಿಂದ ೯ರ ವರೆಗೆ ಮಠದ ಆವರಣದಲ್ಲಿ ನಡೆಯುವವವು.ದಿನಾಂಕ ೧೩ ರವಿವಾರ ಮದ್ಯಾಹ್ನ ೧೨ ಘಂಟೆಗೆ ಶ್ರೀಶೈಲ ಶಿವಶಂಕ್ರೆಪ್ಪ ನೀಲವಾಣಿ ಇವರ ಮನೆಯಲ್ಲಿ ಕಲ್ಲಿನಾಥ ದೇವರ ಬಿನ್ನಹ ಹಾಗೂ ಪಲ್ಲಕ್ಕಿ ಉತ್ಸವ ನಡೆದು ಮಹಾಪ್ರಸಾದ ಪಂತಿ ಜರುಗುವದು. ಸಾಯಂಕಾಲ ೪.೩೦ಕ್ಕೆ ಯುವಕರಿಗಾಗಿ ಹಾಲೋಕಳಿ ಸ್ಪರ್ದೆಯು ಇರುವದು…
ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತೊಗರಿ ಬೆಳೆಗೆ ಪರಿಹಾರ ಮತ್ತು ಕೃಷ್ಣಾ ಮುಖ್ಯ ಕಾಲುವೆಯಿಂದ ಕೃಷಿಗೆ ನೀರು ಬಿಡುವ ಕುರಿತು ಅಹೋರಾತ್ರಿ ಧರಣಿ ನಾಲ್ಕನೆಯ ದಿನ ಕಂದಾಯ ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಮತ್ತು ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಬೇಟಿ ನೀಡಿ ಭರವಸೆ ನೀಡಿದ ನಿಮಿತ್ಯ ಹೋರಾಟ ಅಂತ್ಯ ಗೊಂಡಿದೆ ಎಂದು ಕರವೇ ಅಧ್ಯಕ್ಷ ಬಾಳು ಮುಳಜಿ ಹೇಳಿದರು.ಎಸಿ ಅನುರಾಧಾ ವಸ್ತ್ರದ ಮಾತನಾಡಿ, ನೀವು ಮನವಿ ಕೊಡಿ ನಾವು ಅದನ್ನು ಜಿಲ್ಲಾಧಿಕಾರಿಗಳಿಗೆ ಮುಟ್ಟಿಸುತ್ತೇವೆ ಮತ್ತು ಜಿಲ್ಲಾಧಿಕಾರಿ ಮೇಲಾಧಿಕರ ಮಾಹಿತಿ ನೀಡುವರು. ಮತ್ತು ಶಾಸಕರಿಗೂ ಈ ವಿಷಯದ ಕುರಿತು ಮಾಹಿತಿ ನೀಡುತ್ತೆವೆ. ಪ್ರಾಮಾಣಿಕವಾಗಿ ರೈತರಿಗೆ ನ್ಯಾಯ ಒದಗಿಸಿ ಕೊಡುತ್ತೇವೆ ಎಂಬ ಭರವಸೆ ನಿಮಿತ್ಯ ರೈತರು ಮತ್ತು ಕರವೇ ಹೋರಾಟಗಾರರು ಧರಣಿ ಹಿಂದೆ ಪಡೆದರು.ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರವರು ಮಾತನಾಡಿ ಕಾನೂನು ಚೌಕಟ್ಟಿನಲ್ಲಿ ಇದ್ದರೆ ಮಾತ್ರ ಪರಿಹಾರ ಬರುತ್ತದೆ. ಸರಕಾರ ಮಾರ್ಗಸೂಚಿ ಪ್ರಕಾರವೇ ನಾವು ಹೇಳಬೇಕಾಗುತ್ತದೆ. ನಿಮ್ಮ ಮನವಿಯನ್ನು…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಮಹಾವೀರ ಜಯಂತಿಯಂಗವಾಗಿ ತಾಲೂಕಾಡಳಿತದಿಂದ ಗುರುವಾರ ಮಹಾವೀರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಹಾವೀರ ಜಯಂತಿಯನ್ನು ಆಚರಿಸಲಾಯಿತು.ಪೂಜೆಯನ್ನು ಉಪತಹಸೀಲ್ದಾರ ಎಂ.ಎಸ್.ಜಾಗೀರದಾರ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ ಎ.ಎ.ಉಪಾಧ್ಯೆ ಅವರು ಮಹಾವೀರ ಜೀವನ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಶಿರಸ್ತೇದಾರ ಎ.ಎಚ್.ಬಳೂರಗಿ, ತಹಸೀಲ್ದಾರ ಕಚೇರಿಯ ಸಿಬ್ಬಂದಿಗಳಾದ ಗುರುರಾಜ ಗಡಗಿ, ಮಂಜು ಹಳ್ಳೂರ, ರಾಮಚಂದ್ರ ಘಾಟಗೆ, ವಿಲಾಸ ಜಾಡರ, ಕ್ಷೇತ್ರಸಮನ್ವಾಯಾಧಿಕಾರಿ ಸುನೀಲ ನಾಯಕ,ಸಿಆರ್ಪಿ ಮಹೇಶ ಪೂಜಾರಿ, ಹಿಂದುಳಿತ ವರ್ಗಗಳ ಇಲಾಖೆಯ ಸಿ.ಜಿ.ಬಿರಾದಾರ, ತಾಲೂಕು ಪಂಚಾಯಿತಿಯ ಸಿಬ್ಬಂದಿ ರಾಜೇಶ್ವರಿ ಆಸಂಗಿ, ಜೈನ ಸಮುದಾಯ ಬಾಂಧವರಾದ ಅಪ್ಪು ದಂಡಾವತಿ, ಬಾಹುಬಲಿ ದಂಡಾವತಿ, ಮಹಾವೀರ ಹೊಸಮನಿ, ಪಾರೀಷ ಹೊಸಮನಿ, ವಿದ್ಯಾಧರ ಉಪಾಧ್ಯೆ, ಪ್ರವೀಣ ದಂಡಾವತಿ, ಪ್ರಮೋದ ದಂಡಾವತಿ, ದಯಾಸಾಗರ ಉಪಾಧ್ಯೆ, ಸಂಜೀವ ಬೋಗಾರ, ಡಿಎಸ್ಎಸ್ ಮುಖಂಡರಾದ ಮಹಾಂತೇಸ ಸಾಸಾಬಾಳ, ಪರಶುರಾಮ ದಿಂಡವಾರ, ಗುರುರಾಜ ಗುಡಿಮನಿ ಇತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಬರುವ ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸಂಕನಾಳ ಎಲ್ಟಿ ಗ್ರಾಮದಲ್ಲಿ ೨೦೨೪-೨೫ನೇ ಸಾಲಿನ ಪ್ರಗತಿ ಕಾಲನಿ ಯೋಜನೆಯಡಿಯಲ್ಲಿ ಕೈಗೊಂಡಿರುವ ಸಿಸಿ ರಸ್ತೆ ಕಾಮಗಾರಿಯು ಕಳಪೆಯಿಂದ ಕೂಡಿದೆ ಎಂದು ಹುಣಶ್ಯಾಳ ಪಿಬಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಪ್ಪು ವಿಠ್ಠಲ ನಾಯಕ ಆರೋಪಿಸಿದ್ದಾರೆ.ತಾಲೂಕಿನ ಸಂಕನಾಳ ಎಲ್ಟಿ ಗ್ರಾಮದಲ್ಲಿ ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಚೆಗೆ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ರೂರಲ್ ಇನ್ಪ್ರಾಸ್ಪ್ರಕ್ಟರ್ ಡೆವಲಪಮೆಂಟ್ ಲಿಮಿಟೆಡ್ ಇಲಾಖೆಯಡಿ ರೂ. ೫೦ ಲಕ್ಷ ಅನುದಾನದಲ್ಲಿ ಸಂಕನಾಳ ಗ್ರಾಮದ ಎಲ್ಟಿ ಕಾಲನಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ರಸ್ತೆ ಕಾಮಗಾರಿಯ ಗುತ್ತಿಗೆದಾರರು ಕೆಲಸ ಆರಂಭಿಸಿದರೂ ಕಾಮಗಾರಿಯ ಅಂದಾಜು ಪತ್ರಿಕೆಯಂತೆ ಆರು ಇಂಚು ದಪ್ಪ ರಸ್ತೆ ನಿರ್ಮಾಣ ಮಾಡದೇ ರಸ್ತೆ ಎರಡು ಬದಿ ಮಾತ್ರ ಆರು ಇಂಚು ಕಾಣುವಂತೆ ಮಾಡಿ ನಡುವೆ ಇದರ ಪ್ರಮಾಣ ಕಡಿಮೆ ಮಾಡಿರುವದರಿಂದಾಗಿ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದೆ. ಇದರ ಬಗ್ಗೆ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದ ಹೊರವಲಯದ ಆಲಮೇಲ ರಸ್ತೆಯಲ್ಲಿರುವ ಪಿ.ಇ.ಎಸ್ ಶಿಕ್ಷಣ ಮಹಾವಿದ್ಯಾಲಯದ ಗಂಗಾಧರ ಎನ್. ಬಿರಾದಾರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪ.ಪೂ. ಮಹಾವಿದ್ಯಾಲಯದ ೨೦೨೪-೨೫ ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.ಕಲಾ ವಿಭಾಗವೀರೇಶ ಕುಳೇಕುಮಟಗಿ ಪ್ರಥಮ ೬೦೦ ಅಂಕಗಳಿಗೆ ೫೭೨ (ಶೇ.೯೫.೩೩) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಗೌರಾಬಾಯಿ ಸುಣಗಾರ ೫೭೦ (ಶೇ.೯೫) ಅಂಕ ಪಡೆದು ದ್ವಿತೀಯ ಸ್ಥಾನ, ಮಲ್ಲಿಕಾರ್ಜುನ ಮಾದರ ೫೬೪ (ಶೇ.೯೪) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.ವಾಣಿಜ್ಯ ವಿಭಾಗಸ್ವಾತಿ ಬಿರಾದಾರ ೬೦೦ ಅಂಕಗಳಿಗೆ ೫೭೯ (ಶೇ.೯೬.೫) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಭಾವನಾ ಕಡಣಿ ೫೬೯ (ಶೇ.೯೪.೮೩) ಅಂಕ ಪಡೆದು ದ್ವಿತೀಯ ಸ್ಥಾನ, ರತ್ನಾಬಾಯಿ ಕಲ್ಲೂರ ೫೬೪ (ಶೇ.೯೪) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.ವಿಜ್ಞಾನ ವಿಭಾಗಜಯಶ್ರೀ ಜಾಲವಾದಿ ೬೦೦ ಅಂಕಗಳಿಗೆ ೫೩೯ (ಶೇ.೮೯.೮೩) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಿಂದಗಿ ಪಟ್ಟಣದ ಫಾಲಕಾನ್ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ. ಪರೀಕ್ಷೆ ಹಾಜರಾದ ಒಟ್ಟು ೬೭ ವಿದ್ಯಾರ್ಥಿಗಳಲ್ಲಿ ಉನ್ನತ ಶ್ರೇಣಿಯಲ್ಲಿ ೦೪ ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ ೨೯, ದ್ವಿತೀಯ ದರ್ಜೆಯಲ್ಲಿ ೧೧ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಾಲೇಜಿನ ಒಟ್ಟು ಫಲಿತಾಂಶ ಶೇ.೬೬% ರಷ್ಟಾಗಿದೆ.ವಿಜ್ಞಾನ ವಿಭಾಗ: ಶರ್ವಾನಿ ಹಿರೇಮಠ ೬೦೦ ಅಂಕಗಳಿಗೆ ೫೭೦ (ಶೇ.೯೫) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಜಿಯಾಆಫಶಾ ನದಾಫ ೫೨೯ (ಶೇ.೮೮.೧೬) ಅಂಕ ಪಡೆದು ದ್ವಿತೀಯ ಸ್ಥಾನ, ಸೃಷ್ಠಿ ಮೊರೆ ೫೨೨ (ಶೇ.೮೭) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಅನುಶಾ ಬಿರಾದರ ಶೇ.೮೬.೮೩, ತಂಜಿಲಾ ನಿಖತ ಶೇ.೮೪.೩೩, ತಹೂರಾ ಯಾಳಗಿ ಶೇ.೮೩.೫, ಅಸ್ಫಿಯಾ ಬಂಥನಾಳ ಶೇ.೮೦.೬೬, ಜೂಯಾಮಿಸ್ಬಾ ಸಿಂದಗಿಕರ ಶೇ.೮೦.೧೬ ಅಂಕ ಪಡೆದು ಸಾಧನೆ ಮಾಡಿದ್ದಾರೆ.ವಿದ್ಯಾರ್ಥಿನಿಗಳ ಈ ಸಾಧನೆಗೆ ಸಂಸ್ಥೆಯ ಕಾಯದರ್ಶಿ ಎಸ್.ಎಂ.ಪಾಟೀಲ ಗಣಿಹಾರ, ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಸವರಾಜ ನಿಂಗಣ್ಣ ಮಸಳಿ ಹಾಗೂ ಉಪಾಧ್ಯಕ್ಷರಾಗಿ ಜ್ಯೋತಿ ಎಚ್ ಪಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ತಾಲ್ಲೂಕಿನ ಖೇಡಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.ನೂತನ ಅಧ್ಯಕ್ಷ ಬಸವರಾಜ ಮಸಳಿ ಮಾತನಾಡಿ, ಸಂಘಕ್ಕೆ ಬರುವ ಎಲ್ಲ ರೀತಿಯ ಸೌಲಭ್ಯಗಳನ್ನು ನೇರವಾಗಿ ರೈತರು ಮತ್ತು ಷೇರುದಾರರಿಗೆ ತಲುಪಿಸುವ ಕಾರ್ಯವನ್ನು ಮಾಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ನೂತನ ಸದಸ್ಯರಾದ ನೂರಮ್ಮದ ನಾಗೂರ, ಬಸಣ್ಣ ಕಲಶೇಟ್ಟಿ, ರಮೇಶ್ ವಾಲಿಕಾರ, ನಿಸಾರ ಅಹ್ಮದ ನಾಗೂರ, ಯಲ್ಲಾಲಿಂಗ ಮಸಳಿ, ಗೌರಾಬಾಯಿ ವಾಲಿಕಾರ ಅವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ ಗೌರವಿಸಿದರು.
