ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಿಂದಗಿ ಪಟ್ಟಣದ ಫಾಲಕಾನ್ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ. ಪರೀಕ್ಷೆ ಹಾಜರಾದ ಒಟ್ಟು ೬೭ ವಿದ್ಯಾರ್ಥಿಗಳಲ್ಲಿ ಉನ್ನತ ಶ್ರೇಣಿಯಲ್ಲಿ ೦೪ ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ ೨೯, ದ್ವಿತೀಯ ದರ್ಜೆಯಲ್ಲಿ ೧೧ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಾಲೇಜಿನ ಒಟ್ಟು ಫಲಿತಾಂಶ ಶೇ.೬೬% ರಷ್ಟಾಗಿದೆ.
ವಿಜ್ಞಾನ ವಿಭಾಗ: ಶರ್ವಾನಿ ಹಿರೇಮಠ ೬೦೦ ಅಂಕಗಳಿಗೆ ೫೭೦ (ಶೇ.೯೫) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಜಿಯಾಆಫಶಾ ನದಾಫ ೫೨೯ (ಶೇ.೮೮.೧೬) ಅಂಕ ಪಡೆದು ದ್ವಿತೀಯ ಸ್ಥಾನ, ಸೃಷ್ಠಿ ಮೊರೆ ೫೨೨ (ಶೇ.೮೭) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಅನುಶಾ ಬಿರಾದರ ಶೇ.೮೬.೮೩, ತಂಜಿಲಾ ನಿಖತ ಶೇ.೮೪.೩೩, ತಹೂರಾ ಯಾಳಗಿ ಶೇ.೮೩.೫, ಅಸ್ಫಿಯಾ ಬಂಥನಾಳ ಶೇ.೮೦.೬೬, ಜೂಯಾಮಿಸ್ಬಾ ಸಿಂದಗಿಕರ ಶೇ.೮೦.೧೬ ಅಂಕ ಪಡೆದು ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿನಿಗಳ ಈ ಸಾಧನೆಗೆ ಸಂಸ್ಥೆಯ ಕಾಯದರ್ಶಿ ಎಸ್.ಎಂ.ಪಾಟೀಲ ಗಣಿಹಾರ, ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯ ಶ್ರೀಮತಿ ಮುಬೀನಾ ಸಂಗಮ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಅಭಿನಂದನೆ ಸಲ್ಲಿಸಿದ್ದಾರೆ.

