ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದ ಹೊರವಲಯದ ಆಲಮೇಲ ರಸ್ತೆಯಲ್ಲಿರುವ ಪಿ.ಇ.ಎಸ್ ಶಿಕ್ಷಣ ಮಹಾವಿದ್ಯಾಲಯದ ಗಂಗಾಧರ ಎನ್. ಬಿರಾದಾರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪ.ಪೂ. ಮಹಾವಿದ್ಯಾಲಯದ ೨೦೨೪-೨೫ ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಕಲಾ ವಿಭಾಗ
ವೀರೇಶ ಕುಳೇಕುಮಟಗಿ ಪ್ರಥಮ ೬೦೦ ಅಂಕಗಳಿಗೆ ೫೭೨ (ಶೇ.೯೫.೩೩) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಗೌರಾಬಾಯಿ ಸುಣಗಾರ ೫೭೦ (ಶೇ.೯೫) ಅಂಕ ಪಡೆದು ದ್ವಿತೀಯ ಸ್ಥಾನ, ಮಲ್ಲಿಕಾರ್ಜುನ ಮಾದರ ೫೬೪ (ಶೇ.೯೪) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗ
ಸ್ವಾತಿ ಬಿರಾದಾರ ೬೦೦ ಅಂಕಗಳಿಗೆ ೫೭೯ (ಶೇ.೯೬.೫) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಭಾವನಾ ಕಡಣಿ ೫೬೯ (ಶೇ.೯೪.೮೩) ಅಂಕ ಪಡೆದು ದ್ವಿತೀಯ ಸ್ಥಾನ, ರತ್ನಾಬಾಯಿ ಕಲ್ಲೂರ ೫೬೪ (ಶೇ.೯೪) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗ
ಜಯಶ್ರೀ ಜಾಲವಾದಿ ೬೦೦ ಅಂಕಗಳಿಗೆ ೫೩೯ (ಶೇ.೮೯.೮೩) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಚೇತನಕುಮಾರ ಬಿರಾದಾರ ೫೧೬ (ಶೇ.೮೬) ಅಂಕ ಪಡೆದು ದ್ವಿತೀಯ ಸ್ಥಾನ, ಗಂಗಾಧರಯ್ಯ ಹಿರೇಮಠ ೫೧೩ (ಶೇ.೮೫.೫) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟು ೩೭ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, ೧೦೧ ವಿದ್ಯಾರ್ಥಿಗಳು ಪ್ರಥಮ, ೪೦ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ, ೫೬ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದಿದ್ದಾರೆ. ಮಹಾವಿದ್ಯಾಲಯದ ಒಟ್ಟು ಫಲಿತಾಂಶ ಶೇ.೭೧.೬೬ ರಷ್ಟಾಗಿದೆ.
೩೭ ವಿದ್ಯಾರ್ಥಿಗಳು ಅತ್ತುö್ಯನ್ನತ ಶ್ರೇಣಿಯಲ್ಲಿ, ೧೦೧ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ೪೦ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ೫೬ ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಇತಿಹಾಸ ವಿಷಯದಲ್ಲಿ ೬ ವಿದ್ಯಾರ್ಥಿಗಳು, ಕನ್ನಡ ವಿಷಯದಲ್ಲಿ ೪ ವಿದ್ಯಾರ್ಥಿಗಳು, ಶಿಕ್ಷಣಶಾಸ್ತç ವಿಷಯದಲ್ಲಿ ೩ ವಿದ್ಯಾರ್ಥಿಗಳು, ವ್ಯವಹಾರ ಅಧ್ಯಯನ ಹಾಗೂ ಭೂಗೋಳಶಾಸ್ತç ವಿಷಯದಲ್ಲಿ ಓರ್ವ ವಿದ್ಯಾರ್ಥಿಗಳು ೧೦೦ಕ್ಕೆ ೧೦೦ ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಸಂಸ್ಥೆಯ ಅಧ್ಯಕ್ಷ ಡಾ.ಸಂತೋಷಕುಮಾರ ಕರ್ಜಗಿ, ಗೌರವ ಕಾರ್ಯದರ್ಶಿ ಬಿ.ಪಿ.ಕರ್ಜಗಿ, ಮಾರ್ಗದರ್ಶಕ ಕೆ.ಎಚ್.ಸೋಮಾಪೂರ, ಆಡಳಿತಾಧಿಕಾರಿ ಆಯ್.ಬಿ.ಬಿರಾದಾರ, ಪ್ರಾಚಾರ್ಯ ಆರ್.ಬಿ.ಗೋಡಕರ, ಸೇರಿದಂತೆ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.