ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಅರಿಹಂತ ಚಾರಿಟೇಬಲ್ ಟ್ರಸ್ಟ್ಟಿನ ಪಿ.ಯು.ಸಿ. & ಬಿ.ಎಸ್.ಡಬ್ಲೂö್ಯ ಕಾಲೇಜು ಹಾಗೂ ಎಂ.ಬಿ.ಎಸ್. ಕಲಾ ಪ್ರಥಮ ದರ್ಜೆ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಭಗವಾನ ಗೋಮ್ಮಟೇಶ ಬಾಹುಬಲಿ ಸ್ವಾಮಿಯ ಸನ್ನಿದಾನದ ಅರಿಹಂತಗಿರಿಯಲ್ಲಿ ೨೬೨೩ ನೇ ಮಹಾವೀರ ತೀರ್ಥಂಕರರ ಜನ್ಮಕಲ್ಯಾಣೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ವೇಳೆ ಟ್ರಸ್ಟಿನ ಅಧ್ಯಕ್ಷ ಮಹಾವೀರ ಸಗರಿ ಮಾತನಾಡಿ, ಮಹಾವೀರ ಸ್ವಾಮಿಯ ದಿವ್ಯ ಸಂದೇಶಗಳಾದ ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ, ಅನೇಕಾಂತವಾದ, ಶಾಧ್ವಾದ ಮೂಲ ತತ್ವಗಳು ಅಹಿಂಸೆಯಿAದ ಜೀವಿಗಳ ರಕ್ಷಣೆಯಾಗುತ್ತದೆ, “ಅಹಿಂಸಾ ಪರಮೋ ಧರ್ಮ” ಎಂದು ಸಾರಿದ ಭನವಾನ ಮಹಾವೀರರ ತತ್ವಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಪರಿಶುದ್ಧದ ಜೊತೆಗೆ ಸನ್ಮಾರ್ಗದ ಕಡೆಗೆ ನಡೆದಂತಾಗುತ್ತದೆ ಎಂದರು.
ಮಹಾವೀರ ಭಗವಾನರು ಆದಿನಾಥ ತೀರ್ಥಂಕರರ ಮೊಮ್ಮಗನಾಗಿದ್ದು ದಿಗಂಬರ ಮುನಿಯಾಗಿ ಅವರು ಮೋಕ್ಷಗಾಮಿಯಾಗಲು ೨೩ ಬವಗಳು ಬೇಕಾಯಿತು. ೨೪ ನೇ ತೀರ್ಥಂಕರಾಗಿ ತಾಯಿ ತ್ರಿಶಲಾದೇವಿ ತಂದೆ ಸಿದ್ದಾರ್ಥ ಪುತ್ರನಾಗಿ ಬಿಹಾರ ರಾಜ್ಯದ ಕುಂಡಲಪುರದಲ್ಲಿ ಜನಿಸಿ ರಾಜ್ಯವೈಭವವಿದ್ದರು ಅದೆಲ್ಲವನ್ನು ತ್ಯಾಗಮಾಡಿ ದೀರ್ಘ ತಪಸ್ಸಿನಿಂದ ಕೇವಲ ಜ್ಞಾನವನ್ನು ಪಡೆದು ಮೋಕ್ಷಗಾಮಿಗಳಾದರು. ಸಹಬಾಳ್ವೆಯೇ ಭಾರತದ ಜೀವಾಳ ಗಾಡ ಧರ್ಮನಿಷ್ಠ ಸಮುದಾಯಗಳು ಮತ್ತು ಸಂಸ್ಕೃತಿಯನ್ನು ಹೊಂದಿರುವ ಭಾರತ ವಿಶ್ವದಲ್ಲೇ ಅತ್ಯಂತ ಹೆಚ್ಚು ಧಾರ್ಮಿಕ ವೈವಿಧ್ಯತೆಯುಳ್ಳ ದೇಶ. ಇಲ್ಲಿನ ಬಹುತೇಕ ಜನರ ಬದುಕಿನಲ್ಲಿ ಇಂದಿಗೂ ಧರ್ಮ ಮಹತ್ವದ ಪಾತ್ರ ವಹಿಸಿದ್ದರೂ, ನಾಸ್ತಿಕರು ಮತ್ತು ಆಜ್ಞೇಯತಾವಾದಿಗಳೂ ಕೂಡ ಒಟ್ಟಿಗೆ ಬದಕುತ್ತಿದ್ದಾರೆ. ವಿವಿಧ ಧರ್ಮೀಯರ, ಧರ್ಮಗಳ ನಡುವೆ ಸಾಮರಸ್ಯದ ಸಹಬಾಳ್ವೆ ಭಾರತೀಯ ಸಂಸ್ಕೃತಿ ಭಗವಾನ್ ಮಹಾವೀರ ಸ್ವಾಮಿಯ ದಿವ್ಯ ಸಂದೇಶ. ಪರಪಸ್ಪರ ಸಹಕಾರದಿಂದ ಪ್ರಗತಿ ಸಾಧ್ಯ. ಇನ್ನೊಬ್ಬರಿಗೆ ಕೆಡನ್ನು ಬಯಸುವದರಿಂದ ಕರ್ಮವು ಬಿಡದೆ ಬೆಂಬತ್ತಿ ಬರುವುದು, ತನಗಿಂತ ಕನಿಷ್ಟರಾದವರ ಬಗ್ಗೆ ಪಶು-ಪಕ್ಷಿ, ಪ್ರಾಣಿ ಸಸ್ಯ ಸಂಕುಲನದ ಬಗ್ಗೆ ಜೀವ ದಯೇ ಇರಲಿ, ಅನ್ನದಾನ, ಅಭಯದಾನ ಶಾಸ್ತçದಾನ, ವಿದ್ಯಾದಾನ ಶ್ರೇಷ್ಠದಾನಗಳು ಎಂದು ಸಾರಿದ ಭಗವಾನ್ ಮಹಾವೀರರು ಮಹಾನ್ ಸನ್ಯಾಸಿ ಎಂದರು.
ಕಾರ್ಯಕ್ರಮದಲ್ಲಿ ಗೊಮ್ಮಟೇಶ್ವರ ಸಗರಿ, ಲಲಿತಾ ಸಗರಿ, ಮಾಣಿಕ ಸಗರಿ, ಅನಿಲಕುಮಾರ ಸಗರಿ, ಸುನಿತಾ ಸಗರಿ, ರಾಜೇಶ್ವರಿ, ಮಹಾವೀರ ಮಂಕಣಿ, ಕಾಲೇಜಿನ ಪ್ರಾಚಾರ್ಯ ವಿಪುಲ್ ಸಗರಿ, ಸಿಬ್ಬಂದಿಗಳಾದ ಅಕ್ಷತಾ ಸಗರಿ, ನಮ್ರತಾ ಸಗರಿ, ಜಿ.ಡಿ.ಬಡಿಗೇರ, ಅಶೋಕ ಎಚ್. ಹೆಚ್.ಎಸ್.ಗೌಡರ್, ಬಸವರಾಜ ಬಡಿಗೇರ, ಶ್ರೀಶೈಲ್ ಹತ್ತಿ, ಸಮೀರ್ ಬಿ, ರೋಹಿನಿ ನಾಯ್ಕೋಡಿ, ಅವಿನಾಶ ಪಂಪಣ್ಣವರ್, ರವಿ ಮರೋಳ, ಗದ್ಯಪ್ಪ ಕುಂದರಗಿ ಹಾಗೂ ವಿದ್ಯಾರ್ಥಿಗಳು ಇದ್ದರು.