ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಮಹಾವೀರ ಜಯಂತಿಯಂಗವಾಗಿ ತಾಲೂಕಾಡಳಿತದಿಂದ ಗುರುವಾರ ಮಹಾವೀರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಹಾವೀರ ಜಯಂತಿಯನ್ನು ಆಚರಿಸಲಾಯಿತು.
ಪೂಜೆಯನ್ನು ಉಪತಹಸೀಲ್ದಾರ ಎಂ.ಎಸ್.ಜಾಗೀರದಾರ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ ಎ.ಎ.ಉಪಾಧ್ಯೆ ಅವರು ಮಹಾವೀರ ಜೀವನ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಶಿರಸ್ತೇದಾರ ಎ.ಎಚ್.ಬಳೂರಗಿ, ತಹಸೀಲ್ದಾರ ಕಚೇರಿಯ ಸಿಬ್ಬಂದಿಗಳಾದ ಗುರುರಾಜ ಗಡಗಿ, ಮಂಜು ಹಳ್ಳೂರ, ರಾಮಚಂದ್ರ ಘಾಟಗೆ, ವಿಲಾಸ ಜಾಡರ, ಕ್ಷೇತ್ರಸಮನ್ವಾಯಾಧಿಕಾರಿ ಸುನೀಲ ನಾಯಕ,ಸಿಆರ್ಪಿ ಮಹೇಶ ಪೂಜಾರಿ, ಹಿಂದುಳಿತ ವರ್ಗಗಳ ಇಲಾಖೆಯ ಸಿ.ಜಿ.ಬಿರಾದಾರ, ತಾಲೂಕು ಪಂಚಾಯಿತಿಯ ಸಿಬ್ಬಂದಿ ರಾಜೇಶ್ವರಿ ಆಸಂಗಿ, ಜೈನ ಸಮುದಾಯ ಬಾಂಧವರಾದ ಅಪ್ಪು ದಂಡಾವತಿ, ಬಾಹುಬಲಿ ದಂಡಾವತಿ, ಮಹಾವೀರ ಹೊಸಮನಿ, ಪಾರೀಷ ಹೊಸಮನಿ, ವಿದ್ಯಾಧರ ಉಪಾಧ್ಯೆ, ಪ್ರವೀಣ ದಂಡಾವತಿ, ಪ್ರಮೋದ ದಂಡಾವತಿ, ದಯಾಸಾಗರ ಉಪಾಧ್ಯೆ, ಸಂಜೀವ ಬೋಗಾರ, ಡಿಎಸ್ಎಸ್ ಮುಖಂಡರಾದ ಮಹಾಂತೇಸ ಸಾಸಾಬಾಳ, ಪರಶುರಾಮ ದಿಂಡವಾರ, ಗುರುರಾಜ ಗುಡಿಮನಿ ಇತರರು ಇದ್ದರು.