ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸರಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಯಿತು.
ಮುದ್ದೇಬಿಹಾಳ: ಬುಧವಾರ ನಿಡಗುಂದಿ ಹೈವೇ ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ತಾಲೂಕಿನ ಕಾಳಗಿ ತಾಂಡಾದ ಬಿಎಸ್‌ಎಫ್ ಯೋಧ ಮೌನೇಶ ರಾಠೋಡ ಅಂತ್ಯಕ್ರಿಯೆ ಗುರುವಾರ ಬೆಳಗ್ಗೆ ಸಕಲ ಸರಕಾರಿ ಗೌರವದೊಂದಿಗೆ ನಡೆಯಿತು.
ಮಹಾರಾಷ್ಟ್ರದ ಲಾತೂರ ಬಟಾಲಿಯನ್ ಇನ್ಸಪೆಕ್ಟರ್ ಜಿತೇಂದ್ರ ಸಿಂಗ ಹಾಗೂ ಕಾನ್ಸ್ಟೇಬಲ್ ವೇಣುಗೋಪಾಲ ನೇತೃತ್ವದ ೧೧ ಜನ ಯೋಧರ ತಂಡ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಸಿಪಿಆಯ್ ಮಹಮ್ಮದ ಫಸಿಯುದ್ಧಿನ್, ಪಿಎಸ್‌ಐ ಸಂಜಯ ತಿಪರೆಡ್ಡಿ, ನಿವೃತ್ತ ಸೈನಿಕರು ಪುಷ್ಪಗುಚ್ಚ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು.
ಯೋಧನ ಪತ್ನಿ ನಿರ್ಮಲಾ, ಮಕ್ಕಳಾದ ಆರುಷಿ, ಆದರ್ಶ ಸೇರಿದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಯೋಧನ ಪಾರ್ಥೀವ ಶರೀರದ ಮೇಲಿದ್ದ ರಾಷ್ಟ್ರಧ್ವಜವನ್ನು ಸೇನೆಯ ಅಧಿಕಾರಿಗಳು ಕುಟುಂಬಕ್ಕೆ ಹಸ್ತಾಂತರಿಸಿದರು. ಪಿ.ಎಲ್.ಡಿ ಬ್ಯಾಂಕ ಅಧ್ಯಕ್ಷ ಬಿ.ಕೆ.ಬಿರಾದಾರ, ಮುಖಂಡ ಸಂತೋಷ ಚವ್ಹಾಣ, ಗ್ರಾ.ಪಂ ಸದಸ್ಯ ಶಿವಾನಂದ ಲಮಾಣಿ, ಸತೀಶ ರಾಠೋಡ, ಮಾಜಿ ಸೈನಿಕರಾದ ರಾಚಯ್ಯ ಹಿರೇಮಠ, ನಾನಪ್ಪ ನಾಯಕ, ನಾಗಯ್ಯ ನಡವಿನಮಠ, ಅಬ್ದುಲಜಬ್ಬರ ಪಲ್ಟಾನ, ಗೋಪಾಲ ಚವ್ಹಾಣ, ಅಶೋಕ ಚವ್ಹಾಣ, ಸೇರಿದಂತೆ ಹಲವರು ಅಗಲಿದ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.