ಉದಯರಶ್ಮಿ ದಿನಪತ್ರಿಕೆ
ಇಂಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತೊಗರಿ ಬೆಳೆಗೆ ಪರಿಹಾರ ಮತ್ತು ಕೃಷ್ಣಾ ಮುಖ್ಯ ಕಾಲುವೆಯಿಂದ ಕೃಷಿಗೆ ನೀರು ಬಿಡುವ ಕುರಿತು ಅಹೋರಾತ್ರಿ ಧರಣಿ ನಾಲ್ಕನೆಯ ದಿನ ಕಂದಾಯ ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಮತ್ತು ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಬೇಟಿ ನೀಡಿ ಭರವಸೆ ನೀಡಿದ ನಿಮಿತ್ಯ ಹೋರಾಟ ಅಂತ್ಯ ಗೊಂಡಿದೆ ಎಂದು ಕರವೇ ಅಧ್ಯಕ್ಷ ಬಾಳು ಮುಳಜಿ ಹೇಳಿದರು.
ಎಸಿ ಅನುರಾಧಾ ವಸ್ತ್ರದ ಮಾತನಾಡಿ, ನೀವು ಮನವಿ ಕೊಡಿ ನಾವು ಅದನ್ನು ಜಿಲ್ಲಾಧಿಕಾರಿಗಳಿಗೆ ಮುಟ್ಟಿಸುತ್ತೇವೆ ಮತ್ತು ಜಿಲ್ಲಾಧಿಕಾರಿ ಮೇಲಾಧಿಕರ ಮಾಹಿತಿ ನೀಡುವರು. ಮತ್ತು ಶಾಸಕರಿಗೂ ಈ ವಿಷಯದ ಕುರಿತು ಮಾಹಿತಿ ನೀಡುತ್ತೆವೆ. ಪ್ರಾಮಾಣಿಕವಾಗಿ ರೈತರಿಗೆ ನ್ಯಾಯ ಒದಗಿಸಿ ಕೊಡುತ್ತೇವೆ ಎಂಬ ಭರವಸೆ ನಿಮಿತ್ಯ ರೈತರು ಮತ್ತು ಕರವೇ ಹೋರಾಟಗಾರರು ಧರಣಿ ಹಿಂದೆ ಪಡೆದರು.
ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರವರು ಮಾತನಾಡಿ ಕಾನೂನು ಚೌಕಟ್ಟಿನಲ್ಲಿ ಇದ್ದರೆ ಮಾತ್ರ ಪರಿಹಾರ ಬರುತ್ತದೆ. ಸರಕಾರ ಮಾರ್ಗಸೂಚಿ ಪ್ರಕಾರವೇ ನಾವು ಹೇಳಬೇಕಾಗುತ್ತದೆ. ನಿಮ್ಮ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದರು.
ಕಳೆದ ಐದು ವರ್ಷಗಳ ತೊಗರಿ ಬೆಳೆಯ ಇಳುವರಿ ಸರಾಸರಿ ಮತ್ತು ಈ ವರ್ಷದ ಇಳುವರಿಗಿಂತ ಕಡಿಮೆ ಇದ್ದರೆ ಮಾತ್ರ ಪರಿಹಾರ ಬರುವದಾಗಿ ತಿಳಿಸಿದರು.
ಕೃಷ್ಣಾ ಮೇಲ್ದಂಡೆ ನೀರಾವರಿ ಅಧಿಕಾರಿ ಎಇಇ ವಿಜಯಕುಮಾರ ಮಾತನಾಡಿ, ಕೃಷ್ಣಾ ಕಾಲುವೆಗೆ ಕುಡಿಯುವ ಕುರಿತು ನೀರು ಬಿಡುತ್ತೇವೆ ಆದರೆ ದಿನಾಂಕ ನಿಗದಿ ಯಾಗಿಲ್ಲ. ದಿನಾಂಕ ನಿಗದಿಯಾದ ಕೂಡಲೇ ನೀರು ಬಿಡುವದಾಗಿ ಭರವಸೆ ನೀಡಿದರು.
ಹೋರಾಟಗಾರರ ಪರವಾಗಿ ಕರವೇ ಅಧ್ಯಕ್ಷ ಬಾಳು ಮುಳಜಿ, ಪ್ರೊ ವಿಜಯಕುಮಾರ ರಾಠೋಡ, ಅನೀಲಗೌಡ ಬಿರಾದಾರ ಮಾತನಾಡಿದರು.
ಮಹೇಶ ಹೂಗಾರ, ಧರ್ಮರಾಜ ಸಾಲೋಟಗಿ, ಮಂಜು ದೇವರ, ಪ್ರಶಾಂತ ಲಾಳಸಂಗಿ,ಮಲ್ಲು ಗುಡ್ಲ, ಭೀಮಾಶಂಕರ ಆಳೂರ, ಪ್ರಶಾಂತ ಗೌಳಿ, ಭಾಗೇಶ ಮಲಘಾಣ, ಸಚೀನ ನಾವಿ,ಅರವಿಂದ ಪಾಟೀಲ, ಮಲ್ಲು ದೇವರ, ಶ್ರೀಕಾಂತ ಬಡಿಗೇರ, ಪ್ರದೀಪ ಬೊರಟಗಿ, ಕಲ್ಲು ಮೊಸಲಗಿ, ಶಾಂತೇಶ ಕ್ಷತ್ರಿ, ಸಾಗರ ಬಿರಾದಾರ, ನಿಲೇಶ ಪಾಟೀಲ, ರಾಮಸಿಂಗ ಕನ್ನೊಳ್ಳಿ, ಮಹೇಶ ಕುಂಬಾರ ಅಶೋಕ ಅಕಲಾದಿ ಮತ್ತಿತರಿದ್ದರು.

