Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮ ಸೇರಿದಂತೆ ವಿವಿಧೆಡೆ ಅಬ್ಬರದ ಗಾಳಿ, ಗುಡುಗು-ಸಿಡಿಲು ಮಂಗಳವಾರ ಸಂಜೆ ಕಂಡುಬಂದಿತ್ತಾದರೂ ಹೇಳಿಕೊಳ್ಳುವಷ್ಟು ಮಳೆಯಾಗಿಲ್ಲ. ತಾಲೂಕಿನ ಇಂಗಳೇಶ್ವರ ಗ್ರಾಮದ ಹೊರವಲಯದಲ್ಲಿ ಮುದ್ದೇಬಿಹಾಳ ತಾಲೂಕಿನ ಕೊಪ್ಪ ಎಲ್ಟಿ ಗ್ರಾಮದಿಂದ ಉಳ್ಳಾಗಡ್ಡಿ ಆರಿಸುವ ಕೆಲಸಕ್ಕೆಂದು ಬಂದಿದ್ದ ಸುನೀತಾ ಕಾಂತೇಶ ಲಮಾಣಿ(34) ಎಂಬುವವರಿಗೆ ಅಬ್ಬರದ ಗಾಳಿಯಿಂದ ಹಾರಿ ಬಂದ ತಗಡಿನ ಶೆಡ್ ಶೀಟ್ ಮಹಿಳೆಯ ಕುತ್ತಿಗೆಗೆ ಬಡಿದ ಪರಿಣಾಮ ಮಹಿಳೆಯು ಮೃತ ಪಟ್ಟ ಘಟನೆ ಜರುಗಿದೆ.ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ಬಸವನಬಾಗೇವಾಡಿ ಪೊಲೀಸ್ ಠಾಣೆಯ ಪಿಐ ಗುರುಶಾಂತ ದಾಶ್ಯಾಳ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಬರುವ ೧೨೮ ಗ್ರಾಮಗಳಲ್ಲಿ, ೩೧ ತಾಂಡಾಗಳಲ್ಲಿ ಯಾವ ಸಮಸ್ಯೆಗಳಿವೆ ಎಂಬುವದನ್ನು ಅರಿತು ಅಗತ್ಯತೆ ಇರುವ ಕಾಮಗಾರಿಗಳನ್ನು ಮತಕ್ಷೇತ್ರದಲ್ಲಿ ಆದ್ಯತೆ ಮೇರೆಗೆ ಮೊದಲು ಕೈಗೊಳ್ಳುವ ಮೂಲಕ ಮತಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡುವ ಮೂಲಕ ಮತಕ್ಷೇತ್ರದ ಮತದಾರರ ಋಣ ತೀರಿಸುವುದಾಗಿ ದೇವರಹಿಪ್ಪರಗಿ ಶಾಸಕ ಭೀಮನಗೌಡ(ರಾಜುಗೌಡ) ಪಾಟೀಲ ಹೇಳಿದರು.ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ೫೦೫೪ ಸಿಆರ್ಐಎಫ್ ೨೦೨೩-೨೪ ಸಾಲಿನ ಕೇಂದ್ರ ರಸ್ತೆ ನಿಧಿ ಯೋಜನೆಯಡಿಯಲ್ಲಿ ಅಂದಾಜು ರೂ.೬ ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ವಿಜಯಪುರ-ಉಕ್ಕಲಿ-ದಿಂಡವಾರ-ಸಾಸನೂರ ರಸ್ತೆ(ಆಯ್ದ ಭಾಗಗಳಲ್ಲಿ) ಸುಧಾರಣೆ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಆಡಳಿತ ಸರ್ಕಾರದ ಟೀಕೆ ಮಾಡಲು ನಾನು ಹೋಗಲ್ಲ. ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆಯಾಗುತ್ತಿದೆ ಎಂಬುವದು ಜಗಜಾಹೀರರಾಗಿದೆ. ಇಂತಹ ಸನ್ನಿವೇಶದಲ್ಲಿಯೂ ನಾನು ವಿವಿಧ ಇಲಾಖೆಗಳನ್ನು ಸಂಪರ್ಕಿಸಿ ಮತಕ್ಷೇತ್ರದಲ್ಲಿರುವ ಗ್ರಾಮಗಳಿಗೆ ಬೇಕಾದ ಅಭಿವೃದ್ಧಿ ಕಾಮಗಾರಿಗೆ ಬೇಕಾದ ಅನುದಾನ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಇಂಡೋ-ನೇಪಾಳದ ನಡುವೆ ನಡೆಯುತ್ತಿರುವ ಅಂತಾರಾಷ್ಟ್ರೀಯ ಯುತ್ ಕಬಡ್ಡಿ ಸರಣಿಗೆ ಸಿಂದಗಿ ಜೈಭೀಮ ದಳದ ತಾಲೂಕಾಧ್ಯಕ್ಷ ಆನಂದ ಮಾಣಸುಣಗಿ ಅವರ ಮಗ ಪ್ರಮೋದ ಮಾಣಸುಣಗಿ ಅವರು ಆಯ್ಕೆಯಾಗಿ ಪಾಲ್ಗೊಳ್ಳಲಿದ್ದಾರೆ.ಅವರಿಗೆ ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ಸಂತೋಷ ಮಣಿಗಿರಿ, ಪ್ರವೀಣ ಹಾಲಹಳ್ಳಿ, ಜೈಭೀಮ ಕೂಚಬಾಳ ಸೇರಿದಂತೆ ಸಮಸ್ತ ಸಿಂದಗಿ ತಾಲೂಕಿನ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಇತ್ತೀಚೆಗೆ ಬೆಂಗಳೂರಿನ ಬಿಡದಿಯಲ್ಲಿರುವ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ದಿ.ಎನ್.ಮುತ್ತಪ್ಪ ರೈ ಅವರ ಮನೆಯ ಹತ್ತಿರ ಕೆಲ ದುಷ್ಕರ್ಮಿಗಳು ಬಂದು, ಎನ್.ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಲ್ಲದೆ ಅವರ ವಾಹನ ಚಾಲಕನ ಮೇಲೂ ಕೂಡ ಗುಂಡಿನ ದಾಳಿ ನಡೆಸಿದ್ದು, ತೀವ್ರ ಖಂಡನೀಯ ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕಾಧ್ಯಕ್ಷ ಸಂತೋಷ ಮನಗೂಳಿ ಹೇಲಿದ್ದಾರೆ.ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ ಅವರು, ಈ ಘಟನೆಯಿಂದ ರಾಜ್ಯದ ಜನತೆಯಲ್ಲಿ ಭಯಾನಕ ವಾತವರಣ ನಿರ್ಮಾಣವಾಗಿದೆ. ಅವರ ಮೇಲೆ ದಾಳಿ ನಡೆಸಿದವರಿಗೆ ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Read More

ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಯುವಕರಿಗೆ ಆಧ್ಯಾತ್ಮಿಕ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಆಧ್ಯಾತ್ಮಿಕ ಸತ್ಸಂಗದಲ್ಲಿ ಭಾಗವಹಿಸುವಂತೆ ಗುರು ಹಿರಿಯರು ಕುಟುಂಬದಲ್ಲಿ ತಂದೆ-ತಾಯಿ ಅವರಿಗೆ ಮಾರ್ಗದರ್ಶನ ನೀಡುವುದು ಅವಶ್ಯವಿದೆ ಎಂದು ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.ತಾಲೂಕಿನ ಬಂದಾಳ ಗ್ರಾಮದ ಬಸಯ್ಯ ಮುತ್ಯಾನ ಮಠದಲ್ಲಿ ಸಾರಂಗಮಠದ ಲಿಂ.ಸಿದ್ಧಲಿಂಗ ಶಿವಾಚಾರ್ಯರಿಂದ ಅನುಗ್ರಹಿತ ಮಹಾಮಹಿಮ ಶ್ರೀ ಬಸಯ್ಯ ಮುತ್ಯಾನ ಹಿರೇಮಠದ ಜಾತ್ರೆ ಹಾಗೂ ಜಗನ್ಮಾತೆ ಶ್ರೀದೇವಿ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ಗೊಲಗೇರಿ ಶ್ರೀ ಗೊಲ್ಲಾಳೇಶ್ವರ ಮಹಾಪುರಾಣ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ದಿನ ಸತ್ಯದ ಸಹವಾಸ ಮಾಡಿದಾಗ ಸತ್ಸಂಗವಾಗುತ್ತದೆ. ಆದ್ದರಿಂದ ಆಧ್ಯಾತ್ಮಿಕ ಹಾದಿಯಲ್ಲಿ ನಡೆಯಲು ಪ್ರಾರಂಭಿಸುವದರಿಂದ ಆಧ್ಯಾತ್ಮಿಕ ಜ್ಞಾನವನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.ಈ ವೇಳೆ ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಭಾಗವಹಿಸಿ ಮಾತನಾಡಿದರು. ಸಿದ್ದರಾಮ ಕುಳಕುಮಟಗಿ, ಸಿದ್ದರಾಮ ಬ್ಯಾಕೋಡ ಸಂಗೀತ ಸೇವೆ ನೀಡಿದರು. ಸಮಾರಂಭದಲ್ಲಿ ವಿಶ್ವನಾಥ ಕುರಡಿ, ದುಳಪ್ಪಗೌಡ ಬಿರಾದಾರ, ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘದ…

Read More

ಬಿ ಲ್ ಡಿ‌ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎನ್ ಸಿ ಸಿ ಜೈ ಹಿಂದ್ ಎಂದು ಆರಂಭವಾಗುವ ಹಾಗೂ ಜೈ ಹಿಂದ್ ಕೊನೆಗೊಳ್ಳುವ ಒಂದು ಘಟಕ. ಆರ್ಮಿ ಕನಸು ಹೊತ್ತ ಎಷ್ಟೋ ಯುವಕ ಯುವತಿಯರ ಮಾರ್ಗದರ್ಶನದ ಶಾಖೆಯೇ ರಾಷ್ಟ್ರೀಯ ಕಾಡೆಟ್ ಕ್ರಾಪ್ಸ್ ಎಂದು ಕರ್ನಲ್ ಬಿ ಕೆ ಕೆ ವಂಶಿ ಹೇಳಿದರು.ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಾಲೇಜಿನ ಎನ್ ಸಿ ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಕಾಡೆಟ್ಸ್ಗಳಿಗೆ ನಿಮ್ಮ ಮುಂದಿನ ಜೀವನ ಉಜ್ವಲವಾಗಿ ಬೆಳಗಲಿ, ಮತ್ತು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಗಳಲ್ಲಿ ಭಾಗವಹಿಸಲು ತಿಳಿಸಿದರು.ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ. ಅನಿಲ್ ಬಿ ನಾಯಕ್ ಮಾತನಾಡಿ ಕಾಡೆಟ್ಗಳಿಗೆ ನಿಮ್ಮ‌ ಒಳ್ಳೆಯ ನಾಯಕತ್ವ ಗುಣದೊಂದಿಗೆ ಉತ್ತಮವಾದ ಜೀವನ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಪ್ರಧಾನಮಂತ್ರಿ ಕುಸುಮ-ಬಿ ಮತ್ತು ಸಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ ಅನುಷ್ಠಾನಗೊಳಿಸಲಾಗುತ್ತಿದ್ದು, ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪ್ರಧಾನಮಂತ್ರಿ ಕುಸುಮ ಸಿ ಯೋಜನೆ ಅನುಷ್ಠಾನಗೊಳಿಸಿ ರೈತರಿಗೆ ನಿರಂತರವಾಗಿ ಏಳು ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ಹೆಸ್ಕಾಂ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.ಪ್ರಧಾನಮಂತ್ರಿ ಕುಸುಮ-ಬಿ ಯೋಜನೆಯಡಿ ೧೬೪ ನೀರಾವರಿ ಪಂಪಸೆಟ್‌ಗಳ ಪೈಕಿ ೨೭ ನೀರಾವರಿ ಪಂಪಸೆಟ್‌ಗಳಿಗೆ ಸೌರಶಕ್ತಿ ಚಾಲಿತ ಪಂಪಸೆಟ್‌ಗಳನ್ನು ಅಳವಡಿಸಲಾಗಿದೆ. ಉಳಿದ ಫಲಾನುಭವಿಗಳ ಕಾಮಗಾರಿ ಪ್ರಗತಿಯಲ್ಲಿದೆ. ಈ ಯೋಜನೆಯಿಂದ ರೈತರಿಗೆ ಹಗಲು ವೇಳೆಯಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ಸೌರಮಿತ್ರ ಪೋರ್ಟಲ್ ಮೂಲಕ ೨೨೯೫ ರೈತರು ಸೋಲಾರ್ ಪಂಪಸೆಟ್ ಅಳವಡಿಸಿಕೊಳ್ಳಲು ನೊಂದಾಯಿಸಿಕೊಂಡಿದ್ದು, ಸ್ಥಳಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ.ಪ್ರಧಾನಮಂತ್ರಿ ಕುಸುಮ-ಸಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು ೧೭ ವಿದ್ಯುತ್ ಉಪ ಕೇಂದ್ರಗಳ ಮೂಲಕ ೪೦ ವಿದ್ಯುತ್ ಮಾರ್ಗಗಳನ್ನು ಸೌರೀಕರಣ ಮಾಡಲು ಉದ್ಧೇಶಿಸಿ, ೮೭.೭೧ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ. ದಿನಾಂಕ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣದ ವಾರ್ಡ ನಂ ೧೭ ರ ಕರಿಮ ನಗರ, ಬಾಗವಾನ ನಗರ ಮತ್ತು ಮಾಡೆಲ ಸ್ಕೂಲ್ ಪ್ರದೇಶ ಹೋಗುವ ದಾರಿಗಳಲ್ಲಿ ಗಟಾರು ನೀರು ರಸ್ತೆ ಮೇಲೆ ಬರುತ್ತಿದೆ.ಕೆಲವು ಕಡೆ ಗಟಾರು ಮಾಡಿದ್ದು ಅವುಗಳಲ್ಲಿ ಕೆಲವನ್ನು ಅರ್ಧಕ್ಕೆ ನಿಲ್ಲಿಸಿ ಗಟಾರದಲ್ಲಿ ಕಾಂಕ್ರೀಟ್ ಹಾಕಿ ಗಟಾರು ನೀರು ಮುಂದೆ ಹೋಗದಂತೆ ಮಾಡಿದ್ದಾರೆ.ಮತ್ತು ಕೆಲವು ಕಡೆ ಗಟಾರು ಅರ್ಧಕ್ಕೆ ಬಂದ್ ಮಾಡಿ ಅಲ್ಲಿಂದ ಗಟಾರ ನೀರನ್ನು ಅದರ ಎದುರಿನ ಗಟಾರಕ್ಕೆ ತಿರುವು ನೀಡಿ ಎದುರಿನ ಗಟಾರಕ್ಕೆ ನೀರು ಹೋಗುವಂತೆ ಮಾಡಿದ್ದಾರೆ.ವ್ಯವಸ್ಥೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಅಲ್ಲಿ ಯ ಕೊಳಚೆ ನೀರಿನಿಂದ ಸಾರ್ವಜನಿಕರು ರೋಗಗಳಿಂದ ನರಳುತ್ತಿದ್ದಾರೆ.ಈ ಕುರಿತು ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ.ಕೂಡಲೇ ಸ್ಪಂದಿಸದಿದ್ದರೆ ಹೋರಾಟ ಮಾಡುವದಾಗಿ ನಗರ ನಿವಾಸಿಗಳು ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ನಗರದ ವಿವಿಧ ವಾರ್ಡ ಜನರಿಗೆ, ರೈತರಿಗೆ, ಮಹಿಳೆಯರಿಗೆ ಮತ್ತು ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ನಗರ ಸಾರಿಗೆ ವ್ಯವಸ್ಥೆ ಇಂದಿನಿಂದ ಪ್ರಾರಂಭಮಾಡಿದ್ದು ಸದುಪಯೋಗ ಪಡೆಯಲು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆ.ಎಸ್.ಆರ್.ಟಿ ಸಿಯಿಂದ ಇಂಡಿಯಲ್ಲಿ ನಗರ ಸಭೆಗೆ ಬಸ್ ಗೆ ಚಾಲನೆ ನೀಡಿ ಮಾತನಾಡಿದರು.ನಿಜವಾಗಲೂ ಬಸ್ ನಿಲ್ದಾಣದಲ್ಲೆ ಚಾಲನೆ ನೀಡಬೇಕಾಗಿತ್ತು. ಆದರೆ ಬಸ್ ನಿಲ್ದಾಣ ಸ್ವಚ್ಷತೆ ಇಲ್ಲದೆ ಅವ್ಯವಸ್ಥಿತೆಯಿಂದ ಕೂಡಿದ್ದರಿಂದ ನಗರ ಬಸ್ ಸಾರಿಗೆ ಪ್ರವಾಸಿ ಮಂದಿರದಲ್ಲಿ ಚಾಲನೆ ನೀಡಲಾಯಿತು. ಬಹುದಿನಗಳ ಹಿಂದೆ ನಗರ ಸಾರಿಗೆ ಮಾಡಬೇಕಾಗಿತ್ತು. ಆದರೆ ಅಧಿಕಾರಿಗಳ ಜವಾಬ್ದಾರಿ ಕೊರತೆಯಿಂದ ತಡವಾಗಿದೆ ಎಂದು ಸೂಕ್ಷ್ಮವಾಗಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಜಿಲ್ಲೆಯಲ್ಲಿ ಅತ್ಯಂತ ಜನ ಸಂಖ್ಯೆ ಹೊಂದಿರುವ ತಾಲ್ಲೂಕು ಹಾಗೂ ನಗರ. ಈ ಭಾಗದ ಜನರಿಗೂ ಎಲ್ಲಾ ರೀತಿಯಲ್ಲೂ ಸರಕಾರದ ಸೌಲಭ್ಯ, ಸೌಕರ್ಯ ಸಿಗಬೇಕು ಎಂದು ಹೇಳಿದರು.ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಮಾತನಾಡಿ ಇಂದಿನಿಂದ ಎರಡು ನಗರ ಬಸ್ ಗೆ ಚಾಲನೆ…

Read More

ಸಂಕನಾಳ ಶಾಖಾ ಕಾಲುವೆಯಿಂದ ಹೂವಿನಹಿಪ್ಪರಗಿ ಹೋಬಳಿ ವ್ಯಾಪ್ತಿಯಲ್ಲಿ ಇನ್ನೂ ಬಾಕಿಯಿರುವ ೨ ಕಿ.ಮೀ ವಿತರಣಾ ಕಾಲುವೆ ನಿರ್ಮಾಣಕ್ಕೆ ಆಗ್ರಹ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಮುಳವಾಡ ಏತ ನೀರಾವರಿ ಯೋಜನೆಯ ಸಂಕನಾಳ ಶಾಖಾ ಕಾಲುವೆಯಿಂದ ಹೂವಿನಹಿಪ್ಪರಗಿ ಹೋಬಳಿ ವ್ಯಾಪ್ತಿಯಲ್ಲಿ ಇನ್ನೂ ಬಾಕಿಯಿರುವ ೨ ಕಿ.ಮೀ ವಿತರಣಾ ಕಾಲುವೆ ನಿರ್ಮಾಣಕ್ಕೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ಮಂಗಳವಾರ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿತು.ಇಲ್ಲಿಯ ರಾಮಲಿಂಗೇಶ್ವರ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಲಾಯಿತು. ಹಲಗೆ ವಾದನ, ಎತ್ತುಗಳೊಂದಿಗೆ ಮೆರವಣಿಗೆ ನಡೆಯಿತು.ಧರಣಿನಿರತರನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ಅರವಿಂದ ಕುಲಕರ್ಣಿ, ಕಳೆದ ತಿಂಗಳು ಹೋರಾಟ ಮಾಡಿದಾಗ ೧೫ ದಿನಗಳಲ್ಲಿ ಬಾಕಿ ಉಳಿದ ವಿತರಣಾ ಕಾಲುವೆಯ ಕಾಮಗಾರಿ ಆರಂಭಿಸುವ ಬಗ್ಗೆ ಕೆಬಿಜೆಎನ್ಎಲ್ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಒಂದು ತಿಂಗಳು ಗತಿಸಿದರೂ ಇನ್ನೂ ಕಾಮಗಾರಿ ಆರಂಭಿಸಿಲ್ಲ, ಸುಳ್ಳು ಹೇಳಿ ರೈತರ ದಾರಿತಪ್ಪಿಸುತ್ತಿದ್ದಾರೆ, ಬೇಸಿಗೆಯಲ್ಲಿ ಹಳ್ಳಿಗಳಲ್ಲಿ…

Read More