ಉದಯರಶ್ಮಿ ದಿನಪತ್ರಿಕೆ
ಇಂಡಿ: ಪಟ್ಟಣದ ವಾರ್ಡ ನಂ ೧೭ ರ ಕರಿಮ ನಗರ, ಬಾಗವಾನ ನಗರ ಮತ್ತು ಮಾಡೆಲ ಸ್ಕೂಲ್ ಪ್ರದೇಶ ಹೋಗುವ ದಾರಿಗಳಲ್ಲಿ ಗಟಾರು ನೀರು ರಸ್ತೆ ಮೇಲೆ ಬರುತ್ತಿದೆ.
ಕೆಲವು ಕಡೆ ಗಟಾರು ಮಾಡಿದ್ದು ಅವುಗಳಲ್ಲಿ ಕೆಲವನ್ನು ಅರ್ಧಕ್ಕೆ ನಿಲ್ಲಿಸಿ ಗಟಾರದಲ್ಲಿ ಕಾಂಕ್ರೀಟ್ ಹಾಕಿ ಗಟಾರು ನೀರು ಮುಂದೆ ಹೋಗದಂತೆ ಮಾಡಿದ್ದಾರೆ.
ಮತ್ತು ಕೆಲವು ಕಡೆ ಗಟಾರು ಅರ್ಧಕ್ಕೆ ಬಂದ್ ಮಾಡಿ ಅಲ್ಲಿಂದ ಗಟಾರ ನೀರನ್ನು ಅದರ ಎದುರಿನ ಗಟಾರಕ್ಕೆ ತಿರುವು ನೀಡಿ ಎದುರಿನ ಗಟಾರಕ್ಕೆ ನೀರು ಹೋಗುವಂತೆ ಮಾಡಿದ್ದಾರೆ.
ವ್ಯವಸ್ಥೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಅಲ್ಲಿ ಯ ಕೊಳಚೆ ನೀರಿನಿಂದ ಸಾರ್ವಜನಿಕರು ರೋಗಗಳಿಂದ ನರಳುತ್ತಿದ್ದಾರೆ.
ಈ ಕುರಿತು ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ.
ಕೂಡಲೇ ಸ್ಪಂದಿಸದಿದ್ದರೆ ಹೋರಾಟ ಮಾಡುವದಾಗಿ ನಗರ ನಿವಾಸಿಗಳು ತಿಳಿಸಿದ್ದಾರೆ.

