ಬಿ ಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಎನ್ ಸಿ ಸಿ ಜೈ ಹಿಂದ್ ಎಂದು ಆರಂಭವಾಗುವ ಹಾಗೂ ಜೈ ಹಿಂದ್ ಕೊನೆಗೊಳ್ಳುವ ಒಂದು ಘಟಕ. ಆರ್ಮಿ ಕನಸು ಹೊತ್ತ ಎಷ್ಟೋ ಯುವಕ ಯುವತಿಯರ ಮಾರ್ಗದರ್ಶನದ ಶಾಖೆಯೇ ರಾಷ್ಟ್ರೀಯ ಕಾಡೆಟ್ ಕ್ರಾಪ್ಸ್ ಎಂದು ಕರ್ನಲ್ ಬಿ ಕೆ ಕೆ ವಂಶಿ ಹೇಳಿದರು.
ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಾಲೇಜಿನ ಎನ್ ಸಿ ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಕಾಡೆಟ್ಸ್ಗಳಿಗೆ ನಿಮ್ಮ ಮುಂದಿನ ಜೀವನ ಉಜ್ವಲವಾಗಿ ಬೆಳಗಲಿ, ಮತ್ತು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಗಳಲ್ಲಿ ಭಾಗವಹಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ. ಅನಿಲ್ ಬಿ ನಾಯಕ್ ಮಾತನಾಡಿ ಕಾಡೆಟ್ಗಳಿಗೆ ನಿಮ್ಮ ಒಳ್ಳೆಯ ನಾಯಕತ್ವ ಗುಣದೊಂದಿಗೆ ಉತ್ತಮವಾದ ಜೀವನ ರೂಪಿಸಿಕೊಳ್ಳಬೇಕು, ಮಹಾವಿದ್ಯಾಲಯದಲ್ಲಿ ಈ ನಿಮ್ಮ ಎನ್ ಸಿ ಸಿ ಜೀವನದ ಮೂರು ವರ್ಷಗಳಲ್ಲಿ ಉತ್ತಮ ನಾಯಕತ್ವ ಗುಣ ಪಡೆದುಕೊಂಡಿದ್ದೀರಿ ಅದನ್ನು ಮುಂದು ವರೆಸಿಕೊಂಡು ಹೋಗಬೇಕು ಎಂದು ಹೇಳಿದರು.
ಲೆಫ್ಟಿಂನೆಂಟ ಡಾ.ರಾಮಚಂದ್ರ ನಾಯಕ್ ನಾತನಾಡಿ ಹೊಸ ನೀರು ಬಂದಂತೆ ಹಳೆ ನೀರು ಹರೆಯಲೇಬೇಕು. ಆದರೆ ಹಳೆ ನೀರು ಹೊಸದಾಗೆ ಚಲಿಸಬೇಕು.ಸೀನಿಯರ್ ಕಾಡೆಟ್ಸ್ ಕಾಲೇಜಿನ ಹೆಮ್ಮೆ ಗೌರವವನ್ನು ಹೆಚ್ಚಿಸಿ ನಿಮ್ಮ ಎನ್ ಸಿ ಸಿ ಪಯಣ ಯಶಸ್ವಿಯಾಗಿ ಕೊನೆಗೂಳಿಸಿದ್ದೀರಿ. ಮುಂದಿನ ದಿನಗಳಲ್ಲಿ ಬರುವ ಆರ್ಮಿ, ನೇವಿ, ಏರ್ ಫೋರ್ಸ್ಗಳ್ಳಲ್ಲಿ ಎನ್ ಸಿ ಸಿ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ ಅವುಗಳನ್ನು ಸದುಪಯೋಗ ಪಡಿಸಿಕೊಂಡು ನಿಮ್ಮ ಜೀವನದಲ್ಲಿ ಒಳ್ಳೆಯ ಸಾಧನೆಯೊಂದಿಗೆ ಮಿಂಚಿರಿ ಎಂದು ಶುಭಕೋರಿದರು.
ಜೂನಿಯರ್ ಕಾಡೆಟ್ಸ್ ಸೀನಿಯರ ಬಗ್ಗೆ ತಮ್ಮ ಅನಿಸಿಕೆ, ಸೀನಿಯರ್ ವಿದ್ಯಾರ್ಥಿಗಳು ತಮ್ಮ ಎನ್ ಸಿ ಸಿ ಪಯಣದ ಬಗ್ಗೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಕರ್ನಲ್ ಬಿ ಕೆ ಕೆ ವಂಶಿ ಸರ್, ಸುಬೆಧಾರ ಮೇಜರ್ ಬಿ ಜೆ ರುಕ್ಮಿಣಿ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ಎನ್ ಸಿಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದವನ್ನು ಕಾಡೆಟ್ ಸ್ಫೂರ್ತಿ ಬಿರಾದಾರ್ ಮತ್ತು ಪ್ರೀತಿ ನಿರೂಪಿಸಿದರು. ಸಂಜನಾ ಹೊನ್ನಕಸ್ತೂರಿ ಸ್ವಾಗತಿಸಿದರು.ಪ್ರವೀಣ್ ಲಮಾಣಿ ವಂದಿಸಿದರು.

