ಮೋರಟಗಿ ಗ್ರಾಮದಲ್ಲಿ ಖಾಕಿ ಕಾಯಕದ ಜತೆಗೆ ಕೃಷಿ | ವರ್ಷಕ್ಕೆ ರೂ.೬ ಲಕ್ಷಕಿಂತಲೂ ಅಧಿಕ ಲಾಭ
ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ದು ಕೆರಿಗೊಂಡ
ಮೋರಟಗಿ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿತ್ತಿರುವ ಸಮೀಪದ ನಾಗಾವಿ ತಾಂಡಾದ ಭೀಮು ಲಮಾಣಿ ತಮ್ಮ ಗದ್ದೆಯಲ್ಲಿ ಕಾಶ್ಮೀರ ಸೇಬು ಬೆಳೆದು ಗುಮ್ಮಟ ನಗರಿ ಜಿಲ್ಲೆಯಲ್ಲಿ ಸದ್ದು ಮಾಡಿದ್ದಾರೆ.
ಮೋರಟಗಿ ಹೊರ ಠಾಣೆಯಲ್ಲಿ ಪೊಲೀಸ್ ಪೇದೆಯ ಹುದ್ದೆಯಲ್ಲಿ ಶಿಸ್ತಿನ ಸಿಪಾಯಿ ಎಂದೆನಿಸಿ ಬಿಡುವಿನ ವೇಳೆಯಲ್ಲಿ ವೃಥಾ ಕಾಲಹರಣ ಮಾಡದೇ ಸ್ವತಃ ಅಗಿ ನೆಡೆಸಿ, ನೀರು ಉಣಿಸಿ, ತೆಂಗಿನ ಮರ, ಮಾವಿನ ಮರಗಳ ಜತೆಗೆ ಇತರ ಸಸಿ ನೆಡಿಸಿ ಪರಿಸರ ಪ್ರೇಮಿಯಾಗಿ ಕೂಡ ಇವರು ಹೆಸರುವಾಸಿಯಾಗಿದ್ದಾರೆ.
ಮೋರಟಗಿ ಪೊಲೀಸ್ ಹೊರ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತ ಸಿಕ್ಕ ಸಮಯದಲ್ಲಿ ನಾಲ್ಕು ಎಕರೆ ಜಮೀನಿನಲ್ಲಿ ತೆಂಗಿನ ಮರ, ಸೇಬುಹಣ್ಣು, ತರಕಾರಿ ಸೇರಿದಂತೆ ಅನೇಕ ಸಸಿಗಳನ್ನು ಬೆಳೆಸಿ ವರ್ಷಕ್ಕೆ ೬ ಲಕ್ಷಕಿಂತಲೂ ಅಧಿಕ ಲಾಭ ಪಡೆದು, ಪ್ರಗತಿಪರ ರೈತರ ಗಮನ ಸೆಳೆಯುವಂತೆ ಮಾಡಿದ ಪೊಲೀಸ್ ಪೇದೆ ಭೀಮು ಲಮಾಣಿ ಅವರಿಗೆ ಗ್ರಾಮದ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಎನ್ ಆರ್ ತಿವಾರಿ, ಹಿರಿಯರಾದ ಮೈಬೂಸಾಬ ಕಣ್ಣಿ, ರೈತ ಸಂಘದ ಜಿಲ್ಲಾ ಅಧ್ಯಕ್ಷ ಅಣ್ಣಾರಾಯ ಇಳಗೇರ, ಸಿಂದಗಿ ಪಿಎಸ್ ಐ ಶ್ರೀಕಾಂತ್ ಕಾಂಬಳೆ ಸಿಬ್ಬಂದಿ ವರ್ಗ ಹಾಗೂ ಈ ಭಾಗದ ಪ್ರಗತಿಪರ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭೀಮು ಲಮಾಣಿ ಪೊಲೀಸ್ ಪೇದೆ
ಕೊಟ್ಸ್ : ನಮ್ಮ ತಂದೆಯವರು ಕೃಷಿಕರು ಅಸ್ತಿ ಕಡಿಮೆ ಇದ್ದರೂ ಕೂಡಾ ಕೃಷಿಯನ್ನೇ ನಂಬಿಕೊAಡು ಜೀವನ ಸಾಗಿಸುವ ಸಂದರ್ಭದಲ್ಲಿ ಅನಾರೋಗ್ಯದಿಂದ ನಾನು ನಾಲ್ಕು ವರ್ಷದ ಮಗು ಇರುವಾಗಲೇ ನಮ್ಮ ತಾಯಿಯನ್ನು ಕಳೆದುಕೊಂಡೆ ಕಷ್ಟ ಪಟ್ಟು ದುಡಿದ ಹಣದಲ್ಲಿ ವಿದ್ಯಾಭ್ಯಾಸ ಮಾಡಿ ಪೊಲೀಸ್ ಹುದ್ದೆಗೆ ಸೇರಿದೆ ಈ ನನ್ನ ಎಲ್ಲ ಸಾಧನೆಗೆ ನನ್ನ ತಾಯಿಯ ಆಶೀರ್ವಾದ ಜಗತ್ತಿನಲ್ಲಿ ದೇವರ ಆಶೀರ್ವಾದಕಿಂತ ತಾಯಿಯ ಆಶೀರ್ವಾದ ಮುಖ್ಯ ಎಲ್ಲರು ತಂದೆ ತಾಯಿಯನ್ನು ಗೌರವಿಸಿ ಇತರ ಕಾರ್ಯಗಳ ಜೊತೆಗೆ ಕೃಷಿಗೂ ಆದ್ಯತೆ ನೀಡಿ.


