ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಯುವಕರಿಗೆ ಆಧ್ಯಾತ್ಮಿಕ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಆಧ್ಯಾತ್ಮಿಕ ಸತ್ಸಂಗದಲ್ಲಿ ಭಾಗವಹಿಸುವಂತೆ ಗುರು ಹಿರಿಯರು ಕುಟುಂಬದಲ್ಲಿ ತಂದೆ-ತಾಯಿ ಅವರಿಗೆ ಮಾರ್ಗದರ್ಶನ ನೀಡುವುದು ಅವಶ್ಯವಿದೆ ಎಂದು ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ತಾಲೂಕಿನ ಬಂದಾಳ ಗ್ರಾಮದ ಬಸಯ್ಯ ಮುತ್ಯಾನ ಮಠದಲ್ಲಿ ಸಾರಂಗಮಠದ ಲಿಂ.ಸಿದ್ಧಲಿಂಗ ಶಿವಾಚಾರ್ಯರಿಂದ ಅನುಗ್ರಹಿತ ಮಹಾಮಹಿಮ ಶ್ರೀ ಬಸಯ್ಯ ಮುತ್ಯಾನ ಹಿರೇಮಠದ ಜಾತ್ರೆ ಹಾಗೂ ಜಗನ್ಮಾತೆ ಶ್ರೀದೇವಿ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ಗೊಲಗೇರಿ ಶ್ರೀ ಗೊಲ್ಲಾಳೇಶ್ವರ ಮಹಾಪುರಾಣ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ದಿನ ಸತ್ಯದ ಸಹವಾಸ ಮಾಡಿದಾಗ ಸತ್ಸಂಗವಾಗುತ್ತದೆ. ಆದ್ದರಿಂದ ಆಧ್ಯಾತ್ಮಿಕ ಹಾದಿಯಲ್ಲಿ ನಡೆಯಲು ಪ್ರಾರಂಭಿಸುವದರಿಂದ ಆಧ್ಯಾತ್ಮಿಕ ಜ್ಞಾನವನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಈ ವೇಳೆ ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಭಾಗವಹಿಸಿ ಮಾತನಾಡಿದರು. ಸಿದ್ದರಾಮ ಕುಳಕುಮಟಗಿ, ಸಿದ್ದರಾಮ ಬ್ಯಾಕೋಡ ಸಂಗೀತ ಸೇವೆ ನೀಡಿದರು. ಸಮಾರಂಭದಲ್ಲಿ ವಿಶ್ವನಾಥ ಕುರಡಿ, ದುಳಪ್ಪಗೌಡ ಬಿರಾದಾರ, ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಂಕರಲಿಂಗಯ್ಯ ಹಿರೇಮಠ, ಮಹಾರುದ್ರಯ್ಯ ಹಿರೇಮಠ ಸೇರಿದಂತೆ ಬಂದಾಳ ಹಾಗೂ ಶ್ರೀ ಬಸಯ್ಯಮುತ್ಯಾನ ಸದ್ಭಕ್ತ ಮಂಡಳಿ ಇದ್ದರು.