Author: editor.udayarashmi@gmail.com

ಜಿಲ್ಲಾ ದಂಡಾಧಿಕಾರಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಆದೇಶ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಕಾಲಕ್ಕೆ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಎಲ್ಲ ತರಹದ ಮದ್ಯ ಮಾರಾಟ, ಸಂಗ್ರಹಣೆ ಹಾಗೂ ಹಂಚಿಕೆಯನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಆದೇಶ ಹೊರಡಿಸಿದ್ದಾರೆ.ಗಣೇಶ ಮೂರ್ತಿ ಪ್ರತಿಷ್ಠಾಪನೆ ದಿನವಾದ ಆಗಸ್ಟ್ ೨೭ರ ಬೆಳಿಗ್ಗೆ ೬ ರಿಂದ ಆಗಸ್ಟ್ ೨೮ರ ಬೆಳಿಗ್ಗೆ ೬ ಗಂಟೆವರೆಗೆ ಹಾಗೂ ೫ನೇ ದಿನದ ಗಣೇಶ ಮೂರ್ತಿ ವಿಸರ್ಜನೆ ಪ್ರಯುಕ್ತ ಆಗಸ್ಟ್ ೩೧ರ ಬೆಳಿಗ್ಗೆ ೬ ರಿಂದ ಸೆಪ್ಟೆಂಬರ್ ೧ರ ಬೆಳಿಗ್ಗೆ ೬ ಗಂಟೆವರೆಗೆ, ೭ನೇ ದಿನದ ಗಣೇಶ ಮೂರ್ತಿ ವಿಸರ್ಜನೆ ಪ್ರಯುಕ್ತ ಸೆಪ್ಟೆಂಬರ್ ೨ರ ಬೆಳಿಗ್ಗೆ ೬ ರಿಂದ ಸೆಪ್ಟೆಂಬರ್ ೩ರ ಬೆಳಿಗ್ಗೆ ೬ಗಂಟೆಯವರೆಗೆ, ೯ನೇ ದಿನದ ಗಣೇಶ ಮೂರ್ತಿ ವಿಸರ್ಜನೆ ಪ್ರಯುಕ್ತ ಸೆಪ್ಟೆಂಬರ್ ೪ರ ಬೆಳಿಗ್ಗೆ ೬ ರಿಂದ ಸೆಪ್ಟೆಂಬರ್ ೫ರ ಬೆಳಿಗ್ಗೆ ೬ಗಂಟೆವರೆಗೆ ಹಾಗೂ ೧೧ನೇ ದಿನದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಕಲಚೇತನರ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿ, ಸಂಸ್ಥೆ ಮತ್ತು ವಿಶೇಷ ಶಿಕ್ಷಕರಿಗೆ ರಾಜ್ಯ ಮಟ್ಟದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ ೧೫ರಂದು ಕೊನೆಯ ದಿನವಾಗಿದೆ.ವಿಕಲಚೇತನರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿ, ಸಂಸ್ಥೆ ಹಾಗೂ ವಿಶೇಷ ಶಿಕ್ಷಕರು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕನಕದಾಸ ಬಡಾವಣೆ, ಜಿಲ್ಲಾ ಪಂಚಾಯತ ಆವರಣ, ದೂರವಾಣಿ ಸಂಖ್ಯೆ:೦೮೩೫೨-೭೯೬೦೬೦ ಅಥವಾ ವೆಬ್ ಸೈಟ್www.dwdsc.kar.nic.in UÉ ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ ಜಿಲ್ಲಾ ವಿಪತ್ತು ನಿರ್ವಹಣಾ ಕುರಿತ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಳೆಯಿಂದ ಹಾನಿಗೊಳಗಾದ ಬೆಳೆ ಹಾನಿಯ ಜಂಟಿ ಸಮೀಕ್ಷೆ ಈಗಾಗಲೇ ಕೈಗೊಳ್ಳಲಾಗಿದ್ದು, ಎರಡು ದಿನಗಳಲ್ಲಿ ಬೆಳೆ ಹಾನಿಯ ಬಗ್ಗೆ ಪೂರ್ಣ ಪ್ರಮಾಣದ ಸಮಗ್ರ ಸಮೀಕ್ಷೆ ವರದಿಯನ್ನು ಸಲ್ಲಿಸುವಂತೆಯೂ. ಈ ಸಮೀಕ್ಷೆಯಲ್ಲಿ ಯಾವೊಬ್ಬ ಅರ್ಹ ರೈತರು ಹೊರ ಉಳಿಯದಂತೆ ಕಾಳಜಿವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ ಅವರು ಸಂಬಂಧಿಸಿದ ಸೂಚನೆ ನೀಡಿದರು.ಮಂಗಳವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಕುರಿತ ಸಭೆ ನಡೆಸಿ, ಮಾತನಾಡಿದ ಅವರು, ಬೆಳೆ ಹಾನಿ ರೈತರ ಪಟ್ಟಿ ಸಿದ್ದಪಡಿಸಿ, ಪಟ್ಟಿಯನ್ನು ರೈತರ ಅವಗಾಹನೆಗಾಗಿ ಆಯಾ ಗ್ರಾಮ ಪಂಚಾಯತಿಯ ಸೂಚನಾ ಫಲಕದಲ್ಲಿ ಪಟ್ಟಿಯನ್ನು ಪ್ರಚುರ ಪಡೆಸಬೇಕು. ಬೆಳೆ ಹಾನಿ ಪಟ್ಟಿ ಪ್ರಕಟ್ಟಿಸಿದ ೭ ದಿನದೊಳಗೆ ಆಕ್ಷೇಪಣೆ ಸಲ್ಲಿಸಲು ರೈತರಿಗೆ ಕಾಲಾವಕಾಶ ಕಲ್ಪಿಸಿ, ರೈತರು ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮವಾಗಿ ಸಮಗ್ರ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು…

Read More

ದೇವರಹಿಪ್ಪರಗಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ | ಸಂತೆ ಹಾಗೂ ಮಾರಾಟ ಕುರಿತಾದ ಟೆಂಡರ್ ಕರೆಯಲು ಸದಸ್ಯರ ಒತ್ತಾಯ | ಕಾಂಗ್ರೆಸ್ ಸದಸ್ಯರಲ್ಲಿಯೇ ಪರಸ್ಪರ ವಾಗ್ವಾದ | ಕಾಂಗ್ರೆಸ್ ಸದಸ್ಯ ಬಶೀರ್ ಅಹ್ಮದ್ ಬೇಪಾರಿಯಿಂದ ಅನುಚಿತ, ಅಸಭ್ಯ ಪದಗಳ ಬಳಕೆ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮಹಿಳಾ ಸದಸ್ಯರ ಮೌನ, ಕೆಲವೇ ಬೆರಳೆಣಿಕೆಯ ಸದಸ್ಯರು ಚರ್ಚೆಯಲ್ಲಿ ಭಾಗಿ, ಇಂತಹ ಹಲವು ವಿಶೇಷಗಳ ನಡುವೆ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಸಾಮಾನ್ಯ ಸಭೆ ಜರುಗಿತು.ಪಟ್ಟಣದ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ ಆರಂಭಗೊಂಡ ಸಾಮಾನ್ಯ ಸಭೆಯಲ್ಲಿ ಹಿಂದಿನ ಐದು ತಿಂಗಳ ಜಮಾ ಖರ್ಚು, ಸಂತೆ ಲೀಲಾವು ಟೆಂಡರ್, ಇ-ಖಾತಾ ಉತಾರಿ ಕುರಿತು ಚರ್ಚೆ ಆರಂಭಗೊಂಡಿತು.ಈ ಸಂದರ್ಭದಲ್ಲಿ ಸಭೆಯ ನೋಟಿಸ್ ಕುರಿತಾಗಿ ಕಾಂಗ್ರೆಸ್ ಸದಸ್ಯ ಬಶೀರ್‌ಅಹ್ಮದ್ ಬೇಪಾರಿ ಆರಂಭದಲ್ಲಿಯೇ ಆಕ್ಷೇಪ ವ್ಯಕ್ತಪಡಿಸಿದರು. ನಾಮ ನಿರ್ದೇಶಿತ ಸದಸ್ಯರಿಗೆ ಹಿಂದಿನ ಸಭೆಯ ಕುರಿತು ಮಾಹಿತಿ ನೀಡದ ಹಾಗೂ ಸಹಿ ಪಡೆಯದ ವಿಷಯಗಳಿಗೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿ ನಾಮ ನಿರ್ದೇಶಿತ ಸದಸ್ಯ ರಾಜು…

Read More

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಜೈನ ಧರ್ಮವು ವ್ಯಾಪಾರ, ಉದ್ಯೋಗ, ಕೃಷಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ನಗರದ ಪೊಲೊ ಮೈದಾನದಲ್ಲಿ ದಕ್ಷಿಣ ಭಾರತ ಜೈನ ಸಭಾ ವೀರಸೇವಾದಳ, ಮಧ್ಯವರ್ತಿ ಸಮಿತಿ ವತಿಯಿಂದ ಸೋಮವಾರ ದಿ.ರಾವಸಾಹೇಬ ಅ.ಪಾಟೀಲ ಬೋರಗಾಂವಕರ ವೇದಿಕೆಯಲ್ಲಿ ಆಯೋಜಿಸಿದ್ದ ಪ್ರಥಮಾಚಾರ್ಯ ಶಾಂತಿಸಾಗರ ಮಹಾರಾಜರ 70ನೇ ಪುಣ್ಯತಿಥಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜೈನ ಧರ್ಮ ವಿಶ್ವಕ್ಕೆ ಶಾಂತಿ, ಅಹಿಂಸೆಯನ್ನು ಸಾರುತ್ತ ಸಮಾಜದ ಒಳಿತಿಗೆ ಕಾರ್ಯನಿರ್ವಹಿಸುತ್ತ ಬಂದಿದೆ. ಹೊರರಾಜ್ಯಗಳಲ್ಲಿ ಕನ್ನಡ ಉಳಿಸಿ ಬೆಳೆಸುತ್ತಾ ಬಂದಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಯೋಜನಾ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ ಮಾತನಾಡಿ, ಜೈನ ಧರ್ಮ ಅಹಿಂಸೆಯನ್ನು ಸಾರಿ ಅದರಂತೆ ನಡೆದುಕೊಂಡಿದೆ. ಮಹಾತ್ಮಾ ಗಾಂಧೀಜಿ ಅವರು ಅಹಿಂಸಾ ಮಾರ್ಗದಿಂದ ಸ್ವತಂತ್ರ ಪಡೆಯಲು ಪ್ರೇರಣೆ ನೀಡಿದೆ ಎಂದು ಅಭಿಪ್ರಾಯಪಟ್ಟರು.ಸಕ್ಕರೆ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಜ್ಯೋತಿ ಬೆಳಗಿಸಿ ಮಾತನಾಡಿ, ಜೈನಧರ್ಮದಿಂದ ಪ್ರಕೃತಿ ಉಳಿದಿದೆ.…

Read More

ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ‘ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನಾಚರಣೆ’ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಮ್ಮ ಜೀವನದ ದಿನಿತ್ಯದಲ್ಲಿ ಸಂಖ್ಯಾಶಾಸ್ತ್ರ ಪ್ರಮುಖ ಪಾತ್ರವಹಿಸುತ್ತಿದ್ದು ಮಾಹಿತಿ ಪ್ರತಿಯೊಂದು ಹಂತದಲ್ಲೂ ಸೃಷ್ಟಿಯಾಗುತ್ತದೆ ಆರೋಗ್ಯ ಪರೀಕ್ಷೆಯಿಂದ ಮಳೆ ಅಂಕಿ ಅಂಶಗಳವರೆಗೆ, ಕಂಪನಿಗಳ ಮಾರಾಟದವರೆಗೆ, ಮಣ್ಣಿನ ಪರೀಕ್ಷೆಯವರೆಗೆ. ಈ ಅಂಕಿ ಅಂಶಗಳಿಗೆ ಅರ್ಥ ಕೊಡುವುದು ಸಂಖ್ಯಾಶಾಸ್ತ್ರ ಎಂದು ಧಾರವಾಡದ ಕೃಷಿ ಕಾಲೇಜಿನ ಕೃಷಿ ಸಂಖ್ಯಾಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಡಾ. ಆಶಾಲತಾ ಕೆ.ವಿ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಸಂಖ್ಯಾಶಾಸ್ತ್ರ ವಿಭಾಗದ ಸಹಯೋಗದಲ್ಲಿ ಸೋಮವಾರದಂದು ಜರುಗಿದ ‘ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿ, ಶೈಕ್ಷಣಿಕ ಮತ್ತು ಸಂಶೋಧನೆಯಲ್ಲಿ ಅಂಕಿ ಅಂಶಗಳ ಪಾತ್ರವನ್ನು ಒತ್ತಿ ಹೇಳಿದರು. ಸಂಖ್ಯಾಶಾಸ್ತ್ರವೆಂಬ ಸ್ನೇಹಿತನ ಸಹಕಾರವಿಲ್ಲದೆ ಯಾವುದೇ ವಿಜ್ಞಾನವೂ ಸಂಪೂರ್ಣವಾಗುವುದಿಲ್ಲ ಅಲ್ಲದೆ ಎಲ್ಲಾ ವಿಜ್ಞಾನಗಳಿಗೆ ಸಂಖ್ಯಾಶಾಸ್ತ್ರ ಒಳ್ಳೆಯ ಗೆಳೆಯ”. ವೈದ್ಯಕೀಯ ಕ್ಷೇತ್ರದಲ್ಲಿ, ಬಾಡಿ ಮಾಸ್…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಪ್ರತಿ ವರ್ಷವು ಗಜಾನನ ಉತ್ಸವಕ್ಕಾಗಿ ಗಜಾನನ ಮಹಾಮಂಡಳದಲ್ಲಿ ನೋಂದಾಯಿತ ಎಲ್ಲ ಗಜಾನನ ಮಂಡಳಿಗಳಿಗೆ 5ಸಾವಿರ ರೂ. ಪ್ರೋತ್ಸಾಹ ದೇಣಿಗೆ ನೀಡಲಿದ್ದೇವೆ ಎಂದು ಶಾಸಕ ಜಗದೀಶ್ ಗುಡಗುಂಟಿ ಹೇಳಿದರು.ನಗರದ ಸಾಕ್ಷಾತ್ಕಾರ ನಿಲಯದ ಶಾಸಕರ ಗೃಹ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಹಾಮಂಡಳದಲ್ಲಿ ನೋಂದಾಯಿಸಿ ಪ್ರತಿಷ್ಠಾಪಿಸಿದ 5, 7, 9 ದಿನಗಳ ಗಜಾನನ ಮಂಡಳಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವದು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಪ್ರತಿಷ್ಠಾಪಿಸಿದ ಎಲ್ಲ ಗಣೇಶ ಮಂಡಳಗಳಿಗೆ 25 ಕೆಜಿ ಸಕ್ಕರೆ ನೀಡಲಿದ್ದೇವೆ ಎಂದರು.ಎಲ್ಲರೂ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಪರಿಸರ ಕಾಳಜಿ ಮೆರೆಯಬೇಕು ಎಂದರು.ಗಣೇಶನ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ದಿನದಂದು ಮಾನವನ ಶರೀರದ ಮೇಲೆ ದುಷ್ಪರಿಣಾಮ ಉಂಟುಮಾಡುವ ಶಬ್ದ ಮಾಲಿನ್ಯ ಉಂಟಾಗುವ ಡಿಜೆ ಹಚ್ಚಬಾರದು ಎಂದು ವಿನಂತಿಸಿದರು.ಪ್ರತಿ ಮಂಡಳಿಯವರು ಪ್ರತಿ ದಿನ ವಿವಿಧ ದೇಶೀಯ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಶೃದ್ಧಾ ಭಕ್ತಿಯಿಂದ ಗಣೇಶ ಹಬ್ಬ ಆಚರಿಸೋನಾ ಎಂದರು.ಮಹಾಮಂಡಳ ಅಧ್ಯಕ್ಷ ಸಚೀನ ಪಟ್ಟಣಶೆಟ್ಟಿ…

Read More

ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಖಂಡನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಸಾಹಿತ್ಯ ಲೋಕದ ಹೆಮ್ಮೆಯ ಲೇಖಕಿ, ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರಿಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೆಲವು ನಾಯಕರಿಂದ ನಡೆಯುತ್ತಿರುವ ಅವಮಾನಕಾರಿ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ತಿಳಿಸಿದರು.ಪತ್ರಿಕಾ ಪ್ರಕಟಣೆಯಲ್ಲಿ ಅವರು “ಬಾನು ಮುಷ್ತಾಕ್ ಅವರು ತಮ್ಮ ಕೃತಿ “ಹಾರ್ಟ್ ಲ್ಯಾಂಪ್” ಮೂಲಕ ಕನ್ನಡ ಸಾಹಿತ್ಯಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟವರು. ಆದರೆ, ಬಿಜೆಪಿಯ ಕೆಲವು ನಾಯಕರು ಮತ್ತು ಅವರ ಸಂಘಟನೆಯ ಕಾರ್ಯಕರ್ತರು ಲೇಖಕಿಯ ಸಾಮಾಜಿಕ ಕಾರ್ಯಗಳು ಮತ್ತು ಅವರ ವೈಯಕ್ತಿಕ ನಿಲುವುಗಳನ್ನು ಗುರಿಯಾಗಿಟ್ಟುಕೊಂಡು ಅವಮಾನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.”ಬಾನು ಮುಷ್ತಾಕ್ ಅವರು ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯ, ಜಾತ್ಯತೀತತೆ, ಮತ್ತು ಸೌಹಾರ್ದತೆಗಾಗಿ ದಶಕಗಳಿಂದ ಶ್ರಮಿಸುತ್ತಿರುವ ಕಾರ್ಯಕರ್ತೆಯಾಗಿದ್ದಾರೆ. ಅವರ ಸಾಹಿತ್ಯವು ಶೋಷಿತರ, ತಳ ಸಮುದಾಯಗಳ, ವಿಶೇಷವಾಗಿ ಮಹಿಳೆಯರ ಧ್ವನಿಯನ್ನು ಎತ್ತಿಹಿಡಿಯುತ್ತದೆ.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.‌ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ್ ಪಬ್ಲಿಕ್ ಶಾಲೆಯ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಆಗಷ್ಟ 29 ರಂದು ಶುಕ್ರವಾರ ಮಧುಮೇಹ ಜಾಗೃತಿ ಜಾಥಾ ನಡೆಯಲಿದೆ.ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ಈ ಜಾಗೃತಿ ಜಾಥಾ ನಡೆಯಲಿದೆ. ಸಕ್ಕರೆ ಕಾಯಿಲೆ ಹಲವು ರೋಗಗಳ ತವರಾಗಿದ್ದು, ಚಿಕ್ಕ ವಯಸ್ಸಿನಲ್ಲಿ ಅನೇಕ ಜನ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಅವರೆಲ್ಲರಲ್ಲಿ ಆರೋಗ್ಯದ ಜಾಗೃತಿಯನ್ನು ಉಂಟು ಮಾಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ.ಅಂದು ಬೆಳಗ್ಗೆ 9ಕ್ಕೆ ಬಿ.ಎಲ್.ಡಿ.ಇ ಆಸ್ಪತ್ರೆಯಿಂದ ಸಿದ್ದೇಶ್ವರ ಗುಡಿಯ ಮಾರ್ಗವಾಗಿ ಗಾಂಧಿ ಚೌಕಿನವರೆಗೂ ಈ‌ ಜಾಥಾ ನಡೆಯಲಿದೆ ಎಂದು ಶಾಲೆಯ ಪ್ರಾಚಾರ್ಯ ಶೈಜೂ ಕೆ.‌ ನಾಯರ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Read More

ಚಡಚಣ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಮಜಗಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಚಡಚಣ: ಸಹಕಾರ ತಳಹದಿಯ ಮೇಲೆ, ಶಿಕ್ಷಕರ ಕಲ್ಯಾಣಕ್ಕೋಸ್ಕರ ಕಾರ್ಯ ನಿರ್ವಹಿಸುತ್ತಿರುವ ಈ ಪ್ರಾಥಮಿಕ ಶಾಲಾ ಶಿಕ್ಷಕರ ಸೊಸೈಟಿ ಅತ್ಯಧಿಕ ಬಂಡವಾಳ ಹೊಂದಿ, ರಾಜ್ಯಕ್ಕೆ ಮಾದರಿ ಯಾಗಿದೆ ಎಂದು ಚಡಚಣ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಮಜಗಿ ಹೇಳಿದರು.ಪಟ್ಟಣದಲ್ಲಿ ಭಾನುವಾರ ಆಯೋಜಿಸಲಾದ ಚಡಚಣ ಭಾಗದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಪತ್ತಿನ 56ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಚಡಚಣ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಪತ್ತಿನ ಶಿಕ್ಷಕರ ಸೊಸೈಟಿ ಅಧ್ಯಕ್ಷ ಎಸ್.ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, 1969ರಲ್ಲಿ ದಿ.ಭೋಜಪ್ಪ ಸಿದ್ರಾಮಪ್ಪ ಹೊರ್ತಿ ನೇತೃತ್ವದಲ್ಲಿ ಕೇವಲ 15 ರಿಂದ 20 ಶಿಕ್ಷಕರಿಂದ ಕೇವಲ 15 ರೂ. ಬಂಡವಾಳದೊಂದಿಗೆ ಪ್ರಾರಂಭವಾದ ಈ ಸಹಕಾರ ಸಂಘ ಇಂದು 27 ಕೋಟಿ ರೂ. ಬೃಹತ್ ಬಂಡವಾಳ ಹೊಂದಿದೆ. ಈಗಾಗಲೇ ಸ್ವಂತ ಕಟ್ಟಡ ಹೊಂದಿರುವ…

Read More