ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಶುಕ್ರವಾರ ಮಳೆಯಾಗಿದೆ. ಪಟ್ಟಣದಲ್ಲಿ ಮಧ್ಯಾನ್ಹ ೩.೩೦ ಗಂಟೆ ಸುಮಾರಿಗೆ ದಟ್ಟನೆಯ ಮೋಡ, ಗುಡುಗು, ಸಿಡಿಲು ಅಬ್ಬರದೊಂದಿಗೆ ಆರಂಭವಾದ ಮಳೆ ಸುಮಾರು ಅರ್ಧ ಗಂಟೆ ಕಾಲ ಜಿಟಿ ಜಿಟಿ ಮಳೆ ಮಳೆಯಾಯಿತು. ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಜಿಟಿ ಜಿಟಿ ಮಳೆಯಾದರೆ ಗ್ರಾಮದ ಹೊರವಲಯದಲ್ಲಿ ಕೆಲಹೊತ್ತು ಜೋರಾದ ಮಳೆ ಸುರಿಯಿತು. ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಮಧ್ಯಾನ್ಹ ೩.೩೦ ಗಂಟೆಗೆ ಸುಮಾರಿಗೆ ಆರಂಭವಾದ ಆಲಿಕಲ್ಲುಗಳೊಂದಿಗೆ ಆರಂಭವಾದ ಮಳೆ ಒಂದೂವರೆ ಗಂಟೆ ಕಾಲ ಸುರಿಯಿತು. ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿ ನೀರು ತುಂಬಿ ಹರಿಯಿತು. ಚರಂಡಿಗಳು ತುಂಬಿ ಹರಿದವು. ಮನಗೂಳಿ ಪಟ್ಟಣದ ವೈಭವ ಪಾಟೀಲ ಅವರು ನಮ್ಮ ಪಟ್ಟಣದಲ್ಲಿ ಕೆಲ ಹೊತ್ತು ಆಲಿಕಲ್ಲು ಬಹಳ ಬಿದ್ದವು. ಇದರಿಂದಾಗಿ ಮೈದಾನ ಆಲಿಕಲ್ಲು ತುಂಬಿ ಹೋಗಿತ್ತು.ರಭಸವಾದ ನೀರಿನಲ್ಲಿ ಆಲಿಕಲ್ಲು ಹರಿದುಕೊಂಡು ಹೋಗುವದು ಕಂಡುಬಂದಿತ್ತು ಎಂದು ಹೇಳಿದರು.
ಪಟ್ಟಣದ ಜಾಮೀಯಾ ನಗರದಲ್ಲಿರುವ ಮಹ್ಮದಹುಸೇನ ಮುಕ್ತುಮಸಾಬ ಹೊಕ್ರಾಣಿ ಅವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ತಾಲೂಕಿನ ಕರಭಂಟನಾಳ ಗ್ರಾಮದಲ್ಲಿ ಸಿಡಿಸಿ ಬಡಿದು ಬಸವರಾಜ ಸದಾಶಿವ ಮಣ್ಣೂರ ಎಂಬುವರ ಒಂದು ಎಮ್ಮೆ, ತಾಲೂಕಿನ ನಾಗೂರ ಗ್ರಾಮದಲ್ಲಿ ಸಿಡಿಲು ಬಡಿದು ಬಸಪ್ಪ ಮಲಕಪ್ಪ ಕ್ವಾಟಿ ಅವರ ಒಂದು ಎತ್ತು ಸಿಡಿಲು ಬಡಿದು ಮೃತ ಪಟ್ಟಿವೆ ಎಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ತಿಳಿಸಿದ್ದಾರೆ.

