Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 06, 2026

ಕೊಪ್ಪಳ ಹನುಮಂತ ಹಳ್ಳಿಕೇರಿಗೆ ರೂ.4ಲಕ್ಷ ಪರಿಹಾರ ಮಂಜೂರು

2028ಕ್ಕೆ ರಾಜ್ಯದಲ್ಲಿ ಎನ್.ಡಿ.ಎ ಕೈಗೆ ಅಧಿಕಾರದ ಚುಕ್ಕಾಣಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಪುರಸಭೆ ಸದಸ್ಯರ ಆರೋಪ ಸತ್ಯಕ್ಕೆ ದೂರ :ಶಾಂತವೀರ
(ರಾಜ್ಯ ) ಜಿಲ್ಲೆ

ಪುರಸಭೆ ಸದಸ್ಯರ ಆರೋಪ ಸತ್ಯಕ್ಕೆ ದೂರ :ಶಾಂತವೀರ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಸಿಂದಗಿ: ವಾರ್ಡ್ ನಂ.೧೪ರಲ್ಲಿದ್ದ ಉದ್ಯಾನದಲ್ಲಿ ವಾಸವಿದ್ದವರನ್ನು ತೆರವುಗೊಳಿಸುವಂತೆ ಸ್ಥಳೀಯ ನಾಗರಿಕರು ಶಾಸಕರಿಗೆ ಹಾಗೂ ಪುರಸಭೆಗೆ ಒತ್ತಡ ಹೇರಿದ್ದರಿಂದ ಅದನ್ನು ತೆರವುಗೊಳಿಸಲಾಯಿತೇ ಹೊರತು ಅದರಲ್ಲಿ ನನ್ನ ಸ್ವ- ಹಿತಾಸಕ್ತಿ ಏನಿಲ್ಲ. ಅಲ್ಲಿದ್ದವರಿಗೆ ಬೇರೆ ಸ್ಥಳಾವಕಾಶ ಮಾಡಿಕೊಡುವವರೆಗೂ ಬೇರೊಂದೆಡೆ ಸ್ಥಳ ನಿಗದಿ ಪಡಿಸಿದ್ದರಿಂದ ಸ್ವಯಂ ಪ್ರೇರಿತವಾಗಿ ಅಲ್ಲಿದ್ದವರು ತೆರವು ಕಾರ್ಯಾಚರಣೆಗೆ ಸಹಕರಿಸಿದ್ದಾರೆ. ಮುಂಬರುವ ದಿನಗಳಲ್ಲಿ ಅವರಿಗೆ ಸೂಕ್ತ ನಿವೇಶನ ಒದಗಿಸಿ ಸ್ಥಳದ ಹಕ್ಕುಪತ್ರ ವಿತರಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಸವಾಲು ಹಾಕಿದರು.
ಪಟ್ಟಣದಲ್ಲಿ ಹಮ್ಮಿಕೊಂಡ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆಯ ಕೆಲವು ಸದಸ್ಯರು ನನ್ನ ವಿರುದ್ಧ ಆರೋಪ ಮಾಡುತ್ತಿರುವುದು ಹುಸಿ ಸುಳ್ಳಾಗಿದೆ. ಅವರ ಆರೋಪಕ್ಕೆ ಪುರಾವೆ ಏನಾದರೂ ಇದ್ದರೆ ಸಾಬೀತು ಪಡಿಸಲಿ.ನನ್ನ ವಿರುದ್ಧ ತನಿಖೆಗೆ ಮನವಿ ಮಾಡಿದ್ದು ಸ್ವಾಗತಾರ್ಹ. ಅಧಿಕಾರಿಗಳು ಬಂದು ಅವರಿಗೆ ಬೇಕಾದ ಮಾಹಿತಿ ಕೇಳಿದರೂ ನೀಡಲು ಸಿದ್ದ. ನ್ಯಾಯಾಲಯದಿಂದ ನನಗೆ ನ್ಯಾಯ ಸಿಕ್ಕಿದೆ. ಸುಪ್ರೀಂಕೋರ್ಟ್ ನನ್ನನ್ನು ಅಧ್ಯಕ್ಷನೆಂದು ಮುಂದುವರಿಯಲು ಅವಕಾಶ ಮಾಡಿಕೊಟ್ಟಿದೆ. ನನಗೆ ಸಿಕ್ಕ ಅವಧಿಯಲ್ಲಿ ಅಭಿವೃದ್ಧಿಪರ ಕಾರ್ಯಗಳನ್ನು ಮಾಡುತ್ತೇನೆ. ನಾನು ಅಧ್ಯಕ್ಷನಾಗುವದಕ್ಕಿಂತ ಮುಂಚೆ ನಡೆಯುತ್ತಿದ್ದ ಅವ್ಯವಹಾರಗಳನ್ನು ನಿರ್ಧಾಕ್ಷೀಣ್ಯವಾಗಿ ಮಟ್ಟ ಹಾಕಿದ್ದು, ಹಾಗೂ ಯಾವುದೇ ರೀತಿಯ ಅನ್ಯಾಯಗಳನ್ನು ನಡೆಯಲು ಬಿಡದೆ ಇದ್ದದ್ದೇ ನನಗೆ ಮುಳುವಾಗುತ್ತಿದೆ.
ಬಜೆಟ್ ಮಂಡನೆಯ ಸಭೆಯನ್ನು ಇದ್ದಕ್ಕಿದ್ದಂತೆ ಪುರಸಭೆ ಮುಖ್ಯಾಧಿಕಾರಿ ಮೊಟಕುಗೊಳಿಸಿದ್ದರಿಂದ ಪೌರ ಕಾರ್ಮಿಕರ, ನೌಕರರ ಸಂಬಳ, ತೆರಿಗೆ ಭರಣ ಹಾಗೂ ಲೇವಾದೇವಿ ಸಂಪೂರ್ಣ ಸ್ಥಗಿತವಾಗಿದ್ದು, ಪಟ್ಟಣದ ಅಭಿವೃದ್ಧಿ ಕುಂಠಿತಗೊಂಡಿದೆ. ಇದನ್ನು ಪ್ರಶ್ನಿಸಿ ಪುರಸಭೆ ಮುಖ್ಯಾಧಿಕಾರಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಕ್ರಮವಾಗಿಲ್ಲ. ಇದಕ್ಕೆ ಸಂಪೂರ್ಣ ರಾಜಕೀಯ ಒತ್ತಡವೇ ಕಾರಣ. ಹೀಗೆ ಪ್ರತಿಯೊಂದು ಚಿಕ್ಕ ಕಾರಣಕ್ಕೂ ರಾಜಕೀಯ ಹಿತಾಸಕ್ತಿ ಮನೆ ಮಾಡಿದರೆ ಅಭಿವೃದ್ಧಿಯಾದರೂ ಹೇಗೆ ಸಾಧ್ಯ.? ಸುಗಮ ಆಡಳಿತ ನಡೆಸಲು ಹೀಗೆಯೇ ಒತ್ತಡ ಬಂದರೆ ರಾಜಿ ಮಡಿಕೊಳ್ಳದೇ ರಾಜೀನಾಮೆ ನೀಡುತ್ತೇನೆ ಎಂದರು.
ವಾರ್ಡ್ ನಂ.೧೩ರಲ್ಲಿ ಬರುವ ೧೪೨೦/ಎ ಜಾಗೆ ನನ್ನ ಹೆಸರಲ್ಲಿದ್ದು, ಅಲ್ಲಿ ಈಗಾಗಲೇ ಕಟ್ಟಡವಿದ್ದು, ಪುರಸಭೆಯ ಸದಸ್ಯರಿಗೆ ನಮ್ಮ ಕುಟುಂಬದ ಆಸ್ತಿ ಯಾವುದು ಎಲ್ಲಿದೆ ಎಂಬುದು ಗೊತ್ತಿಲ್ಲ. ಆದರೂ ಅಲ್ಲಿ ಅನಧಿಕೃತ ಕಟ್ಟಡ ನಡೆದಿದೆ ಎಂದು ಆರೋಪಿಸುತ್ತಾರೆ. ಆದರೆ ಕಟ್ಟಡ ನಡೆದ ಜಾಗೆಯು ಶಾಸಕರ ಮನೆಯ ಹಿಂಬದಿಯಲ್ಲಿದ್ದು, ಅದು ನನ್ನ ಅತ್ತಿಗೆಯ ಹೆಸರಿನಲ್ಲಿದೆ. ಕಟ್ಟಡದ ಪರವಾನಿಗೆಗಾಗಿ ಪುರಸಭೆಗೆ ಅರ್ಜಿ ಸಲ್ಲಿಸುದ್ದು, ಅದು ಅನುಮೋದನೆಯಾಗಿ ಬಂದಿಲ್ಲ. ಆದರೂ ಕಟ್ಟಡ ನಡೆದಿದ್ದು, ಕಟ್ಟಡ ಪೂರ್ಣಗೊಂಡ ನಂತರ ಪುರಸಭೆಗೆ ಸಲ್ಲಿಸಬೇಕಾದ ಕರವನ್ನು ದಂಡ ಸಮೇತ ಭರಣ ಮಾಡುತ್ತೇವೆ. ಇದರಲ್ಲಿ ತೆರಿಗೆ ವಂಚಿಸುವ ಪ್ರಶ್ನೆಯೇ ಇಲ್ಲ.
ನನ್ನ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಿ ಅದು ನನಗೆ ನೋವಿಲ್ಲ. ನಾನು ಯಾರ ಹಂಗಿಗೂ ಒಳಗಾಗದೆ ಇತರೆ ಸದಸ್ಯರ ಒತ್ತಡಕ್ಕೊಳಗಾಗದೆ ನಿರ್ಧಾಕ್ಷಿಣ್ಯವಾಗಿ, ನಿರ್ಭೀತಿಯಿಂದ ಮಾಡುತ್ತಿರುವ ಕೆಲಸ ಅವರಿಗೆ ಸಹ್ಯವಾಗದೆ ನನ್ನ ವಿರುದ್ಧ ಇಲ್ಲ ಸಲ್ಲದ ಆಪಾದನೆ ಮಾಡುತ್ತಿರುವುದು ಮನಸ್ಸಿಗೆ ನೋವಾಗಿದೆ. ಪುರಸಭೆಯಲ್ಲಿ ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಂಡಿದ್ದೇನೆ ಎಂದು ನನ್ನ ವಿರುದ್ಧ ಮಾಡುತ್ತಿರುವ ಆರೋಪ ನಿಜವಲ್ಲ. ನಾವು ಸರ್ವ ಸಾಧಾರಣ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ಕಾರ್ಯನಿರ್ವಹಿಸಿದ್ದೇನೆ. ತೆರವು ಕಾರ್ಯಾಚರಣೆಯಲ್ಲಿ ದುಡ್ಡು ಪಡೆದಿದ್ದೇನೆ ಎನ್ನುವ ಆರೋಪ ಮಾಡುತ್ತಿದ್ದಾರೆ. ಆದರೆ ಯಾವ ಅಂಗಡಿ ಮುಂಗಟ್ಟುಗಳನ್ನು ತೆರವು ಕಾರ್ಯಾಚರಣೆಯಲ್ಲಿ ಉಳಿಸಿಲ್ಲ. ಗುಡಂಗಡಿಗಳನ್ನು ಹೊರತುಪಡಿಸಿ ಪುರಸಭೆ ಸರಹದ್ದಿನಲ್ಲಿ ಬರುವ ಆರ್‌ಸಿಸಿ ಕಟ್ಟಡಗಳ ತೆರವಿಗೆ ಕೆಲವೊಂದು ಪ್ರಭಾವಿಗಳ ಮನವಿಯ ಮೇರೆಗೆ ನಾಲ್ಕೆಂಟು ದಿವಸ ಸಮಯಾವಕಾಶ ಕೊಟ್ಟಿದ್ದಷ್ಟೇ ಹೊರತು ಯಾರು ಮುಲಾಜಿಗೂ ಒಳಗಾಗುವ ಪ್ರಶ್ನೆಯೇ ಇಲ್ಲ.
ಈ ವೇಳೆ ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಇದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 06, 2026

ಕೊಪ್ಪಳ ಹನುಮಂತ ಹಳ್ಳಿಕೇರಿಗೆ ರೂ.4ಲಕ್ಷ ಪರಿಹಾರ ಮಂಜೂರು

2028ಕ್ಕೆ ರಾಜ್ಯದಲ್ಲಿ ಎನ್.ಡಿ.ಎ ಕೈಗೆ ಅಧಿಕಾರದ ಚುಕ್ಕಾಣಿ

ಕೆಬಿಜೆಎನ್‌ಎಲ್ ಅಧಿಕಾರಿ ಹಾದಿಮನಿ ಮೇಲೆ ಕ್ರಮಕ್ಕೆ ಆಗ್ರಹಿಸಿ ಮನವಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 06, 2026
    In ದಿನಪತ್ರಿಕೆ
  • ಕೊಪ್ಪಳ ಹನುಮಂತ ಹಳ್ಳಿಕೇರಿಗೆ ರೂ.4ಲಕ್ಷ ಪರಿಹಾರ ಮಂಜೂರು
    In (ರಾಜ್ಯ ) ಜಿಲ್ಲೆ
  • 2028ಕ್ಕೆ ರಾಜ್ಯದಲ್ಲಿ ಎನ್.ಡಿ.ಎ ಕೈಗೆ ಅಧಿಕಾರದ ಚುಕ್ಕಾಣಿ
    In (ರಾಜ್ಯ ) ಜಿಲ್ಲೆ
  • ಕೆಬಿಜೆಎನ್‌ಎಲ್ ಅಧಿಕಾರಿ ಹಾದಿಮನಿ ಮೇಲೆ ಕ್ರಮಕ್ಕೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ: ಸಂಕನಾಳ ರೈತರಿಂದ ಎಸ್‌ಎಲ್‌ಒ ಕಚೇರಿಗೆ ಮುತ್ತಿಗೆ
    In (ರಾಜ್ಯ ) ಜಿಲ್ಲೆ
  • ಕನ್ನಡದ ಉಳಿವಿಗಾಗಿ ಹೋರಾಟ ಅಗತ್ಯ :ಸಂಗೀತಾ ರಾಠೋಡ
    In (ರಾಜ್ಯ ) ಜಿಲ್ಲೆ
  • ಕನ್ನಡವೆಂದರೆ ನಮ್ಮ ಸಂಸ್ಕೃತಿಯ ಹಿರಿಮೆ :ಹೈಯ್ಯಾಳಕರ
    In (ರಾಜ್ಯ ) ಜಿಲ್ಲೆ
  • ಮುಂಬಯಿ ರೈಲ್ವೆಯನ್ನು ಇಂಡಿ ನಿಲ್ದಾಣದಲ್ಲಿ ನಿಲ್ಲಿಸಲು ಒತ್ತಾಯ
    In (ರಾಜ್ಯ ) ಜಿಲ್ಲೆ
  • ಗರ್ಭಿಣಿಯರ ಆರೈಕೆ, ಸುರಕ್ಷೆತೆಗೆ ಹೆಚ್ಚಿನ ಆದ್ಯತೆ ನೀಡಿ
    In (ರಾಜ್ಯ ) ಜಿಲ್ಲೆ
  • ಮಹಾತ್ಮ ಗಾಂಧಿ ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ತನ್ನಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.