ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಆದರ್ಶಗಳನ್ನು ಮಹಿಳೆಯರು ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಪಟ್ಟಣದ ಸಮೀಪ ಸುಕ್ಷೇತ್ರ ಮಾಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಅಡಿಗಲ್ಲು ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಮಲ್ಲಮ್ಮ ತನಗ ಕಷ್ಟ ಕೊಟ್ಟವರನ್ನು ಅತಿ ಪ್ರೀತಿಯಿಂದ ಕಂಡ ಮಹಿಳಾ ಶಿರೋಮಣಿ, ಮುಂಬರುವ ದಿನಗಳಲ್ಲಿ ಮಲ್ಲಮ್ಮನ ಭವ್ಯ ಮಂದಿರ ನಿರ್ಮಾಣ ಕಾರ್ಯಕ್ಕೆ ತಾವೆಲ್ಲರೂ ತನುಮನ ಧನದಿಂದ ಸಹಕಾರ ನೀಡಬೇಕು ಎನ್ನುತ್ತಾ, ಇತ್ತೀಚೆಗೆ ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಮ್ ದಲ್ಲಿ ನಡೆದ ಭಯೋತ್ಪಾದಕ ಕೃತ್ಯವನ್ನು ಖಂಡಿಸಿದ ಶ್ರೀಗಳು, ಪಕ್ಷಾತೀತವಾಗಿ ಎಲ್ಲಾ ಪಕ್ಷಗಳು ಭಯೋತ್ಪಾದಕ ಕೃತ್ಯವನ್ನು ಖಂಡಿಸಬೇಕು ಅವರು ಎಲ್ಲೇ ಅಡಗಿ ಕುಳಿತರು ಕೇಂದ್ರ ಸರ್ಕಾರ ಅವರನ್ನು ಸದೆಬಡಿಯಬೇಕು ಎಂದರು.
ಮಾಗಣಗೇರಾ ವಿಶ್ವಾರಾಧ್ಯ ಮಠದ ಡಾ.ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯರು, ಯಂಕಂಚಿಯ ಅಭಿನವ ರುದ್ರಮುನಿ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು.
ಶಂಕರಯ್ಯ ಪಿ ಮಾಲಗತ್ತಿ, ಕೆಂಚಪ್ಪ ಪೂಜಾರಿ ಅಮ್ಮಕೊಳ, ಸಿದ್ದಪ್ಪ ಪೂಜಾರಿ ಸಾಲಿಮನಿ, ಶಿವಮಾನ್ಯಪ್ಪ ಪೂಜಾರಿ ದೊಡ್ಮನಿ, ಗೌರವ ಉಪಸ್ಥಿತರಿದ್ದರು,
ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳು ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಶರಣಬಸಪ್ಪಗೌಡ ದರ್ಶನಪುರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸುರಪುರ ಹಾಗೂ ಹುಣಸಗಿ ತಾಲ್ಲೂಕ ರೆಡ್ಡಿ ಸಮಾಜದ ಅಧ್ಯಕ್ಷ ಬಾಬುಗೌಡ ಪಾಟೀಲ ಅಗತೀರ್ಥ, ಮಾಜಿ ಜಿಪಂ ಅಧ್ಯಕ್ಷೆ ಬಸನಗೌಡ ಪಾಟೀಲ್ ಯಡಿಯಾಪುರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ, ಶಹಾಪುರ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಶಿವಮಾಂತ ಚಂದಾಪುರ, ಕೆಂಭಾವಿ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಬಸನಗೌಡ ಹೊಸ್ಮನಿ, ಶಿವರಾಜ ಬುದೂರು, ಪುರಸಭೆ ಅಧ್ಯಕ್ಷ ರಹಿಮಾನ್ ಪಟೇಲ್ ಯಲ್ಗೋಡ್, ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರು, ಪಾಲ್ಗೊಂಡಿದ್ದರು.
ಹೇಮರೆಡ್ಡಿ ಮಲ್ಲಮ್ಮ ಸೇವಾ ಸಮಿತಿ ಅಧ್ಯಕ್ಷ ಗುರಣ್ಣಗೌಡ ಎಸ್ ಬಿರಾದಾರ, ನಿಂಗನಗೌಡ ಮಾಲಿ ಪಾಟೀಲ್, ರುದ್ರಸ್ವಾಮಿ ಹಿರೇಮಠ, ಸಾಹೇಬಗೌಡ ಪೋಲೀಸ್ ಬಿರಾದಾರ, ಶರಣಗೌಡ ಬಿರಾದಾರ, ಸೇವಾ ಸಮಿತಿಯ ಸದಸ್ಯರು, ಮಹಿಳೆಯರು ಮಕ್ಕಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಡಾ ಯಂಕನಗೌಡ ಪಾಟೀಲ ನಿರೂಪಿಸಿ, ವಂದಿಸಿದರು.

