ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲ್ಲೂಕಿನ ಹೊನವಾಡ ಗ್ರಾಮದ ಶ್ರೀ ಹನುಮಾನ್ ಮಂದಿರದಲ್ಲಿ ಕಾಶ್ಮೀರದ ಪಾಹಾಲ್ಗಮದಲ್ಲಿ ನಡೆದ ಹಿಂದೂಗಳ ನರಮೇಧಕ್ಕೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಜಮ್ಮು ಮತ್ತು ಕಾಶ್ಮೀರಕ್ಕೆ ಇತ್ತೀಚಿನ ದಿನಗಳಲ್ಲಿ ಹಿಂದೂಗಳು ಭೇಟಿ ನೀಡುವ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಿತ್ತು. ಇಲ್ಲಿನ ಹಿಂದೂಗಳು ಸಹ ಕಣಿವೆ ರಾಜ್ಯಕ್ಕೆ ಮರಳಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದರು. ಮುಸ್ಲಿಮರು ಸಹ ಇಲ್ಲಿನ ಪ್ರವಾಸೋದ್ಯಮ ಚಿಗುರೊಡೆದಿದ್ದಕ್ಕೆ ಸಂಭ್ರಮದಲ್ಲಿದ್ದರು. ಆದರೆ, ಈಗ ಆಗಿರುವ ಉಗ್ರರ ದಾಳಿಯಿಂದ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಕ್ಕೆ ತೀವ್ರ ಪೆಟ್ಟು ಬಿದ್ದಿದೆ ಎಂದು ಎಸ್ ಜಿ ಲಕ್ಕುಂಡಿಮಠ ಹೇಳಿದರು.
ಯುವ ಮುಖಂಡ ಲಿಂಗರಾಜ್ ಪಾಟೀಲ, ತುಕಾರಾಮ ನಲವಡೆ ಮಾತನಾಡಿದರು.
ಈ ಸಂದರ್ಭದಲ್ಲಿ ಮುತ್ತು ಹಿರೇಮಠ್, ಸೋಮು ಶೇಂಡೆ, ಅಡಿವೆಪ್ಪ ಖಿಲಾರಿ, ಅನಿಲ್ ಕಾಳೆ, ಧರೆಪ್ಪ ಹೆಚ್ ಡಿ, ಸತೀಶ ಬನ್ನೂರ, ಸುರೇಶ ಪತ್ತಾರ, ಕಲ್ಯಾಣಕುಮಾರ ಮಾಲಗಾರ, ಎನ್ ಬಿ ಕೋಟಿ, ಹಣಮಂತ ಶಿಂದೆ, ಎಸ್ ಎನ್ ಕೋರಬು, ಮಲ್ಲು ರಂಗಪ್ಪಗೋಳ, ಅಪ್ಪು ಕೋಟಿ, ರಾಹುಲ್ ಗಡದಿ, ಹಾಗೂ ಹೊನವಾಡದ ಗ್ರಾಮಸ್ಥರು ಶ್ರದ್ದಾಂಜಲಿ ಸಲ್ಲಿಸಿದರು.

