Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಇಂಡಿ: ಸ್ವಾತಂತ್ರೋವದಲ್ಲಿ ಪರಕೀಯರನ್ನು ಹೊರಗಟ್ಟಲು ಅಸ್ತçವಾಗಿ ಭಾರತೀಯರನ್ನು ಸಂಘಟಿಸಲು ಆರಂಭವಾದ ಸಾರ್ವಜನಿಕ ಗಣೆತೋತ್ಸವ ಈಗ ಪ್ರತಿ ಹಳ್ಳಿಗಳಿಂದ ಹಿಡಿದು ದೇಶದೆಲ್ಲೆಡೆ ಆರಾಧಿಸಲ್ಪಡುತ್ತಿದೆ. ಎಂದು ಶಾಶಕ ಯಶವಂತರಾಯಗೌಡ ಪಾಟೀಲರು ಹೇಳಿದರು.ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಬಸವರಾಜೇಂದ್ರ ಗಜಾನನ ಯುವಕ ಮಂಡಳಿ ವತಿಯಿಂದ ನಡೆದ ಗಣೇಶ ವಿಸರ್ಜನೆ ಹಾಗೂ ಮುತ್ತೆöÊದೆಯರಿಗೆ ಉಡಿ ತುಂಬುವ ಕಾರ್ಯ ಕ್ರಮ ಮದಲ್ಲಿ ಮಾತನಾಡಿದರು.ಜನರಲ್ಲಿ ಭಕ್ತಿ ಭಾವನೆ ಬೆಳೆಸಲು ಗಣೇತೋತ್ಸವ ಸಹಕಾರಿ, ಬಸವರಾಜೇಂದ್ರ ದೇವಸ್ಥಾನದ ಗಣೇತೋತ್ಸವ ಎಲ್ಲ ಜಾತಿ ಧರ್ಮದವರನ್ನು ಒಳಗೊಂಡು ಮಾದರಿಯಾಗಿ ನಡೆಯುತ್ತಿದೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಪ್ಪ ಚನಗೊಂಡ ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಕುಡಿಗನೂರ ಮಾತನಾಡಿದರು.ಪುರಸಭೆ ಸದಸ್ಯ ಸುಧೀರ ಕರಕಟ್ಟಿ, ವಿಶಾಲ ಸಿಂದಗಿ, ಗೀರಿಶ ಪೋಪಡಿ, ಆರ್.ವಿ.ಪಾಟೀಲ, ಸೋಮುಸುರಪುರ, ಮತ್ತಿತರಿದ್ದರು.ಇದೇ ವೇಳೆ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.

Read More

ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಬಣ್ಣನೆ ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಸಾಮರಸ್ಯದ ಸಮಾಜ ಕಟ್ಟುವುದಕ್ಕಾಗಿ ಅಣ್ಣ ಬಸವಣ್ಣ, ಶಿರಡಿ ಸಾಯಿಬಾಬಾ, ಸಿದ್ಧೇಶ್ವರ ಶ್ರೀಗಳಂಥ ದೈವಿ ಪುರುಷರು ಕಾಲ ಕಾಲಕ್ಕೆ ಸಮಾಜೊದ್ದಾರಕ್ಕೆ ಜನ್ಮ ತಳೆಯುತ್ತಾರೆ. ಅಂಥ ವಿಶಿಷ್ಟ ಸಾಧನೆಯ ಸಂತ, ಮಹಾತ್ಮರಲ್ಲಿ ಚನ್ನಬಸವೇಶ್ವರ ಮಹಾರಾಜರು ಕೂಡ ಪ್ರಮುಖರು. ಜಾಗತಿಕ ಆಧ್ಯಾತ್ಮಿಕ ಪರಂಪರೆಗೆ ಭಾರತೀಯ ಧಾರ್ಮಿಕ ಪರಂಪರೆ ವಿಶಿಷ್ಠವಾಗಿದೆ. ಇಂಚಗೇರಿ ಮಠದ ವಿಶಿಷ್ಟ ಪರಂಪರೆ ಭಾರತೀಯ ಆಧ್ಯಾತ್ಮಿಕ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದೆ ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಬಣ್ಣಿಸಿದರು.ತಾಲೂಕಿನ ಕೂಡಗಿ ಗ್ರಾಮದ ವಿಠ್ಠಲ ಮಂದಿರದಲ್ಲಿ ಹಮ್ಮಿಕೊಂಡಿದ್ದ ಇಂಚಗೇರಿ ಆಧ್ಯಾತ್ಮ ಸಂಪ್ರದ್ಧಾಯದ ಚನ್ನಬಸವೇಶ್ವರ ಮಹಾರಾಜರ 39ನೇ ಪುಣ್ಯಸ್ಮರಣೋತ್ಸವ ಸಮಾರಂಭದಲ್ಲಿ ದೇವರ ದರ್ಶನ ಪಡೆದು, ಸನ್ಮಾನಗೊಂಡು ಮಾತನಾಡಿದ ಸಚಿವರು, 1400 ಕೋಟಿ ಜನಸಂಖ್ಯೆಯಲ್ಲಿ ಪದೇ ಪದೇ ಕೆಲವೇ ಕೆಲವರನ್ನು ಮಾತ್ರ ನೆನೆಯುತ್ತೇವೆ ಎಂದರೆ ಸಮಾಜಕ್ಕೆ ಅಂಥ ಸ್ಮರಣೀಯ…

Read More

ಇಟ್ಟಂಗಿಹಾಳದ ಎಕ್ಸಲಂಟ್ ಕೋಚಿಂಗ್ ಕ್ಲಾಸಿಸ್‌ನಲ್ಲಿ ನಡೆದ ಶಿಕ್ಷಕರ ದಿನೋತ್ಸವದಲ್ಲಿ ವಾಗ್ಮಿ ಅಶೋಕ ಹಂಚಲಿ ಶಿಕ್ಷಕರಿಗೆ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಾಸ್ತವದಲ್ಲಿ ಶಿಕ್ಷಕರು ವಿಶ್ವಗುರು ಭಾರತದ ಕಲ್ಪನೆಯನ್ನು ಬಿತ್ತಿದರೆ ಭವಿಷ್ಯದಲ್ಲಿ ಭಾರತವು ಮತ್ತೊಮ್ಮೆ ವಿಶ್ವಗುರುವಾಗುತ್ತದೆ. ಅದರ ಜೊತೆಗೆ ಮಕ್ಕಳ ಭವಿಷ್ಯವೂ ಕೂಡ ಉಜ್ವಲವಾಗುತ್ತದೆ. ಆ ನಿಟ್ಟಿನಲ್ಲಿ ಶಿಕ್ಷಕರು ಶ್ರಮವಹಿಸಬೇಕು. ಸೇವಾ ಮನೋಭಾವನೆಯ ಮೂಲಕ ಮಕ್ಕಳಲ್ಲಿ ಕನಸುಗಳನ್ನು ಬಿತ್ತಿ, ಸಂಸ್ಕಾರದ ಗೊಬ್ಬರ ಹಾಕಿ, ಶ್ರೇಷ್ಠತೆಯ ಫಸಲು ತೆಗೆಯಬೇಕು ಎಂದು ಖ್ಯಾತ ವಾಗ್ಮಿ ಅಶೋಕ ಹಂಚಲಿ ಹೇಳಿದರು.ಇಟ್ಟಂಗಿಹಾಳದಲ್ಲಿರುವ ಎಕ್ಸಲಂಟ್ ಕೋಚಿಂಗ್ ಕ್ಲಾಸಿಸ್‌ನಲ್ಲಿ ಜರುಗಿದ ಶಿಕ್ಷಕರ ದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಭಾರತ ವಿಶ್ವಗುರುವಾಗಿಸುವಲ್ಲಿ ಶಿಕ್ಷಕರ ಪಾತ್ರ ಎನ್ನುವ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.ನಮ್ಮ ದೇಶದ ಭವ್ಯ ಪರಂಪರೆ ಹಾಗೂ ಹೋರಾಟದ ಯಶೋಗಾಥೆಯನ್ನು ಮಕ್ಕಳಿಗೆ ಪ್ರತಿದಿನವೂ ಜ್ಞಾಪಿಸಿದಾಗ ಅವರಲ್ಲಿ ದೇಶಾಭಿಮಾನ ಮೂಡುತ್ತದೆ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿದಾಗ ಅದರ ಲಾಭ ಭವಿಷ್ಯದ ಭಾರತಕ್ಕೆ ದೊರೆಯುತ್ತದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಶಿಕ್ಷಕ ವೃತ್ತಿ ಬಲು ದೊಡ್ಡದು, ಅದರ ಘನತೆಯನ್ನು ಕಾಪಿಟ್ಟುಕೊಳ್ಳುವವನೇ ನಿಜವಾದ ಶಿಕ್ಷಕ ಎಂದು ಪ್ರಾಚಾರ್ಯ ವೀರಭದ್ರ ಗೋಲಾ ಹೇಳಿದರು.ಅವರು ತಾಲ್ಲೂಕಿನ ಮೋರಟಗಿ ಗ್ರಾಮದ ಶ್ರೀ ಸಿದ್ಧರಾಮೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮೊಬೈಲ್ ಯುಗದಲ್ಲಿ ಪಠ್ಯಗಳು ಮಾಯಾವಾಗುತ್ತಿರುವುದು ಶೋಚನೀಯ ಸಂಗತಿ, ವಿದ್ಯಾರ್ಥಿಗಳಲ್ಲಿ ಅಧ್ಯಯನಶೀಲರಾಗಲು ಪುಸ್ತಕಗಳು ಸಹಾಯ ಮಾಡುತ್ತವೆ, ಮೊಬೈಲನಿಂದ ದೂರವಿದ್ದು ಪಠ್ಯಮತ್ತು ಸಾಂಸ್ಕೃತಿಕವಾಗಿ ತೊಡಗಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.ಉದ್ಘಾಟನೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ಬಿ.ಎಸ್.ಪಾಟೀಲ ನೆರವೇರಿಸಿ ಮಾತನಾಡಿದರು.ಆಲಮೇಲ ಬೆರಗು ಪ್ರಕಾಶನದ ಸಂಚಾಲಕ ರಮೇಶ ಕತ್ತಿ ಮಾತನಾಡಿ, ‘ಗುರು ಮತ್ತು ಶಿಷ್ಯರ ನಡುವಿನ ಸಂಬಂಧ ಗಟ್ಟಿಗೊಳಿಸಲು ಆದರ್ಶತನ, ಪ್ರಾಮಾಣಿಕತೆಗಳು ಇಬ್ಬರಲ್ಲೂ ಬರಬೇಕು ಎಂದು ಸಲಹೆ ನೀಡಿದರು.ಮುಖ್ಯ ಅತಿರ್ಥಿಗಳಾಗಿ ಪ್ರೊ. ಎಸ್.ಎಂ.ಹರನಾಳ, ಪ್ರೊ. ಆರ್.ವೈ.ಕಂಬಾರ, ಪ್ರೊ. ವಿ.ಎಸ್.ಶಾ ಹಾಪೂರ, ಡಾ. ಐ.ಜಿ.ಕೋಣಸಿರಸಗಿ ಮಾತನಾಡಿದರು.ಸಂಸ್ಥೆಯ ಶಿಕ್ಷಕಿ ಆರ್ ವೈ ಚೌಗಲೆ ಮತ್ತು ಮಾಲಾಶ್ರೀ ಮಂದೇವಾಲಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿದ್ಯಾರ್ಥಿನೀಯರಾದ ಸಂಗೀತಾ ದುದ್ದಗಿ, ಜಯಶ್ರೀ…

Read More

ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿದ್ಯಾರ್ಥಿಗಳು ತಮಗೆ ಜ್ಞಾನ ನೀಡಿದ ಶಿಕ್ಷಕರನ್ನು ಸ್ಮರಿಸಿ ಗೌರವಿಸುವುದರ ಜೊತೆಗೆ ಅವರ ಮಾರ್ಗದರ್ಶನ ಪಡೆದಲ್ಲಿ ನೀವು ಜಗತ್ತು ಬೆಳಗುವ ತಾರೆಗಳಾಗುತ್ತೀರಿ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಜೆಎಸ್ ಎಸ್ ಶಿಕ್ಷಣ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಮಂಜುನಾಥ.ಬಿ.ಕೋರಿ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಶಿಕ್ಷಣ ಶಾಸ್ತ್ರ ಹಾಗೂ ಇತಿಹಾಸ ವಿಭಾಗದ ಸಹಯೋಗದಲ್ಲಿ ಸೋಮವಾರದಂದು ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಗೆ ಬಂದ ಮಗುವನ್ನು ಕೈ ಹಿಡಿದು ದಡ ಸೇರಿಸುವ ಅವರ ಬದುಕು ಬೆಳಗಿಸುವ ಏಕೈಕ ವ್ಯಕ್ತಿ ಯಾರಾದರೂ ಇದ್ದರೆ ಅದು ಶಿಕ್ಷಕ. ಶಿವ ಪಥವನ್ನು ಅರಿಯಬೇಕಾದರೆ ನಮ್ಮ ಜೊತೆ ಗುರು ಇರಬೇಕು. ಮುಂದೆ ಗುರಿ, ಹಿಂದೆ ಗುರು ಇದ್ದರೆ ಅಸಾಧ್ಯವಾದದ್ದನ್ನು ಸುಲಭ ಸಾಧ್ಯವಾಗಿಸಬಹುದು ಎಂದರು.ಈ ವೇಳೆ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ ಮಾತನಾಡಿ, ಇಂದು…

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಸದ್ಭಕ್ತರು ಸನ್ಮಾರ್ಗದಡೆಗೆ ಕೊಂಡೊಯ್ಯುವಲ್ಲಿ, ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿ ಸಹಕಾರಿಯಾಗಿದ್ದು, ಜನಸಾಮಾನ್ಯರು ಸತ್ಸಂಗದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಪೂಜ್ಯ ವಿಜಯಾನಂದ ಸ್ವಾಮಿ ಹೇಳಿದರು.ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ರವಿವಾರ ಸಂಜೆ ಹಮ್ಮಿಕೊಂಡಿದ್ದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು ದಯೆ, ದಾನ, ಧರ್ಮ, ಕಾಯಕ, ದಾಸೋಹ, ಪರಂಪರೆಯ ತತ್ವಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು, ಅನುದಿನವು ಗುರು ಸನ್ನಿಧಿಯಲ್ಲಿ ಕಾಲ ಕಳೆಯೋಣ ಎಂದರು.ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ರಮೇಶ ಶಾಸ್ತ್ರಿ ಯಾಳಗಿ ಮಾತನಾಡಿ ಲೋಕ ಕಲ್ಯಾಣಕ್ಕಾಗಿ ಧರ್ಮದ ಜ್ಯೋತಿ ಹೊತ್ತಿಸಿ, ಜ್ಞಾನದ ಬೆಳಕು ಚೆಲ್ಲಿದ ಬಸವಾದಿ ಶರಣರು, ದಾಸ ಶ್ರೇಷ್ಠರು, ಸೂಫಿ ಸಂತರು, ಯೋಗಿಗಳು, ಮಹಾತ್ಮರು, ತೋರಿದ ತತ್ವ, ಚಿಂತನೆಯೊಂದಿಗೆ ಸಾಗಲು ಪ್ರತಿನಿತ್ಯವೂ ಸತ್ಸಂಗದಲ್ಲಿ ಸೇರೋಣ, ಅನುಭವದ ಅಮೃತಧಾರೆ ಸವಿದು ಸದ್ಗುರುವಿನ ಕೃಪೆಗೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾನುವಾರ ರಾತ್ರಿ ನಡೆದ ರಾಹುಗ್ರಸ್ತ ಚಂದ್ರಗ್ರಹಣ ನಿಮಿತ್ಯ ಅಂದು ರಾತ್ರಿ 9:55 ರಿಂದ 1. 25 ರವರೆಗೆ B.L.D.E ಟೀಚರ್ಸ್ ಕಾಲೋನಿ ಬಿ .ಎಂ ಪಾಟೀಲ್ ನಗರದ ಶಿವಾಲಯದಲ್ಲಿ ಲೋಕಕಲ್ಯಾಣಕ್ಕಾಗಿ ಮತ್ತು ಅಶುಭ ಫಲ ಇರುವ ರಾಶಿಯವರಿಗೆ ಶುಭ ಫಲವನ್ನು ಬಯಸಿ ಸಂಕಲ್ಪಿಸಿ ವೇ.ಮೂ ಫಕೀರಯ್ಯ ಶಾಸ್ತ್ರಿ ಹಾಗೂ ವೇ.ಮೂ ಸಿದ್ದರಾಮಯ್ಯ ಶಾಸ್ತ್ರಿ ಇವರ ನೇತೃತ್ವದಲ್ಲಿ ಮಹಾ ಮೃತ್ಯುಂಜಯ ಜಪವನ್ನು ಬಡಾವಣೆಯ ಸದ್ಭಕ್ತರೊಂದಿಗೆ ನಡೆಸಲಾಯಿತು.ನಂತರ ಸೋಮವಾರ ಗ್ರಹಣ ಮೋಕ್ಷದ ನಂತರ ಮಹಾಶಿವನಿಗೆ ವಿಶೇಷವಾಗಿ ರುದ್ರಾಭಿಷೇಕ ನೆರವೇರಿಸಿ ಸಮಾಜದ ಒಳಿತಿಗಾಗಿ ಹಾಗೂ ಆಯುಷ್ಯ ಆರೋಗ್ಯ ಅಭಿವೃದ್ಧಿಗಾಗಿ ಮಹಾ ಮೃತ್ಯುಂಜಯ ಹೋಮವನ್ನು ಮಾಡಲಾಯಿತು. ಬಡಾವಣೆಯ ಹಾಗೂ ಸುತ್ತಮುತ್ತಲಿನ ಎಲ್ಲ ಸದ್ಭಕ್ತರು ಈ ಮಹತ್ತರ ಕಾರ್ಯದಲ್ಲಿ ಪಾಲ್ಗೊಂಡು ಮೃತ್ಯುಂಜಯನ ಕೃಪೆಗೆ ಪಾತ್ರರಾಗಿ ಪುನೀತರಾಗಿದ್ದಾರೆ. ಪೂರ್ಣಾಹುತಿ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು.ಶಿವನಗೌಡ ಬಿರಾದಾರ ಕನಾಳ ಸೇರಿದಂತೆ ಸ್ಥಳಿಯ ಮುಖಂಡರು, ಗಣ್ಯರು ಭಾಗಿಯಾಗಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್‌.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದ ಕಾಯಚಿಕಿತ್ಸೆ ವಿಭಾಗದ ವತಿಯಿಂದ ಸೆಪ್ಟೆಂಬರ್ 11 ರಿಂದ ಸೆಪ್ಟೆಂಬರ್ 18ರ ವರೆಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ನಡೆಯಲಿದೆ.ಈ ಶಿಬಿರದಲ್ಲಿ ಕತ್ತು ಮತ್ತು ಭುಜನೋವು, ಭುಜ ಹಿಡಿಯುವುದು, ಭುಜ ಎತ್ತುವಲ್ಲಿ ಅಶಕ್ತ(ಫ್ರೋಝನ್ ಶೋಲ್ಡರ್), ಕೀಲುಗಳಲ್ಲಿ ನೋವು, ಹಿಡಿತ, ಊತ (ರುಮಟಾಯ್ಡ ಅರ್ಥರೈಟಿಸ್) ರೋಗ, ಕೀಲುಗಳಲ್ಲಿ ನೋವು, ಸಂಧಿಗಳ ನೋವು ಹಾಗೂ ಮೂಳೆಗಳಲ್ಲಿ ಕ್ಯಾಲ್ಸಿಯಂ ಕೊರತೆ (ಆಸ್ಟಿಯೊಪೋರೊಸಿಸ್) ಸೇರಿದಂತೆ ನಾನಾ ರೋಗಗಳಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸಾ ನೀಡಲಾಗುವುದು.ಸೆಪ್ಟೆಂಬರ್ 11 ರಂದು ದೇಶದ ಪ್ರತಿಷ್ಠಿತ ಆಯುರ್ವೇದ ಸಂಸ್ಥೆ ಝಂಡು ಹೆಲ್ತಕೇರ್ ಅವರ ಸಹಯೋಗದಲ್ಲಿ ಮೊದಲಿಗೆ ಬರುವ 100 ಜನರಿಗೆ ವಿಶೇಷವಾಗಿ ಮೂಳೆಗಳ ಸಾಂಧ್ರತೆ ಮಾಪನ ಯಂತ್ರದಿಂದ ಉಚಿತ ತಪಾಸಣೆ ಮಾಡಲಾಗುವುದು.ಹೆಚ್ಚಿನ ಮಾಹಿತಿಗಾಗಿ ಮೊ.7975160825 ಮತ್ತು 9513397413 ಸಂಪರ್ಕಿಸಬೇಕು ಎಂದು ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಡಿ.೦೭ ರಂದು ಬಸವನಾಡಿನಲ್ಲಿ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-೨೦೨೫ ರಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಸವನಾಡು ವಿಜಯಪುರ ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್- 2025ರಲ್ಲಿ ಐರನ್ ಮ್ಯಾನ್ ಖ್ಯಾತಿಯ ಹಿರಿಯ ಐಪಿಎಸ್ ಆಧಿಕಾರಿ ಮತ್ತು ಕೆ.ಎಸ್.ಆರ್.ಪಿ ಐಜಿಪಿ ಸಂದೀಪ ಪಾಟೀಲ‌ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿದ್ದು, ಈ ಬಾರಿಯ ಓಟಕ್ಕೆ ಮೆರಗು ತರಲಿದೆ.ಸೋಮವಾರ ಬೆಂಗಳೂರಿನಲ್ಲಿ ಹೆರಿಟೇಜ್ ರನ್ ಪ್ರಾಯೋಜಕರಾದ ಕೆ.ಎಸ್.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ಪಿ. ಕೆ. ಎಂ ಮತ್ತು ಸಚಿವ ಎಂ. ಬಿ. ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಅವರು ಕೆ.ಎಸ್.ಆರ್.ಪಿ ಐಜಿಪಿ‌ ಸಂದೀಪ ಪಾಟೀಲ‌ ಅವರನ್ನು ಪಾಲ್ಗೊಳ್ಳುವಂತೆ ಆಹ್ವಾನ‌ ನೀಡಿದರು.ಈ ಆಹ್ವಾನಕ್ಕೆ ಸಂತೋಷದಿಂದ ಒಪ್ಪಿಗೆ ಸೂಚಿಸಿದ ಸಂದೀಪ ಪಾಟೀಲ ಅವರು, ಜಲ, ವೃಕ್ಷ, ಶಿಕ್ಷಣ,‌ ಆರೋಗ್ಯ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ, ಪ್ರವಾಸೋದ್ಯಮ‌ ಉತ್ತೇಜನಕ್ಕಾಗಿ ಆಯೋಜಿಸಲಾಗಿರುವ ಹೆರಿಟೇಜ್ ರನ್ ನಲ್ಲಿ ಪಾಲ್ಗೊಳ್ಳಲು ಹೆಮ್ಮೆ ಎನಿಸುತ್ತದೆ. ಐತಿಹಾಸಿಕ ಗೋಳಗುಮ್ಮಟ, ಬಾರಾಕಮಾನ ಮತ್ತೀತರ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಸೋಂಪುರ ರಸ್ತೆಯಲ್ಲಿನ ಸರ್ವೇ ನಂ.೮೪೨/೨ ಜಾಗೆಯ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದಂತೆ ತೆರವುಗೊಳಿಸುವ ಕಾರ್ಯ ಸೋಮವಾರ ಪ್ರಾರಂಭಿಸಲಾಗಿದೆ ಎಂದು ತಹಶೀಲ್ದಾರ್ ಕರೆಪ್ಪ ಬೆಳ್ಳಿ ಹೇಳಿದರು.ಸಿಂದಗಿ ಪಟ್ಟಣದ ತಾಲೂಕು ಆಡಳಿತ ಕಛೇರಿಯಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೇ ನಒ.೮೪೨ ಜಾಗಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಯಾವ ಯಾವ ಸಮಯದಲ್ಲಿ ಪ್ರಕರಣ ತೀರ್ಪು ಏನಾಗಿದೆ ಎಂಬುದನ್ನು ತಿಳಿಸಿದರು. ಈ ಜಾಗದಲ್ಲಿ ೧೪ಮನೆಗಳು, ೨೦ಕಚ್ಚಾ ಮನೆಗಳು, ೪೧ಶೆಡ್‌ಗಳು, ೯ ಖಾಲಿ ಜಾಗಗಳಿದ್ದು, ಇವುಗಳಲ್ಲಿ ೨೬ ಮಾರಾಟವಾಗಿವೆ ಎಂದರು.ಸದರಿ ಸರ್ವೇ ನಂ.೮೪೨/೨ರ ಎಕರೆ ೧೦ಗುಂಟೆ ಜಮೀನು ಮರಿಯಂಬಿ ಕರಜಗಿಯವರು ಮಾಲೀಕರೆಂದು ಘೋಷಣೆ ಮಾಡಿ ಸದರಿ ಆಸ್ತಿಯನ್ನು ದಾವೆದಾರರಿಗೆ ಸ್ವಾಧೀನತೆ ನೀಡಲು ನ್ಯಾಯಾಲಯ ಪ್ರತಿವಾದಿಗಳಿಗೆ ಆದೇಶ ಮಾಡಿರುವ ಕಾರಣ ತೆರವು ಕಾರ್ಯಾಚರಣೆ ಪ್ರಾರಂಭ ಮಾಡಲಾಗಿದೆ ಎಂದರು.ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಎಸ್.ರಾಜಶೇಖರ ಮಾತನಾಡಿ, ೮೪೨/೨ರಲ್ಲಿ ವಾಸಿಸುವ ೮೦ಕುಟುಂಬಗಳನ್ನು ತಾತ್ಕಾಲಿಕವಾಗಿ ಅಲ್ಪಸಂಖ್ಯಾತರ ಬಾಲಕರ ವಸತಿ ನಿಲಯ, ರಾಜರಾಜೇಶ್ವರಿ ಕಲ್ಯಾಣ ಮಂಟಪ, ಅಬು ಪಂಕ್ಷನ್ ಹಾಲ್,…

Read More