ಉದಯರಶ್ಮಿ ದಿನಪತ್ರಿಕೆ
ನಿಡಗುಂದಿ: ತಾಲೂಕಿನ ಆರೇಶಂಕರ ಗ್ರಾಮದಲ್ಲಿ ಹಜರತ್ ಜಾನೇಸಾಹೆಬ್ ಜಾತ್ರೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಅತಿ ವಿಜೃಂಭಣೆಯಿಂದ ಜರುಗಿತು.
ಹಜರತ್ ಜಾನೇಸಾಹೆಬ್ ಜಾತ್ರೆ ನಿಮಿತ್ತ ನಿನ್ನೆಯ ದಿನ ರಾತ್ರಿ 9 ಗಂಟೆಗೆ ಗಂದ ಏರಿಸಲಾಯಿತು. ಪಟ್ಟದ ಕುದುರೆ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಾಯ್ದು ದೇವಸ್ಥಾನಕ್ಕೆ ಬರಲಾಯಿತು.
ರವಿವಾರ ರಾತ್ರಿ 10 ಗಂಟೆಗೆ ದುರ್ಗಾದೇವಿ ಭಜನಾ ಮಂಡಳಿ ಆರೇಶಂಕರ ಹಾಗೂ ಸಂಗಮೇಶ್ವರ ಭಜನಾ ಮಂಡಳಿ ಗೆದ್ದಲಮರಿ ಇವರಿಂದ ರಾತ್ರಿ ಇಡಿ ಸೇವೆ ಸಲ್ಲಿಸಿದರು.
ಸೋಮವಾರ ಬೆಳಗ್ಗೆ ಹಜರತ್ ಜಾನೇಸಾಹೆಬ್ ಉರುಸು ಜರುಗಿತು. ನಂತರ ಜಾನೇಸಾಹೆಬ್ ರಿವಾಯಿತಿ ಸಂಘದವರು ಮತ್ತು ಮೌಲಾಲಿ ರಿವಾಯಿತಿ ಸಂಘ ಕುಂಚನೂರ , ಜಾನೇಸಾಹಬ್ ರಿವಾಯಿತಿ ಸಂಘ ಮತ್ತು ಮೌಲಾಲಿ ರಿವಾಯಿತಿ ಸಂಘ ಗುಡದಿನ್ನಿ ಇವರಿಂದ ರಿವಾಯಿತಿ ಪದಗಳು ಜರುಗಿದವು.
ಭಕ್ತರು ದರ್ಶನ್ ಮಾಡುವುದು ಕಂಡು ಬಂತು ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಕೂಡಾ ಮಾಡಲಾಗಿತ್ತು
ಸಾಯಂಕಾಲ ಒಂದು ಎತ್ತು ಒಂದು ಕುದುರೆ ಓಟದ ಸ್ಪರ್ಧೆಗೆ ಗ್ರಾಮದ ಹಿರಿಯರು ರಿಬ್ಬನ್ ಕಟ್ ಮಾಡುವುದರ ಮೂಲಕ ಚಾಲನೆ ನೀಡಿದರು.

